Top

ಆ್ಯಂಬಿಡೆಂಟ್ ಮಾದರಿಯಲ್ಲೇ ಮತ್ತೊಂದು ಬ್ಲೇಡ್ ಕಂಪನಿ!

ಆ್ಯಂಬಿಡೆಂಟ್ ಮಾದರಿಯಲ್ಲೇ ಮತ್ತೊಂದು ಬ್ಲೇಡ್ ಕಂಪನಿ!
X

ಆ್ಯಂಬಿಡೆಂಟ್ ಕಂಪನಿಯ ಮಾದರಿಯಲ್ಲೇ ಮತ್ತೊಂದು ಬ್ಲೇಡ್ ಕಂಪನಿಯ ವಂಚನೆ ಬೆಳಕಿಗೆ ಬಂದಿದ್ದು, ಸಾರ್ವಜನಿಕರು ನ್ಯಾಯ ದೊರಕಿಸಿಕೊಡುವಂತೆ ಸಿಸಿಬಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದ್ದಾರೆ.

ಅಜ್ಮೇರಾ ಹೆಸರಿನ ಈ ಕಂಪನಿ ಸಾರ್ವಜನಿಕರಿಂದ ಕೊಂಟ್ಯಾಂತರ ರೂಪಾಯಿ ಪಡೆದು ವಂಚನೆ ಮಾಡಿದೆ ಎಂದು ಸಾರ್ವಜನಿಕರು ಅರೋಪಿಸಿದ್ದಾರೆ.

15 ರಿಂದ 40 ಪರ್ಸೆಂಟ್​ವರೆಗೂ ಬಡ್ಡಿ ನೀಡುವ ಭರವಸೆ ನೀಡಿದ ಕಂಪನಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿದ್ದು 8ರಿಂದ 10 ಸಾವಿರಕ್ಕೂ ಅಧಿಕ ಗ್ರಾಹಕರನ್ನು ವಂಚಿಸಿದೆ ಎಂದು ಅರೋಪಿಸಲಾಗಿದೆ.

ಬೆಂಗಳೂರಿನಿಂದ ಬಾಗಲಕೋಟೆ ವರೆಗೂ ವಿಸ್ತರಿಸಿರುವ ಈ ಕಂಪನಿ ಶಾಖೆಗಳಲ್ಲಿ ಹೂಡಿರುವ ಹಣವನ್ನು ವಾಪಸ್ ಕೊಡಿಸಬೇಕು ಎಂದು ಸಾರ್ವಜನಿಕರು ಬೆಂಗಳೂರಿನ ಸಿಸಿಬಿ ಕಚೇರಿ ಎದುರು ಶನಿವಾರ ಬೆಳಗ್ಗೆ ಪ್ರತಿಭಟನೆ ಮಾಡಿದರು.

ಗುಂಪು ಜಮಾವಣೆ ಜಾಸ್ತಿಯಾಗುತ್ತಿದ್ದಂತೆ ಎಚ್ಚೆತ್ತ ಸಿಸಿಬಿ‌ ಪೊಲೀಸರು, ಪ್ರತಿಭಟನೆ ನಡೆಸದಂತೆ ಮನವಿ ಮಾಡಿದ್ದೂ ಅಲ್ಲದೇ ದೂರು ಸ್ವೀಕರಿಸಿ ಕಳುಹಿಸಿ ವಾಪಸ್ ಕಳುಹಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

Next Story

RELATED STORIES