Top

ನಿಮಿಷ 10, ವಾರ್ತೆ 50

ನಿಮಿಷ 10, ವಾರ್ತೆ 50
X

1. ವಿಚಾರ ಚೆನ್ನಾಗಿದ್ದರೆ ಜೊತೆಗಿರುತ್ತಾರೆ. ಹೆಚ್ಚು ಕಡಿಮೆ ಆದರೆ ಬಿಟ್ಟುಬಿಡುತ್ತಾರೆ. ಕೆಟ್ಟ ಗಳಿಗೆ ಬಂದಾಗ ಹಿಂದೇಟು ಹೊಡಿಯೋದು ಬಿಜೆಪಿಗೆ ಮಾಮೂಲು. ಹಾಗಾಗಿ ಬಿಜೆಪಿ ಅಂದರೆ ಯೂ ಟರ್ನ್ ಪಕ್ಷ ಎನ್ನುತ್ತಾರೆ ಎಂದು ಆಹಾರ ನಾಗರಿಕ ಸರಬರಾಜು ಸಚಿವ ಜಮೀರ್ ಅಹಮ್ಮದ್ ವಿಶ್ಲೇಷಿಸಿದ್ದಾರೆ.

2.ಆಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣದ ಆರೋಪಿ ರೆಡ್ಡಿ ಆಪ್ತ ಅಲಿಖಾನ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ವೇಳೆ ಸಿಸಿಬಿ ಪೊಲೀಸರು ಮಹತ್ವದ ದಾಖಲೆಗಳನ್ನು ಸಲ್ಲಿಸಿದರು. ಅಲಿಖಾನ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಗರದ 61 ನೇ ಸಿಟಿ ಸಿವಿಲ್ ಕೋರ್ಟ್​ನಲ್ಲಿ ವಿಚಾರಣೆ ನಡೆಯಿತು.

3.ರಾಜಧಾನಿ ಬೆಂಗಳೂರಿನಲ್ಲಿ ಗೃಹಿಣಿಯರ ಪರಿಚಯ ಮಾಡಿಕೊಂಡು ಅವರ ಬಳಿ ಚೀಟಿಗೆ ದುಡ್ಡು ಹಾಕಿಸಿಕೊಳ್ಳುತ್ತಿದ್ದ ಮಹಿಳೆಯೊಬ್ಬಳು 7 ಕೋಟಿ ರೂ. ವಂಚಿಸಿ ಸಿಕ್ಕಿಬಿದ್ದಿದ್ದಾಳೆ.ಬೆಂಗಳೂರಿನ ಗಿರಿನಗರ ನಿವಾಸಿ ಪುಷ್ಪ ಸಿಕ್ಕಿಬಿದ್ದಿರುವ ಮಹಿಳೆ. ಈಕೆ ಗೃಹಿಣಿಯರ ಪರಿಚಯ ಮಾಡಿಕೊಂಡು ಸ್ನೇಹ ಸಂಪಾದಿಸುತ್ತಿದ್ದಳು. ವಿಶ್ವಾಸ ಬೆಳೆದ ನಂತರ ಚೀಟಿ ಕಟ್ಟಿಸಿಕೊಳ್ಳುತ್ತಿದ್ದಳು. ಪುಷ್ಪಳನ್ನು ನಂಬಿ ಲಕ್ಷಗಟ್ಟಲೆ ಚೀಟಿ ಕಟ್ಟಿದ್ದಾರೆ.

4.ಮುಖ್ಯಮಂತ್ರಿ ಸ್ಥಾನ ಯಾರಿಗೂ ಶಾಶ್ವತವಲ್ಲ. ಮುಖ್ಯಮಂತ್ರಿ ಸ್ಥಾನ ನಿಭಾಯಿಸಲು ರಾಜ್ಯದಲ್ಲಿ ತುಂಬಾ ಜನರು ಇದ್ದಾರೆ. ಜಿ. ಪರಮೇಶ್ವರ್ ಹೇಳಿಕೆಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

5.ಸಾಕಷ್ಟು ಕುತೂಹಲ ಕೆರಳಿಸಿದ್ದ ಮೈಸೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಕಾಂಗ್ರೆಸ್ ನ ಪುಷ್ಪಲತಾ ಜಗನ್ನಾಥ್ ಆಯ್ಕೆಯಾಗಿದ್ದಾರೆ.ಕಾಂಗ್ರೆಸ್​-ಜೆಡಿಎಸ್​ ಪಕ್ಷಗಳು ಮಾತುಕತೆ ಮೂಲಕ ಮೊದಲ ಮೂರು ವರ್ಷದ ಅವಧಿಗೆ ಕಾಂಗ್ರೆಸ್ ಅಭ್ಯರ್ಥಿಗೆ ಮೇಯರ್ ಸ್ಥಾನ ಬಿಟ್ಟುಕೊಡಲು ನಿರ್ಧಾರವಾಗಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ನಡೆದ ಮೇಯರ್ ಸ್ಥಾನ ಚುನಾವಣೆಯಲ್ಲಿ ಕಾಂಗ್ರೆಸ್​ನ ಪುಷ್ಪಲತಾ 24 ಮತಗಳ ಅಂತರದಿಂದ ಪ್ರತಿಸ್ಪರ್ಧಿ ಬಿಜೆಪಿಯ ಅಭ್ಯರ್ಥಿಯನ್ನು ಸೋಲಿಸಿದರು.

6.ಆ್ಯಂಬಿಡೆಂಟ್ ಪ್ರಕರಣದಲ್ಲಿ ಸಿಸಿಬಿಯಿಂದ ಬಂಧನಕ್ಕೊಳಗಾಗಿ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಶುಕ್ರವಾರ ರಾತ್ರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಅವರನ್ನು ರಹಸ್ಯವಾಗಿ ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.

7.ಬೆಂಗಳೂರಿನಲ್ಲಿ ಮತ್ತೊಂದು ಬ್ಲೇಡ್ ಕಂಪನಿಯ ಬೃಹತ್ ವಂಚನೆ ಬೆಳಕಿಗೆ ಬಂದಿದೆ..ಹಲಾಲ್ ಹೆಸರಲ್ಲಿ ಹೂಡಿಕೆ ಮಾಡಿದ ಬಂಡವಾಳಕ್ಕೆ ಲಾಭಾಂಶ ನೀಡುತ್ತೇವೆ ಎಂದು ಅಜ್ಮೇರಾ ಕಂಪನಿ ಜನರನ್ನು ನಂಭಿಸಿದೆ.2017 ನವೆಂವರ್ ನಲ್ಲಿ ಪ್ರಾರಂಭವಾದ ಕಂಪನಿ ಶುರುವಾದ ನಾಲ್ಕು ತಿಂಗಳಲ್ಲೆ ಜನರಿಗೆ ನಾಮಹಾಕಲು ಶುರು ಮಾಡಿದೆ.ಬಾಗಲಕೋಟಯಿಂದ ಬೆಂಗಳೂರು ವರಗೂ 7 ರಿಂದ 8 ಸಾವಿರ ಜನ ಸಾವಿರಕ್ಕು ಹೆಚ್ಚು ಕೋಟಿ ಹಣವನ್ನು ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ.. ಪ್ರತಿಯೊಬ್ಬರಿಗೂ ಒಂದು ತಿಂಗಳ ಲಾಭಾಂಶ ನೀಡಿದ ಕಂಪನಿ ನಂತರ ತೋಪು ಕಂಪನಿ ಎಂಬುದು ಜನರಿಗೆ ಗೊತ್ತಾಗಿದೆ..ಕೂಡಲೇ ಮೋಸ ಹೋದವರು ಪೊಲೀಸ್ ಠಾಣೆ ಮೆಟ್ಟಿಲೇರಿನೂರಾರು ವಂಚನೆ ಪ್ರಕರಣ ದಾಖಲಿಸಿದ್ದಾರೆ

