Top

ನಿಮಿಷ 10, ವಾರ್ತೆ 50

ನಿಮಿಷ 10, ವಾರ್ತೆ 50
X

1. ಬೆಳಗಾವಿ ಸುವರ್ಣಸೌಧದೊಳಗೆ ಕಬ್ಬು ತುಂಬಿದ ಲಾರಿಗಳನ್ನು ನುಗ್ಗಿಸಿ ಪ್ರತಿಭಟನೆ ನಡೆಸಿದ್ದ 10 ಜನ ರೈತ ಮುಖಂಡರ ವಿರುದ್ದ ಹಿರೆಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2. ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಭರವಸೆ ಹಿನ್ನೆಲೆಯಲ್ಲಿ ತಮ್ಮ ಹೋರಾಟವನ್ನು ಹಿಂಪಡೆದಿದ್ದ ಕಬ್ಬು ಬೆಳೆಗಾರರು ಸಭೆಯನ್ನು ಬೆಂಗಳೂರಿಗೆ ವರ್ಗಾಯಿಸಿದ್ದನ್ನು ಖಂಡಿಸಿ ಭಾನುವಾರ ಬೆಳಗ್ಗೆ ಕಬ್ಬು ತುಂಬಿದ ಲಾರಿಗಳನ್ನು ಬೆಳಗಾವಿಯ ಸುವರ್ಣ ಸೌಧದೊಳಗೆ ನುಗ್ಗಿಸಿ ಪ್ರತಿಭಟನೆ ನಡೆಸಿದ್ಧಾರೆ

3. ನಗರದ ತಾಜ್ ವೆಸ್ಟೆಂಡ್ ಹೊಟೇಲ್‌ನಲ್ಲಿಂದು ರಾಧಿಕಾ ಪಂಡಿತ್ ಸೀಮಂತ ಕಾರ್ಯಕ್ರಮ ನೆರವೇರಿದ್ದು, ಸ್ಯಾಂಡಲ್‌ವುಡ್ ಗಣ್ಯರೆಲ್ಲ ಆಗಮಿಸಿ, ಶುಭಕೋರಿದ್ದಾರೆ.

4. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಜಂಗವಾಡ, ಹವಳಕೋಡ, ಮಾಲಗಿ, ಜಮ್ಮನಕಟ್ಟಿ, ಕಟಗೇರಿ ಗ್ರಾಮಗಳಿಗೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಈರುಳ್ಳಿ, ಮೆಕ್ಕೆ ಜೋಳ, ಸಜ್ಜೆ , ಸೂರ್ಯಕಾಂತಿ ಸೇರಿದಂತೆ ವಿವಿದ ಬೆಳೆಗಳು ಕೈ ಕೊಟ್ಟಿದ್ದು, ಕುಡಿಯು ನೀರಿಗೂ ಸಮಸ್ಯೆಯಾಗಿದೆ ಅಂತ ರೈತರು ತಮ್ಮ ಅಳಲು ತೊಡಿಕೊಂಡರು.

5.ಹಾಸನದಲ್ಲಿ ಕಾಡಾನೆ ಹಾವಳಿ ಮುಂದುವರೆದಿದ್ದು, ಗ್ರಾಮಗಳಲ್ಲೇ ಒಂಟಿಸಲಗಗಳು ಬೀಡು ಬಿಟ್ಟಿವೆ.. ಸಕಲೇಶಪುರದಲ್ಲಿ ಕಾಡಾನೆ ಹಾವಳಿಯಿಂದ ಲಕ್ಷಾಂತರ ಮೌಲ್ಯದ ಭತ್ತ, ಕಾಫಿ ಬೆಳೆ ಸಂಪೂರ್ಣ ನಾಶವಾಗಿದೆ.. ಹೊಸಗದ್ದೆ ಸುತ್ತಮುತ್ತ ಬೆಳ್ಳಂಬೆಳಗ್ಗೆ ಗ್ರಾಮಕ್ಕೆ ಕಾಡಾನೆಗಳು ನುಗ್ಗುತ್ತಿದ್ದು, ಕಾಡಾನೆಗಳನ್ನ ಓಡಿಸಲು ಗ್ರಾಮಸ್ಥರು ಪರದಾಡುತ್ತಿದ್ದಾರೆ.. ಅರಣ್ಯ ಇಲಾಖೆಗೆ ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆ ಗ್ರಾಮಸ್ಥರೇ ನಾಯಿಯನ್ನ ಅಟ್ಟಾಡಿಸುವ ರೀತಿ ಒಂಟಿ ಸಲಗವನ್ನ ಅಟ್ಟಾಡಿಸುತ್ತಿದ್ದಾರೆ.

6.ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಗಡಿ ಪ್ರವೇಶ ಮಾಡುವ ಹಾಗೂ ಜಿಲ್ಲೆಯಿಂದ ಬೇರೆಡೆ ತೆರಳುವ ಪ್ರತಿ ವಾಹನದ ಮೇಲೆ ಕಣ್ಣಿಡಲು ಹೊಸ ಪ್ರಯತ್ನಕ್ಕೆ ಇಳಿದಿದೆ. ಜಿಲ್ಲೆಯ ಕಾರವಾರ ತಾಲೂಕಿನ ಗೋವಾ ಗಡಿಯಾದ ಮಾಜಾಳಿಯಲ್ಲಿ ಹಾಗೂ ಭಟ್ಕಳದ ಸಂಶುದ್ದೀನ್ ವೃತ್ತದಲ್ಲಿ ಆಟೋಮೆಟಿಕ್ ನಂಬರ್ ಪ್ಲೇಟ್ ರೆಕಗ್ನೇಷನ್ ಕ್ಯಾಮೆರಾ ಗಳನ್ನ ಅಳವಡಿಸಲಾಗಿದೆ.

7.ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಧಾರ್ಮಿಕ ಕ್ಷೇತ್ರ ಮೇಲುಕೋಟೆಯಲ್ಲಿ ತೊಟ್ಟಿಲು ಮಡು ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಿತು. ಕಾರ್ತಿಕ ಮಾಸದ ಸಂದರ್ಭದಲ್ಲಿ ಮೈಸೂರು ರಾಜವಂಶಸ್ಥರು ಚಲುವನಾರಾಯಣಸ್ವಾಮಿಗೆ ಅಷ್ಟತೀರ್ಥ, ಅಭಿಷೇಕ ರಾಜಮುಡಿಯನ್ನ ದಾನವಾಗಿ ಕೊಟ್ಟ ಬಳಿಕ ತೊಟ್ಟಿಲು ಮಡು ಜಾತ್ರಾ ಉತ್ಸವ ನಡೆದುಕೊಂಡು ಬರ್ತಿದೆ. ಕಳೆದ 900 ವರ್ಷಗಳಿಂದ ಸಂತಾನ ಪ್ರಾಪ್ತಿಯಾಗದ ಮಹಿಳೆಯರಿಗೆಂದೇ ವಿಶೇಷವಾದ ಜಾತ್ರೆ ಮಹೋತ್ಸವ ನಡೆಯುತ್ತಿದೆ.

