ರಾಧಿಕಾ ಪಂಡಿತ್ ಸೀಮಂತ ಕಾರ್ಯಕ್ರಮ ಹೇಗಿತ್ತು ಗೊತ್ತಾ..?

ಬೆಂಗಳೂರು: ನಗರದ ತಾಜ್ ವೆಸ್ಟೆಂಡ್ ಹೊಟೇಲ್ನಲ್ಲಿಂದು ರಾಧಿಕಾ ಪಂಡಿತ್ ಸೀಮಂತ ಕಾರ್ಯಕ್ರಮ ನೆರವೇರಿದ್ದು, ಸ್ಯಾಂಡಲ್ವುಡ್ ಗಣ್ಯರೆಲ್ಲ ಆಗಮಿಸಿ, ಶುಭಕೋರಿದ್ದಾರೆ.
ಹಿರಿಯ ನಟಿ ಜಯಂತಿ, ಅಂಬರೀಶ್ , ನಿರ್ದೇಶಕ ಯೋಗ ರಾಜ್ ಭಟ್ ಫ್ಯಾಮಿಲಿ, ರವಿಚಂದ್ರನ್ ಪತ್ನಿ , ತಾರ, ಸುಧಾರಾಣಿ , ನಿರ್ದೇಶಕ ಎ. ಹರ್ಷ, ನಿರ್ಮಾಪಕ ಕೆ.ಮಂಜು, ಕಿರುತೆರೆ ಕಲಾವಿದರು ಸೇರಿದಂತೆ ಸಾಕಷ್ಟು ಮಂದಿ ರಾಧಿಕಾ ಪಂಡಿತ್ ಸೀಮಂತಕ್ಕೆ ಆಗಮಿಸಿದ್ದರು.
ವಿಶೇಷವೆಂದರೆ ಗಾಲಿ ಜನಾರ್ಧನ ರೆಡ್ಡಿ ಕೂಡ ರಾಧಿಕಾ ಸೀಮಂತ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಗೌಡರ ಸಂಪ್ರದಾಯದಂತೆ ಸೀಮಂತ ಕಾರ್ಯಕ್ರಮ ನಡೆದಿದ್ದು, ಯಶ್-ರಾಧಿಕಾ ಮದುವೆಯಾದ ಸ್ಥಳದಲ್ಲೇ ಸೀಮಂತ ಶಾಸ್ತ್ರ ನಡೆದಿದ್ದು ಇನ್ನೊಂದು ವಿಶೇಷ.
ಕಾರ್ಯಕ್ರಮದಲ್ಲಿ ಗೌಡರ ಸಂಪ್ರದಾಯದಂತೆ, ದಕ್ಷಿಣ ಭಾರತ ಶೈಲಿಯ ಖಾದ್ಯ ತಯಾರಿಸಲಾಗಿತ್ತು. ಇನ್ನು ಅಮ್ಮನಾಗುವ ಖುಷಿಯಲ್ಲಿರುವ ರಾಧಿಕಾ ಪಂಡಿತ,ಹಸಿರು ರೇಷ್ಮೆ ಸೀರೆಯಲ್ಲಿ ಕಂಗೊಳಿಸುತ್ತಿದ್ದರು.
ಯಶ್, ರಾಧಿಕಾ ಡಿಸೆಂಬರ್ 9 ರಂದು ಮದುವೆ ಆಗಿದ್ದು, ಇದೇ ದಿನ ಮಗುವಿನ ಜನನಕ್ಕೆ ವೈದ್ಯರು ಡೇಟ್ ಕೊಟ್ಟಿದ್ದಾರೆ. ಡಿಸೆಂಬರ್ 9ಕ್ಕೆ ಜೂನಿಯರ್ ರಾಕಿಂಗ್ ಸ್ಟಾರ್ ಬರ್ತಾನಾ..? ಅಥವಾ ಪುಟಾಣಿ ಪ್ರಿನ್ಸೆಸ್ ಬರ್ತಾಳಾ?.. ಕಾದು ನೋಡಬೇಕಿದೆ.