Top

ಸಾ.ರಾ.ಗೋವಿಂದ್ ಪುತ್ರ ಸಾ.ರಾ ಅನೂಪ್ ಗೂಂಡಾಗಿರಿ..!

ಸಾ.ರಾ.ಗೋವಿಂದ್ ಪುತ್ರ ಸಾ.ರಾ ಅನೂಪ್ ಗೂಂಡಾಗಿರಿ..!
X

ಬೆಂಗಳೂರು: ಚಲನಚಿತ್ರ ನಿರ್ಮಾಪಕ ಸಾರಾ ಗೋವಿಂದ್ ಪುತ್ರನ ಪ್ರಚೋದನೆಯಿಂದ ವ್ಯಕ್ತಿಯೊಬ್ಬರ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.

ಹರೀಶ್ ಎಂಬಾತನನ್ನು ಕರೆ ಮಾಡಿ ಕರೆಸಿಕೊಂಡ ಅನೂಪ್ ಆ್ಯಂಡ್ ಗ್ಯಾಂಗ್, ಬಸವೇಶ್ವರ ನಗರದ ಪವಿತ್ರ ಪ್ಯಾರಡೈಸ್‌ನಿಂದ ಕಿಡ್ನ್ಯಾಪ್ ಮಾಡಿ, ಕಾರಿನಲ್ಲಿ ಕರೆದೊಯ್ದು ಹಲ್ಲೆ ನಡೆಸಿದ್ದಾರೆ. ಪ್ರಭಾಕರ್ ಮತ್ತು ಸತ್ಯ ಎಂಬುವವರು ಹಲ್ಲೆ ನಡೆಸಿದ್ದು, ಹಲ್ಲೆ ನಡೆಸುವ ಸಂದರ್ಭದಲ್ಲಿ ಸ್ಥಳದಲ್ಲಿ ಅನೂಪ್ ಸಾರಾಗೋವಿಂದ್ ಕೂಡ ಇದ್ದರು ಎನ್ನಲಾಗಿದೆ.

ಸದಾಶಿವ ನಗರದ ಬಳಿ ಹರೀಶ್‌ನನ್ನು ಕಿಡ್ನ್ಯಾಪ್ ಮಾಡಿ, ಕಾರಿನಲ್ಲಿ ಥಳಿಸಲಾಗಿದ್ದು, ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Next Story

RELATED STORIES