8.ರಾಜೇಶ್ವರಿ. ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಕುನ್ನೆಗಾಲ ಗ್ರಾಮದ ನಿವಾಸಿ. ಇದರ ಪಕ್ಕದ ಕೂಡಗಿ ಗ್ರಾಮದ ನಿವಾಸಿ ಸೋಮಣ್ಣ ಎಂಬಾತನನ್ನ ಪ್ರೀತಿಸಿ 6 ವರ್ಷದ ಹಿಂದೆಯೇ ಮದುವೆಯಾಗಿದ್ಳು. ಈ ಪ್ರೀತಿಯ ಫಲವಾಗಿ ಎರಡು ಮುದ್ದಾದ ಮಕ್ಕಳು ಕೂಡ ಆಗಿದ್ವು. ಆದ್ರೆ ಈಕೆ ನೀಚ ಬುದ್ದಿಯಿಂದ ವಿನೋದ ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ. ಈ ವಿಷ್ಯ ತಿಳಿದ ಪತಿ ಸೋಮಣ್ಣ ಪತ್ನಿಗೆ ಬುದ್ದಿ ಕೂಡ ಹೇಳಿದ್ದಾನೆ.. ಅಲ್ದೆ ರಾಜಿ ಪಂಚಾಯ್ತಿ ಮಾಡಿಸಿದ್ದಾರೆ.

9.ಕಲಬುರಗಿಯಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರಿಂದ ಫೈರಿಂಗ್ ನಡೆದಿದ್ದು ಕುಖ್ಯಾತ ರೌಡಿಶೀಟರ್‌ 7 ಸ್ಟಾರ್ ಪ್ರದೀಪ್‌ ಕಾಲಿಗೆ ಬುಲೆಟ್ ಬಿದ್ದಿದೆ ಶಹಬಾದ್ ರಸ್ತೆಯ ಗ್ರೀನ್ ಸಿಟಿ ಬಳಿ ಶೂಟೌಟ್ ನಡೆದಿದೆ.

10.ಇಡಿ ಕೇಸ್ ನಲ್ಲಿ ಪ್ರಕರಣದ ತನಿಖೆ ನಡೆಸಿರುವ ಸಿಸಿಬಿ ಮುಂದೆ ಆಂಬಿಡೆಂಟ್ ಕಂಪನಿಯ ಮಾಲೀಕ ದಾಖಲಿಸಿರುವ ಹೇಳಿಕೆ ನಿಜಕ್ಕೂ ರೋಚಕ. ತಮ್ಮ ಮೇಲೆ ಇಡಿ ದಾಳಿ ನಡೆಸಿದ ಪ್ರಕರಣದಿಂದ ಪಾರು ಮಾಡುವಂತೆ ಆಶ್ರಫ್ ಆಲಿ ಹಾಗೂ ಬ್ರಿಜೇಶ್ ರೆಡ್ಡಿ ಮೂಲಕ ಮಾಜಿ ಗಾಲಿ ಜನಾರ್ದನ ರೆಡ್ಡಿ ಭೇಟಿ ಮಾಡಿರುವ ಫರೀದ್ ಡೀಲ್ ನಡೆಸಿದ್ದಾನೆ.

11.ಬನ್ನೇರುಘಟ್ಟ ಬಳಿಯ ಬಿಂಗಿಪುರ ಡಂಪಿಂಗ್‌ ಯಾರ್ಡ್‌ನಲ್ಲೂ ಪರಿಸ್ಥಿತಿ ಬದಲಾಗಿಲ್ಲ, ಇಲ್ಲಿ ಕಳೆದ 10 ವರ್ಷದಿಂದ 19 ಎಕರೆ ಜಾಗದಲ್ಲಿ ಕಸ ಡಂಪಿಂಗ್ ಮಾಡಲಾಗ್ತಿದೆ. ಇದರ ಪರಿಣಾಮ ಸುತ್ತಮುತ್ತಲಿನ ಐದಾರು ಹಳ್ಳಿಗಳಲ್ಲಿ ಕಸದ ವಾಸನೆಯಿಂದ ಜನರು ಹೈರಾಣಾಗಿದ್ದಾರೆ

12.ಸಿಲಿಕಾನ್ ಸಿಟಿಯಲ್ಲಿ ವೀಕ್ ಎಂಡ್ ಬಂತು ಅಂದ್ರೆ ಮೋಜು ಮಸ್ತಿಗೇನು ಕಮ್ಮಿಯಿಲ್ಲ. ಸಿಂಕ್ ಇವೆಂಟ್ಸ್ ಸಂಸ್ಥೆಯವರು ಆಯೋಜಿಸಿದ್ದ ಫ್ಯಾಶನ್ ಶೋನಲ್ಲಿ ಮಾಡೆಲ್‌ಗಳ ಜೊತೆ ಸ್ಯಾಂಡಲ್‌ವುಡ್‌ನ ನಟಿ ಹರ್ಷಿಕ ಪೂನಚ್ಚ ಕ್ಯಾಟ್ ವಾಕ್ ಮಾಡಿದರು.

13.ಕನ್ನಡ ಉಳಿಸಿ, ಬೆಳಸುವ ನಿಟ್ಟಿನಲ್ಲಿ ಶಾಲೆಗಳು ಪ್ರಮಖವಾದ ಪಾತ್ರ ನಿರ್ಹಹಣೆ ಮಾಡುತ್ತವೆ ಈ ನಿಟ್ಟಿನಲ್ಲಿ ಈ ಶಾಲೆ ಒಂದು ಹೆಜ್ಜೆ ಮುಂದೆ ಹೋಗಿ ಕನ್ನಡಕ್ಕೆ ಸಂಬಂಧಿಸಿದ ಉತ್ಸವ ಮಾಡಿ.. ಮಕ್ಕಳಿಗೆ ಕಲಿಕೆಯ ಜೊತೆ ಜೊತೆ ಶಿಕ್ಷಣ ನೀಡುತ್ತಿರುವುದಕ್ಕೆ ಎಲ್ಲಡೆ ಮೆಚ್ಚುಗೆಯ ಮಾತು ವ್ಯಕ್ತವಾಗುತ್ತಿವೆ.

14.ಜಗಮಗ ಅಂತ ಪ್ರಜ್ವಲಿಸುತ್ತಿರುವ ದೀಪಗಳು. ಮೊತ್ತೊಂದೆಡೆ ಬಗೆ ಬಗೆಯ ಕಲರ್‌ಫುಲ್ ರಂಗೋಲಿ. ಈ ಎಲ್ಲಾ ದೃಶ್ಯಕ್ಕೆ ಸಾಕ್ಷಿಯಾಗಿದ್ದು ಕೆಆರ್ ಪುರಂನ ಶೀಗೆಹಳ್ಳಿ ಕೆರೆಯಲ್ಲಿ. ಶೀಗೆಹಳ್ಳಿ ಕೆರೆ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಕೆರೆಯಲ್ಲಿ ದೀಪಾವಳಿ ಹಬ್ಬ ಆಯೋಜಿಸಿತ್ತು. ಹಾಗಾಗಿ ನೂರಾರು ಪರಿಸರ ಪ್ರೇಮಿಗಳು ಹಬ್ಬದಲ್ಲಿ ಪಾಲ್ಗೊಂಡು ವಾರಾಂತ್ಯದಲ್ಲಿ ಮಸ್ತ್‌ ಮಜಾ ಮಾಡಿದರು.

15.ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಕ್ಯಾಂಪಸ್‌ನಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆದ ಕೃಷಿ ಮೇಳಕ್ಕೆ ತೆರೆಬಿದ್ದಿದೆ. ಮೇಳಕ್ಕೆ ರೈತರು, ಕೃಷಿ ಆಸಕ್ತರು ಮತ್ತು ವಿದ್ಯಾರ್ಥಿಗಳ ದಂಡೇ ಹರಿದು ಬಂದಿತ್ತು. ಮೊದಲ ದಿನಕ್ಕಿಂತಲೂ ಇಂದು ಕೊನೆಯ ದಿನ 5 ಲಕ್ಷ ದಾಟ್ಟಿತ್ತು. ಬೆಂಗಳೂರು ಸುತ್ತಮುತ್ತ ಮಾತ್ರವಲ್ಲದೆ ಬೆಳಗಾವಿ, ರಾಯಚೂರು, ಗದಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ ರೈತರು, ರೈತ ಮಹಿಳೆಯರು ಮೇಳಕ್ಕೆ ಬಂದಿದರು.

