ಮನೆಯಲ್ಲೇ ತಯಾರಿಸಿ ಟೇಸ್ಟಿ ವೆಜಿಟೇಬಲ್ ಸೂಪ್

ಬೇಕಾದ ಸಾಮಗ್ರಿ: ಒಂದು ಕ್ಯಾರೆಟ್, 10 ಬೀನ್ಸ್, ಒಂದು ಈರುಳ್ಳಿ, ಅರ್ಧ ಕ್ಯಾಬೆಜ್, ಹಸಿ ಬಟಾಣಿ (ಇದರೊಂದಿಗೆ ನಿಮ್ಮ ನೆಚ್ಚಿನ ತರಕಾರಿ ನೀವು ಬಳಸಿಕೊಳ್ಳಬಹುದು). 2 ಚಮಚ ಕಾರ್ನ್ ಫ್ಲೋರ್, ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಪೆಪ್ಪರ್ ಪೌಡರ್. ಒಗ್ಗರಣೆಗೆ, ಒಂದು ಸ್ಪೂನ್ ತುಪ್ಪ, 2 ಎಸಳು ಬೆಳ್ಳುಳ್ಳಿ, ಈರುಳ್ಳಿ, ಅರ್ಧ ಚಮಚ ಜೀರಿಗೆ.

ಮಾಡುವ ವಿಧಾನ: ಎಲ್ಲಾ ತರಕಾರಿಗಳನ್ನು ತುಂಡರಿಸಿ, ಉಪ್ಪು, ನಾಲ್ಕು ಗ್ಲಾಸ್ ನೀರಿನೊಂದಿಗೆ ಬೇಯಿಸಿ. ತದನಂತರ ಒಂದು ಬಾಣಲೆಯಲ್ಲಿ ತುಪ್ಪ ಹಾಕಿ, ಅದಕ್ಕೆ ಬೆಳ್ಳುಳ್ಳಿ ಎಸಳು, ಜೀರಿಗೆ, ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ ಹಾಕಿ ಬಾಡಿಸಿ. ಇದಕ್ಕೆ ಬೇಯಿಸಿದ ತರಕಾರಿಯನ್ನ ನೀರಿನ ಸಮೇತ ಸೇರಿಸಿ, ಕಾರ್ನ್ ಫ್ಲೋರ್ ಹಾಕಿ 5 ನಿಮಿಷ ಕುದಿಸಿ, ಕೊನೆಗೆ ಚಿಟಿಕೆ ಪೆಪ್ಪರ್ ಪೌಡರ್ ಹಾಕಿ, ಸವಿಯಿರಿ.

ಚಳಿಗಾಲದಲ್ಲಿ ಕರಿದ ಪದಾರ್ಥದ ಸೇವನೆ ಬದಲು, ಈ ರೀತಿ ಸೂಪ್ ಸೇವಿಸುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು.