Top

ಪಹಣಿ ದಾಖಲೆ ಮನೆಗೆ ತಲುಪಿಸಲು ಸಚಿವ ಸಂಪುಟ ತೀರ್ಮಾನ

ಪಹಣಿ ದಾಖಲೆ ಮನೆಗೆ ತಲುಪಿಸಲು ಸಚಿವ ಸಂಪುಟ ತೀರ್ಮಾನ
X

ನೆಮ್ಮದಿ ಕೇಂದ್ರ ಮತ್ತು ಅಟಲ್ ಜೀ ಕೇಂದ್ರಗಳಲ್ಲಿ ನೀಡುತ್ತಿರುವ ಪಹಣಿ ಶುಲ್ಕ 10 ರೂಪಾಯಿಯಿಂದ 15ರೂ.ಗೆ ಹಾಗೂ 15 ರೂಪಾಯಿಗೆ ದೊರೆಯುತ್ತಿದ್ದ ದಾಖಲೆಗಳ ಶುಲ್ಕ 25 ರೂಪಾಯಿಗೆ ಏರಿಕೆ ಮಾಡಿ ರಾಜ್ಯ ಸಚಿವ ಸಂಪುಟ ತೀರ್ಮಾನ ಕೈಗೊಂಡಿದೆ.

ವಿಧಾನಸೌಧದಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಸಭೆಯ ನಂತರ ಸಚಿವ ಕೃಷ್ಣ ಭೈರೇಗೌಡ ಸುದ್ದಿಗೋಷ್ಠಿಯಲ್ಲಿ ಪಹಣಿ ದಾಖಲೆಗಳನ್ನು ಅಂಚೆ ಮುಖಾಂತರ ರೈತರ ಮನೆ ಬಾಗಿಲಿಗೆ ತಲುಪಿಸಲು ಹೊಸ ಯೋಜನೆ ಕೈಗೊಳ್ಳಲಾಗಿದೆ ಎಂದರು.

ಹಾಸನದ ಮೊಸಳೆ ಹೊಸಳ್ಳಿ ಇಂಜನಿಯರಿಂಗ್ ಕಾಲೇಜು ಹಾಗೂ ಪಾಲಿಟೆಕ್ನಿಕ್ ಕಾಲೇಜು ನಿರ್ಮಾಣಕ್ಕೆ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಕೃಷ್ಣಭೈರೇಗೌಡ ಹೇಳಿದರು.

ಹೊಸಕೋಟೆ ಸುತ್ತಲಿನ 30 ಕೆರೆಗಳಿಕೆ ಮತ್ತು ಬೆಂಗಳೂರಿನಲ್ಲಿ ಸಂಸ್ಕರಿಸಿದ ತ್ಯಾಜ್ಯ ನೀರು ಪೂರೈಕೆ ಗೆ 100 ಕೋಟಿ ರೂ ಮೀಸಲು ಮಾಡಲಾಗಿದೆ, ಇನ್ನೂ ಜಯದೇವ ಆಸ್ಪತ್ರೆ ಗೆ 1150 ಹಾಸಿಗೆ ವ್ಯವಸ್ಥೆವುಳ್ಳ ಹೆಚ್ಚುವರಿ ವ್ಯವಸ್ಥೆ ಯಲ್ಲಿ 45 ಕೋಟಿ ವೆಚ್ಚ ಮೀಸಲು,ಅಂಗಾಂಗಗಳ ಟ್ರನ್ಸಪಟ್ ಗಾಗಿ ಬಡವರ ಒಳಿತಿಗಾಗಿ ಸರ್ಕಾರ 30 ಕೋಟಿ ವೆಚ್ಚದಲ್ಲಿ ಸಂಪುಟದಲ್ಲಿ ತೀರ್ಮಾನಿಸಿದೆ.ಇನ್ನೂ ನೂತನ ವಾಣಿಜ್ಯ ಸಂಕಿರಣಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ ಎಂದರು.

ಉಲ್ಲಳ ಹಾದಿಯಲ್ಲಿ ಬರುವ ಗ್ರಾಮ ಹಾಗೂ ಶೈಕ್ಷಣಿಕ ಸಂಸ್ಥೆಗಳಿಗೆ ಕುಡಿಯುವ ನೀರಿಗಾಗಿ 198 ಕೋಟಿ ಮೀಸಲು ಗೃಹ ಇಲಾಖೆ ವತಿಯಿಂದ ಸ್ಮಾರ್ಟ್ ಪೋಲಿಸಿಂಗ್ ಅಡಿಯಲ್ಲಿ 32 ಲಕ್ಷದ ಯೋಜನೆ ಗೆ ಸಂಪುಟ ಒಪ್ಪಿಗೆ ಬೃಹತ್ ನೀರಾವರಿ ವತಿಯಿಂದ ಚನ್ನರಾಯಪಟ್ಟಣದಲ್ಲಿ 19 ಕೆರೆ ತುಂಬಿಸಲು 32 ಕೋಟಿ ಮೀಸಲು, ಬೆಂಗಳೂರು ಮತ್ತು ಸುತ್ತಮುತ್ತಲಿನ ಭೂಮಿಯ ಸಮಸ್ಯೆಯಿಂದಾಗಿ ಮುಖ್ಯಮಂತ್ರಿ ಒಂದು ಲಕ್ಷ ಮನೆಗಾಗಿ ಈ ಸಂಪುಟ ಒಪ್ಪಿಗೆ ನೀಡಲಾಗಿದೆ ಮತ್ತು ಮುಂದಿನ ಕ್ಯಾಲೆಂಡರ್ ಗೆ ರಜೆದಿನಗಳಿಗೆ ಸಂಪುಟ ಒಪ್ಪಿಗೆಯನ್ನು ಸೂಚಿಸಲಾಗಿದೆ ಎಂದರು.

Next Story

RELATED STORIES