8.ವಿಶ್ವ ರಸ್ತೆ ಸಂಚಾರ ಸಂತ್ರಸ್ತರ ನೆನಪಿನದಿನ ಅಂಗವಾಗಿ ಬೆಂಗಳೂರಿನಲ್ಲಿ ವಾಕಥಾನ್ ನಡೆಯಿತು..ಬೆಂಗಳೂರಿನ ಮಲ್ಲೇಶ್ವರಂ ನಲ್ಲಿಂದು ನಡೆದ ಸುರಕ್ಷಿತ ರಸ್ತೆಗಳ ಸಂದೇಶ ಸಾರುವ ವಾಕಥಾನ್ ನಲ್ಲಿ ಶಾಲಾ ವಿದ್ಯಾರ್ಥಿಗಳು ಮತ್ತು ಆರೋಗ್ಯ ಪರಿಣಿತರು ಭಾಗಿವಹಿಸಿದ್ದರು.

9.ಬಿಬಿಎಂಪಿ ಅಡಮಾನವಿಟ್ಟ ಕಟ್ಟಡಗಳನ್ನು ಮತ್ತೆ ಮರಳಿ ತನ್ನ ತೆಕ್ಕೆ ತೆಗೆದುಕೊಳ್ಳುತ್ತಿದ್ದಂತೆ ಅಡಮಾನ ವಿಚಾರದಲ್ಲೂ ರಾಜಕೀಯ ಜಗಳ ಬುಗಿಲೇದ್ದಿದೆ. ನಿನ್ನೆ ಬಿಬಿಎಂಪಿ ಅಡವಿಟ್ಟ 2 ಕಟ್ಟಡಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು, ಈ ವೇಳೆ ಡಿಸಿಎಂ ಪರಮೇಶ್ವರ್ ಬಿಜೆಪಿ ಅಡಳಿತದಲ್ಲಿ ಅಡವಿಟ್ಟ ಕಟ್ಟಡಗಳನ್ನು ನಾವು ಋಣಮುಕ್ತ ಮಾಡಿದ್ದೇವೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದರು.

10.ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಕಾಡು ಪ್ರದೇಶಕ್ಕೆ ಹೊಂದುಕೊಂಡಿರುವ ಭೂತನಹಳ್ಳಿ ಬಳಿ ಇರುವ ಜಾಗವನ್ನು, ಜಯನಗರ ದ ಕಾರ್ಪೊರೇಟರ್ ನಾಗರತ್ನರವರ ಗಂಡ ಸಿಕೆ ರಾಮಮೂರ್ತಿ ಎಂಬುವವರು ಅರಣ್ಯ ಪ್ರದೇಶಕ್ಕೆ ಸೇರಿದ ೪ ಎಕ್ರೋ ೧೦ ಗುಂಟೆ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ .

11.ಬಡವರ ಹೊಟ್ಟೆ ತುಂಬಿಸುವ ಇಂದಿರಾ ಕ್ಯಾಂಟೀನ್ ಕಾಮಗಾರಿ ಮುಗಿದು ತಿಂಗಳುಗಳೆ ಕಳೆದರು ಇಲ್ಲಿನ ಶಾಸಕರು ನೆಲಮಂಗಲದ ಡಾ.ಶ್ರೀನಿವಾಸಮೂರ್ತಿ ಹಾಗೂ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವರ ನಡುವಿನ ಮುಸುಕಿನ ಗುದ್ದಾಟದಿಂದ ಚಾಲನೆ ಸಿಕ್ಕಿಲ್ಲ. ಈ ಹಿಂದೆ ದಿನಾಂಕ ನಿಗದಿಯಾಗಿಯೂ ಕ್ಯಾಂಟೀನ್ಗೆ ಉದ್ಘಾಟನೆ ಭಾಗ್ಯ ಸಿಕ್ಕಿರಿಲಿಲ್ಲ. ಹೀಗಾಗಿ ಎಚ್ಚೆತ್ತ ಇಲ್ಲಿನ ಪ್ರಜ್ಙಾವಂತ ಸಾರ್ವಜನಿಕರು ಹಾಗೂ ಕನ್ನಡ ಪರ ಸಂಘಟನೆಯವರು ಉಚಿತವಾಗಿ ತಿಂಡಿ ಹಂಚಿ ಆಕ್ರೋಶ ವ್ಯಕ್ತಪಡಿಸಿ ಕೂಡಲೇ ಉದ್ಘಾಟನೆ ಮಾಡುವಂತೆ ಆಗ್ರಹಿಸಿದ್ದರು.

12.ಸೂಪರ್ ಸ್ಟಾರ್ ರಜಿನಿಕಾಂತ್, ಅಕ್ಷಯ್ ಕುಮಾರ್ ಅಭಿನಯದ 2.O ಸಿನಿಮಾ ರಿಲೀಸ್​ಗೆ ಕ್ಷಣಗಣನೆ ಶುರುವಾಗಿದೆ.. ಈ ಸೈನ್ಸ್ ಫಿಕ್ಷನ್ ಸಿನಿಮಾದಲ್ಲಿ ಖಿಲಾಡಿ ಅಕ್ಷಯ್ ಕುಮಾರ್ ನೆಗೆಟಿವ್ ಶೇಡ್ ರೋಲ್​ನಲ್ಲಿ ಆರ್ಭಟಿಸೋಕೆ ಬರ್ತಿದ್ದಾರೆ