16.ನೆಲಮಂಗಲದ ವಿಶ್ವಶಾಂತಿ ಸಮುದಾಯ ಭವನದಲ್ಲಿ ಇವತ್ತು ಅಶಾಂತಿ ಮೂಡಿತ್ತು. ನೆಲಮಂಗಲದ ನಂದರಾಮಯ್ಯನ ಪಾಳ್ಯ ನಿವಾಸಿ ರಂಗನಾಥ್ ಮತ್ತು ಬೆಂಗಳೂರಿನ ಕಾಮಕ್ಷಿ ಪಾಳ್ಯದ ಯುವತಿ ಪದ್ಮಪ್ರಿಯ ಎಂಬವರ ಜೊತೆ ವಿವಾಹ ನಡೀತಿತ್ತು. ಆದರೆ, ಅಷ್ಟೊತ್ತಿಗೆ ಪದ್ಮಪ್ರಿಯಳ ಪ್ರಿಯಕರ ಸಂಜು ಎಂಟ್ರಿಯಿಂದ ಮದುವೆ ಮುರಿದು ಬಿದ್ದಿದೆ.

17.ಕಬ್ಬನ್ ಪಾರ್ಕ್‌ನಲ್ಲಿ ಈ ಪೋಟ್ರೇಟ್ ಮಾಡಲಾಗಿದ್ದು. ರಾಗಿಯಿಂದ ಇದನ್ನ ತಯಾರಿಸಲಾಗಿದೆ. ಕಲಾವಿದ ಮಂಜುನಾಥ್ 45 ದಿನಗಳಲ್ಲಿ ಇದನ್ನ ತಯಾರು ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜೊತೆಗೆ ಎವರ್ ಗ್ರೀನ್‌ ಶಂಕರ್‌ ನಾಗ್‌ ರ ಪೋಟ್ರೇಟ್ ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ.

18.ಕಬ್ಬಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತ ಮಹಿಳೆಯೊಬ್ಬರಿಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು 4 ವರ್ಷದಿಂದ ನೀನು ಎಲ್ಲಿ ಮಲಗಿದ್ದೆ? ಎಂದು ಪ್ರಶ್ನಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

19.ಇಟಲಿಯಲ್ಲಿ ವಿವಾಹ ಮಾಡಿಕೊಂಡ ಬಾಲಿವುಡ್ ಬೆಸ್ಟ್ ಕಪಲ್ ರಣ್ವೀರ್-ದೀಪಿಕಾ, ಸದ್ಯ ಮುಂಬೈಗೆ ಬಂದಿಳಿದಿದ್ದಾರೆ.ಮುಂಬೈ ಏರ್ಪೋರ್ಟ್‌ನಲ್ಲಿ ಬಂದಿಳಿದ ಡಿಪ್ಪಿ-ರಣ್ವೀರ್ ಅಭಿಮಾನಿಗಳತ್ತ ಕೈಬೀಸಿ, ನಗೆಬೀರಿದ್ದು, ಅಭಿಮಾನಿಗಳು ನೆಚ್ಚಿನ ಜೋಡಿಗೆ ಮದುವೆ ಶುಭಾಶಯ ಕೋರಿದ್ದಾರೆ.

20.ಮಮತಾ ವಿತ್ತ ಸಚಿವ ಅರುಣ್ ಜೇಟ್ಲಿ ಕಿಡಿಕಾರಿದ್ದಾರೆ.ನವದೆಹಲಿ ಮಾತನಾಡಿದ ಅವ್ರು ಯಾರು ಭ್ರಷ್ಟಾಚಾರ ಮಾಡಿದ್ದಾರೋ ಅಂತಹ ರಾಜ್ಯದ ಸಿಎಂಗಳು ಸಿಬಿಐನಿಂದ ತಪ್ಪಿಸಿಕೊಳ್ಳಲು ಸಿಬಿಐಗೆ ದಿಗ್ಭಂದನ ಹಾಕುತ್ತಿದ್ದಾರೆ ಎಂದು ಅರುಣ್ ಜೇಟ್ಲಿ ಹೇಳಿದ್ರು. ಪಶ್ಚಿಮ ಬಂಗಾಳದಲ್ಲಿ ತನಿಖೆ ನಡೆಸುವುದಕ್ಕಾಗಿ ಸಿಬಿಐಗೆ ನೀಡಲಾಗಿದ್ದ ಮುಕ್ತ ಸಮ್ಮತಿಯನ್ನು ಮಮತಾ ಬ್ಯಾನರ್ಜಿ ಸರ್ಕಾರ ವಾಪಸ್ ಪಡೆದಿದೆ. ಈ ಮೂಲಕ ಸಿಬಿಐ ಅಧಿಕಾರಿಗಳು ರಾಜ್ಯ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ.

21.1971ರಲ್ಲಿ ಭಾರತ-ಪಾಕಿಸ್ತಾನ ನಡುವೆ ನಡೆದ ಲೊಂಗೆವಾಲಾ ಯುದ್ಧದ ಹೀರೊ ನಿವೃತ್ತ ಬ್ರಿಗೇಡಿಯರ್‌ ಕುಲದೀಪ್‌ ಸಿಂಗ್‌ ಚಾಂದ್‌ಪುರಿ ನಿಧನರಾದರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು, ಮೊಹಾಲಿಯ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು. 1997ರಲ್ಲಿ ನಿರ್ಮಿಸಲಾದ 'ಬಾರ್ಡರ್‌' ಸಿನಿಮಾದಲ್ಲಿ ಸನ್ನಿ ಡಿಯೋಲ್‌ ಅವರು ಚಾಂದ್‌ಪುರಿ ಅವರ ಪಾತ್ರವನ್ನು ಮಾಡಿದ್ದರು. ರಾಜಸ್ಥಾನ-ಪಾಕಿಸ್ತಾನದ ಗಡಿ ಪ್ರದೇಶ ಲೊಂಗೆವಾಲಾದಲ್ಲಿ ನಡೆದ ಈ ಯುದ್ಧದಲ್ಲಿ ತೋರಿದ ಶೌರ್ಯಕ್ಕಾಗಿ ಚಾಂದ್‌ಪುರಿ ಅವರಿಗೆ ಮಹಾವೀರ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

22.ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕುರಿತು ನಿಮ್ಮ ಅಜ್ಜ, ಅಜ್ಜಿ ನೀರಿನ ಪೈಪ್ ಹಾಕಿದ್ದಾರಾ?' ಎಂದು ಪ್ರಶ್ನಿಸಿರುವ ಪ್ರಧಾನಿ ನರೇಂದ್ರ ಮೋದಿಗೆ ಕಪಿಲ್​ ಸಿಬಲ್​​ ತಿರುಗೇಟು ನೀಡಿದ್ದಾರೆ.ನವದೆಹಯಲ್ಲಿ ಮಾತನಾಡಿದ ಅವ್ರು, ಆಧುನಿಕ ಕೈಗಾರಿಕಾ ಭಾರತಕ್ಕೆ ನೆಹರೂ ಅಡಿಗಲ್ಲು ಹಾಕಿದರು.ಬಿಜೆಪಿಯ ಪೂರ್ವಿಕರು ವಸಾಹತುಶಾಹಿ ಆಡಳಿತದ ಸಂದರ್ಭ ಬ್ರಿಟೀಷರೊಂದಿಗೆ ಕೈಜೋಡಿಸಿದ್ದರು ಎಂದು ಗುಡುಗಿದರು.

