ಮೀಟೂ ಅಭಿಯಾನವನ್ನು ಕೆಟ್ಟದಾಗಿ ಬಳಸಿಕೊಳ್ತಿದ್ದಾರೆ:ರೂಪ ಅಯ್ಯರ್

X
TV5 Kannada17 Nov 2018 4:10 PM GMT
ಮೀಟೂ ಅಭಿಯಾನವನ್ನು ಕೆಲ ಹೆಣ್ಣು ಮಕ್ಕಳು ಕೆಟ್ಟದಾಗಿ ಬಳಸಿಕೊಳ್ತಿದ್ದಾರೆ. ಗಂಡಸರ ಮೇಲಿನ ದ್ವೇಷದಿಂದ ಅವರಿಗೆ ಅವಮಾನ ಮಾಡಲು ಅಥವಾ ಹಣ ಪಡೆದು ಸೆಟ್ಲ್ ಆಗೋಕೆ ಇದನ್ನು ಬಳಸಿಕೊಳ್ತಿದ್ದಾರೆ ಎಂದು ನಿರ್ದೇಶಕಿ ರೂಪ ಅಯ್ಯರ್ ಹೇಳಿದರು.
ಸಂಜನಾ ಗರ್ಲಾನಿ ಕಲಾವಿದರ ಸಂಘದ ಅಧ್ಯಕ್ಷ ಅಂಬರೀಷ್ ಅವರ ಮಾತಿಗೆ ಬೆಲೆ ಕೊಟ್ಟು ಕ್ಷಮೆ ಕೇಳಿದ್ದಾರೆ. ಮರ್ಡರ್ ಸಿನಿಮಾ ನೋಡಿಯೇ ಸಂಜನಾ ಗಂಡಹೆಂಡತಿ ಸಿನಿಮಾದಲ್ಲಿ ನಟಿಸಿದ್ದಾರೆ. ಅಷ್ಟಕ್ಕೂ ನಿರ್ದೇಶಕರ ಜೊತೆ ಅವರು ಕಿಸ್ಸಿಂಗ್ ದೃಶ್ಯದಲ್ಲಿ ಭಾಗವಹಿಸಿಲ್ಲ. ಹೀರೋ ಜೊತೆ ಅಂತಹ ದೃಶ್ಯಗಳಲ್ಲಿ ನಟಿಸಿದ್ದಾರೆ. ಹಾಗಾಗಿ ಇಷ್ಟ ವರ್ಷಗಳ ನಂತ್ರ ನಿರ್ದೇಶಕರ ಮೇಲೆ ಆರೋಪ ಮಾಡೋದು ತಪ್ಪು ಅಂದರು.
ಅರ್ಜುನ್ ಸರ್ಜಾ ಮತ್ತು ಶ್ರುತಿ ಹರಿಹರನ್ ಪ್ರಕರಣದ ಕೋರ್ಟ್ ಮೆಟ್ಟಿಲೇರಿದೆ. ಮುಂದೇನಾಗುತ್ತೋ ನೋಡ್ಬೇಕು ಅಂತ ನಿರ್ದೇಶಕರ ಸಂಘದ ಉಪಾಧ್ಯಕ್ಷೆಯೂ ಆಗಿರೋ ರೂಪ ಅಯ್ಯರ್ ತಿಳಿಸಿದ್ದಾರೆ.
Next Story