Top

ಜನದಟ್ಟನೆ ಕಡಿಮೆ ಮಾಡಲು BMRCL ಮತ್ತೊಂದು ಪ್ಲಾನ್..!

ಜನದಟ್ಟನೆ ಕಡಿಮೆ ಮಾಡಲು BMRCL ಮತ್ತೊಂದು ಪ್ಲಾನ್..!
X

ನಮ್ಮ ಮೆಟ್ರೋದಲ್ಲಿ ಆರು ಬೋಗಿಗಳ ಮತ್ತೊಂದು ರೈಲು ನಾಡಿದ್ದಿನಿಂದ ಕಾರ್ಯಾರಂಭ ಮಾಡಲಿದೆ. ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಹೀಗಾಗಿ ಆರು ಬೋಗಿ ಮೆಟ್ರೋ ಸಂಚಾರವನ್ನು ಆರಂಭಿಸಲಾಗಿದೆ.

2019ರೊಳಗೆ 150 ಬೋಗಿಗಳನ್ನು ಅಳವಡಿಸಲಾಗುತ್ತದೆ ಎಂದು ನಿಗಮ ಹೇಳಿತ್ತು. ಅದರಂತೆ ಈಗಾಗಲೇ ಎರಡು ರೈಲುಗಳು ನೇರಳೆ ಮಾರ್ಗದಲ್ಲಿ ಸಂಚಾರ ಮಾಡುತ್ತಿದೆ. ಇದೀಗ ಮತ್ತೊಂದು ಮೆಟ್ರೋ ಆರು ಬೋಗಿಗಳನ್ನು ಅಳವಡಿಸಲಾಗ್ತಿದೆ.

1,463 ಕೋಟಿ ವೆಚ್ಚದಲ್ಲಿ 150 ಬೋಗಿಗಳನ್ನು BEMLನಿಂದ ಖರೀದಿಸಲು BMRCL ಒಪ್ಪಂದ ಮಾಡಿಕೊಂಡಿದೆ. ಸದ್ಯ ಮೊದಲ ಆರು ಬೋಗಿಯ ರೈಲು ಬಂದಾಗ ಪರೀಕ್ಷಾರ್ಥ ಸಂಚಾರ ನಡೆಸಿ ರೈಲ್ವೆ ಸುರಕ್ಷತಾ ಆಯುಕ್ತರ ಅನುಮತಿ ಪಡೆಯಲಾಗಿದೆ. ಹೀಗಾಗಿ ಮೊದಲ ಆರು ಬೋಗಿ ರೈಲಿಗೆ ಅನುಮತಿ ಪಡೆದ ನಂತರ ಮುಂದೆ ಬರುವ ಆರು ಬೋಗಿಯ ರೈಲುಗಳಿಗೆ ಅನುಮತಿ ಅಗತ್ಯವಿಲ್ಲ. ಹೀಗಾಗಿ ಮೂರನೇಯ ಆರು ಬೋಗಿಯ ರೈಲು ಹಳಿಗೆ ಇಳಿಯುತ್ತಿದೆ.

ನಾಗಸಂದ್ರ-ಯಲಚೇನಹಳ್ಳಿ ಹಾಗೂ ಮೈಸೂರು ರಸ್ತೆ-ಬೈಯಪ್ಪನಹಳ್ಳಿ ಮಾರ್ಗದಲ್ಲಿ 50 ರೈಲುಗಳು ಸಂಚಾರ ನಡೆಸುತ್ತಿವೆ. ಎಲ್ಲಾ ರೈಲುಗಳನ್ನು 6 ಬೋಗಿ ರೈಲಾಗಿ ಪರಿವರ್ತಿಸಲು 2016ರಲ್ಲೇ ಯೋಜನೆ ರೂಪಿಸಲಾಗಿದೆ. ಇದೀಗ ಇದು ಹಂತ ಹಂತವಾಗಿ ಸಾಕಾರಗೊಳ್ಳುತ್ತಿದೆ.

ಒಟ್ಟಿನಲ್ಲಿ ನಗರದಲ್ಲಿ ದಿನೇ ದಿನೇ ಪ್ರಯಾಣಿಕರ ಸಂಖ್ಯೆ ಜಾಸ್ತಿಯಾಗ್ತಿದೆ. ಹೀಗಾಗಿ ಜನವರಿ ಒಳಗೆ ಹಸಿರು ಹಾಗೂ ನೆರಳೆ ಮಾರ್ಗದಲ್ಲಿ ಹೆಚ್ಚುವರಿ ಬೋಗಿಗಳನ್ನ ಆಳವಡಿಸಲು ಮೆಟ್ರೋ ಪ್ಲಾನ್ ಮಾಡಿದೆ.

Next Story

RELATED STORIES