ಗೌಡರ ಕುಟುಂಬದವರಷ್ಟೇ ರೈತರು- ಸಿಎಂ ವಿರುದ್ಧ ವ್ಯಂಗ್ಯ

X
TV5 Kannada19 Nov 2018 5:33 AM GMT
ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಕಾವು ಜೋರಾಗಿದ್ದು, ಸಿಎಂ ಕುಮಾರಸ್ವಾಮಿ ವಿರುದ್ಧ ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನಾನಿರತರು ರೈತರಲ್ಲ ದರೋಡೆಕೋರರು ಎಂದಿದ್ದಲ್ಲದೇ, ರೈತ ಮಹಿಳೆಗೆ ಇಷ್ಟು ದಿನ ಎಲ್ಲಿ ಮಲಗಿದ್ದೆ ಎಂದು ಕೇಳುವ ಮೂಲಕ ಸಿಎಂ ಕುಮಾರಸ್ವಾಮಿ ಅನ್ನದಾತರನ್ನ ಅವಮಾನಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಅನ್ನದಾತನೊಬ್ಬ ಕುಮಾರಸ್ವಾಮಿ ವಿರುದ್ಧ ವ್ಯಂಗ್ಯವಾಗಿ ಆಕ್ರೋಶ ವ್ಯಕ್ತಪಡಿಸಿದ್ದು, ಕೇಳ್ರಪ್ಪೋ ಕೇಳ್ರಿ.. ರೈತರೆಂದ್ರೆ ಯಾರು ಗೊತ್ತಾ..? ದೇವೇಗೌಡರ ಮಕ್ಕಳು, ಮೊಮ್ಮಕ್ಕಳು ಮಾತ್ರ. ಕುಮಾರಸ್ವಾಮಿ, ದೇವೇಗೌಡರ ಕುಟುಂಬದವರು ರೈತರು. ಹೆಚ್ಡಿಕೆಗೆ ವೋಟ್ ಹಾಕಿದೋರು ಮಾತ್ರ ರೈತರು. ಪ್ರತಿಭಟನೆ ಮಾಡೋರು, ಹಸಿರು ಶಾಲು ಹೊದ್ದೋರು ಕಳ್ಳರು. ಕುಮಾರಸ್ವಾಮಿ ಬಂದಾಗ ಕೈ ಮುಗಿಯೋರು ರೈತರು. ಪ್ರತಿಭಟನೆ ಮಾಡೋರೆಲ್ಲಾ ದರೋಡೆಕೋರರು ಎಂದು ವ್ಯಂಗ್ಯವಾಡಿದ್ದಾರೆ.
ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
Next Story