Top

10 ರೈತರ ವಿರುದ್ಥ ಕೇಸು ದಾಖಲಿಸಿದ ಪೊಲೀಸರು

10 ರೈತರ ವಿರುದ್ಥ ಕೇಸು ದಾಖಲಿಸಿದ ಪೊಲೀಸರು
X

ಬೆಳಗಾವಿ ಸುವರ್ಣಸೌಧದೊಳಗೆ ಕಬ್ಬು ತುಂಬಿದ ಲಾರಿಗಳನ್ನು ನುಗ್ಗಿಸಿ ಪ್ರತಿಭಟನೆ ನಡೆಸಿದ್ದ 10 ಜನ ರೈತ ಮುಖಂಡರ ವಿರುದ್ದ ಹಿರೆಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಭಟನ ನಿತರ ರೈತ ಮಹಿಳೆ ಜಯಶ್ರೀ ಗುರನ್ನವರ ಸೇರಿದಂತೆ ಚೂನಪ್ಪ ಪೂಜಾರಿ, ರಾಘವೇಂದ್ರ ನಾಯಕ,ರಾಜಪ್ಪಕಾದ್ರೋಳಿ, ರಾಯಪ್ಪ ಪೂಜಾರಿ, ಭರಮಪ್ಪ ಕಮಲಾಪುರೆ,ಮಂಜು ಗದಾಡೆ,ಹನುಮಂತ ಹಂಜಿ, ಸಿದ್ದಗೌಡ ಮೊದಗಿ,ಜಾವೇದ್ ಮುಲ್ಲಾ ಐಪಿಸಿ ಕಲಂ ವಿರುದ್ಥ 143, 147, 341, 353, 149 and 2a kpdp ರ ಅಡಿಯಲ್ಲಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಮಾಡಲಾಗಿದೆ ಮತ್ತು ಸರ್ಕಾರಿ ಆಸ್ತಿಪಾಸ್ತಿಗೆ ಹಾನಿಯಾಗಿದೆ ಎಂದು ಹಿರೆಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಗಲಕೋಟೆಯಲ್ಲಿ ಕಬ್ಬು ಬಾಕಿ ಬಿಲ್ ಪ್ರತಿ ಟನ್ ಗೆ ರೂಪಾಯಿ,310ರಂತೆ ಇದ್ದು ಬಾಕಿ ಉಳಿಸಿಕೊಂಡ ಕಾರ್ಖಾನೆಗಳ ವಿವರಗಳು

ಗೋದಾವರಿ ಸಕ್ಕರೆ ಕಾರ್ಖಾನೆ -2016-17ನೇ ಸಾಲಿನಲ್ಲಿ ಪಾವತಿಸಿದೆ-2017-18 ನೇ ಸಾಲಿನಲ್ಲಿ-35.18ಕೋಟಿ. ಮುಧೋಳ ನಿರಾಣಿ ಸಕ್ಕರೆ ಕಾರ್ಖಾನೆ- ಶಾಸಕ ಮುರುಗೇಶ್ ನಿರಾಣಿ ಮಾಲಿಕತ್ವ- 2016-17ನೇ ಸಾಲಿನಲ್ಲಿ 17.65 ಕೋಟಿ, 2017-18ನೇ ಸಾಲಿನಲ್ಲಿ-28.12 ಜಮಖಂಡಿ ಶುಗರ್ಸ್ ಕಾರ್ಖಾನೆ-ಶಾಸಕ ಆನಂದ್ ನ್ಯಾಮಗೌಡ ಮಾಲೀಕತ್ವ -2016-17ನೇ ಸಾಲಿನಲ್ಲಿ-ಪಾವತಿಸಿದೆ. 2017-18 ನೇ ಸಾಲಿನಲ್ಲಿ-17.46, ಪ್ರಭುಲಿಂಗೇಶ್ವರ ಶುಗರ್ಸ್, ಸಿದ್ದಾಪುರ-ರಾಜಕಾರಣಿ ಜಗದೀಶ್ ಗುಡಗುಂಟಿ ಮಾಲೀಕತ್ವ-2016-17ನೇ ಸಾಲಿನಲ್ಲಿ-19.52, 2017-18 ನೇ ಸಾಲಿನಲ್ಲಿ 24.83 ಕೋಟಿ ಜೆಮ್ ಶುಗರ್ಸ್ ,ಕುಂದರಗಿ,2016-17ನೇ ಸಾಲಿನಲ್ಲಿ 12.31, 2017-18 ನೇ ಸಾಲಿನ ಲ್ಲಿ-18.90ಕೋಟಿ ರನ್ನ ರೈತ ಸಹಕಾರಿ ಸಕ್ಕರೆ ಕಾರ್ಖಾನೆ,-ರಾಮಣ್ಣ ತಳೇವಾಡ ಅಧ್ಯಕ್ಷ-2016-17 ನೇ‌ 2.88,ಕೋಟಿ ,2017-18 ನೇ ಸಾಲಿನಲ್ಲಿ 7.73ಕೋಟಿ ಐಸಿಪಿಎಲ್ ಉತ್ತೂರು-‌2016-17 ನೇ ಸಾಲಿನಲ್ಲಿ ಪಾವತಿಸಿದೆ,2017-18ನೇ ಸಾಲಿನಲ್ಲಿ 18.18ಕೋಟಿ ಸಾವರಿನ್ ಸಕ್ಕರೆ ಕಾರ್ಖಾನೆ-2016-17ನೇ ಸಾಲಿನಲ್ಲಿ ಪಾವತಿಸಿದ,2017-18ನೇ ಸಾಲಿನಲ್ಲಿ 9.08ಕೋಟಿ.ಬೀಳಗಿ ಶುಗರ್ಸ್,ಬಾಡಗಂಡಿ-ಮಾಜಿ ಸಚಿವ ಎಸ್ ಆರ್ ಪಾಟೀಲ್ ಮಾಲೀಕತ್ವ-,2016-17 ನೇ ಸಾಲಿನಲ್ಲಿ ಪಾವತಿಸಿದೆ. 2017-18ನೇ ಸಾಲಿನಲ್ಲಿ 9.72ಕೋಟಿ,ಸದಾಶಿವ ಶುಗರ್ಸ್ ಕಾರ್ಖಾನೆ,ನಾಯನೇಗಲಿ-2016-17ನೇ ಸಾಲಿನಲ್ಲಿ 13.88ಕೋಟಿ,2017-18ನೇ ಸಾಲಿನಲ್ಲಿ ಪಾವತಿಸಿದೆ. ಸಾಯಿಪ್ರೀಯಾ ,ಹಿಪ್ಪರಗಿ ಶಾಸಕ ಮುರುಗೇಶ್ ನಿರಾಣಿ ಮಾಲೀಕತ್ವ-2016-17ನೇ ಸಾಲಿನಲ್ಲಿ ಪಾವತಿಸಿದೆ.2017-18ನೇ ಸಾಲಿನಲ್ಲಿ11.09 ಕೋಟಿ. 2016-17ನೇ ಸಾಲಿನಲ್ಲಿ ಒಟ್ಟು 69.29ಕೋಟಿ ಬಾಕಿ.2017-18ನೇ ಸಾಲಿನಲ್ಲಿ ಒಟ್ಟು-219.13ಕೋಟಿ ಬಾಕಿ ಉಳಿಸಿಕೊಂಡಿದೆ.

Next Story

RELATED STORIES