Top

ವನಿತೆಯರ ಟಿ-20:  ಆಸ್ಟ್ರೇಲಿಯಾ ಸೋಲಿಸಿದ ಭಾರತಕ್ಕೆ ಅಗ್ರಸ್ಥಾನ

ವನಿತೆಯರ ಟಿ-20:  ಆಸ್ಟ್ರೇಲಿಯಾ ಸೋಲಿಸಿದ ಭಾರತಕ್ಕೆ ಅಗ್ರಸ್ಥಾನ
X

ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಅವರ ಮಿಂಚಿನ ಆಟದಿಂದ ಭಾರತ ತಂಡ 48 ರನ್​ಗಳಿಂದ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ವನಿತೆಯರ ಟಿ-20 ವಿಶ್ವಕಪ್ ಟೂರ್ನಿಯ ಬಿ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿತು.

ಶನಿವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್ ಗಳಲ್ಲಿ 6 ವಿಕೆಟ್​ಗೆ 167 ರನ್ ಗಳಿಸಿತು. ಆಸ್ಟ್ರೇಲಿಯಾ 19.4 ಓವರ್ ಗಳಲ್ಲಿ 119 ರನ್​ಗಳಿಗೆ ಆಲೌಟಾಯಿತು.

ಭಾರತದ ಸಂಘಟಿತ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ಆರಂಭದಿಂದಲೇ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಅನುಜಾ ಪಾಟೀಲ್ 3 ವಿಕೆಟ್ ಕಬಳಿಸಿದರೆ, ದೀರ್ಪಿ ಶರ್ಮ, ರಾಧಾ ಯಾದವ್ ಮತ್ತು ಪೂನಮ್ ಯಾದವ್ ತಲಾ 2 ವಿಕೆಟ್ ಕಿತ್ತು ಆಸ್ಟ್ರೇಲಿಯಾದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಆಸ್ಟ್ರೇಲಿಯಾ ಪರ ಪೆರ್ರಿ (39) , ಗಾರ್ಡನರ್ (20) ಹೊರತಪಡಿಸಿ ಉಳಿದ ಆಟಗಾರ್ತಿಯರು ಹೆಚ್ಚು ಹೊತ್ತು ನಿಲ್ಲಲಿಲ್ಲ.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡಕ್ಕೆ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಆಸರೆಯಾದರು. ಸ್ಮೃತಿ 55 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್ ಒಳಗೊಂಡ 83 ರನ್ ಸಿಡಿಸಿದರು. 27 ಎಸೆತಗಳಲ್ಲಿ ತಲಾ 3 ಬೌಂಡರಿ ಹಾಗೂ ಸಿಕ್ಸರ್ ಒಳಗೊಂಡ 42 ರನ್ ಗಳಿಸಿದ ನಾಯಕಿ ಹರ್ಮನ್​ಪ್ರೀತ್ ಕೌರ್ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬೆಂಬಲದ ನೀಡಿದರು. ಇವರಿಬ್ಬರು 108 ರನ್ ಜೊತೆಯಾಟ ನಿಭಾಯಿಸಿದರು.

  • ಸಂಕ್ಷಿಪ್ತ ಸ್ಕೋರ್
  • ಭಾರತ 20 ಓವರ್ 7 ವಿಕೆಟ್ 167 (ಸ್ಮೃತಿ 83, ಹರ್ಮನ್​ಪ್ರೀತ್ ಕೌರ್ 43, ಪೆರ್ರಿ 16/3, ಕಿಮ್ಮನ್ಸೆ 42/2, ಗಾರ್ಡನರ್ 22/2).
  • ಆಸ್ಟ್ರೇಲಿಯಾ 19.4 ಓವರ್ 119 (ಪೆರ್ರಿ 39 , ಗಾರ್ಡನರ್ 20, ಅನುಜಾ ಪಾಟೀಲ್ 15/3. ದೀಪ್ತಿ 24/2, ರಾಧಾ 13/2, ಪೂನಮ್ 28/2).

Next Story

RELATED STORIES