Top

ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್?

ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್?
X

ಉಪಚುನಾವಣೆಯ ಬಳಿಕ ಮತ್ತೆ ಸಂಪುಟ ವಿಸ್ತರಣೆ ಗರಿಗೆದರಿದೆ. ಕಾಂಗ್ರೆಸ್​ನ ಆರು ಹಾಗೂ ಜೆಡಿಎಸ್​ನ ಎರಡು ಸೇರಿ ಎಂಟು ಸಚಿವ ಸ್ಥಾನಗಳನ್ನು ತುಂಬೋಕೆ ಎರಡೂ ಪಕ್ಷಗಳ ನಾಯಕರು ಚಿಂತನೆ ನಡೆಸಿದ್ದಾರೆ.

ಎರಡೂ ಪಕ್ಷಗಳಲ್ಲೂ 20 ಕ್ಕೂ ಹೆಚ್ಚು ಆಕಾಂಕ್ಷಿಗಳು ಸಂಪುಟ ಸೇರೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಅದರಲ್ಲೂ ಕಾಂಗ್ರೆಸ್ ಪಕ್ಷದ ಆರು ಸ್ಥಾನಗಳಿಗಾಗಿ ಡಜನ್​ಗೂ ಹೆಚ್ಚು ಶಾಸಕರು ನಾಮುಂದು ತಾ ಮುಂದು ಅಂತ ಪೈಪೋಟಿಗಿಳಿದಿದ್ದಾರೆ.ಕೆಲವರು ಸಂಪುಟ ವಿಸ್ತರಣೆ ಮಾಡದೆ ಹೋದರೆ ನಮ್ಮ ದಾರಿ ನಾವು ನೋಡಿಕೊಳ್ಳಬೇಕಾಗುತ್ತದೆ ಎಂಬ ಮಟ್ಟಕ್ಕೂ ಹೋಗಿದ್ದಾರೆ.

ಸಂಪುಟ ಭರ್ತಿ ಮಾಡಿದರು ಕಷ್ಟ, ಮಾಡದಿದ್ರೂ ನಷ್ಟ ಎಂಬ ಹಂತಕ್ಕೆ ಕೈ ನಾಯಕರು ಬಂದಿದ್ದಾರೆ.ಆದರೂ ಅಳೆದೂ ತೂಗಿ ಸಂಪುಟ ಭರ್ತಿ ಮಾಡೋಕೆ ಮುಂದಾಗಿದ್ದಾರೆ. ಮಾಸಾಂತ್ಯದೊಳಗೆ ಸಂಪುಟ ಭರ್ತಿ ಮಾಡ್ತೇವೆ ಅಂತ ನಾಯಕರೂ ಡಂಗುರ ಸಾರ್ತಿದ್ದಾರೆ. ಆದರೆ ಸ್ಪಷ್ಟ ದಿನಾಂಕದ ಬಗ್ಗೆ ಮಾತ್ರ ಇನ್ನೂ ತಿಳಿಸುತ್ತಿಲ್ಲ. ಹೀಗಾಗಿ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ನಾಯಕರ ಸಂಪುಟ ವಿಸ್ತರಣೆ ಮಾತಿನ ಬೆನ್ನಲ್ಲೇ ಆಕಾಂಕ್ಷಿಗಳಿಂದ ಲಾಬಿ ಪಾಲಿಟಿಕ್ಸ್ ಬಿರುಸಾಗಿ ನಡೆದಿದೆ. ಉಪಚುನಾವಣೆಯ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್ ಹಾಗೂ ಹಿರಿಯ ನಾಯಕ ಖರ್ಗೆ ಮನೆ ಬಳಿ ಕೆಲವು ಆಕಾಂಕ್ಷಿಗಳು ಒತ್ತಡ ತರ್ತಿದ್ದಾರೆ. ಇಂದು ಬೆಂಗಳೂರಿನ ಕುಮಾರಕೃಪಾ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಬಳಿ ಹಲವರು ಬೇಡಿಕೆ ಮುಂದಿಟ್ಟಿದ್ದಾರೆ.

ಮಾಜಿ ಸಚಿವ ಹಾಗೂ ಆಕಾಂಕ್ಷಿಯಾಗಿರುವ ಎಂ.ಬಿ.ಪಾಟೀಲ್ ಹಾಗೂ ಬಿ.ಸಿ.ಪಾಟೀಲ್ ಭೇಟಿಯನ್ನು ಮಾಡಿದರು.ಸಂಪುಟ ವಿಸ್ತರಣೆ ವೇಳೆ ತಮ್ಮನ್ನು ಕೈಬಿಡದಂತೆ ಮನವಿ ಸಲ್ಲಿಸಿದರು. ಅಲ್ಲದೆ ಸಂಪುಟ ವಿಸ್ತರಣೆ ಮಾಡದೆ ಹೋದರೆ ಪಕ್ಷಕ್ಕಾಗುವ ನಷ್ಟದ ಬಗ್ಗೆಯೂ ಎಂಬಿಪಿ ಮನವರಿಕೆ ಮಾಡಿಕೊಟ್ಟರು.ಇನ್ನು ಕೆಪಿಸಿಸಿ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರು ಕೂಡ ಸಂಪುಟ ವಿಸ್ತರಣೆಯ ಅವಶ್ಯಕತೆಯ ಬಗ್ಗೆ ವೇಣುಗೋಪಾಲ್ ಗೆ ಸಲಹೆಯನ್ನು ನೀಡಿದರು.