23.ಎರಡು ಲಕ್ಷ ಕೋಟಿ ಮೌಲ್ಯದ ಯೋಜನೆಗಳಿಗೆ ಬ್ಯಾಂಕ್​ಗಳು ಹಣಕಾಸಿನ ನೆರವು ನೀಡದಿರುವುದರಿಂದ ಗೋಲ್ಡ್​ ಆಪರ್ಚುನಿಟಿ ಯೋಜನೆಗಳು ಕೈ ತಪ್ಪುತ್ತಿವೆ. ಜೊತೆಗೆ ಆರ್​ಬಿಐ ಕೂಡ ಇರುವ ತೊಡಕುಗಳನ್ನು ಸರಿಪಡಿಸುತ್ತಿಲ್ಲ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಆರ್​ಬಿಐ ಮತ್ತು ಬ್ಯಾಂಕ್​ಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

24.ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಖ್ಯಾತ ರಂಗಭೂಮಿ ತಜ್ಞ ಹಾಗೂ ಜಾಹೀರಾತು ಪಿತಾಮಹ ಎಂದೇ ಖ್ಯಾತಿ ಪಡೆದಿರುವ ಆಲಿಕ್ ಪದಮ್ಸೀ ನಿಧನ ಹೊಂದಿದ್ರು..ಆಸ್ಕರ್ ಪ್ರಶಸ್ತಿ ವಿಜೇತ ಹಾಲಿವುಡ್ ಚಿತ್ರ ಗಾಂಧಿಯಲ್ಲಿ ಪದಮ್ಸೀಯವರ ಮುಹಮ್ಮದ್ ಅಲಿ ಜಿನ್ನಾ ಪಾತ್ರ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು. ನಟ ಮತ್ತು ನಿರ್ಮಾಪಕನಾಗಿ ಅಷ್ಟೇ ಅಲ್ಲದೆ, ರಂಗಭೂಮಿ ಚಟುವಟಿಕೆಗಳಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು.ಅಲ್ದೇ ಜಾಹೀರಾತು ಕಂಪನಿ ಲಿಂಟಾಸ್ ಬಾಂಬೆಗೆ ನೇತೃತ್ವ ವಹಿಸಿ ಮುಂದೆ ಭಾರತೀಯ ಜಾಹೀರಾತುಗಳ ಪಿತಾಮಹ ಎಂದೇ ಪ್ರಖ್ಯಾತಿ ಪಡೆದಿದ್ದರು.

25.ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರ ಬಹುಮತ ಸಾಬೀತು ಪಡಿಸಲು ಕೂಡಲೇ ವಿಶೇಷ ಅಧಿವೇಶನ ಕರೆಯುವಂತೆ ಗೋವಾ ರಾಜ್ಯಪಾಲೆ ಮೃದುಲಾ ಸಿನ್ಹಾಗೆ ಕಾಂಗ್ರೆಸ್ ಆಗ್ರಹಿಸಿದೆ. ಈ ಕುರಿತಂತೆ ಮಾತನಾಡಿದ ಕಾಂಗ್ರೆಸ್ ವಕ್ತಾರ ರಂದೀಪ್ ಸಿಂಗ್ ಸುರ್ಜೇವಾಲಾ ವೈದ್ಯಕೀಯ ಕಾರಣದಿಂದಾಗಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಕಚೇರಿಗೆ ಗೈರು ಹಾಜರಾಗಿದ್ದಾರೆ. ಹೀಗಾಗಿ ಸರ್ಕಾರ ಅಸ್ತವ್ಯಸ್ತಗೊಂಡಿದೆ ಎಂದು ಹೇಳಿದರು.

26.ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಆಮಂತ್ರಿಸದ ಕಾರಣ ನನ್ನ ಮೇಲೆ ಪ್ರಧಾನಿ ನರೇಂದ್ರ ಮೋದಿಗೆ ಅಸೂಯೆ ಇದೆ ಎಂದು ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಹೇಳಿದ್ರು. ಚಂಡೀಗಢದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರದ ವೇಳೆಯಲ್ಲಿ ಮಾತನಾಡಿದ ಅವ್ರು, ನವಾಜ್ ಷರೀಫ್ ಹುಟ್ಟುಹಬ್ಬಕ್ಕೆ ಆಹ್ವಾನ ನೀಡದಿದ್ದರೂ ಹೋಗುವ ನರೇಂದ್ರ ಮೋದಿಗೆ ಇಮ್ರಾನ್ ಖಾನ್ ಪದ ಗ್ರಹಣ ಸಮಾರಂಭಕ್ಕೆ ಆಹ್ವಾನ ನೀಡದಿದ್ದಕ್ಕೆ ಹೊಟ್ಟೆ ಉರಿದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

27.ರಾಜಸ್ತಾನದ ಕಾಂಗ್ರೆಸ್ ಮುಖಂಡ ಸ್ಪರ್ಧಾ ಚೌದರಿಯನ್ನು ಪಕ್ಷ ವಿರೋಧಿ ಚಟುವಟಿಕೆಯಿಂದ ಆರು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಲಾಗಿದೆ. ರಾಜಸ್ತಾನದ ಪುಲೇರಾದಿಂದ ಸ್ಪರ್ಧಿಸಲು ಬಯಸಿದ್ದ ಸ್ಪರ್ಧಾ ಚೌದರಿ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮನೆ ಮುಂಭಾಗ ಚೌದರಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ರಿಂದ ಈ ನಿರ್ಧಾರ ಕೈಗೊಂಡಿದ್ದಾರೆ.

28.ಕಾಂಗೆಸ್​ ವಿರುದ್ಧ ರಾಜಸ್ತಾನ ಮಖ್ಯಂತ್ರಿ ಕಿಡಿಕಾರಿದ್ದಾರೆ. ಜಾಲ್ವಾರದಲ್ಲಿ ಜಿಲ್ಲೆಯಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ನನ್ನ ವಿರುದ್ಧ ಸ್ಪರ್ಧಿಸುವ ಅಭ್ಯರ್ಥಿಗಳಿಲ್ಲದೇ ಜಸ್ವಂತ್ ಸಿಂಗ್ ಮಗ ಮನ್ವೇಂದ್ರ ಸಿಂಗ್ ಅವರನ್ನು ಕಣಕ್ಕಿಳಿಸಲಾಗಿದೆ.. ಜಲ್ವಾರ ಕಾಂಗ್ರೆಸ್ ಪಕ್ಷದಲ್ಲಿ ಸೂಕ್ತ ಅಭ್ಯರ್ಥಿಗಳಿಲ್ಲದೆ ಎಲ್ಲಿಂದಲೂ ಬಂದವರಿಗೆ ಟಿಕೆಟ್ ನೀಡಲಾಗಿದೆ. ಇಲ್ಲಿಂದ ಅವರನ್ನು ಕಳುಹಿಸಲಾಗುವುದು ಎಂದರು.

