Top

ಮುಂಬೈಗೆ ಬಂದಿಳಿದ ದೀಪ್-ವೀರ್ ದಂಪತಿ: ಫೋಟೋಸ್ ವೈರಲ್

ಮುಂಬೈಗೆ ಬಂದಿಳಿದ ದೀಪ್-ವೀರ್ ದಂಪತಿ: ಫೋಟೋಸ್ ವೈರಲ್
X

ಮುಂಬೈ: ಇಟಲಿಯಲ್ಲಿ ವಿವಾಹ ಮಾಡಿಕೊಂಡ ಬಾಲಿವುಡ್ ಬೆಸ್ಟ್ ಕಪಲ್ ರಣ್ವೀರ್-ದೀಪಿಕಾ, ಸದ್ಯ ಮುಂಬೈಗೆ ಬಂದಿಳಿದಿದ್ದಾರೆ.

ಮುಂಬೈ ಏರ್ಪೋರ್ಟ್‌ನಲ್ಲಿ ಬಂದಿಳಿದ ಡಿಪ್ಪಿ-ರಣ್ವೀರ್ ಅಭಿಮಾನಿಗಳತ್ತ ಕೈಬೀಸಿ, ನಗೆಬೀರಿದ್ದು, ಅಭಿಮಾನಿಗಳು ನೆಚ್ಚಿನ ಜೋಡಿಗೆ ಮದುವೆ ಶುಭಾಶಯ ಕೋರಿದ್ದಾರೆ.

ಮುಂಬೈನಲ್ಲಿ ಗಣ್ಯರಿಗಾಗಿ ಆಯೋಜಿಸಲಾಗಿರುವ ಆರತಕ್ಷತೆ ಕಾರ್ಯಕ್ರಮಕ್ಕೆ ದೀಪಿಕಾ -ರಣ್ವೀರ್ ಸಜ್ಜಾಗಿದ್ದು, ದೀಪಿಕಾ ರಣ್ವೀರ್ 'ಗೃಹಪ್ರವೇಶ' ಮಾಡಿದ್ದಾರೆ.

ಈ ವೇಳೆ ದೀಪಿಕಾ ಕ್ರೀಮ್ ಬಣ್ಣದ ಚೂಡಿದಾರ್ ಧರಿಸಿ, ಕೆಂಪು ಬಣ್ಣದ ಶಾಲು ಧರಿಸಿ, ಮುತ್ತೈದೆಯಾಗಿ ಕಂಗೊಳಿಸಿದ್ದು, ರಣ್ವೀರ್ ಕೂಡ ಕ್ರೀಮ್ ಬಣ್ಣದ ಕುರ್ತಾದೊಂದಿಗೆ, ಕೆಂಪು ಬಣ್ಣದ ಜಾಕೆಟ್ ಧರಿಸಿದ್ದರು.

Next Story

RELATED STORIES