13.ಪತ್ರಕರ್ತ ,ನಿರ್ದೇಶಕ , ಚಂದ್ರಚೂಡ ಚಕ್ರವರ್ತಿ ನೇರ್ತತ್ವದ ಪೀಪಲ್ ಫಾರ್ ಪೀಪಲ್ ತಂಡದ ಶ್ರಮ ಕಾಳಜಿಗೆ ಮೆಚ್ಚಿದ ನಿರ್ಮಾಪಕ -ಶಾಸಕ ಮುನಿರತ್ನ ತುಂಬಿದ ಸಭೆಯಲಿ ಕೊಡಗಿನ ಜನರಿಗಾಗಿ ತಮ್ಮ ಅದ್ಧೂರಿ ವೆಚ್ಛದ ದರ್ಶನ್ ಮತ್ತು ಮಲ್ಟಿಸ್ಟಾರರ್ ಸಿನಿಮಾ ಕುರುಕ್ಷೇತ್ರ ಸಿನಿಮಾವನ್ನು ಬಿಡುಗಡೆಗೂ ಒಂದು ದಿನ ಮುಂಚೆಯೇ ಬೆನಿಫಿಟ್ ಶೋ ನೀಡಿ ಅದರ ಸಂಪೂರ್ಣ ಹಣವನ್ನು ಪೀಪಲ್ ಫಾರ್ ಪೀಪಲ್ ಸಂಸ್ಥೆ ಮೂಲಕ ಕೊಡಗಿನ ಜನರಿಗಾಗಿ ನೀಡುವುದಾಗಿ ಘೋಷಿಸಿದ್ದಾರೆ.

14.ದೀಪಿಕಾ ರಣವೀರ್ ಪಡ್ಡೆ ಹುಡುಗ ಹುಡುಗಿಯರ ಮನಸ್ಸಿಗೆ ಧೋಖ ಮಾಡಿ ಮದುವೆಯ ಬಂಧನಕ್ಕೆ ಒಳಗಾಗಿದ್ದಾರೆ.ಇಟಲಿಯ ಐಶಾರಾಮಿ ರೆಸಾರ್ಟ್ ​​​ನಲ್ಲಿ ಆಪ್ತರ ಸಮ್ಮುಖದಲ್ಲಿ ತಮ್ಮಿಷ್ಟದಂತೆ ಸಪ್ತಪದಿ ತುಳಿದಿರೋ ಕ್ಯೂಟ್​ ಕಪಲ್ಸ್​ ಇವರು. ಈ ಅದ್ದೂರಿ ಮದುವೆಯಲ್ಲಿ ಊಟದ ಮೆನು ಎಂಡ್ ಕ್ಯಾಟರಿಂಗ್ ವ್ಯವಸ್ಥೆ ನೋಡಿಕೊಂಡವರು ನಮ್ಮ ಕರುನಾಡಿನವರಾದ ಎಂ ಗಣೇಶ್ ನಾಯಕ್ ಅನ್ನೋದು ವಿಶೇಷವಾಗಿದೆ.

15.ಮೀಟೂ ಅಭಿಯಾನವನ್ನು ಕೆಲ ಹೆಣ್ಣು ಮಕ್ಕಳು ಕೆಟ್ಟದಾಗಿ ಬಳಸಿಕೊಳ್ತಿದ್ದಾರೆ. ಗಂಡಸರ ಮೇಲಿನ ದ್ವೇಷದಿಂದ ಅವರಿಗೆ ಅವಮಾನ ಮಾಡಲು ಅಥವಾ ಹಣ ಪಡೆದು ಸೆಟ್ಲ್ ಆಗೋಕೆ ಇದನ್ನು ಬಳಸಿಕೊಳ್ತಿದ್ದಾರೆ ಎಂದು ನಿರ್ದೇಶಕಿ ರೂಪ ಅಯ್ಯರ್ ಹೇಳಿದ್ದಾರೆ.

16. ರಾಜ್ಯದ ಪ್ರಾಥಮಿಕ ಮತ್ತು ಫ್ರೌಡ ಶಿಕ್ಷಣ ಇಲಾಖೆಗೆ ಪ್ರತ್ಯೇಕವಾಗಿ ಆಲ್ಬಂ ಒಂದನ್ನು ಲೋಕಾರ್ಪಣೆ ಮಾಡಲಾಯ್ತು. ಇನ್ನು ಈ ರೀತಿ ಇಲಾಖೆ ಒಂದಕ್ಕೆ ಪ್ರತ್ಯೇಕ ಆಲ್ಬಂ ಬಿಡುಗಡೆ ಮಾಡಿರುವ ಕೀರ್ತಿ ಪ್ರಾಥಮಿಕ ಶಿಕ್ಷಣ ಇಲಾಖೆಗೆ ಸಲ್ಲುತ್ತಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಮತ್ತು ಖ್ಯಾತ ಕ್ರಿಕೇಟಿಗ ಅನಿಲ್ ಕುಂಬ್ಳೆ ಆಲ್ಬಂ ಬಿಡುಗಡೆ ಮಾಡಿದರು.

17.ಬಿಬಿಎಂಪಿಯ ಪುರಾತನ ಕಟ್ಟಡಗಳನ್ನ ಅಡಮಾನವಿಟ್ಟ ವಿಚಾರ ಕಾಂಗ್ರೆಸ್ ಬಿಜೆಪಿ ನಡುವೆ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಬಿಜೆಪಿ ಬಿಬಿಎಂಪಿಯನ್ನು ದಿವಾಳಿ ಮಾಡಿ ಆಸ್ತಿಗಳನ್ನ ಅಡವಿಟ್ಟಿತ್ತು ಎಂದು ಕಾಂಗ್ರೆಸ್ ಆರೋಪ ಮಾಡಿದೆ, ಇತ್ತ ಬಿಜೆಪಿ ಸುಳ್ಳು ಪ್ರಚಾರ ಬಿಟ್ಟುಶ್ವೇತ ಪತ್ರ ಹೊರಡಿಸುವಂತೆ ಆಗ್ರಹಿಸಿದೆ.

18.ಜನವರಿಯಲ್ಲಿ 4,5 ಮತ್ತು 6ರಂದು ಧಾರವಾಡದಲ್ಲಿ ನಡೆಯಲಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಎಡಪಂಥದತ್ತ ವಾಲುತ್ತಿದೆಯೇ ಎಂಬ ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ. ಈ ಹಿಂದೆ ದೇಶದ್ರೋಹ ಕಾಯ್ದೆ ಐಪಿಸಿ 124ಎ ದೇಶದಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಈಗ ಕಸಾಪ ಧಾರವಾಡ ಸಮ್ಮೇಳನದಲ್ಲಿ ಸುಮಾರು 20ಕ್ಕೂ ಹೆಚ್ಚು ಗೋಷ್ಠಿಗಳನ್ನ ಹಮ್ಮಿಕೊಂಡ್ಡಿದೆ. ಆದರಲ್ಲಿ ದೇಶದ್ರೋಹ ಕಾಯ್ದೆ ತಿದ್ದುಪಡಿ ಕುರಿತ್ತು ವಿಚಾರ ಗೋಷ್ಠಿ ಏರ್ಪಿಡಿಸಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

19.ಕರ್ನಾಟಕ ಲೋಕಸೇವಾ ಆಯೋಗದಿಂದ ನಡೆಯುತ್ತಿರುವ ನೇರ ನೇಮಕದಲ್ಲಿ ಪಾಲಿಸುತ್ತಿರುವ ಮೀಸಲಾತಿ ನಿಯಮ ಆತಂಕಕಾರಿಯಾಗಿದ್ದು, ಇದು ಭಾರತದ ಸಂವಿಧಾನ ಕಲ್ಪಿಸಿರುವ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ವಿರುದ್ಧವಾಗಿದೆ ಅಂತ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿರುವ ಅವರು, ಕೂಡಲೇ ಮಧ್ಯ ಪ್ರವೇಶಿಸಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ, ಅಲ್ಪಸಂಖ್ಯಾತರಿಗೆ ಕೆಪಿಎಸ್ಸಿಯಿಂದ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕೆಂದು ಒತ್ತಾಯಿಸಿದ್ದಾರೆ.

