ಭಾರತ ವಿರುದ್ಧ ಗೋಲು ಬಾರಿಸಿದ ಎದುರಾಳಿ ಗೋಲ್ ಕೀಪರ್!

ಭಾರತ ಮತ್ತು ಅಮಾನ್ ನಡುವಿನ ಸೌಹಾರ್ದ ಫುಟ್ಬಾಲ್ ಪಂದ್ಯ ಈಗ ಭಾರೀ ಚರ್ಚೆಗೆ ಕಾರಣವಾಗಿದ್ದು, ಅವಿಸ್ಮರಣೀಯ ಪಂದ್ಯವಾಗಿ ಅಭಿಮಾನಿಗಳ ನೆನಪಿನಲ್ಲಿ ಉಳಿಯಲಿದೆ. ಇದಕ್ಕೆ ಕಾರಣ ಜೋರ್ಡಾನ್ ಮೂಲದ ಗೋಲು ಕೀಪರ್ ದೂರದ ಗೋಲು ಸಿಡಿಸಿ ದಾಖಲೆ ಬರೆದಿರುವುದು!
ಶನಿವಾರ ನಡೆದ ಈ ಪಂದ್ಯದಲ್ಲಿ ಭಾರತದ ಗೋಲ್ ಕೀಪರ್ ಗುರುಪ್ರೀತ್ ಸಿಂಗ್ ಎದುರಾಳಿ ಆಟಗಾರರ ಪೆನಾಲ್ಟಿ ಅವಕಾಶವನ್ನು ವಿಫಲಗೊಳಿಸಿ ಗಮನ ಸೆಳೆದಿದ್ದರು. ಆದರೆ ಜೋರ್ಡಾನ್ನ ಗೋಲಿ ಅಮೆರ್ ಶೆಫಿ ತಮ್ಮ ಭಾಗದ ಪೆನಾಲ್ಟಿ ಕಾರ್ನರ್ ನಿಂದ ಬಾರಿಸಿದ ಚೆಂಡು ಸೀದಾ ಭಾರತದ ಗೋಲು ಪೆಟ್ಟಿಗೆಯೊಳಗೆ ನುಗ್ಗಿತು.
ಇದು ತಂಡದ ಗೋಲು ಕೀಪರ್ವೊಬ್ಬ ತನ್ನ ವೃತ್ತದೊಳಗಿನಿಂದ ಚೆಂಡನ್ನು ಎದುರಾಳಿ ತಂಡದ ಗೋಲು ಪೆಟ್ಟಿಗೆಯೊಳಗೆ ನುಗ್ಗಿಸಿ ಗೋಲು ಬಾರಿಸಿದ ಅಪರೂಪದ ದಾಖಲೆ ದಾಖಲಾಯಿತು. ಇದು ಫುಟ್ಬಾಲ್ ಇತಿಹಾಸದಲ್ಲೇ ಅಪರೂಪದ ಘಟನೆ ಎಂದೇ ಹೇಳಬಹುದು.
ಪಂದ್ಯದ 25ನೇ ನಿಮಿಷದಲ್ಲಿ ಈ ಅಪರೂಪದ ಘಟನೆ ನಡೆಯಿತು. ಭಾರತ ತಂಡದ ಗೋಲಿ ಹಾರಿ ಗೋಲು ತಡೆಯಲು ಯತ್ನಿಸಿದರಾದರೂ ಕೈಗೆ ತಗುಲಿದರೂ ಚೆಂಡು ಬಲೆಯೊಳಗೆ ನುಗ್ಗುವಲ್ಲಿ ಯಶಸ್ವಿಯಾಯಿತು.
ಈ ಪಂದ್ಯವನ್ನು ಅಮಾನ್ ತಂಡ 2-1ರಿಂದ ಭಾರತ ವಿರುದ್ಧ ಸುಲಭವಾಗಿ ಗೆದ್ದುಕೊಂಡಿತು. ಭಾರತದ ಆಟಗಾರ ಬಾರಿಸಿದ ಚೆಂಡನ್ನು ಅಮೆರ್ ಶೆಫಿ ಕ್ಯಾಚ್ ಹಿಡಿದು ಅದೇ ರೀತಿಯಲ್ಲಿ ಚೆಂಡನ್ನು ವಾಪಸ್ ಹೊಡೆದರು. ಆದರೆ ಗುರುಪ್ರೀತ್ ಗೋಲು ತಡೆಯುವಲ್ಲಿ ವಿಫಲರಾದರು.