ಧೂಮಪಾನ ಮಾಡುವವರು ಓದಲೇಬೇಕಾದ ಹತ್ತು ಸಂಗತಿಗಳು

ಧೂಮಪಾನ ಆರೋಗ್ಯಕ್ಕೆ ಹಾನಿಕಾರಕವೆಂದು ಗೊತ್ತಿದ್ದರೂ, ಕೆಲವರಿಗೆ ಧೂಮಪಾನ ಮಾಡುವುದು ದೈನಂದಿನ ಅಭ್ಯಾಸವಾಗಿಬಿಟ್ಟಿರುತ್ತದೆ. ಒಂದು ಬಾರಿ ಧೂಮಪಾನದ ಅಭ್ಯಾಸವಾಗಿಬಿಟ್ಟರೆ, ಅದನ್ನು ತಪ್ಪಿಸುವುದು ತುಂಬಾ ಕಠಿಣ. ಒಂದು ದಿನ ಧೂಮಪಾನ ಮಾಡದಿದ್ದರೂ, ಅಂದಿನ ದಿನ ಏರುಪೇರಾಗಿಬಿಡುತ್ತದೆ. ಆದರೆ, ಧೂಮಪಾನ ಮಾಡುವ ಮುನ್ನ ಈ ಕೆಳಗಿನ ಹತ್ತು ಸಂಗತಿಗಳನ್ನು ತಪ್ಪದೇ ಓದಿ.

1..ಧೂಮಪಾನ ಮಾಡುವುದರಿಂದ ವಾಸನೆ ಗ್ರಹಿಸುವ ಶಕ್ತಿ ಕಡಿಮೆಯಾಗುತ್ತದೆ. ಅಲ್ಲದೇ ದೂಮಪಾನ ಹಸಿವನ್ನು ಕಡಿಮೆ ಮಾಡಿ, ಅನಾರೋಗ್ಯಕ್ಕೀಡು ಮಾಡುತ್ತದೆ. ಈ ಕಾರಣಕ್ಕಾಗಿ ಧೂಮಪಾನ ಮಾಡಿದ ನಂತರ ಹಸಿವಾಗುವುದಿಲ್ಲ.

2..ಧೂಮಪಾನ ಮಾಡುವುದರಿಂದ ಮುಖ ಸುಕ್ಕುಗಟ್ಟುವುದು, ಮುಖದ ಚರ್ಮ ಜೋತು ಬೀಳುವುದು, ಇತ್ಯಾದಿ ಕಾರಣಗಳಿಂದ ನೀವು ಸಣ್ಣ ವಯಸ್ಸಿನವರಾದರೂ, ವಯಸ್ಸಾದವರಂತೆ ಕಾಣುತ್ತೀರಿ.

3..ಧೂಮಪಾನ ಸೇವನೆಯಿಂದ ಸುಮಾರು 60-65 ವಯಸ್ಸಿನ ನಂತರ ಕುರುಡುತನ ಆವರಿಸುವ ಸಂಭವವಿದೆ.

4..ಧೂಮಪಾನ ಸೇವನೆಯಿಂದ ಉಸಿರಾಡುವ ಸಮಸ್ಯೆ, ಕ್ಯಾನ್ಸರ್‌ಗೆ ಗುರಿಯಾಗುವ ಸಾಧ್ಯತೆ ಇದೆ.

5..ಧೂಮಪಾನ ಮಾಡುವುದರಿಂದ ಪುರಷರವಲ್ಲಿ ಪುರುಷತ್ವ ಕುಂಠಿತಗೊಳ್ಳಬಹುದು, ಮತ್ತು ಮಹಿಳೆಯರಲ್ಲಿ ಗರ್ಭಕೋಶದ ಕ್ಯಾನ್ಸರ್‌ ಬರುವ ಸಾಧ್ಯತೆ ಇದೆ.

6..ಧೂಮಪಾನ ಮಾಡುವುದರಿಂದ ಹೃದಯಸಂಬಂಧಿ ಖಾಯಿಲೆಗೆ ತುತ್ತಾಗಬಹುದು.

7..ಸಿಗರೇಟ್ ಸೇವಿಸುವುದರಿಂದ ಉಸಿರಿನಲ್ಲೂ ಧೂಮಪಾನದ ವಾಸನೆ ಸೇರುತ್ತದೆ. ಇದರಿಂದ ಬೇರೆಯವರ ಬಳಿ ಮಾತನಾಡುವಾಗ ಮುಜುಗರ ಉಂಟಾಗಿ ಆತ್ಮವಿಶ್ವಾಸ ಕುಗ್ಗುತ್ತದೆ.

8..ಧೂಮಪಾನ ಮಾಡುವ ವ್ಯಕ್ತಿ ಧೂಮಪಾನ ಮಾಡದ ವ್ಯಕ್ತಿಗಿಂತ ಹತ್ತು ವರ್ಷ ಮುನ್ನ ಸಾವಿಗೀಡಾಗಬಹುದು.

9..ಧೂಮಪಾನ ಸೇವನೆಯಿಂದ ವರ್ಷಕ್ಕೆ 480,000 ಸಾವು ಸಂಭವಿಸಿದೆ. ಅಂದರೆ ದಿನಕ್ಕೆ 1,300ಕ್ಕೂ ಹೆಚ್ಚು ಮಂದಿ ಧೂಮಪಾನ ಸೇವನೆಯಿಂದ ಸಾವನ್ನಪ್ಪುತ್ತಿದ್ದಾರೆ.

10..ಧೂಮಪಾನಕ್ಕಾಗಿ ಖರ್ಚು ಮಾಡುವ ಹಣದಿಂದ ದುಪ್ಪಟ್ಟು ಆರೋಗ್ಯಕರ ಆಹಾರ ಕೊಂಡುಕೊಳ್ಳಬಹುದು.