Top

ಸ್ವತಂತ್ರ ತನಿಖಾ ಸಂಸ್ಥೆಗಳಲ್ಲಿ ಕೇಂದ್ರ ಹಸ್ತಕ್ಷೇಪ: ಖರ್ಗೆ ಖಂಡನೆ

ಸ್ವತಂತ್ರ ತನಿಖಾ ಸಂಸ್ಥೆಗಳಲ್ಲಿ ಕೇಂದ್ರ ಹಸ್ತಕ್ಷೇಪ: ಖರ್ಗೆ ಖಂಡನೆ
X

ಕೇಂದ್ರ ಸರ್ಕಾರ ಅನೇಕ ಸ್ವತಂತ್ರ ತನಿಖಾ ಸಂಸ್ಥೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಕೇಂದ್ರ ಸರ್ಕಾರ ಅನೇಕ ಸ್ವತಂತ್ರ ತನಿಖಾ ಸಂಸ್ಥೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಈ ಬಗ್ಗೆ ಸಂಸತ್ ನಲ್ಲಿ ಅನೇಕ ಬಾರಿ ಹೇಳಿದ್ದೇನೆ. ಈಗ ಬೇರೆ ಪಕ್ಷಗಳಿಗೂ ಇದರ ಬಿಸಿ ತಟ್ಟಿದೆ. ಸಿಬಿಐಗೆ ಸುಮೋಟೋ ಕೇಸ್ ದಾಖಲಿಸಲು ಅನುಮತಿ ಕೊಡಲ್ಲ ಅಂತಿದ್ದಾರೆ. ಸಿಬಿಐ, ಇಡಿ, ಯೂನಿವರ್ಸಿಟಿಗಳು, ಪತ್ರಿಕಾ ಸಂಸ್ಥೆಗಳ ಮೇಲೂ ತನಿಖಾ ಸಂಸ್ಥೆಗಳು ದಾಳಿ ಮಾಡಿದ್ದಾರೆ ಎಂದರು.

ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವರದಿ ಬಂದಾಗ ಮಾತ್ರ ಈ ರೀತಿ ಆಗುತ್ತಿದೆ. ಹಲವು ಬಾರಿ ಮಾಧ್ಯಮಗಳ ಮೇಲೂ ಒತ್ತಡ ಹೇರಿ ಹಿಡಿತ ಸಾಧಿಸಿ ತಮ್ಮ ಅಜೆಂಡಾ ಹೇರಲಾಗುತ್ತಿದೆ ಎಂದು ಆರೋಪಿಸಿದರು.

ಇದೇ ವೇಳೆ ಸಾಮಾನ್ಯ ವರ್ಗದಲ್ಲಿ ಹೆಚ್ಚು ಅಂಕ ಪಡೆದ ಎಸ್ಸಿ, ಎಸ್ಟಿ, ಒಬಿಸಿ ವರ್ಗಗಳನ್ನು ಹೊರಗಿಟ್ಟ ಕೆಪಿಎಸ್​ಸಿಎ ವಿವಾದಾತ್ಮಕ ಸುತ್ತೋಲೆಗೆ ಮಲ್ಲಿಕಾರ್ಜುನ ಖರ್ಗೆ ವಿರೋಧ ವ್ಯಕ್ತಪಡಿಸಿದರು.

ಸಂವಿಧಾನ ಏನು ಹೇಳುತ್ತೋ ಹಾಗೆ ನಡೆದುಕೊಳ್ಳಬೇಕು. ಹಿಂದಿನಿಂದ ಹೇಗೆ ನಡೆದುಕೊಂಡು ಬಂದಿದೆಯೋ ಅದು ಮುಂದುವರೆಯಬೇಕು. ಇದರ ವಿರುದ್ಧ ಯಾರಾದರೂ ಮೇಲ್ಮನವಿ ಸಲ್ಲಿಸಬೇಕಿತ್ತು. ಮೆರಿಟ್ ಪ್ರಕಾರ ಹೋಗಬೇಕು. ಇದು ಹಿಂದಿನಿಂದಲೂ ಇದೆ ಅವಶ್ಯಕತೆ ಇದ್ದರೆ ಮಾತ್ರ ಸರಕಾರ ಇದರಲ್ಲಿ ಮಧ್ಯಪ್ರವೇಶ ಮಾಡಬೇಕು ಎಂದು ಮುಖ್ಯಮಂತ್ರಿಗೂ ಮನವಿ ಮಾಡಿದ್ದೇನೆ ಎಂದರು.

Next Story

RELATED STORIES