29.ಹದಿಹರೆಯದ ಹುಡುಗರನ್ನ ಬಿಟ್ಟು ಮನೆಗಳ್ಳತನ ಮಾಡಿಸ್ತಿದ್ದ ಆರೋಪಿಯನ್ನ ಬಂಧಿಸುವಲ್ಲಿ ಬೆಂಗಳೂರು ಜೀವನ್ ಭೀಮಾನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಪುಟ್ಟರಾಜು ಅಲಿಯಾಸ್ ಪುಟ್ಟ ಬಂಧಿತ ಆರೋಪಿ. ಈತ ಬೀಗ ಹಾಕಿರೋ ಮನೆಗಳನ್ನ ಗುರುತಿಸಿ ತನ್ನ ಗರಡಿಯಲ್ಲಿ ಪಳಗಿರೋ ಮೀಸೆ ಚಿಗುರದ ಹುಡುಗರನ್ನ ಮನೆಗಳ್ಳತನ ಮಾಡಿಸ್ತಿದ್ದ. ಇತ್ತೀಚೆಗೆ ಜೀವನಭೀಮಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನ ಪ್ರಕರಣ ಗಳು ಹೆಚ್ಚುತ್ತಿದ್ವು . ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆಬೀಸಿದ್ದರು. ಅಷ್ಟೇ ಅಲ್ಲದೆ ಕಳ್ಳತನವಾದ ಮನೆಯ ಸಿಸಿ ಟಿವಿ ದೃಶ್ಯಾವಳಿಗಳ ಕಲೆಹಾಕಿದ ಪೊಲೀಸರು ಮೀಸೆ ಚಿಗುರದ ಕೆಲ ಹುಡುಗರನ್ನ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಆರೋಪಿ ಪುಟ್ಟರಾಜನ ಅಸಲಿಯತ್ತು ಬೆಳಕಿಗೆ ಬಂದಿದೆ. ಇದೀಗ ಆರೋಪಿ ಪುಟ್ಟರಾಜನನ್ನ ಬಂಧಿಸಿರೋ ಪೊಲೀಸರು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.

30.ಕೊತ್ತನೂರಿನ ಬೈರತಿಗ್ರಾಮದ ಮನೆಯೊದರಲ್ಲಿ ದೊಡ್ಡ ಮಟ್ಟದ ಜಗಳವೊಂದು ನಡೆದು ಹೊಗಿತ್ತು.. ನಿದ್ರೆಗಣ್ಣಿನಲ್ಲಿದ್ದ ಮಂದಿ ಅಲ್ಲಿ ಏನು ನಡೆತಾಯಿದೆ ಅಂತ ಮನೆಯೊಂದ ಹೊರ ಬಂದು ನೊಡುವಷ್ಟರಲ್ಲಿ ಅಲ್ಲೊಂದು ಅನಾಹುತ ನಡೆದೇ ಹೊಗಿತ್ತು.. ಎರಡು ಕುಟುಂಬಗಳ ನಡುವೆ ನಡೆದ ಜಗಳದಲ್ಲಿ ಅಲ್ಲೊಂದು ಮಹಿಳೆ ಕೊಲೆಯಾಗಿದ್ರೆ, ಇಬ್ಬರು ಆಸ್ಪತ್ರೆ ಪಾಲಾಗಿದ್ದರು.. ಇನ್ನು ರೌಧ್ರವಾತಾರ ತೋರಿದ ಕೊಲೆಗಾರ ಪೊಲೀಸರ ಅತಿಥಿಯಾಗಿದ್ದನೆ.

31.ಕಾಲೇಜು ಕಟ್ಟಡದಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಸುರತ್ಕಲ್‌ NITK ಕಾಲೇಜಿನಲ್ಲಿ ಘಟನೆ ನಡೆದಿದೆ..ಮಹಾರಾಷ್ಟ್ರ ಮೂಲದ ಆನಂದ್‌ ಪಾಟರ್‌ ಆತ್ಮಹತ್ಯೆಗೆ ಶರಣು ವಿದ್ಯಾರ್ಥಿ..ಹಾಜರಾತಿ ಕೊರತೆ ಹಿನ್ನಲೆ ತರಗತಿಯಲ್ಲಿ ಶಿಕ್ಷಕರು ಆನಂದ್​ ಪಾಟರ್​​ಗೆ ಅಪಮಾನ ಮಾಡಿದ್ದಾರೆ..ಇದ್ರಿಂದ ಮನನೊದು ಆನಂದ್​ ಆತ್ಮಹತ್ಯೆ ಮಾಡಿಕೊಂಡಿದ್ದಾನೆ..ಇನ್ನು ವಿದ್ಯಾರ್ಥಿ‌ ಆತ್ಮಹತ್ಯೆ ಖಂಡಿಸಿ ಕಾಲೇಜು ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡಸಿದ್ರು..ಈ ಸಂಬಂಧ ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

32.ಮಹದಾಯಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ನೇತೃತ್ವದಲ್ಲಿ ನಡೆದ ಸರ್ವ ಪಕ್ಷ ಸಭೆ ನಡೆಯಿತ್ತು.. ಸಭೆಯಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ, ಮಾಜಿ ಶಾಸಕ ಕೋನರೆಡ್ಡಿ,ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಸೇರಿ ಕಾನೂನು, ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ರು. ಇನ್ನು ಸಭೆ ಬಳಿಕ ಮಾತನಾಡಿದ ಬಸವರಾಜ ಬೊಮ್ಮಾಯಿ ನದಿ ನೀರಿನ ಹಂಚಿಕೆ ಕುರಿತಂತೆ ಸಭೆಯಲ್ಲಿ ಚರ್ಚೆಯಾಗಿದೆ ಅಂದರು.

33.ಈರುಳ್ಳಿ ದರ ದಿಢೀರ್ ಕುಸಿತ ಹಿನ್ನೆಲೆ ಬಾಗಲಕೋಟೆ, ಬೆಳಗಾವಿಯಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಎಪಿಎಂಸಿ ಗೇಡ್‌ ಬಂದ್ ಮಾಡಿ ಟೈಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ರು. ಕ್ವಿಂಟಾಲ್‌ಗೆ 800 ರಿಂದ1600 ರೂ. ಇದ್ದ ದರ ದಿಢೀರ್ ಕುಸಿದಿದೆ. ಹೀಗಾಗಿ ಈರುಳ್ಳಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ರಸ್ತೆ ತಡೆದು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

34.ಕೇಂದ್ರ ಬರ ಅಧ್ಯಯನ ತಂಡ ರಾಜ್ಯಕ್ಕೆ ಭೇಟಿ ನೀಡಿ ಬರ ಪರಿಶೀಲನೆಯನ್ನ ನಡೆಸಿದೆ. ಬೆಳಗಾವಿ, ರಾಯಚೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಬರ ಪರಿಶೀಲನೆ ನಡೆಸಿದೆ. ಅನಾವೃಷ್ಟಿಯಿಂದ ತೊಗರಿ, ಹತ್ತಿ, ಸೂರ್ಯಕಾಂತಿ ಸೇರಿದಂತೆ ಇನ್ನು ಅನೇಕ ಬೆಳೆಗಳ ಹಾನಿಯ ಬಗ್ಗೆ ಕೇಂದ್ರ ಬರ ಅಧ್ಯಯನ ತಂಡ ವರದಿಯನ್ನು ನೀಡಿದೆ. ಇನ್ನು ಯಾದಗಿರಿಯಲ್ಲಿ ರೈತರು ತಮ್ಮ ಆಕ್ರೋಶವನ್ನು ಹೊರಹಾಕಿದ್ದು, ನಾವು ಬೆಳೆದ ಬೆಳೆಗೆ ಉತ್ತಮ ಬೆಂಬಲ ಬೆಲೆ ನೀಡಿ. ನಮಗೆ ಯಾವ ಸಾಲ ಮನ್ನಾವೂ ಬೇಡ ಎಂದು ಆಗ್ರಹಿಸಿದ್ದಾರೆ

35.ಜಾರಿ ನಿರ್ದೇಶನಾಲಯಕ್ಕೆ ನೂತನ ನಿರ್ದೇಶಕರಾಗಿ ಸಂಜಯ್ ಕುಮಾರ್ ನೇಮಕವಾಗಿದ್ದಾರೆ. ಸಂಜಯ್ ಕುಮಾರ್ ಅವರನ್ನ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದು, ನೂತನ ನಿರ್ದೇಶಕರ ನೇಮಕ ತೀವ್ರ ಕುತೂಹಲ ಕೆರಳಿಸಿದೆ.

