ಬ್ರೆಂಡನ್ ಮೆಕಲಂ ಬಿಟ್ಟುಕೊಟ್ಟ ಆರ್ಸಿಬಿ!

X
TV5 Kannada17 Nov 2018 8:27 AM GMT
ನ್ಯೂಜಿಲೆಂಡ್ನ ಸ್ಫೋಟಕ ಬ್ಯಾಟ್ಸ್ ಮನ್ ಬ್ರೆಂಡನ್ ಮೆಕಲಂ ಸೇರಿದಂತೆ 10 ಆಟಗಾರರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಕೈಬಿಟ್ಟಿದ್ದು, ನಾಯಕ ವಿರಾಟ್ ಕೊಹ್ಲಿ ಸೇರಿದಂತೆ 14 ಆಟಗಾರರನ್ನು ಉಳಿಸಿಕೊಂಡಿದೆ.
ಜನವರಿಯಲ್ಲಿ 2019ನೇ ಐಪಿಎಲ್ ಆವೃತ್ತಿಗಾಗಿ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಆರ್ ಸಿಬಿ ತಂಡ ಬ್ರೆಂಡನ್ ಮೆಕಲಂ ಸೇರಿದಂತೆ 10 ಆಟಗಾರರನ್ನು ತಂಡದಿಂದ ಕೈಬಿಟ್ಟಿದೆ. ಈ ಆಟಗಾರರು ಹರಾಜಿನಲ್ಲಿ ಲಭ್ಯರಾಗಲಿದ್ದಾರೆ.
ಬ್ರೆಂಡನ್ ಮೆಕಲಂ ತಂಡದಿಂದ ಕೈಬಿಟ್ಟ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿಗೆ ತನ್ನನ್ನು ಬೆಂಬಲಿಸಿದ್ದಕ್ಕಾಗಿ ಹಾಗೂ ಕಳೆದ ಆವೃತ್ತಿಯಲ್ಲಿ ಸವಿದ ಅದ್ಭುತ ಕ್ಷಣಗಳಿಗಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಬ್ರೆಂಡನ್ ಮೆಕಲಂ ಕಳೆದ ಋತುವಿನಲ್ಲಿ ಆರ್ ಸಿಬಿ ಪರ 127 ರನ್ ಗಳಿಸಿದ್ದಾರೆ.
- ಕೈಬಿಟ್ಟ ಆಟಗಾರರು
- ಬ್ರೆಂಡನ್ ಮೆಕಲಂ, ಮಂದೀಪ್ ಸಿಂಗ್, ಕ್ರಿಸ್ ವೋಕ್ಸ್, ಸರ್ಫರಾಜ್ ಖಾನ್, ಕೋರೆ ಆ್ಯಂಡರ್ಸನ್, ಅಂಕಿತ್ ಚೌಧರಿ, ಅನಿರುದ್ಧ್ ಜೋಶಿ, ಮುರುಗನ್ ಅಶ್ವಿನ್, ಮನನ್ ವೊಹ್ರಾ, ಪವನ್ ದೇಶಪಾಂಡೆ.
- ಉಳಿಸಿಕೊಂಡ ಆಟಗಾರರು
- ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಕೌಲ್ಟರ್ ನೀಲ್, ಟಿಮ್ ಸೌಥಿ, ಮೊಹಮದ್ ಸಿರಾಜ್, ಪವನ್ ನೇಗಿ, ಉಮೇಶ್ ಯಾದವ್, ವಾಷಿಂಗ್ಟನ್ ಸುಂದರ್, ಯಜುರ್ವೆಂದ್ರ ಚಾಹಲ್, ಕಾಲಿನ್ ಡಿ ಗ್ರಾಂಡ್ ಹೋಮ್, ಮೋಯಿನ್ ಅಲಿ.
Next Story