ರೈತರಲ್ಲ, ಗೂಂಡಾಗಳು: ಕುಮಾರಸ್ವಾಮಿ ವಿವಾದಾತ್ಮಕ ಹೇಳಿಕೆ

ಕಬ್ಬು ತುಂಬಿದ ಲಾರಿಗಳನ್ನು ಬೆಳಗಾವಿಯ ಸುವರ್ಣ ಸೌಧದೊಳಗೆ ನುಗ್ಗಿಸಿ ಪ್ರತಿಭಟನೆ ನಡೆಸಿದ ರೈತರು, ರೈತರಲ್ಲ. ಗೂಂಡಾಗಳು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುವರ್ಣ ಸೌಧ ಗೇಟ್ನ ಬೀಗ ಹೊಡೆಯಲು ಹೋಗಿರುವುದು ರೈತರಲ್ಲ, ಇವರೆಲ್ಲ ಗೂಂಡಾಗಳು. ಈ ರೀತಿ ವರ್ತನೆ ಮಾಡುವುದು ನಮ್ಮ ರೈತರಲ್ಲ. ನಮ್ಮ ರೈತರು ಮೃದು ಸ್ವಭಾವದವರು, ಈ ರೀತಿ ಮಾಡುವುದಿಲ್ಲ. ಇದರ ಹಿಂದೆ ಯಾರೋ ಇದ್ದಾರೆ ಎಂದರು.
ರೈತರ ಆರ್ಥಿಕ ಸ್ಥಿತಿ ಬೆಳೆಸುವ ಕೆಲಸ ಸರ್ಕಾರದ್ದು. ರೈತರ ಬದುಕನ್ನು ಕಟ್ಟಿಕೊಡುವದಕ್ಕೆ ನಾವು ಇರುವುದೇ ಹೊರತು ವಿಧಾನಸೌಧದಲ್ಲಿ ಕೂರುವುದಕ್ಕೆ ಅಲ್ಲ. ರೈತರ ಹೆಸರನ್ನು ದುರುಪಯೋಗ ಪಡಿಸಿಕೊಂಡು ಗೂಂಡಾಗಿರಿ ಮಾಡುವ ವ್ಯಕ್ತಿಗಳನ್ನು ಸುಮ್ಮನೆ ಬಿಡೋದಿಲ್ಲ ಎಂದರು.
ಬೆಳಗಾವಿಯಲ್ಲಿ ಕರೆದಿದ್ದ ರೈತು ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆಯನ್ನು ಮುಖ್ಯಮಂತ್ರಿಗಳು ದಿಢೀರನೆ ಬೆಂಗಳೂರಿಗೆ ವರ್ಗಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಳಗಾವಿಯ ಸುವರ್ಣ ಸೌಧ ಮುತ್ತಿಗೆ ಹಾಕಿ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿದ್ದರು.