20.ಸಚಿವ ಸಂಪುಟ ವಿಸ್ತರಣೆಗೆ ಮತ್ತೆ ಶುಭ ಮುಹೂರ್ತ ಶುರುವಾಗಿದೆ.. ಬಾಕಿ ಉಳಿದಿರುವ ಆರು ಸ್ಥಾನಗಳನ್ನ ಭರ್ತಿ ಮಾಡೋಕೆ ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ. ಹೀಗಾಗಿಯೇ ರಾಜ್ಯಕ್ಕೆ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಆಗಮಿಸಿದ್ದು, ರಾಜ್ಯ ನಾಯಕರ ಜೊತೆ ಚರ್ಚೆ ನಡೆದರು.

21.ಉಪಚುನಾವಣೆಯ ಬಳಿಕ ಮತ್ತೆ ಸಂಪುಟ ವಿಸ್ತರಣೆ ಗರಿಗೆದರಿದೆ. ಕಾಂಗ್ರೆಸ್ ನ ಆರು ಹಾಗೂ ಜೆಡಿಎಸ್ ನ ಎರಡು ಸೇರಿ ಎಂಟು ಸಚಿವ ಸ್ಥಾನಗಳನ್ನ ತುಂಬೋಕೆ ಎರಡೂ ಪಕ್ಷಗಳ ನಾಯಕರು ಚಿಂತನೆ ನಡೆಸಿದ್ದಾರೆ.ಎರಡೂ ಪಕ್ಷಗಳಲ್ಲೂ ೨೦ ಕ್ಕೂ ಹೆಚ್ಚು ಆಕಾಂಕ್ಷಿಗಳು ಸಂಪುಟ ಸೇರೋಕೆ ತುದಿಗಾಲಲ್ಲಿ ನಿಂತಿದ್ದಾರೆ..ಅದರಲು ಕಾಂಗ್ರೆಸ್ ಪಕ್ಷದ ಆರು ಸ್ಥಾನಗಳಿಗಾಗಿ ಡಜನ್ ಗೂ ಹೆಚ್ಚು ಶಾಸಕರು ನಾಮುಂದು ತಾ ಮುಂದು ಅಂತ ಪೈಪೋಟಿಗಿಳಿದಿದ್ದಾರೆ.

22.ಬಸವಣ್ಣನವರ ಕರ್ಮಭೂಮಿ ಕಲ್ಯಾಣ ನಗರಿ ಕಳೆದ 10 ವರ್ಷಗಳಿಂದ ರಸ್ತೆಗಳೆಲ್ಲವೂ ಹದಗೆಟ್ಟಿದೆ. ಎಲ್ಲಂದರಲ್ಲಿ ಗುಂಡಿಗಳು ಬಿದ್ದು ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ನಗರಸಭೆ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸರು ಗಮನ ಹರಿಸ್ತಿಲ್ಲ ಅಂತಾ ಸ್ಥಳೀಯರು ದೂರಿದ್ದಾರೆ.

23.ಹೈದ್ರಾಬಾದ್ ಕರ್ನಾಟಕ, ತೆಲಂಗಾಣ, ಆಂಧ್ರದ ಹಲವು ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರ ಜಲಾಶಯ ಈ ಬಾರಿ ತುಂಬಿ ಹರಿಯುತ್ತಿದೆ. ಇದ್ರಿಂದಾಗಿ 12 ಲಕ್ಷ ಎಕರೆ ಪ್ರದೇಶದ ರೈತರು ಎರಡನೇ ಬೆಳೆಗೆ ಡ್ಯಾಂ ನೀರು ಸಿಕ್ಕೇ ಸಿಗುತ್ತೆ ಅಂತ ಮಹಾದಾಸೆಯಲ್ಲಿದ್ರು. ಆದ್ರೆ, ಜಲಾಶಯದಲ್ಲಿ ಇದೀಗ 61.5 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಹಾಗಾಗಿ ಬೇಸಿಗೆ ಬೆಳೆಗೆ ನೀರು ಬಿಡದಿರಲು ಟಿಬಿ ಬೋರ್ಡ್ ಮುಂದಾಗುತ್ತಿದೆ. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಿಕೆಶಿ ರೈತರತ್ತ ಗಮನ ಹರಿಸಲಿ ಅನ್ನೋದು ರೈತರ ಆಗ್ರಹವಾಗಿದೆ.

24.ಧಾರವಾಡದಲ್ಲಿ ನಡೆಯಲಿರೋ 84 ನೇ ಕನ್ನಡ ಸಾಹಿತ್ಯ ಸಮ್ಮೇಳನ ವಿವಾದದ ಕೇಂದ್ರ ಬಿಂದುವಾಗುತ್ತಲೇ ಸಾಗುತ್ತಿದೆ. ಇದುವರೆಗೂ ಸಮ್ಮೇಳನದ ಸ್ಥಳದ ನಿಗದಿ ವಿಚಾರವಾಗಿ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಸಾಹಿತ್ಯ ಸಮ್ಮೇಳನದ ಮತ್ತೊಂದು ವಿವಾದಕ್ಕೆ ಸಿಲುಕಿಕೊಂಡಿದೆ.

25.ಕೋಲಾರದಲ್ಲಿ ಪಿಎಸ್​ಐ ಒಬ್ಬ ಥೇಟ್​ ಗಬ್ಬರ್ ಸ್ಟೈಲ್​​ನಲ್ಲಿ ಪೊಲೀಸ್​ ವಿಚಾರಣೆ ನಡೆಸಿದ್ದಾನೆ. ಕೋಲಾರ ಜಿಲ್ಲೆಯ ಬಂಗಾರಪೇಟೆಯ ಬೇತಮಂಗಲ PSI ಹೊನ್ನೇಗೌಡ ಆರೋಪಿಗಳಿಗೆ ಪವನ್​ ಸ್ಟೈಲ್​​ನಲ್ಲೇ ಡ್ಯಾನ್ಸ್ ಮಾಡಿಕೊಂಡು ವಿಚಾರಣೆ ನಡೆಸಿದ್ದಾನೆ. ಅಷ್ಟೇ ಅಲ್ಲದೆ ಠಾಣೆಯಲ್ಲೇ ಆರೋಪಿಗಳಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕಾಲಲ್ಲೇ ಒದ್ದು ದರ್ಪ ತೋರಿದ್ದಾರೆ.