36.ಜನಾರ್ಧನ ರೆಡ್ಡಿಗೂ ನಮಗೂ ಸಂಭಂದವಿಲ್ಲ ಎಂದು ಹೇಳಿದ್ದ ಬಿಎಸ್​ವೈ ಇದೀಗ ಜನಾರ್ದನ ರೆಡ್ಡಿ ಜೊತೆ ಮೀಟಿಂಗ್​ ಮಾಡಿದ್ದಾರೆ. ರೆಡ್ಡಿ ಜೊತೆ ರಹಸ್ಯ ಸಭೆ ನಡೆಸಿದ ಉಭಯ ನಾಯಕರು ಆಂಬಿಡೆಂಟ್ ಕೇಸ್‌ಗಳ ಬಗ್ಗೆ ಚರ್ಚಿಸಿದ್ದಾರೆ. ರಾಜ್ಯ ಸರ್ಕಾರ ಸಿಸಿಬಿಯನ್ನು ದುರ್ಬಳಕೆ ಬಗ್ಗೆಯೂ ಚರ್ಚಿಸಿದ ಅವರು ರೆಡ್ಡಿಗೆ ಧೈರ್ಯವನ್ನು ತುಂಬಿದ್ದಾರೆ. ಇದರೊಂದಿಗೆ ಪರೋಕ್ಷವಾಗಿ ಜನಾರ್ಧನ ರೆಡ್ಡಿಯನ್ನು ಸಮರ್ಥಿಸಿಕೊಂಡಿರುವ ಬಿಎಸ್​ವೈ ಸಮ್ಮಿಶ್ರ ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ.

37.ಐಟಿಯಿಂದ ನೋಟಿಸ್ ಬಂದಿರುವ ಬಗ್ಗೆ ಸಚಿವ ಡಿ.ಕೆ ಶಿವಕುಮಾರ್ ಸುಳಿವು ನೀಡಿದ್ರು. ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಡಿ.ಕೆ ಶಿವಕುಮಾರ್, ನಮ್ಮ ಪಕ್ಷದ ನಾಯಕರಿಗೆ ನಾನೇ ನೊಟೀಸ್ ಬಂದಿದೆ ಅಂತ ಹೇಳಿದ್ದೆ. ಇಡಿಯಿಂದ ನೋಟಿಸ್ ಬಂದ ಆದರೆ ಬೇರೆ ನೊಟೀಸ್ ಬಂದಿರುವುದು ನಿಜ. ಜನರ ಮುಂದೆ ಸಾಕಷ್ಟು ವಿಷಯಗಳನ್ನ ತಿಳಿಸಬೇಕಿದೆ ಅಂತಾ ಹೇಳಿದರು.

38.ಕ್ಷುಲ್ಲಕ ಕಾರಣಕ್ಕಾಗಿ ಕಾಲೇಜು ವಿದ್ಯಾರ್ಥಿಗಳು ಹೊಡೆದಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.. ನಗರದ ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಇಂಟರ್ ಕಾಲೇಜ್ ಫೆಸ್ಟ್ ನಡೆಯುತ್ತಿತ್ತು ಈ ವೇಳೆ ಬೇರೆ ಕಾಲೇಜಿನಿಂದ ಬಂದಿದ್ದ ಹುಡುಗರ ಗುಂಪು ಎಣ್ಣೆ ಹೊಡೆದು ಬೇರೆ ಕಾಲೇಜು ವಿದ್ಯಾರ್ಥಿ ಅರುಣ್ ಮೇಲೆ ಹಲ್ಲೆ ಮಾಡಿ ಜೊತೆಗೆ ಕಾಲೇಜಿನಲ್ಲಿ ಪೆಸ್ಟ್ ಗೆ ಹಾಕಿದ್ದ ಫ್ಲೆಕ್ಸ್ಗಳನ್ನ ಕಿತ್ತು ದುರ್ವರ್ತನೆ ತೋರಿದ್ದಾರೆ ಸದ್ಯ ಈ ಕುರಿತು ಹಲ್ಲೆಗೆ ಒಳಗಾದ ವಿದ್ಯಾರ್ಥಿ ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸ್ ತನಿಖೆ ಮುಂದುವರೆಸಿದ್ದಾರೆ.

39.ಸಿಲಿಂಡರ್ ಸ್ಫೋಟಗೊಂಡು ಮನೆ ಹೊತ್ತಿ ಉರಿದ ಘಟನೆ ಮಂಡ್ಯದಲ್ಲಿ ನಡೆದಿದೆ..ಪಾಂಡವಪುರ ತಾಲೂಕಿನ ಹೊಸಕನ್ನಂಬಾಡಿ ಗ್ರಾಮದ ಸೋಮಾಚಾರಿ ಎಂಬುವರ ಮನೆ ಸುಟ್ಟು ಭಸ್ಮವಾಗಿದೆ..ಅಡುಗೆ ಮಾಡುವಾಗ ಏಕಾಏಕಿ ಸಿಲಿಂಡರ್​ ಸ್ಫೋಟಗೊಂಡಿದೆ.. ಇನ್ನು ಈ ಸಂಬಂಧ ಕೆಆರ್‌ಎಸ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಕೆಸ್​ ದಾಖಲಾಗಿದೆ.

40.ಧಾರವಾಡದಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಅಣ್ಣಿಗೇರಿ ತಾಲೂಕಿನ ಭದ್ರಾಪುರ ಬಳಿ ಟೂರಿಸ್ಟ್‌ ಬಸ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು 6 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 10ಕ್ಕೂ ಹೆಚ್ಚು ಮಂದಿಗೆ ಗಂಭೀರಗಾಯವಾಗಿದ್ದು, ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಓವರ್‌ ಟೇಕ್ ಮಾಡಲು ಹೋಗಿ ಅಪಘಾತ ನಡೆದಿದೆ ಎನ್ನಲಾಗಿದ್ದು, ಅಣ್ಣೀಗೇರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

41.ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಗೆ ಬಿಜೆಪಿ ರಣಕಹಳೆ ಮೊಳಗಿಸಿದೆ. ಕೇಂದ್ರ ಸಚಿವರಾದ ಅರುಣ್ ಜೇಟ್ಲಿ, ಧರ್ಮೇಂದ್ರ ಪ್ರಧಾನ್ ಸಮ್ಮುಖದಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಣ್ ಪಕ್ಷದ ಪ್ರಣಾಳಿಕೆ ರಿಲೀಸ್ ಮಾಡಿದ್ರು. ಪಾರದರ್ಶಕ ಆಡಳಿತ, ಮಹಿಳೆಯರಿಗೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ.. ಉದ್ಯೋಗ ಸೃಷ್ಟಿ, ಉತ್ತಮ ಶಿಕ್ಷಣ ಸೌಕರ್ಯ, ಮೂಲಸೌಕರ್ಯ, ರೈತರ ಆದಾಯವನ್ನು ಉತ್ತಮಗೊಳಿಸುವುದು, ಆರೋಗ್ಯ ಸೌಕರ್ಯ ಆಧುನೀಕರಣ, ಬಡ ಮಕ್ಕಳ ವ್ಯಾಸಂಗಕ್ಕೆ ಆರ್ಥಿಕ ಸಹಾಯ ಸೇರಿದಂತೆ ಹತ್ತು ಹಲವು ಭರವಸೆಗಳನ್ನ ಪ್ರಣಾಳಿಕೆಯಲ್ಲಿ ನೀಡಲಾಗಿದೆ.

