ಮತ ಯಾಚಿಸಲು ಬಂದ ಬಿಜೆಪಿ ಶಾಸಕನಿಗೆ ಚಪ್ಪಲಿ ಹಾರ!

X
TV5 Kannada20 Nov 2018 11:57 AM GMT
ಚುನಾವಣಾ ಪ್ರಚಾರದ ವೇಳೆ ಮತ ಯಾಚನೆಗೆ ಬಂದಿದ್ದ ಬಿಜೆಪಿ ಶಾಸಕನಿಗೆ ಯುವಕನೊಬ್ಬ ಚಪ್ಪಲಿ ಹಾರ ಹಾಕಿದ ಘಟನೆ ಮಧ್ಯಪ್ರದೇಶದ ಭೋಪಾಲ್ ಸಮೀಪದ ನಗಾಡಾದಲ್ಲಿ ನಡೆದಿದ್ದು, ಈ ವೀಡಿಯೋ ವೈರಲ್ ಆಗಿದೆ.
ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದ್ದು, ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲಾ ಅಭ್ಯರ್ಥಿಗಳು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಪ್ರಚಾರಕ್ಕೆ ಆಗಮಿಸಿದ ಬಿಜೆಪಿ ಅಭ್ಯರ್ಥಿ ದಿಲೀಪ್ ಶೇಖಾವತ್ ಬಳಿ ಅಭಿಮಾನಿ ಎಂದು ಹೇಳಿಕೊಂಡು ಹೋದ ಯುವಕನೊಬ್ಬ ಚಪ್ಪಲಿ ಹಾರ ಹಾಕಿದ್ದಾನೆ. ಇದರಿಂದ ಕೆರಳಿದ ಬಿಜೆಪಿ ಅಭ್ಯರ್ಥಿ ಹಾಗೂ ಆತನ ಬೆಂಬಲಿಗರು ಯುವಕನನ್ನು ಥಳಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ದಿಲೀಪ್ ಶೇಖಾವತ್ ವಿರುದ್ಧ ಯುವಕನ ವರ್ತನೆಗೆ ವಿರೋಧಪಕ್ಷಗಳು ಕಾರಣ ಎಂದು ಆರೋಪಿಸಲಾಗಿದೆ. ಆದರೆ ತಾವು ಕ್ಷೇತ್ರದ ಅಭಿವೃದ್ಧಿ ಕಡೆಗಣಿಸಿದ್ದಕ್ಕೆ ಹೀಗೆ ಮಾಡಲಾಯಿತೇ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದಾರೆ.
Next Story