ಬೊಜ್ಜು ಕರಗಿಸುವಲ್ಲಿ ಸಹಕಾರಿಯಾಗಲಿದೆ ಈ ಜ್ಯೂಸ್

ದೇಹ ತಂಪಾಗಿರಿಸುವಲ್ಲಿ, ತ್ವಚೆಯ, ಕೂದಲಿನ ಸೌಂದರ್ಯ ಕಾಪಾಡುವಲ್ಲಿ ಆ್ಯಲೋವೆರಾ ಎಷ್ಟು ಪ್ರಮುಖ ಪಾತ್ರ ವಹಿಸುತ್ತದೋ, ಅಷ್ಟೇ ದೇಹದ ತೂಕ ಇಳಿಸುವಲ್ಲಿಯೂ ಆ್ಯಲೋವೆರಾ ಸಹಾಯಕವಾಗಿದೆ.

ಆ್ಯಲೋವೆರಾ ಜ್ಯೂಸ್ ಕುಡಿಯುವ ಮೂಲಕ ದೇಹದ ತೂಕ ಇಳಿಸುಕೊಳ್ಳಬಹುದು ಎನ್ನುತ್ತದೆ ಆಯುರ್ವೇದ. ದೇಹದ ತೂಕ ಇಳಿಸುವುದಲ್ಲದೇ, ತ್ವಚೆಯ ಸಮಸ್ಯೆ, ಕೂದಲು ಉದುರುವಿಕೆಯ ಸಮಸ್ಯೆ, ಅಲರ್ಜಿ, ಮುಟ್ಟಿನ ಸಮಸ್ಯೆ, ಮುಂತಾದ ಸಮಸ್ಯೆಗೆ ರಾಮಬಾಣವಾಗಿದೆ.

ಆ್ಯಲೋವೆರಾ ಜ್ಯೂಸ್ ತಯಾರಿಸುವುದು ಹೇಗೆ..?
ಆ್ಯಲೋವೆರಾ ಜ್ಯೂಸ್ ತಯಾರಿಸುವಾದ ದೊಡ್ಡದಾದ ಆ್ಯಲೋವೆರಾ ತುಂಡನ್ನು ಆರಿಸಿಕೊಳ್ಳಿ. ಚಿಕ್ಕದಾದ ಆ್ಯಲೋವೆರಾಗಿಂತ, ದೊಡ್ಡದಾದ ಆ್ಯಲೋವೆರಾದಲ್ಲಿ ಕಹಿ ಕಡಿಮೆಯಿದ್ದು, ಜ್ಯೂಸ್ ಸೇವಿಸಲು ಅನುಕೂಲವಾಗುತ್ತದೆ.

ಆ್ಯಲೋವೆರದ ಸಿಪ್ಪೆಯನ್ನು ತೆಗೆದು(ಆ್ಯಲೋವೆರಾದ ಸಿಪ್ಪೆ ತೆಗೆಯುವಾಗ ಎಚ್ಚರಿಕೆಯಿಂದ ತೆಗೆಯಬೇಕು. ಜ್ಯೂಸ್ ಮಾಡುವಾಗ ಸಿಪ್ಪೆ ಬಳಸಿದಲ್ಲಿ, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.), ಅದರ ಒಳಭಾಗವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ನೀರಿನಲ್ಲಿ ಸ್ವಚ್ಛವಾಗಿ ತೊಳೆಯಿರಿ.(ಆ್ಯಲೋವೆರಾ ತೊಳೆದ ನೀರನ್ನು ಆ್ಯಲೋವೆರಾ ಜೆಲ್ ಮಾಡಲು ಬಳಸಬಹುದು.)

ಈಗ ಸ್ವಚ್ಛವಾಗಿ ತೊಳೆದ ಆ್ಯಲೋವೆರಾ ತುಂಡುಗಳನ್ನ ಮಿಕ್ಸಿಯಲ್ಲಿ ಹಾಕಿ, ನೀರಿನೊಂದಿಗೆ ಚೆನ್ನಾಗಿ ರುಬ್ಬಿ. ತದನಂತರ ಇದನ್ನು ಸೋಸಿಡಿ. ನಂತರ ಒಂದು ಪಾತ್ರೆಯಲ್ಲಿ ನೀರು ಕಾಯಿಸಿ, ನೀರು ಸ್ವಲ್ಪ ಕುದಿಯಲು ಶುರುವಾದಾಗ ಸೋಸಿಟ್ಟ ಆ್ಯಲೋವೆರಾ ಪೇಸ್ಟ್ ಹಾಕಿ ಕದಡಿ. ನೀರು ಕಾಯಿಸುವಾಗ ಮೊದಲು ಸಣ್ಣ ಉರಿಯಲ್ಲಿಟ್ಟು, ನಂತರ ಉರಿಯನ್ನು ಹೆಚ್ಚು ಮಾಡಬಹುದು. ಆದರೆ ಹೆಚ್ಚಿನ ಉರಿಯನ್ನಿಟ್ಟು, ಸೋಸಿಟ್ಟ ಆ್ಯಲೋವೆರಾವನ್ನು ಸೇರಿಸಬಾರದು.

5-10ನಿಮಿಷದವರೆಗೆ ಈ ಆ್ಯಲೋವೆರಾ ನೀರನ್ನ ಕಾಯಿಸಿ. ಈ ನೀರು ಕುದಿಯುವಾಗ ಬರುವ ನೊರೆಯನ್ನು ತೆಗೆಯಬೇಕು. ಅಲ್ಲದೇ ಇದರಲ್ಲಿರುವ ಲೋಳೆ ಅಂಶ ಹೋಗುವವರೆಗೂ(5-10 ನಿಮಿಷ)ಕಾಯಿಸಬೇಕು. ತಣ್ಣಗಾಗಲು ಬಿಟ್ಟು ಇದನ್ನು ಸೇವಿಸಬಹುದು. ಇದು ಬಾಯಿಯ ದುರ್ವಾಸನೆ ನಿವಾರಿಸುವಲ್ಲಿ ಉಪಯೋಗಕಾರಿಯಾಗಿದೆ.

ಕುದಿಸಿದ ಆ್ಯಲೋವೆರಾ ಜ್ಯೂಸ್ ಕುಡಿಯದಿರಲು ಸೂಚನೆ ಇದ್ದರೆ. ಈ ಬಗ್ಗೆ ವೈದ್ಯರಲ್ಲಿ ವಿಚಾರಿಸಿ, ಆ್ಯಲೋವೆರಾ ಜ್ಯೂಸ್ ಸೇವಿಸಬಹುದು.

ಆ್ಯಲೋವೆರಾ ಜ್ಯೂಸ್ ಮಾಡುವಾಗ ಅದರ ಜೊತೆ, ಶುಂಠಿ, ನೆಲ್ಲಿಕಾಯಿ ಇತ್ಯಾದಿಗಳನ್ನ ಬಳಸುವಂತಿಲ್ಲ.

Recommended For You

Leave a Reply

Your email address will not be published. Required fields are marked *