ಕನ್ನಡ ಸಿನಿಮಾಗಳ ಬಗ್ಗೆ ನಟ ದರ್ಶನ್ ಹೆಮ್ಮೆಯ ಮಾತು..!

ಅನುಕ್ತ ಸಿನಿಮಾ ಆಡಿಯೋ ಲಾಂಚ್ ನಡೆದಿದ್ದು, ಈ ಕಾರ್ಯಕ್ರಮಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅತಿಥಿಯಾಗಿ ಬಂದಿದ್ದರು. ಈ ವೇಳೆ ಅವರು ಕನ್ನಡ ಸಿನಿಮಾಗಳ ಬಗ್ಗೆ ಒಂದಿಷ್ಟು ಮಾತನಾಡಿದ್ದಾರೆ.
ನಮ್ಮ ಕನ್ನಡಿಗರು ಬುದ್ಧಿವಂತರು. ಅನ್ಯ ಭಾಷೆಯವರ ಜೊತೆಗೆ ಅವರದ್ದೇ ಆದ ಭಾಷೆಯಲ್ಲಿ ಮಾತನಾಡುತ್ತಾರೆ. ಆದರೆ ನಮ್ಮ ಕನ್ನಡ ಭಾಷೆಯನ್ನ ಅವರಿಗೆ ಕಲಿಸುವ ಪ್ರಯತ್ನ ಮಾಡುವುದಿಲ್ಲ. ಈ ಕಾರಣಕ್ಕಾಗಿ ಕರ್ನಾಟಕದಲ್ಲಿ ಬೇರೆ ಭಾಷೆಯ ಸಿನಿಮಾಗಳು ಹೆಚ್ಚು ಸೌಂಡ್ ಮಾಡ್ತಿವೆ ಎಂದರು.
ಅಲ್ಲದೇ ಸಿನಿಪ್ರಿಯರು ಕಥೆಗಾಗಿ ತಮಿಳು ಸಿನಿಮಾವನ್ನು ನೋಡ್ತಾರೆ. ಫೈಟು, ಬಿಲ್ಡಪ್ಗಾಗಿ ತೆಲುಗು ಸಿನಿಮಾ ನೋಡ್ತಾರೆ. ಕಥೆ ಇಲ್ಲದಿದ್ದರೂ ಫಾರಿನ್ ಲೊಕೇಷನ್ ನೋಡಲು ಹಿಂದಿ ಸಿನಿಮಾ ನೋಡ್ತಾರೆ. ಆದ್ರೆ ಬೇಜಾರಾದಾಗ ಮಾತ್ರ, ಅಯ್ಯೋ ಅಂತಾ ನಮ್ಮ ಕನ್ನಡ ಸಿನಿಮಾಗಳನ್ನ ನೋಡ್ತಾರೆ . ಕನ್ನಡದಲ್ಲಿ ಪ್ರಯೋಗಗಳು ಆಗ್ತಿಲ್ಲ , ಆಗಬೇಕು ಅನ್ಸುತ್ತೆ ಎಂದು ಹೇಳಿದ್ದಾರೆ.
ಕೆಲ ಹೊಸ ಹೊಸ ಟೀಮ್ಗಳು ಪ್ರಯೋಗಳನ್ನು ಮಾಡ್ತಿವೆ. ಹೊಸ ಹೊಸ ಪ್ರಯೋಗಗಳು ಈಗ ಕನ್ನಡದಲ್ಲಿ ಆಗುತ್ತಿರುವುದು ಸಂತೋಷದ ಬೆಳವಣಿಗೆ. ಒಳ್ಳೆ ಒಳ್ಳೆಯ ಸಿನಿಮಾಗಳನ್ನು ನೋಡಿ ಎಂದು ದರ್ಶನ್ ಈ ವೇಳೆ ಹೇಳಿದರು.