Top

7 ಕೋಟಿ ವಂಚಿಸಿದ ಮಹಿಳೆ! ಬೆಂಗಳೂರಿನಲ್ಲೊಂದು ಮಹಾಮೋಸ

7 ಕೋಟಿ ವಂಚಿಸಿದ ಮಹಿಳೆ! ಬೆಂಗಳೂರಿನಲ್ಲೊಂದು ಮಹಾಮೋಸ
X

ರಾಜಧಾನಿ ಬೆಂಗಳೂರಿನಲ್ಲಿ ಗೃಹಿಣಿಯರ ಪರಿಚಯ ಮಾಡಿಕೊಂಡು ಅವರ ಬಳಿ ಚೀಟಿಗೆ ದುಡ್ಡು ಹಾಕಿಸಿಕೊಳ್ಳುತ್ತಿದ್ದ ಮಹಿಳೆಯೊಬ್ಬಳು 7 ಕೋಟಿ ರೂ. ವಂಚಿಸಿ ಸಿಕ್ಕಿಬಿದ್ದಿದ್ದಾಳೆ.

ಬೆಂಗಳೂರಿನ ಗಿರಿನಗರ ನಿವಾಸಿ ಪುಷ್ಪ ಸಿಕ್ಕಿಬಿದ್ದಿರುವ ಮಹಿಳೆ. ಈಕೆ ಗೃಹಿಣಿಯರ ಪರಿಚಯ ಮಾಡಿಕೊಂಡು ಸ್ನೇಹ ಸಂಪಾದಿಸುತ್ತಿದ್ದಳು. ವಿಶ್ವಾಸ ಬೆಳೆದ ನಂತರ ಚೀಟಿ ಕಟ್ಟಿಸಿಕೊಳ್ಳುತ್ತಿದ್ದಳು. ಪುಷ್ಪಳನ್ನು ನಂಬಿ ಲಕ್ಷಗಟ್ಟಲೆ ಚೀಟಿ ಕಟ್ಟಿದ್ದಾರೆ.

ಚೀಟಿ ಹಣ ಕೇಳಲು ಹೋದರೆ ನನ್ನ ಬಳಿ ಹಣ ಇಲ್ಲ. ಏನು ಬೇಕಾದರೂ ಮಾಡಿಕೊಳ್ಳಿ ಎಂದು ಹೇಳುತ್ತಿದ್ದಾಳೆ. ಇದರಿಂದ ರೋಸಿ ಹೋದ ಮಹಿಳೆಯರು ನೀಡಿದ ದೂರಿನ ಅನ್ವಯ ಪೊಲೀಸರು ಪುಷ್ಪ ಅವರನ್ನು ಬಂಧಿಸಿದ್ದಾರೆ.

ನ್ಯಾಯಕ್ಕಾಗಿ ಗಿರಿನಗರ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಮಹಿಳೆಯರು ಕಟ್ಟಿದ ಚೀಟಿ ಹಣ ವಾಪಸ್ ಬರುವ ನಿರೀಕ್ಷೆಯಲ್ಲಿದ್ದಾರೆ.

Next Story

RELATED STORIES