26.ಕೊಪ್ಪಳ ಜಿಲ್ಲೆಯಲ್ಲಿ ಸರ್ಕಾರಿ ಅಧಿಕಾರಿಗಳು ಜನಪ್ರತಿನಿಧಿಗಳ ಮಾತು ಕೇಳಿದರೆ ಮಾತ್ರ ಅವರು ನೆಮ್ಮದಿಯಾಗಿರಬೋದು. ಇಲ್ಲ ಅಂದರೆ ಅವರಿಗೆ ಎತ್ತಂಗಡಿ ಭಾಗ್ಯ ಕಟ್ಟಿಟ್ಟ ಬುತ್ತಿ. ಇದರಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ವಿಶ್ವನಾಥ್​ ರೆಡ್ಡಿ ಕೈವಾಡ ಇದೆ ಎನ್ನಲಾಗ್ತಿದೆ. ಇವರ ಮಾತಿಗೆ ಮಣಿದು ಎರಡೇ ತಿಂಗಳಲ್ಲಿ ಮೂವರು ಅಧಿಕಾರಿಗಳನ್ನ ಬದಲಾವಣೆ ಮಾಡಲಾಗಿದೆ.

27.ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಪಟ್ಟಕ್ಕಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ತೆರೆಮರೆಯಲ್ಲಿ ಸಾಕಷ್ಟು ಕಸರತ್ತನ್ನ ನಡೆಸಿದ್ವು. ಇದೀಗ ಮಾಜಿ ಸಿಎಂ ಸಿದ್ದರಾಮಯ್ಯರ ತಂತ್ರಗಾರಿಕೆ ಮೇಲುಗೈ ಸಾಧಿಸಿದೆ. ಮೇಯರ್​ ಉಪಮೇಯರ್​ ಚುನಾವಣೆಯಲ್ಲಿ ನೂತನ ಮೇಯರ್ ಆಗಿ ಕಾಂಗ್ರೆಸ್​​ನ ಪುಷ್ಪಲತಾ ಜಗನ್ನಾಥ್ ಆಯ್ಕೆಯಾಗಿದ್ದಾರೆ. ಉಪಮೇಯರ್​ ಆಗಿ ಜೆಡಿಎಸ್​ನ ಶಫಿ ಅಹಮದ್ ಆಯ್ಕೆಯಾಗಿದ್ದಾರೆ.

28.ಅರಣ್ಯ ಇಲಾಖೆ ಕಚೇರಿ ಮುಂದೆ ಶವವಿಟ್ಟು ಪ್ರತಿಭಟನೆ ಮಾಡುತ್ತಿರುವ ರೈತರು. ಪಕ್ಷಾತೀತವಾಗಿ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಜನಪ್ರತಿನಿಧಿಗಳು ಈ ದೃಶ್ಯ ಕಂಡುಬಂದದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಅರಣ್ಯಾಧಿಕಾರಿಗಳ ಕಛೇರಿಯಲ್ಲಿ.

29.ಈರುಳ್ಳಿ ದರ ಕುಸಿತ ಹಿನ್ನೆಲೆಯಲ್ಲಿ ದಿಢೀರ್ ಪ್ರತಿಭಟನೆಯನ್ನು ರೈತರು ನಡೆಸಿದರು. ಬಾಗಲಕೋಟೆ ಎಪಿಎಂಸಿ ಕ್ರಾಸ್ ನಲ್ಲಿ ಈರುಳ್ಳಿ ಬೆಳೆಗಾರರಿಂದ ಪ್ರತಿಭಟನೆ ನಡೆಸಿದ್ದು ಪ್ರತಿಭಟನೆ ವೇಳೆ ಟೈಯರ್ ಗೆ ಬೆಂಕಿ ಹಚ್ಚಿ,ರೈತರ ಆಕ್ರೋಶ ವ್ಯಕ್ತಪಡಿಸಿದರು.

30.ಪರಮೇಶ್ವರ್‌ ಸಿಎಂ ಆಸೆಯ ಬಗ್ಗೆ ದಾವಣಗೆರೆಯಲ್ಲಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಸಿಎಂ ಹುದ್ದೆ ಯಾರಿಗೂ ಶಾಶ್ವತವಲ್ಲ, ಯಾರು ಬೇಕಾದರೂ ಬರಬಹುದು ಹೀಗಾಗಿ ಪರಮೇಶ್ವರ್ ಗೆ ಸಿಎಂ ಆಗುವ ಅರ್ಹತೆಯಿದೆ ಅಂತ ಹೇಳಿದ್ದಾರೆ.

31.ಬೆಳಗಾವಿ ಜಿಲ್ಲೆಯ ಬರ ಪೀಡಿತ ಪ್ರದೇಶಗಳಿಗೆ ಕೇಂದ್ರದ ಬರ ಅಧ್ಯಯನದ ಅಧಿಕಾರಿ ಡಾ. ಮಹೇಶ ನೇತೃತ್ವದಲ್ಲಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.ಬೆಳಗಾವಿ ಜಿಲ್ಲೆಯ ಸವದತ್ತಿ ಮತ್ತು ರಾಮದುರ್ಗ ತಾಲೂಕಿನ ಬರ ಪೀಡಿತ ಪ್ರದೇಶಗಳಿಗೆ ಭೇಟಿ, ರೈತರು ಮತ್ತು ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿತು. ಅದರಲ್ಲೂ ಸವದತ್ತಿ ತಾಲೂಕಿನ ಮುನ್ನೋಳ್ಳಿ ವ್ಯಾಪ್ತಿಯ ಬಸಿಡೋಣಿ, ಹೂಲಿಕಟ್ಟಿ ಗ್ರಾಮದಲ್ಲಿ ಸೂರ್ಯಕಾಂತಿ, ಹತ್ತಿ, ಮೆಕ್ಕೆಜೋಳ ಬೆಳಗಳ ಹಾನಿಯನ್ನು ಕೇಂದ್ರ ಬರ ಅಧ್ಯಯನ ತಂಡ ಪರಿಶೀಲನೆ ನಡೆಸಿದರು.

32.ಸದಾ ಗುಂಡಿನಿಂದಲೇ ಸದ್ದು ಮಾಡುತ್ತಿದ್ದ ಭೀಮಾ ತೀರದಲ್ಲಿ ಇದೀಗ ಶಾಂತಿಯ ಮಂತ್ರ ಜಪಿಸಲಾಗುತ್ತಿದೆ. ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ದೇವಣಗಾಂವ ಗ್ರಾಮದಲ್ಲಿ ಸದ್ಗುರು ಗುರುಲಿಂಗೇಶ್ವರ ಪುಣ್ಯಾರಾಧನೆ ಹಾಗೂ ಶತಮಾನೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.