ಇನ್ನು ಸಚಿವಸ್ಥಾನಕ್ಕಾಗಿ ಸಾಕಷ್ಟು ಮಂದಿ ಲಾಬ ನಡೆಸಿದ್ದಾರೆ. ಎಂಟಿಬಿ ನಾಗರಾಜು, ರಾಮಲಿಂಗಾರೆಡ್ಡಿ ,ಎಂ.ಬಿ.ಪಾಟೀಲ್,ಸಿ.ಎಸ್.ಶಿವಳ್ಳಿ,ಭದ್ರಾವತಿ ಸಂಗಮೇಶ್,ಬಿ.ಸಿ.ಪಾಟೀಲ್,ರಹೀಂಖಾನ್,ತನ್ವೀರ್ ಸೇಠ್ ಹೆಸರು ಹೆಚ್ಚಾಗಿ ಕೇಳಿಬರುತ್ತಿವೆ. ರಾಮಲಿಂಗಾರೆಡ್ಡಿ ಹಾಗೂ ಎಂಬಿ ಪಾಟೀಲ್ ಗೆ ಸಚಿವ ಸ್ಥಾನ ಗ್ಯಾರೆಂಟಿ ಎನ್ನಲಾಗುತ್ತೀದೆ.

ಇದರ ನಡುವೆ ಡಾ.ಸುಧಾಕರ್,ರೋಷನ್ ಬೇಗ್,ಹೆಚ್.ಕೆ.ಪಾಟೀಲ್ ಕೂಡ ಸಚಿವ ಸ್ಥಾನಕ್ಕೆ ಲಾಬಿ ನಡೆಸಿದ್ದಾರೆ. ಇರುವ ಆರರಲ್ಲಿ ಯಾರಿಗೆ ಕೊಡಬೇಕು,ಯಾರಿಗೆ ಬಿಡಬೇಕು ಎಂಬ ಗೊಂದಲ ಮುಂದುವರಿದಿದೆ..ಆದರೂ ನವೆಂಬರ್ 28 ರಂದು ಸಂಪುಟ ವಿಸ್ತರಣೆ ಮಾಡುವುದು ಖಚಿತವೆನ್ನಲಾಗ್ತಿದೆ. ಮತ್ತೊಂದು ಮೂಲದ ಪ್ರಕಾರ ಪಂಚ ರಾಜ್ಯಗಳ ಚುನಾವಣೆಯಲ್ಲಿ ಬ್ಯುಸಿಯಾಗಿರುವ ರಾಹುಲ್ ರಾಜ್ಯ ನಾಯಕರ ಭೇಟಿಗೆ ಅವಕಾಶ ನೀಡಿಲ್ಲವೆನ್ನಲಾಗ್ತಿದೆ. ಅಲ್ಲದೆ ಧನುರ್ಮಾಸ ಬರುತ್ತಿದ್ದು ಸಂಪುಟ ಮುಂದೂಡಿದ್ರೆ ಉತ್ತಮ ಎಂಬ ದೇವೇಗೌಡರ ಸಲಹೆಯೂ ಸೇರಿಕೊಂಡಿದೆ. ಹೀಗಾಗಿ ಸಂಪುಟ ವಿಸ್ತರಣೆ ಮುಂದೂಡಿಕೆಯಾದರೂ ಆಗಬಹುದು ಎನ್ನಲಾಗ್ತಿದೆ.

ಸಚಿವ ಸಂಪುಟ ವಿಸ್ತರಣೆಯಲ್ಲಿ ಇರುವ 8ಸ್ಥಾನಗಳಿಗೆ 20 ಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳಿದ್ದಾರೆ. ಬಹುತೇಕ ಆಕಾಂಕ್ಷಿಗಳನ್ನು ಅರ್ಹತೆ ಆಧರಿಸಿ ನಿಗಮ ಮಂಡಳಿಗಳಿಗೆ ನೇಮಿಸಿದರೆ, ಸಂಪುಟ ವಿಸ್ತರಣೆಯ ಒತ್ತಡ ಕಡಿಮೆಯಾಗಬಹುದು ಎಂಬ ಲೆಕ್ಕಾಚಾರದಿಂದ ಪಕ್ಷದ ಹಿರಿಯರು ತಿಂಗಳಾಂತ್ಯದೊಳಗೆ ಈ ಪಕ್ರಿಯೆ ಪೂರ್ಣಗೊಳಿಸುವ ತಯಾರಿ ಆರಂಭಿಸಿದ್ದಾರೆ.

Next Story

RELATED STORIES