Top

ಆ್ಯಂಬಿಡೆಂಟ್ ಡೀಲ್ ಪ್ರಕರಣ: ಆಲಿಖಾನ್ ನ್ಯಾಯಾಂಗ ಬಂಧನ

ಆ್ಯಂಬಿಡೆಂಟ್ ಡೀಲ್ ಪ್ರಕರಣ: ಆಲಿಖಾನ್ ನ್ಯಾಯಾಂಗ ಬಂಧನ
X

ಆಂಬಿಡೆಂಟ್ ಡೀಲ್ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ಅಲಿಖಾನ್ ಮತ್ತು ವಹಾಬ್​ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣಕ್ಕೆ ರೋಚಕ ತಿರುವು ಲಭಿಸಿದೆ.

ಬಿಜೆಪಿ ಮಾಜಿ ಶಾಸಕ ಜನಾರ್ದನ ರೆಡ್ಡಿಗೆ 57 ಕೆಜಿ ಚಿನ್ನ ಪೂರೈಸಿದ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಇಬ್ಬರಿಗೂ ನೋಟೀಸ್ ನೀಡಿದ್ದರು. ಅಲ್ಲದೇ ನವೆಂಬರ್ 27ರವರೆಗೆ ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು.

ಆ್ಯಂಬಿಡೆಂಟ್ ಡೀಲ್​ನಲ್ಲಿ ಭಾಗಯಾಗಿದ್ದ ಆರೋಪ ಸಂಬಂಧ ಬಂಧನದ ಭೀತಿಯಲ್ಲಿದ್ದ ಅಲಿಖಾನ್ ನಗರದ 61ನೇ ಸಿಸಿಹೆಚ್ ಕೋರ್ಟ್​ಗೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದ. ಇದಕ್ಕೂ ಮುನ್ನ ಮದ್ಯಂತರ ನಿರೀಕ್ಷಣಾ ಜಾಮೀನಿನಲ್ಲಿದ್ದ ಅಲಿಖಾನ್, ಸಿಸಿಬಿ ವಿಚಾರಣೆ ಎದುರಿಸಿ ಬಂದಿದ್ದರು. ನಿನ್ನೆ ವಿಚಾರಣೆ ನಡೆಸಿದ್ದ ನ್ಯಾಯಾಧೀಶ ವಿದ್ಯಾಧರ ಶಿರಹಟ್ಟಿ, ತೀರ್ಪನ್ನು ಇಂದಿಗೆ ಕಾಯ್ದಿರಿಸಿದ್ದರು.

ಡೀಲ್​ ಕೇಸ್​ನ 4ಆರೋಪಿ ಅಲಿಖಾನ್ ನಿರೀಕ್ಷಣಾ ಜಾಮೀನನ್ನ ವಜಾ ಮಾಡಬೇಕು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ವಾದ ಮಾಡಿದರು. ಅಲಿಖಾನ್ ವಿರುದ್ಧ ಇ.ಡಿ.ಯಿಂದ ಬಚಾವ್ ಹೆಸರಲ್ಲಿ ಡೀಲ್ ಮಾಡಿರುವ ಆರೋಪ ಇದೆ. 18 ಕೋಟಿ ಮೌಲ್ಯದ ಚಿನ್ನಾಭರಣ ಪಡೆದಿರುವ ಆರೋಪ ಕೇಳಿ ಬಂದಿದೆ. ಅಲಿಖಾನ್ ತನಿಖೆಗೆ ಸಹಕರಿಸದೇ ಎಸ್ಕೇಪ್ ಆಗ್ತಾರೆ ಎಂದು ಸಿಸಿಬಿ ಪರ ಪಿ.ಪಿ.ಶೈಲಜಾ ನಾಯಕ್ ವಾದ ಮಂಡಿಸಿದ್ದರು. ಈ ನಡುವೆ ನಿರೀಕ್ಷಣಾ ಜಾಮೀನು ವಜಾ ಆದ ಕಾರಣ ಅಲಿಖಾನ್ ನ್ಯಾಯಾಲಯಕ್ಕೇ ಬಂದು ಶರಣಾದ. ಕೂಡಲೇ ನ್ಯಾಯಾಧೀಶರು ಅಲಿಖಾನ್​ನನ್ನು 7ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದರು.

ಕೆಲ ಸಮಯದಲ್ಲೇ ತನಿಖಾಧಿಕಾರಿ ವೆಂಕಟೇಶ್ ಪ್ರಸನ್ನ ಪೊಲೀಸ್ ಕಸ್ಟಡಿ ನೀಡಬೇಕೆಂದು ಮನವಿ ಮಾಡಿಕೊಂಡರು. ಆದ್ರೆ ಮನವಿ ವಿಚಾರಣೆಗೆ ತಡವಾಗಿರೋದ್ರಿಂದ ಅಲಿಖಾನ್​ ನ್ಯಾಯಾಂಗ ಬಂಧನಕ್ಕೆ ಕಳಿಸಲಾಯಿತು. ನಾಳೆ ರಜೆ ಹಿನ್ನಲೆ ಗುರುವಾರ ಅಲಿಖಾನ್ ಪರ ವಕೀಲರು ಜಾಮೀನಿಗಾಗಿ ಮತ್ತೆ ಅರ್ಜಿ ಸಲ್ಲಿಸಲಿದ್ದಾರೆ.

ಈ ಮಧ್ಯೆ ಪ್ರಕರಣದಲ್ಲಿ 7ನೇ ಆರೋಪಿ ವಹಾಬ್​​ನನ್ನು ಸಿಸಿಬಿ ಪೊಲೀಸರು ಬಂಧಿಸಿ 7 ದಿನಗಳ ಕಾಲ ವಶಕ್ಕೆ ಪಡೆದರು. ಆಂಬಿಡೆಂಟ್​ನ ಫರೀದ್ ಖಾತೆಯಿಂದ ವಹಾಬ್​ಗೆ 1.65 ಕೋಟಿ ಹ ವರ್ಗಾವಣೆ ಆಗಿತ್ತು. ಈ ಬಗ್ಗೆ ತನಿಖೆ ಮಾಡಲು ವಹಾಬ್​ನನ್ನು ವಶಕ್ಕೆ ಪಡೆಯಲಾಗಿದೆ.

Next Story

RELATED STORIES