ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡ್ತಾರಾ ಮಾರ್ಕ್ ಝುಕರ್ ಬರ್ಗ್..?

X
TV5 Kannada18 Nov 2018 2:27 AM GMT
ಸಾನ್ ಫ್ರ್ಯಾನ್ಸಿಸ್ಕೋ: ಫೇಸ್ಬುಕ್ ವಿರುದ್ಧ ಕೇಳಿಬರುತ್ತಿರುವ ಆರೋಪವನ್ನು ಮುಚ್ಚಿಹಾಕಲು ಸಂಸ್ಥೆಯೊಂದನ್ನ ನೇಮಿಸಿದ ಆರೋಪಕ್ಕೆ ಸಂಬಂಧಪಟ್ಟಂತೆ ಫೇಸ್ಬುಕ್ ಸಿಇಓ ಮತ್ತು ಸಂಸ್ಥಾಪಕ ಮಾರ್ಕ್ ಝುಕರ್ ಬರ್ಗ್ ರಾಜೀನಾಮೆಗೆ ಆಗ್ರಹಿಸಿ, ಒತ್ತಡ ಹೆಚ್ಚಿದೆ.
ಅಮೆರಿಕದ ಸಂಸದ ಮತ್ತು ಫೇಸ್ಬುಕ್ ಹೂಡಿಕೆದಾರರಾಗಿರುವ ಜೋನಾಸ್ ಕ್ರೋನ್, ಮಾರ್ಕ್ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ಅಮೆರಿಕದ ಪತ್ರಿಕೆಯೊಂದು ಲೇಖನ ಬರೆದಿದ್ದು, ಫೇಸ್ಬುಕ್ ವಿರುದ್ಧ ಕೇಳಿ ಬಂದಿರುವ ಆರೋಪವನ್ನು ಮುಚ್ಚಿ ಹಾಕಲು, ಮಾರ್ಕ್ ಸಂಸ್ಥೆಯೊಂದನ್ನ ನೇಮಿಸಿದ್ದಾರೆಂದು ಆರೋಪಿಸಲಾಗಿತ್ತು.
ಈ ಬಗ್ಗೆ ಮಾರ್ಕ್ ಝುಕರ್ ಬರ್ಗ್ ಪ್ರತಿಕ್ರಿಯಿಸಿದ್ದು, ನನ್ನ ವಿರುದ್ಧ ಆರೋಪ ಮಾಡಿ ಬರೆದಿರುವ ಲೇಖನವನ್ನು ಓದಿದ ಮೇಲೆ, ನಾನು ನನ್ನ ತಂಡ ಫೇಸ್ಬುಕ್ನಲ್ಲಿ ಕೆಲಸ ಮಾಡದಿರಲು ತೀರ್ಮಾನಿಸಿದ್ದೇವೆ ಎಂದಿದ್ದಾರೆ.
Next Story