33.ಗ್ರಾಮದಲ್ಲಿರುವ ಮದ್ಯದಂಗಡಿಯನ್ನು ತೆರವುಗೊಳಿಸುವಂತೆ ಗ್ರಾಮದ ಮಹಿಳೆಯರೆಲ್ಲಾ ಸೇರಿ ಮದ್ಯದಂಗಡಿಗೆ ದಾಳಿ ಮಾಡಿ ಮಾರುತಿದ್ದ ವ್ಯಕ್ತಿಯ ಮೇಲೆ ಹಲ್ಲೆ ಮಾಡಲು ಮುಂದಾದ ಘಟನೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನ ಬೊಮ್ಮಲಾಪುರದಲ್ಲಿ ನಡೆದಿದೆ.

34.ಆಂಧ್ರ ಮೂಲದ ಆತ ಗಾರೆ ಕೆಲಸದ ಮೇಸ್ತ್ರಿ, ಕೋಟೆನಾಡು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ನಗರಸಭೆ ಮತ್ತು ಬಸ್ ನಿಲ್ದಾಣ ಕಾಮಗಾರಿಗೆ ಅಂತ ಆಂಧ್ರದಿಂದಲೇ ಮತ್ತಿಬ್ಬರನ್ನ ಕರೆದುಕೊಂಡು ಬಂದಿದ್ದ, ಆದ್ರೆ ನಿನ್ನೆ ತಡರಾತ್ರಿ ಭೀಕರವಾಗಿ ಹತ್ಯೆಯಾಗಿದ್ದಾನೆ.

35.ದಾವಣಗೆರೆ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಬೀಕರ ಬರಗಾಲಕ್ಕೆ ತುತ್ತಾಗುತ್ತಾ ಬಂದಿದೆ.ಈ ಬಾರೀಯೂ ದಾವಣಗೆರೆ ಅದಕ್ಕೆ ಹೊರತಾಗಿಲ್ಲಾ. ಆದರೇ ಸರ್ಕಾರ ಈ ಬಾರೀ ಜಿಲ್ಲೆಯ ನಾಲ್ಕು ತಾಲ್ಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಣೆ ಮಾಡಿದೆ.

36.ಲಾರಿ ಮತ್ತು ಖಾಸಗಿ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ ಮುಂಬೈ ಮೂಲದ ಆರು ಜನ ಸಾವನ್ನಪ್ಪಿದ ಧಾರುಣ ಘಟನೆ ಅಣ್ಣಿಗೇರಿ ತಾಲೂಕಿನ ಕೋಳಿವಾಡ ಕ್ರಾಸ್ ಬಳಿ ನಡೆದಿದೆ. ಖಾಸಗಿ ಬಸ್‌ನಲ್ಲಿದ್ದ ಮುಂಬೈ ಮೂಲದ ಐವರು ಸಾವನ್ನಪ್ಪಿ 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ರವಾನೆ ಮಾಡಲಾಗಿದೆ.

37.ಕಲಬುರಗಿ ಸೇರಿದಂತೆ ರಾಜ್ಯದಲ್ಲಿನ ಹೊಸ ತಾಲೂಕುಗಳ ರೈತರಿಗೆ ಸರ್ಕಾರ ಬರೆ ಎಳೆದಿದೆ ಅಂತ ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕಲಬುರಗಿಯಲ್ಲಿ ಮಾತನಾಡಿದ ಜೇವರ್ಗಿ ರೈತ ಮುಖಂಡ ಕೇದಾರಲಿಂಗಯ್ಯ ಹಿರೇಮಠ ಸರ್ಕಾರ ರಾಜ್ಯದಲ್ಲಿನ ನೂರು ತಾಲೂಕುಗಳನ್ನ ಬರ ಪೀಡಿತ ತಾಲೂಕು ಅಂತ ಘೋಷಣೆ ಮಾಡಿದೆ.ಆದರೆ ಬರ ಪಟ್ಟಿಯಲ್ಲಿ ಹೊಸ ತಾಲೂಕುಗಳನ್ನ ಕೈ ಬಿಟ್ಟಿದೆ.ಕಲಬುರಗಿ ಜಿಲ್ಲೆಯಲ್ಲಿನ ಶಹಬಾದ್ ಯಡ್ರಾಮಿ ಕಾಳಗಿ ಕಮಲಾಪುರ ಸೇರಿದಂತೆ ರಾಜ್ಯ 43 ತಾಲೂಕುಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವಂತಾಗಿದೆ ಎಂದರು.

38.ಟೂರಿಸ್ಟ್ ಬಸ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಹಂಪಿಗೆ ಹೊರಟ್ಟಿದ್ದ ಆರು ಜನ ಪ್ರವಾಸಿಗರು ಸ್ಥಳದಲ್ಲಿ ರ್ದುಮರಣಕಿಡಾದ ಘಟನೆ ಧಾರವಾಡ ಜಿಲ್ಲೆ ಅಣ್ಣಿಗೇರಿ ತಾಲೂಕಿನ ಭದ್ರಾಪುರ ಬಳಿ ಇಂದು ಬೆಳಗ್ಗೆ ನಡೆದಿದೆ. ಅಪಘಾತದಲ್ಲಿ 10 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದು ಗಾಯಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನನ್ನು ವಿಶ್ವನಾಥ ಮಾತ್ರೆ (76), ದಿನಕರ ಮಾತ್ರೆ (74), ರಮೇಶ ಜಯಮಾಲ (70), ಸುಮೇದ ಜಮಖಂಡಿ (65), ಲಾಹೂ ಕೆಲೋಸ್ಕರ (65) ಸುಚಿತ್ರಾ ರಾಹೂಲ್ (60) ಎಂದು ಗುರುತಿಸಲಾಗಿದೆ.

39.ಹಾಸನದ ಬಿಎಂ ರಸ್ತೆಯ ಅಂಚಿನಲ್ಲಿ ನಿಯಮ ಬಾಹಿರವಾಗಿ ಕಟ್ಟಡ ತೆರವು ವಿಚಾರದಲ್ಲಿ ಕೊನೆಗೂ ನಗರಸಭೆ ಕಠಿಣ ಹೆಜ್ಜೆ ಇಟ್ಟಿದೆ, ಅಕ್ರಮ ನಿರ್ಮಾಣಗಳನ್ನು ತೆರವು ಗೊಳಿಸುವ ಸಂಬಂಧ ಎರಡು ಮೂರು ದಿನಗಳಲ್ಲಿ ನಗರಸಭೆ ಡೆಮಾಲಿಶ್ ಆದೇಶ ಮಾಡಲ್ಲಿದ್ದು, ಆ ನಂತರ ತೆರವು ಕಾರ್ಯಾಚರಣೆ ಆರಂಭಿಸಲು ನಗರಸಭೆ ಚಿಂತಿಸಿದೆ.ಇನ್ನೂ ಒಂದು ವಾರದಲ್ಲಿ ಆಕ್ರಮ ಕಟ್ಟಡಗಳ ನೆಲ ಸಮಕ್ಕೆ ಮೂಹರ್ತ ಫಿಕ್ಸ್ ಆಗಿದ್ದು, ಒತ್ತುವರಿದಾರರಿಗೆ ನಡುಕ ಆರಂಭವಾಗಿದೆ.

