ಅರ್ಜೆಂಟ್ ಆಗಿ ರಕ್ತ ಬೇಕಾ..? ಈ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ಅಪಘಾತವಾದಾಗ ಅಥವಾ ಯಾವುದೇ ತುರ್ತು ಪರಿಸ್ಥಿತಿಯಲ್ಲಿ ರಕ್ತದ ಅವಶ್ಯಕತೆ ಇದ್ದರೆ ಈಗ ಪರದಾಡುವ ಅವಶ್ಯಕತೆ ಇಲ್ಲ. ಈ ಒಂದು ಆ್ಯಪ್ ಡೌನ್‌ಲೋಡ್ ಮಾಡಿಕೊಂಡರೆ ಸಾಕು. ನಿಮಗೆ ಬೇಕಾದ ಗ್ರೂಪ್‌ನ ರಕ್ತವನ್ನ ನೀವು ಸಂಗ್ರಹಿಸಬಹುದು.

ಇನ್ನು ಆ್ಯಪ್ ಕಂಡುಹಿಡಿದಿದ್ದು ಯಾರು ಎಂಬ ಪ್ರಶ್ನೆಗೆ ಉತ್ತರ ಹೈದರಾಬಾದ್‌ ನಿವಾಸಿ ಎಸ್‌.ಕೆ.ಷರೀಫ್ ತಮ್ಮ ಸ್ನೆಹಿತರಾದ ನವೀನ್ ರೆಡ್ಡಿ, ಕೋಟೇಶ್ವರ್ ರಾವ್, ಎಸ್.ಫಣಿ, ಕೇತಮಕ್ಕ, ಮುರುಳಿ ಕೃಷ್ಣ ಜೊತೆ ಸೇರಿ ಈ ಆ್ಯಪ್ ಸಂಶೋಧಿಸಿದ್ದಾರೆ.

ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ..?
ಮೊದಲು ಪ್ಲೇಸ್ಟೋರ್‌ಗೆ ಹೋಗಿ, blood ಎಂದು ಟೈಪ್ ಮಾಡಿ, ಸರ್ಚ್ ಮಾಡಿ. ಆಗ ಫ್ರೆಂಡ್ಸ್ ಟೂ ಸಪೋರ್ಟ್ ಅನ್ನೋ ಅಪ್ಲಿಕೇಶನ್ ತೋರಿಸುತ್ತೆ. ಅದನ್ನ ಇನ್‌ಸ್ಟಾಲ್ ಮಾಡಿಕೊಳ್ಳಿ.

ಈ ಆ್ಯಪನ್ನ ಓಪನ್ ಮಾಡಿ, ಇದರಲ್ಲಿ ಹಲವಾರು ರಕ್ತದ ಗುಂಪುಗಳನ್ನು ತೋರಿಸುತ್ತೆ. ನಿಮಗೆ ಯಾವ ಗ್ರೂಪ್‌ನ ರಕ್ತ ಬೇಕೆಂದು ಕ್ಲಿಕ್ ಮಾಡಿ. ನಂತರ ನೀವು ಯಾವ ದೇಶದಲ್ಲಿದ್ದೀರಾ, ಯಾವ ರಾಜ್ಯದಲ್ಲಿದ್ದೀರಾ, ಯಾವ ಜಿಲ್ಲೆಯಲ್ಲಿದ್ದೀರಾ, ಯಾವ ಊರಿನಲ್ಲಿದ್ದೀರಾ ಎಂಬುದನ್ನ ಕ್ಲಿಕ್ ಮಾಡಿ.

ಈಗ ನಿಮ್ಮ ಊರಿನಲ್ಲಿ ನಿಮಗೆ ಬೇಕಾದ ಗುಂಪಿನ ರಕ್ತ ನೀಡಲು ತಯಾರಿರುವ ವ್ಯಕ್ತಿಗಳ ವಿವರ ಸಿಗುತ್ತದೆ. ಆ್ಯಪ್‌ನಲ್ಲಿ ರಕ್ತ ನೀಡಬಯಸುವವರು ತಮ್ಮ ಹೆಸರು, ಫೋನ್‌ ನಂಬರ್ ನಮೂದಿಸಿರುತ್ತಾರೆ. ಅವರನ್ನ ಸಂಪರ್ಕಿಸಿ, ರಕ್ತ ಪಡೆದುಕೊಳ್ಳಬಹುದು. ಇನ್ನು ಭಾರತವಷ್ಟೇ ಅಲ್ಲದೇ, ಹಲವು ರಾಷ್ಟ್ರಗಳಲ್ಲೂ ಈ ಸೌಲಭ್ಯ ಪಡೆಯಬಹುದು.