42.1971ರಲ್ಲಿ ಭಾರತ-ಪಾಕಿಸ್ತಾನ ನಡುವೆ ನಡೆದ ಲೊಂಗೆವಾಲಾ ಯುದ್ಧದ ಹೀರೊ ನಿವೃತ್ತ ಬ್ರಿಗೇಡಿಯರ್‌ ಕುಲದೀಪ್‌ ಸಿಂಗ್‌ ಚಾಂದ್‌ಪುರಿ ನಿಧನರಾದರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು, ಮೊಹಾಲಿಯ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು. ರಾಜಸ್ಥಾನ-ಪಾಕಿಸ್ತಾನದ ಗಡಿ ಪ್ರದೇಶ ಲೊಂಗೆವಾಲಾದಲ್ಲಿ ನಡೆದ ಈ ಯುದ್ಧದಲ್ಲಿ ತೋರಿದ ಶೌರ್ಯಕ್ಕಾಗಿ ಚಾಂದ್‌ಪುರಿ ಅವರಿಗೆ ಮಹಾವೀರ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

43.ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕುರಿತು ನಿಮ್ಮ ಅಜ್ಜ, ಅಜ್ಜಿ ನೀರಿನ ಪೈಪ್ ಹಾಕಿದ್ದಾರಾ ಎಂದು ಪ್ರಶ್ನಿಸಿರುವ ಪ್ರಧಾನಿ ನರೇಂದ್ರ ಮೋದಿಗೆ ಕಪಿಲ್​ ಸಿಬಲ್​​ ತಿರುಗೇಟು ನೀಡಿದ್ದಾರೆ. ನವದೆಹಯಲ್ಲಿ ಮಾತನಾಡಿದ ಅವ್ರು, ಆಧುನಿಕ ಕೈಗಾರಿಕಾ ಭಾರತಕ್ಕೆ ನೆಹರೂ ಅಡಿಗಲ್ಲು ಹಾಕಿದ್ರು..ಬಿಜೆಪಿಯ ಪೂರ್ವಿಕರು ವಸಾಹತುಶಾಹಿ ಆಡಳಿತದ ಸಂದರ್ಭ ಬ್ರಿಟೀಷರೊಂದಿಗೆ ಕೈಜೋಡಿಸಿದ್ದರು ಎಂದು ಗುಡುಗಿದರು.

44.ಬಾಗಲಕೋಟೆ ಸಕ್ಕರೆ ಕಾರ್ಖಾನೆ ಮುಂದೆ ರೈತರ ಅಹೋರಾತ್ರಿ ಪ್ರತಿಭಟನೆ ನಡೆಸಿದ್ರು..ಕಬ್ಬಿನ ದರ ನಿಗದಿ ಮಾಡದೇ ಸಕ್ಕರೆ ಕಾರ್ಖಾನೆ ಆರಂಭಿಸಿದ್ದಕ್ಕೆ ಮುಧೋಳ ತಾಲೂಕಿನ ತಿಮ್ಮಾಪುರ ಬಳಿಯ ರನ್ನ ರೈತರ ನಡೆಸಿದ್ರು..5 ಟ್ರಾಕ್ಟರ್​​​ಗಳ ಟೈರ್​​ ಪಂಕ್ಚರ್ ಮಾಡಿ ಆಕ್ರೋಶ ವ್ಯಕ್ತಪಡಿ, ಪ್ರತಿ ಟನ್‌ಗೆ 2500 ದರ ನಿಗದಿ ಹಾಗೂ ಬಾಕಿ ಬಿಲ್ ನೀಡುವಂತೆ ಆಗ್ರಹಿಸಿದರು.

45.ನಾಳೆ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆ ನಡೆಯಲಿದೆ. ನಾಳೆ ಮಧ್ಯಾಹ್ನ 12.15 ಕ್ಕೆ ವಿಧಾನಸೌಧದಲ್ಲಿ ಸಂಪುಟ ಸಭೆ ನಡೆಯಲಿದೆ. ನಾಳೆಯ ಸಂಪುಟ ಸಭೆಯಲ್ಲಿ ಪ್ರಮುಖವಾಗಿ ಕಬ್ಬು ಬೆಲೆ ನಿಗದಿ ಮತ್ತು ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರಿಗೆ ಬರಬೇಕಾದ ಬಾಕಿ ಪಾವತಿ ವಿಚಾರಗಳ ಕುರಿತು ಚರ್ಚೆ ನಡೆಸಲಾಗುತ್ತದೆ. ಮಹದಾಯಿ ನೀರು ಹಂಚಿಕೆ ಕುರಿತು ಪುನರ್ ಪರಿಶೀಲನೆ ಅರ್ಜಿಯಲ್ಲಿ ಮಾರ್ಪಾಡು ಮಾಡುವ ಬಗ್ಗೆಯೂ ಚರ್ಚಿಸಲಾಗುತ್ತದೆ.

46.ಕೇಂದ್ರ ಸರ್ಕಾರ ಅನೇಕ ಸ್ವತಂತ್ರ ತನಿಖಾ ಸಂಸ್ಥೆಗಳಲ್ಲಿ ಹಸ್ತಕ್ಷೇಪ ಮಾಡ್ತಿದೆ ಅಂತ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ವಾಗ್ದಾಳಿ ನಡೆಸಿದ್ರು. ಸದಾಶಿವನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಈ ಬಗ್ಗೆ ಸಂಸತ್ ನಲ್ಲಿ ಅನೇಕ ಬಾರಿ ಹೇಳಿದ್ದೇನೆ. ಈಗ ಅದು ಬೇರೆ ಪಕ್ಷಗಳಿಗೂ ಬಿಸಿ ತಟ್ಟಿದೆ. ಸಿಬಿಐಗೆ ಸುಮೋಟೋ ಕೇಸ್ ದಾಖಲಿಸಲು ಪರ್ಮಿಷನ್ ಕೊಡಲ್ಲ ಅಂತಿದ್ದಾರೆ. ಸಿಬಿಐ, ಇಡಿ, ಯೂನಿವರ್ಸಿಟಿಗಳು, ಪತ್ರಿಕಾ ಸಂಸ್ಥೆಗಳ ಮೇಲೂ ತನಿಖಾ ಸಂಸ್ಥೆಗಳು ದಾಳಿ ಮಾಡ್ತಿವೆ. ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವರದಿ ಬಂದಾಗ ಮಾತ್ರ ಈ ರೀತಿ ಆಗ್ತಿದೆ. ಹಲವು ಬಾರಿ ಮಾದ್ಯಮಗಳ ಮೇಲೂ ಒತ್ತಡ ಹೇರಿ ಹಿಡಿತ ಸಾಧಿಸಿ ತಮ್ಮ ಅಜೆಂಡಾ ಹೇರಲಾಗ್ತಿದೆ ಅಂತಾ ಆರೋಪಿಸಿದರು.

