Top

ಅಮೃತ್‌ಸರದಲ್ಲಿ ಬಾಂಬ್ ಸ್ಪೋಟ, ಮೂವರ ದಾರುಣ ಸಾವು

ಅಮೃತ್‌ಸರದಲ್ಲಿ ಬಾಂಬ್ ಸ್ಪೋಟ, ಮೂವರ ದಾರುಣ ಸಾವು
X

ಅಮೃತ್‌ಸರ: ಪಂಜಾಬ್‌ನ ಅಮೃತ್‌ಸರದಲ್ಲಿ ಬಾಂಬ್ ಸ್ಪೋಟ ಸಂಭವಿಸಿ, ಮೂವರು ಸಾವನ್ನಪ್ಪಿ, 10ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಇಲ್ಲಿನ ನಿರಂಕಾರಿ ಭವನದಲ್ಲಿ ಈ ದುರಂತ ಸಂಭವಿಸಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

ನಿರಂಕಾರಿ ಭವನದಲ್ಲಿ ಪೂಜಾ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ, ಮುಖಕ್ಕೆ ಬಟ್ಟೆ ಕಟ್ಟಿಕೊಂಡು , ಬೈಕ್‌ನಲ್ಲಿ ಬಂದ ಅಪರಿಚಿತರು ಈ ದುಷ್ಕೃತ್ಯವೆಸಗಿದ್ದಾರೆ.

ಇನ್ನು ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Next Story

RELATED STORIES