40.ಕರ್ನಾಟಕದ ಮೀನಿನ ಮೇಲೆ ಆರು ತಿಂಗಳ ಕಾಲ ನಿರ್ಭಂದ ಹೇರಿರುವ ಗೋವಾ ಸರ್ಕಾರದ ಕ್ರಮವನ್ನ ಖಂಡಿಸಿ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿಂದು ನೂರಕ್ಕೂ ಅಧಿಕ ಮೀನುಗಾರರು ಬೃಹತ್ ಪ್ರತಿಭಟನೆ ನಡೆಸಿದ್ರು. ತಾಲ್ಲೂಕಿನ ಗೋವಾ ಗಡಿ ಮಾಜಾಳಿಯಲ್ಲಿ ಮೀನುಗಾರರ ವಿವಿಧ ಸಂಘಟನೆಗಳು ಒಟ್ಟಾಗಿ ಪ್ರತಿಭಟನೆಗೆ ಮುಂದಾಗಿದ್ದು ಗೋವಾದಿಂದ ಆಗಮಿಸುವ ಮೀನು ಸಾಗಾಟ ವಾಹನಗಳನ್ನ ತಡೆದು ಆಕ್ರೋಶ ವ್ಯಕ್ತಪಡಿಸಿದರು.

41.ಕೊಡಗು ಹೇಳಿ ಕೇಳಿ ಕೃಷಿ ಪ್ರಾದಾನ ಜಿಲ್ಲೆ. ಅದರಲ್ಲಿ ಭತ್ತದ ಕೃಷಿಯು ಒಂದು ಆದರೆ ಕ್ಷೀಣಿಸುತ್ತಿರುವ ಭತ್ತದ ಕೃಷಿ ಮಾಡಲು ಹತ್ತಾರು ಸಮಸ್ಯೆಗಳು. ಇದಕ್ಕೆ ಉದಾಹರಣೆ ಎಂಬಂತೆ ಅದೊಂದು ಗ್ರಾಮದಲ್ಲಿ ನೂರಾರು ಎಕರೆ ಗದ್ದೆಯನ್ನ ಪಾಳು ಬಿಡಲಾಗಿದೆ. ಈ ನಡುವೆಯೂ ಹೊಟ್ಟೆಗೆ ಗಿಟ್ಲಿಲ್ಲ ಅಂದ್ರೂ ಪರವಾಗಿಲ್ಲ ಕೊಡಗಿನ ಸಾಂಪ್ರದಾಯಿಕ ಹುತ್ತರಿ ಹಬ್ಬದ ಶಾಸ್ತ್ರಾಕಾದ್ರೂ ಇರಲಿ ಅಂತಾ ಕೆಲ ಗದ್ದೆಗಳಲ್ಲಿ ಭತ್ತವನ್ನ ಬೆಳೆಯಲಾಗಿದೆ. ಸದ್ಯ ಫಸಲಿಗೆ ಬಂದಿರೋ ಭತ್ತದ ಪೈರನ್ನ ಉಳಿಸಿಕೊಳ್ಳಲು ರೈತರು ಹಗಲು ರಾತ್ರಿ ಕಷ್ಟ ಪಡುತ್ತಿದ್ದಾರೆ.

42.ಅಕ್ರಮ ಮರಳುಗಾರಿಕೆ ವೇಳೆ ದಾಳಿ ನಡೆಸಿ ಪೊಲೀಸರು ವಶಕ್ಕೆ ಪಡೆದ ಲಾರಿಗಳನ್ನು ಅದರ ಮಾಲಕರಿಗೆ ವಾಪಾಸ್ ಕೊಡಿಸುವ ಸಂಬಂಧ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿರುವುದಾಗಿ ದ‌.ಕ ಜಿಲ್ಲಾ ಉಸ್ತುವಾರಿ ಸಚಿವ ಯು‌.ಟಿ.ಖಾದರ್ ಮಾಹಿತಿ ನೀಡಿದ್ದಾರೆ.

43.1200 ಕೋಟಿ ವೆಚ್ಚದಲ್ಲಿ ಮಂಡ್ಯದ ಕೆ.ಆರ್.ಎಸ್ ಜಲಾಶಯದ ಮಂಭಾಗದಲ್ಲಿರುವ ಬೃಂದಾವನ ಗಾರ್ಡನ್ ಬಳಿ ಡಿಸ್ನಿಲ್ಯಾಂಡ್ ಮಾದರಿಯ ಉದ್ಯಾನವನ ಹಾಗೂ, ಡ್ಯಾಂ ಮುಂಭಾಗದಲ್ಲಿ 120 ಅಡಿಯ ಕಾವೇರಿ ಮಾತೆಯ ಪ್ರತಿಮೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಹೊಸ ಚಿಂತನೆ ನಡೆಸಿದೆ. ರಾಜ್ಯದ ಜೀವನದಿಯಾಗಿರುವ ಕಾವೇರಿಯನ್ನ ಎಲ್ಲರು ನೋಡಬೇಕು, ಆ ಮೂಲಕ ರಾಜ್ಯದ ಶ್ರೀಮಂತ ಸಂಪ್ರದಾಯ ದೇಶಕ್ಕೆ ತಿಳಿಯಬೇಕು, ಈ ಯೋಜನೆ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಿ ಪ್ರವಾಸೋಧ್ಯಮವು ಅಭಿವೃದ್ದಿಯಾಗಬೇಕು ಅನ್ನೋದು ಸರ್ಕಾರ ಚಿಂತನೆಯಾಗಿದೆ. ಆದ್ರೆ ಈ ಯೋಜನೆ ಆರಂಭಿಸಿದ್ರೆ ಕೆ.ಆರ್.ಎಸ್. ಜಲಾಶಯಕ್ಕೆ ಅಪಾಯಕಾರಿ ಅನ್ನೋದು ನುರಿತ ತಜ್ಞ ಇಂಜಿನಿಯರ್ಗಳ ಅಭಿಪ್ರಾಯವಾಗಿದೆ.

