Top

3 ವರ್ಷದ ಅವಧಿಗೆ ಮೈಸೂರು ಮೇಯರ್ ಸ್ಥಾನ ಕಾಂಗ್ರೆಸ್ ಪಾಲು!

3 ವರ್ಷದ ಅವಧಿಗೆ ಮೈಸೂರು ಮೇಯರ್ ಸ್ಥಾನ ಕಾಂಗ್ರೆಸ್ ಪಾಲು!
X

ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಮೈಸೂರು ಮೇಯರ್ ಸ್ಥಾನದ ಗೊಂದಲ ಬಗೆಹರಿಸಿಕೊಳ್ಳುವಲ್ಲಿ ಮೈತ್ರಿ ಸರಕಾರ ಯಶಸ್ವಿಯಾಗಿದ್ದು, ಮೊದಲು ಮೂರು ವರ್ಷ ಕಾಂಗ್ರೆಸ್ ಹಾಗೂ ಕೊನೆಯ ಎರಡು ವರ್ಷ ಜೆಡಿಎಸ್​ಗೆ ಬಿಟ್ಟುಕೊಡಲು ತೀರ್ಮಾನವಾಗಿದೆ.

ಮಂಗಳೂರಿನಲ್ಲಿ ಜೆಡಿಎಸ್ ಸಭೆ ಯಶಸ್ವಿಯಾಗಿದ್ದು, ಇದರಿಂದ ರೆಸಾರ್ಟ್​ ರಾಜಕೀಯಕ್ಕೆ ಅಂತ್ಯ ಹಾಡಲು ಸ್ಥಳೀಯ ಮುಖಂಡರು ನಿರ್ಧರಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಕೃಷ್ಣ ಭೈರೇಗೌಡ ಅವರ ಮನವಿಗೆ ಸ್ಪಂದಿಸಿದ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ, ಸಿಎಂ ಕುಮಾರಸ್ವಾಮಿ ಹಾಗೂ ಸಚಿವ ಸಾ.ರಾ ಮಹೇಶ್ ಮೊದಲ ಮೂರು ವರ್ಷ ಕಾಂಗ್ರೆಸ್​ಗೆ ಬಿಟ್ಟುಕೊಡಲು ಒಪ್ಪಿದರು.

5 ವರ್ಷಗಳ ಅಧಿಕಾರಾವಧಿಯ ಮೊದಲ ಮೂರು ವರ್ಷ ಕಾಂಗ್ರೆಸ್ ಸದಸ್ಯರು ಮೇಯರ್ ಸ್ಥಾನ ಅಲಂಕರಿಸಲಿದ್ದಾರೆ. ನಂತರದ ಎರಡು ವರ್ಷ ಜೆಡಿಎಸ್ ಸದಸ್ಯರ ಪಾಲಾಗಲಿದೆ. ಅದೇ ರೀತಿ ಉಪಮೇಯರ್​ ಸ್ಥಾನ ಕೂಡ ಬದಲಾಗಲಿದೆ.

ಮೊದಲ ಅವಧಿಗೆ ಜೆಡಿಎಸ್‌ನ ಶಫಿ ಅಹಮದ್ ಉಪಮೇಯರ್ ಆಗಿ ನೇಮಕಗೊಳ್ಳುವ ಸಾಧ್ಯತೆ ಇದೆ. ಕಾಂಗ್ರೆಸ್ ಮೇಯರ್ ಅಭ್ಯರ್ಥಿ ಇನ್ನಷ್ಟೇ ಹೆಸರು ಅಂತಿಮಗೊಳಿಸಬೇಕಿದೆ.

Next Story

RELATED STORIES