Top

ಮೈಸೂರು ನೂತನ ಮೇಯರ್ ಆಗಿ ಪುಷ್ಪಲತಾ ಆಯ್ಕೆ

ಮೈಸೂರು ನೂತನ ಮೇಯರ್ ಆಗಿ ಪುಷ್ಪಲತಾ ಆಯ್ಕೆ
X

ಸಾಕಷ್ಟು ಕುತೂಹಲ ಕೆರಳಿಸಿದ್ದ ಮೈಸೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಕಾಂಗ್ರೆಸ್ ನ ಪುಷ್ಪಲತಾ ಜಗನ್ನಾಥ್ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್​-ಜೆಡಿಎಸ್​ ಪಕ್ಷಗಳು ಮಾತುಕತೆ ಮೂಲಕ ಮೊದಲ ಮೂರು ವರ್ಷದ ಅವಧಿಗೆ ಕಾಂಗ್ರೆಸ್ ಅಭ್ಯರ್ಥಿಗೆ ಮೇಯರ್ ಸ್ಥಾನ ಬಿಟ್ಟುಕೊಡಲು ನಿರ್ಧಾರವಾಗಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ನಡೆದ ಮೇಯರ್ ಸ್ಥಾನ ಚುನಾವಣೆಯಲ್ಲಿ ಕಾಂಗ್ರೆಸ್​ನ ಪುಷ್ಪಲತಾ 24 ಮತಗಳ ಅಂತರದಿಂದ ಪ್ರತಿಸ್ಪರ್ಧಿ ಬಿಜೆಪಿಯ ಅಭ್ಯರ್ಥಿಯನ್ನು ಸೋಲಿಸಿದರು.

ಬಿಜೆಪಿ ಅಭ್ಯರ್ಥಿ ಸುನಂದ ಪರವಾಗಿ 24 ಮತಗಳು ಬಿದ್ದರೆ, ಪುಷ್ಪಲತಾ ಜಗನ್ನಾಥ್ 48 ಮತಗಳನ್ನು ಪಡೆಯುವ ಮೂಲಕ ಗೆಲುವು ಕಂಡರು. ಇದರಿಂದಾಗಿ 21ನೇ ಮೇಯರ್ ಆಗಿ ಪುಷ್ಪಲತಾ ಜಗನ್ನಾಥ್ ಆಯ್ಕೆಯಾದರು.

ಜಯ ಸಾಧಿಸಿದ ನಂತರ ಮಾತನಾಡಿದ ಪುಷ್ಪಲತಾ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಅರ್ಪಿಸಿದರು. ಮೇಯರ್ ಸ್ಥಾನ ಸಿಗಲು ಸಿದ್ದರಾಮಯ್ಯ ಅವರೇ ಕಾರಣ. ಅವರ ಕೃಪೆಯಿಂದ ಮೇಯರ್ ಆಗಿದ್ದೇನೆ ಎಂದರು.

ಮೈಸೂರು ನಗರದ ಸ್ವಚ್ಛತೆ ಹಾಗೂ ಮಹಿಳೆಯರ ಅಭ್ಯುದಯಕ್ಕೆ ಶ್ರಮಿಸುತ್ತೇನೆ. ಕಾಂಗ್ರೆಸ್ ಪಕ್ಷದಲ್ಲಿ ಮೇಯರ್ ಸ್ಥಾನಕ್ಕಾಗಿ ಅನೇಕರ ನಡುವೆ ಪೈಪೋಟಿ ಇತ್ತು.‌ ಈ ನಡುವೆಯೂ ಪಕ್ಷದವರು ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಧನ್ಯವಾದ. ನಾನು ಮೇಯರ್ ಆಗಿದ್ದಕ್ಕೆ ಜೆಡಿಎಸ್ ಪಕ್ಷದವರ ವಿರೋಧ ಇಲ್ಲ. ಎಲ್ಲರನ್ನು ಸಂಭಾಳಿಸಿಕೊಂಡು ಆಡಳಿತ ನಡೆಸ್ತೇನೆ ಎಂದರು.

Next Story

RELATED STORIES