Top

ಶಬರಿಮಲೆಯಲ್ಲಿ ರಾತ್ರಿ ಘರ್ಷಣೆ: 70ಕ್ಕೂ ಹೆಚ್ಚು ಬಂಧನ

ಶಬರಿಮಲೆಯಲ್ಲಿ ರಾತ್ರಿ ಘರ್ಷಣೆ: 70ಕ್ಕೂ ಹೆಚ್ಚು ಬಂಧನ
X

ಶಬರಿಮಲೆಯಲ್ಲಿ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶ ಖಂಡಿಸಿ ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ಕೇರಳ ಬಂದ್​ಗೆ ಭಾನುವಾರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ತಡರಾತ್ರಿ ಘರ್ಷಣೆಗಳು ನಡೆದಿದ್ದರಿಂದ ಮತ್ತೆ ಉದ್ವಿಗ್ನ ಪರಿಸ್ಥಿತಿಗೆ ಮರಳಿದೆ.

ಮುಖ್ಯಮಂತ್ರಿ ಪಿಣರಾಯ್ ವಿಜಯನ್ ನಿವಾಸದ ಮುಂದೆ ಸೇರಿದಂತೆ ಕೇರಳದ ಹಲವಾರು ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆದವು. ದೇವಸ್ಥಾನದ ಆವರಣದಲ್ಲಿ ರಾತ್ರಿ ತಂಗಲು ವಿಧಿಸಲಾಗಿದ್ದ ನಿರ್ಬಂಧ ಹಾಗೂ ಪೊಲೀಸರ ಕಾವಲು ಖಂಡಿಸಿ ಪ್ರತಿಭಟನಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ಆರಂಭವಾಯಿತು.

ತಿರುವನಂತಪುರದಲ್ಲಿನ ಸಿಎಂ ಪಿಣರಾಯ್ ನಿವಾಸದ ಮುಂದೆ ರಾತ್ರಿ ಆಗಮಿಸಿದ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದರು. ಪ್ರತಿಭಟನಕಾರರ ಯತ್ನವನ್ನು ಪೊಲೀಸರು ವಿಫಲಗೊಳಿಸಲು ಯತ್ನಿಸಿದಾಗ ಘರ್ಷಣೆ ಉಂಟಾಯಿತು.

ಇಲ್ಲಿ ತುರ್ತು ಪರಿಸ್ಥಿತಿಗಿಂತ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. 15 ಸಾವಿರ ಪೊಲೀಸರನ್ನು ಯಾಕೆ ನಿಯೋಜಿಸಬೇಕು? ದೇವಸ್ಥಾನದ ಬೆಟ್ಟೆದ ಮೇಲೆ ಹೋಗಲು ಭಕ್ತರನ್ನು ಬಿಡುತ್ತಿಲ್ಲ. ಭಕ್ತರು ಉಗ್ರರಲ್ಲ ಎಂದು ಕೇಂದ್ರ ಸಚಿವ ಕೆ.ಜೆ. ಅಲ್ಫಾನ್ಸೊ ಆರೋಪಿಸಿದ್ದಾರೆ.

Next Story

RELATED STORIES