ಬಿಸಿ ನೀರಿನ ಸ್ನಾನದಿಂದಾಗುವ ದುಷ್ಪರಿಣಾಮಗಳೇನು ಗೊತ್ತಾ..?

ಚಳಿಗಾಲದಲ್ಲಿ ಬೆಳ್ಳಂಬೆಳಿಗ್ಗೆ ಸ್ನಾನ ಮಾಡೋದೇ ದೊಡ್ಡ ವಿಷ್ಯ. ಅಂಥಾದ್ರಲ್ಲಿ ತಣ್ಣಗಿನ ನೀರಿನಲ್ಲಿ ಸ್ನಾನ ಮಾಡೋಕ್ಕಾಗತ್ತಾ..?.ಇದು ಎಲ್ಲರಲ್ಲಿ ಸಹಜವಾಗಿ ಮೂಡುವ ಪ್ರಶ್ನೆ.

ಆದರೆ ಬಿಸಿ ನೀರಿನ ಸ್ನಾನ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ಬಿಸಿ ನೀರಿನ ಸ್ನಾನದಿಂದ ಚರ್ಮದ ಸಮಸ್ಯೆ, ಹೃದಯ ಸಂಬಂಧಿ ಖಾಯಿಲೆ, ಕೂದಲು ಉದುರುವ ಸಮಸ್ಯೆ, ಇತ್ಯಾದಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಬಿಸಿ ನೀರಿನ ಸ್ನಾನ ಮಾಡುವುದರಿಂದ ಆಗುವ ದುಷ್ಪರಿಣಾಮಗಳೇನು..?
1..ಚರ್ಮ ಸುಕ್ಕುಗಟ್ಟುತ್ತದೆ. ಇದರಿಂದ ಸಮಯಕ್ಕೂ ಮುಂಚೆಯೇ ನೀವು ವಯಸ್ಸಾದಂತೆ ಕಾಣುವಿರಿ.

2..ತುಂಬ ಬಿಸಿ ಬಿಸಿ ನೀರಿನ ಸ್ನಾನದಿಂದ ಚರ್ಮ ಒಣಗುವುದು. ಅಲ್ಲದೇ, ಗುಳ್ಳೆ, ಅಲರ್ಜಿಗಳಾಗುವ ಸಾಧ್ಯತೆ ಇದೆ.

3..ಬಿಸಿ ನೀರಿನಿಂದ ತಲೆ ಸ್ನಾನ ಮಾಡುವುದರಿಂದ ಕೂದಲು ಉದುರುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಲ್ಲದೇ ಹೊಟ್ಟಿನ ಸಮಸ್ಯೆ ಕೂಡ ಉದ್ಭವವಾಗುತ್ತದೆ.

4..ಬಿಸಿ ನೀರಿನ ಸ್ನಾನದಿಂದ ಹೃದಯಸಂಬಂಧಿ ಖಾಯಿಲೆ ಕಾಣಿಸಿಕೊಳ್ಳುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.

5..ಊಟದ ನಂತರ ಬಿಸಿ ನೀರಿನ ಸ್ನಾನ ಮಾಡುವುದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ.

6..ಶೀತ, ಕೆಮ್ಮು-ಜ್ವರ ಕಾಣಿಸಿಕೊಂಡಲ್ಲಿ ಮಾತ್ರ ಬಿಸಿನೀರಿನ ಸ್ನಾನ ಮಾಡಬಹುದು.

7..ಚಳಿಗಾಲದಲ್ಲಿ ತಣ್ಣೀರಿನಿಂದ ಸ್ನಾನ ಮಾಡುವುದು ಸುಲಭದ ಮಾತಲ್ಲದಿದ್ದರೂ, ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಲು ಪ್ರಯತ್ನಿಸಿ. ಆದರೆ ಬಿಸಿ ಬಿಸಿ ನೀರಿನಿಂದ ಸ್ನಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.