47.ದೋಸ್ತಿ ಸರ್ಕಾರದಲ್ಲಿ ಸಂಪುಟ ವಿಸ್ತರಣೆಗೆ ಮೂಹರ್ತ ಫಿಕ್ಸ್ ಆಗುತ್ತಿದ್ದಂತೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮತ್ತೆ ಜಾರಕಿಹೊಳಿ ಬ್ರದರ್ಸ್ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.ಬೆಳಗಾವಿಯಲ್ಲಿ ನಡೆದ ಹುಕ್ಕೇರಿ ಹಿರೇಮಠದ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಹೆಬ್ಬಾಳಕರ, ನಾನು ಎರಡು ಬಾರಿ ಸೋತು ಗೆದ್ದಿರುವೆ. ಆದ್ರೆ ನಾನು ಯಾರ ಯಜಮಾನನು ಅಲ್ಲಾ.ಯಾರ ಗುಲಾಮನು ಅಲ್ಲಾ.ಸಮಾಜದ ಅಭಿವೃದ್ಧಿಗಾಗಿ ಶಾಸಕಿ ಆಗಿದ್ದೇನೆ.ನಮ್ಮ ಅಧಿಕಾರವನ್ನ ನಾವು ಸೂಕ್ತವಾಗಿ ಬಳಿಸಿಕೊಳ್ಳಬೇಕು.ರಾಜಕಾರಣದಲ್ಲಿ ಒಬ್ಬ ಮಹಾನುಭಾವರು ಒಂದು ಮಾತು ಹೇಳಿದ್ದಾರೆ.

48. ಕೇಂದ್ರ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಮಿತಾಬ್ ಗೌತಮ್ ನೇತೃತ್ವದ ಕೇಂದ್ರ ಬರ ಅಧ್ಯಯನ ತಂಡ ಭಾನುವಾರ ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿತು.ಬೆಳಗ್ಗೆ ಬಳ್ಳಾರಿಯ ಸರಕಾರಿ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಜಿಲ್ಲೆಯಲ್ಲಿ ಮಳೆ ಬರದ ಪರಿಣಾಮ ಮತ್ತು ಬರದ ಪರಿಣಾಮ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. 2.30ಲಕ್ಷ ಹೆಕ್ಟೇರ್ ಪ್ರಮಾಣದ ಬೆಳೆ ಹಾನಿಯಾಗಿದೆ.153 ಕೋಟಿ ರೂ.ಬೆಳೆ ಹಾನಿಯಾಗಿದೆ. ಜಿಲ್ಲೆಯ 7 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಬರ ಸಂಬಂಧಿತ ಕಾಮಗಾರಿಗಳನ್ಮು ಅಧ್ಯತೆ ಮೇಲೆ ಜಿಲ್ಲಾಡಳಿತ ಕೈಗೊಳ್ಳುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ನೋಡಿಕೊಳ್ಳಲಾಗಿದೆ.

49.ಬೆಳಗಾವಿ ಜಿಲ್ಲೆ ಚಿಕ್ಕೋಡಿ ಭಾಗದಲ್ಲಿ ಕಬ್ಬಿನ ಬಾಕಿ ಬಿಲ್ ಸಂಬಂಧಪಟ್ಟಂತೆ ಉಗ್ರ ಹೋರಾಟ ನಡೆಯುತ್ತಿದೆ. ಚಿಕಕ್ಕೋಡಿ, ಕಾಗವಾಡ, ಅಥಣಿ ಭಾಗದಲ್ಲಿ ರೈತರು ಹೋರಾಟ ತೀವ್ರಗೊಳಿಸಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮೀ ಬೆಳಗಾವಿಗೆ ಬಂದು ಕಬ್ಬಿನ ಸಮಸ್ಯೆ ಬಗೆಹರಿಸುವ ಸಭೆ ನಡೆಸುತ್ತೇನೆ ಎಂದು ರೈತರಿಗೆ ಭರವಸೆ ನೀಡಿದ್ದರು. ಆದರೆ ಆ ಭರವಸೆ ಇಂದು ಹುಸಿಯಾಗಿದ್ದು, ಕುಮಾರ ಸ್ವಾಮೀ ಅವರು ಬೆಂಗಳೂರಿಗೆ ರೈತರನ್ನು ಕರೆದ ಹಿನ್ನೆಲೆಯಲ್ಲಿ ಆಕ್ರೊಶಗೊಂಡ ರೈತರು ಉಗ್ರ ಹೋರಾಟಕ್ಕೆ ಮುಂದಾದರು. ಇಂದು ಕಾಗವಾಡ ಹಾಗೂ ಅಥಣಿ ತಾಲೂಕಿನ ಮುರುಗುಂಡಿಯಲ್ಲಿ ರೈತರು ಉಗ್ರ ಹೊರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಎರಡೆರಡು ಕಿಲೋಮೀಟರ್ ನಷ್ಟು ಕಬ್ಬು ತುಂಬಿಕೊಂಡಿರುವ ಟ್ರ್ಯಾಕ್ಟರಗಳು, ಗಾಡಾಗಳು, ಟ್ರಕ್ ಗಳು ನಿಂತಿವೆ ಇದರಿಂದ ಹೋರಾಟವೂ ಹೆಚ್ಚುತ್ತಿದೆ.

50.ದಾವಣಗೆರೆ ವಿನೋಬನಗರದ ವಿಶೇಷಚೇತನ ಮಹಿಳೆ ಶೈಲಾ, ಬಾಲ್ಯದಲ್ಲಿ ನಡೆದ ಅಪಘಾತದಿಂದ ಬಲ ಕೈ ಕಳೆದುಕೊಂಡಿದ್ದರು. ಶೈಲಾ ಜೀವನ ನಡೆಸಲು ತುಂಬಾ ಕಷ್ಟಪಡುತ್ತಿದ್ದರು ಆದರೂ ಛಲ ಬಿಡದ ಶೈಲಾ, ಬಿಎ ಪದವಿ ಪಡೆದು ಕಂಪ್ಯೂಟರ್ ಸಹ ಕಲಿತಿದ್ದರು.ಇಷ್ಟಿದ್ದರೂ ಶೈಲಗೆ ಕೆಲಸ ಸಿಕ್ಕಿರಲಿಲ್ಲಾ. ಜೂನ್ 7ರಂದು ಶೈಲ ಸಿಎಂ ಕುಮಾರಸ್ವಾಮಿ ಮನೆ ಬಳಿ ಜನತಾದರ್ಶನಕ್ಕೆ ಕಾಯ್ದು ಕುಳಿತಿದ್ದರು.ಈ ವೇಳೆ ಮನೆಯಿಂದ ಹೊರಬಂದ ಸಿಎಂ ಶೈಲರನ್ನು ಮಾತನಾಡಿಸಿ ವಿಧಾನಸೌಧಕ್ಕೆ ಬರುವಂತೆ ಹೇಳಿದ್ದರು.ಅಂದು ಮಧ್ಯಾಹ್ನ 12.30ರಲ್ಲಿ ವಿಧಾನಸೌಧಕ್ಕೆ ಕರೆಸಿಕೊಂಡಿದ್ದ ಸಿಎಂ ಸ್ಥಳದಲ್ಲೇ ಉದ್ಯೋಗವಕಾಶ ನೀಡಿ ಮಾನವೀಯತೆ ಮೆರೆದಿದ್ದರು.

Next Story

RELATED STORIES