Top

ಬಿಜೆಪಿಯ ದಕ್ಷಿಣ ಬಾಗಿಲು ಬಂದ್ ಮಾಡ್ತೀವಿ: ದೇವೇಗೌಡ

ಬಿಜೆಪಿಯ ದಕ್ಷಿಣ ಬಾಗಿಲು ಬಂದ್ ಮಾಡ್ತೀವಿ: ದೇವೇಗೌಡ
X

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 28 ಕ್ಷೇತ್ರಗಳಲ್ಲಿ ಮೈತ್ರಿಕೂಟ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಎಲ್ಲಾ ಕ್ಷೇತ್ರದಲ್ಲೂ ಗೆಲ್ಲುವ ಮೂಲಕ ಬಿಜೆಪಿಯ ದಕ್ಷಿಣ ಭಾರತದ ಬಾಗಿಲನ್ನು ಮುಚ್ಚುತ್ತೇವೆ ಎಂದು ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಶರವೇಗದಲ್ಲಿ ಚುನಾವಣೆಯಲ್ಲಿ ಗೆದ್ದು ಪ್ರಧಾನಿ ಆಗಿದ್ದಾರೆ. ಅದೇ ರೀತಿ ವಾಪಸ್ ಹೋಗುತ್ತಾರೆ. ಮುಂದಿನ ಲೋಕಸಭಾ ಚುನಾವಣೆ ನಂತರ ತೃತೀಯ ರಂಗವೇ ಅಧಿಕಾರಕ್ಕೆ ಬರಲಿದೆ ಎಂದರು.

ಕೆಲವು ಮಾಧ್ಯಮಗಳು ರೈತ ಪ್ರತಿಭಟನೆಗಳನ್ನು ತಪ್ಪಾಗಿ ತೋರಿಸುತ್ತಿವೆ. ರೈತರ ಸಮಸ್ಯೆ ಬಗೆಹರಿಸಲು ಪ್ರಧಾನಿ ಮೋದಿ ಅವರ ಮನೆ ಬಾಗಿಲಿಗೂ ಹೊಗಿ ಬಂದೆ. ಆದರೆ ಅವರು ಸಮಸ್ಯೆ ಬಗೆಹರಿಸುವ ಪ್ರಯತ್ನವನ್ನೇ ಮಾಡಿಲ್ಲ. ಅದನ್ನು ಯಾಕೆ ಮಾಧ್ಯಮಗಳು ಪ್ರಶ್ನಿಸುತ್ತಿಲ್ಲ ಎಂದು ದೇವೇಗೌಡರು ಮರು ಪ್ರಶ್ನಿಸಿದರು.

ಈಗಾಗಲೇ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ಕರೆಯಲಾಗಿದೆ. ಸಮಸ್ಯೆ ಆದಷ್ಟು ಬೇಗ ಬಗೆ ಹರಿಯಲಿದೆ. ನಾವು ಕೆಲಸ ಮಾಡುತ್ತಿದ್ದೇವೆ. ಆದರೆ ಎಲೆಕ್ಟ್ರಾನಿಕ್ ವೇಗದಲ್ಲಿ ಕೆಲಸ ಸಾಧ್ಯವಿಲ್ಲ ಎಂದು ದೇವೇಗೌಡ ಸ್ಪಷ್ಟಪಡಿಸಿದರು.

Next Story

RELATED STORIES