ಆಕ್ರಮ ಮರಳು ಸಾಗಿಸಿದ ರೇಣುಕಾಚಾರ್ಯ: ಮೂಕ ಪ್ರೇಕ್ಷಕರಾದ ಪೊಲೀಸರು

ಕಾನೂನು ಬಾಹಿರವಾಗಿ ಬಿಜೆಪಿ ಶಾಸಕ ರೇಣುಕಾಚಾರ್ಯ ಮರಳು ತುಂಬುತ್ತಿದ್ದರೂ ಪೊಲೀಸರು ಮತ್ತು ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಮೂಕ ಪ್ರೇಕ್ಷಕರಾಗಿ ನಿಂತ ಘಟನೆ ದಾವಣಗೆರೆಯಲ್ಲಿ ನಡೆಯಿತು.
ಶಾಸಕ ರೇಣುಕಾಚಾರ್ಯ ಮರಳು ತುಂಬುವುದಾಗಿ ಜಿಲ್ಲಾಡಳಿತ ಮತ್ತು ಎಸ್ಪಿಗೆ ಸವಾಲು ಹಾಕಿ, 50ಕ್ಕೂ ಹೆಚ್ಚು ಎತ್ತಿನಗಾಡಿ ಜೊತೆ ಮೆರವಣಿಗೆ ಮೂಲಕ ತುಂಗಾಭದ್ರ ನದಿ ದಂಡೆಗೆ ತೆರಳಿದರು. ಮರಳು ತುಂಬಿಸುತ್ತಿದ್ದರೂ ಅಧಿಕಾರಿಗಳು ಮೌನಕ್ಕೆ ಶರಣಾಗಿ ಪರೋಕ್ಷ ಬೆಂಬಲ ನೀಡಿದರು.
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರದ ಶ್ರೀನಿವಾಸ್ ಮತ್ತು, ಎಸ್ಪಿ, ಡಿಸಿ ವಿರುದ್ಧ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದು, ಸಮ್ಮಿಶ್ರ ಸರ್ಕಾರದಲ್ಲಿ ಅಧಿಕಾರಿಗಳು ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ಇವರು ಸುಳ್ಳರು. ಹೊನ್ನಾಳಿ ಜನರಿಗೆ ಸಮರ್ಪಕ ಮರಳು ನೀಡುತ್ತಿಲ್ಲ. ಇವರಿಗೆ ಎಂತ ಭಾಷೆ ಬಳಸಬೇಕು ಗೊತ್ತಾಗುತ್ತಿಲ್ಲ. ತಾಕತ್ತಿದ್ದರೆ ಮುಖ್ಯಮಂತ್ರಿಗಳು, ನನ್ನ ವಿರುದ್ಧ ಪ್ರಕರಣ ದಾಖಲಿಸಲಿ ಎಂದು ಸವಾಲು ಹಾಕಿದರು.
ಶಾಮನೂರು ಶಿವಶಂಕರಪ್ಪ ಮಗ ಗಣೇಶ್ ಮರಳಿನ ಅಭಾವ ಸೃಷ್ಟಿಸುತ್ತಿದ್ದಾರೆ. ಅವರು ಎಂ ಸ್ಯಾಂಡ್ ತಯಾರಿಸುತ್ತಾರೆ. ಅವರಿಗೆ ಅಧಿಕಾರಿಗಳು ಬೆಂಬಲ ನೀಡುತ್ತಿದ್ದಾರೆ. ಎಂದು ಹೊನ್ನಾಳಿಯಲ್ಲಿ ಶಾಸಕ ರೇಣುಕಾಚಾರ್ಯ ಹೇಳಿದರು.