44.ಹೆರಿಗೆಗೆಂದೇ ಹರಿಹರಕ್ಕೆ ತೆರಳುತಿದ್ದ ಗೃಹಣಿಗೆ ರೈಲಿನಲ್ಲೆ ಹೆರಿಗೆ ನೋವು ಕಾಣಿಸಿಕೊಂಡು ಚಲಿಸುತ್ತಿದ್ದ ರೈಲನ್ನು ಅರ್ದತಾಸು ನಿಲ್ಲಿಸಿ ಹೆರಿಗೆ ಮಾಡಿಸುವ ಮೂಲಕ ರೈಲ್ವೆ ಅಧಿಕಾರಗಳು ಮಾನವೀಯತೆ ಮೆರೆದಿರುವ ಘಟನೆ ಹಾಸನ ಜಿಲ್ಲೆಯ ಅರಸಿಕೆರೆ ಬಳಿ ನಡೆದಿದೆ. ಮೈಸೂರು ನಿಂದ ಧಾರವಾಡಕ್ಕೆ ತೆರಳುವ ರೈಲಿನಲ್ಲಿ ಈ ಘಟನೆ ನಡೆದಿದೆ.

45.ಶಿವಮೊಗ್ಗ ಜಿಲ್ಲೆಯಲ್ಲಿ ಬಗರ್ ಹುಕುಂ ಜಮೀನು ಮಾಡಿಕೊಂಡು ಸಾಗುವಳಿ ಮಾಡುತ್ತಿದ್ದ ರೈತರನ್ನ ಒಕ್ಕಲೆಬ್ಬಿಸುತ್ತಿರುವ ಅರಣ್ಯ ಅಧಿಕಾರಿಗಳು ನಿರ್ಧಾಕ್ಷಿಣ್ಯ ಕ್ರಮಕ್ಕೆ ಒರ್ವ ರೈತನ ಜೀವ ಬಲಿಯಾಗಿದೆ, 30 ವರ್ಷಗಳಿಂದ ಜಮೀನನ್ನು ನಂಬಿ ಜೀವನ ಸಾಗಿಸುತ್ತಿದ್ದ ಕುಟುಂಬಗಳನ್ನ ಒಕ್ಕಲೆಬ್ಬಿಸುತ್ತಿರುವ ಅರಣ್ಯ ಅಧಿಕಾರಿಗಳ ದೂಂಡಾ ವರ್ತನೆಗೆ ಎಲ್ಲೆಡೆಯಿಂದ ವ್ಯಾಪಕ ಖಂಡನೆ ವ್ಯಕ್ತವಾಗಿತ್ತಿದ್ದು ಪಕ್ಷಾತೀತವಾಗಿ ಜನಪ್ರತಿನಿಧಿಗಳು ಅರಣ್ಯ ಇಲಾಖೆಯವರ ವಿರುದ್ಧ ಪ್ರತಿಭಟನೆ ನಡೆಸಿದರು.

46.ಪತ್ನಿಯ ಶೀಲ ಶಂಕಿಸಿ ಪತಿಯೇ ಪತ್ನಿಯನ್ನ ಕೊಲೆಗೈದು ಪೊಲೀಸರಿಗೆ ಶರಣಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಗಂಡನ ಕಿರುಕುಳದಿಂದ ಬೇಸತ್ತು ಕೊಲೆಯಾದ ಮಹಿಳೆ ಶಿವಮೊಗ್ಗದಲ್ಲೆ ಮನೆ ಮಾಡಿಕೊಂಡು ವಾಸ ಮಾಡುತ್ತಿದ್ದರು ಬೆಂಬಿಡದೆ, ಮನೆಗೆ ಬರುತ್ತಿದ್ದ ಗಂಡ ತಡರಾತ್ರಿ ಕುಡಿದು ಪತ್ನಿಯ ತಲೆ ಮೇಲೆ ಸಿಲೆಂಡರ್ ಎತ್ತಿಹಾಕಿ ಕೊಲೆ ಮಾಡಿದ್ದಾನೆ.

47.ಶಬರಿಮಲೆಯಲ್ಲಿ ಒಂದೊಂದು ಹಂತವಾಗಿ ಆಚರಣೆಗಳನ್ನು ಮುರಿಯಲಾಗುತ್ತಿದೆ. ಈ ಮೂಲಕ ಕೋಟ್ಯಾಂತರ ಭಕ್ತರ ಮನಸ್ಸಿಗೆ ನೋವುಂಟುಮಾಡಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ಗಿರೀಶ್ ಹೇಳಿದ್ದಾರೆ. ಕೇರಳ ಸರಕಾರ ಅಯ್ಯಪ್ಪ ಭಕ್ತರಿಗೆ ನಿರಂತರ ತೊಂದರೆ ನೀಡುತ್ತಿದೆ. ಇದುವರೆಗೆ ಪೋಲೀಸರು ಶೂ ಧರಿಸಿ ದೇಗುಲದ ಆವರಣ ಪ್ರವೇಶಿಸಿಲ್ಲ. ಈಗ ಹದಿನೆಂಟು ಮೆಟ್ಟಿಲ ಬುಡದವರೆಗೆ ಶೂ ಧರಿಸುವಂತೆ ಆದೇಶ ಹೊರಡಿಸಿದೆ.

48.ಮೂರು ರಾಜ್ಯಗಳ ಜೀವನಾಡಿಯಾದ ತುಂಗಭದ್ರ ಜಲಾಶಯ ಈ ವರುಷ ತುಂಬಿ ಹರಿಯುತ್ತಿದೆ. ಈ ಬಾರಿ ಎರಡು ಬೆಳೆ ಬೆಳೆಯಬಹುದೆಂದು ರೈತರು ಆಶಾಭಾವನೆಯಲ್ಲಿದ್ದರು. ಆದರೆ ಈ ಬಾರಿ ಬೇಸಿಗೆ ಬೆಳೆಗೆ ನೀರು ಸಿಗೋದು ಡೌಟು ಹಾಗಿದೆ.

49.ಆಂಬಿಡೆಂಟ್ ಕೋಟಿ ಕೋಟಿ ವಂಚನೆ ಪ್ರಕರಣವನ್ನು ಬ್ರಿಜೇಶ್ ರೆಡ್ಡಿಗೆ ನಿರೀಕ್ಷಣಾ ಜಾಮೀನು ಮಂಜೂರು .ಬ್ರಿಜೇಶ್ ರೆಡ್ಡಿ, ಡೀಲ್ ಪ್ರಕರಣದ ಆರೋಪಿ.61ನೇ ಸಿಸಿಎಚ್ ನ್ಯಾ.ವಿಧ್ಯಾದರ ಶಿರಹಟ್ಡಿ ರಿಂದ ಆದೇಶ.50 ಸಾವಿರ ವೈಯಕ್ತಿಕ ಬಾಂಡ್, ತನಿಖೆಗೆ ಸಹಕರಿಸಬೇಕು, ಸಾಕ್ಷಿ ನಾಶ ಪಡೆಸದಂತೆ ಷರತ್ತು ವಿಧಿಸಿ ನಿರೀಕ್ಷಣಾ ಜಾಮೀನನ್ನು ಕೋರ್ಟ್ ಮಂಜೂರು ಮಾಡಿದೆ.

50.ನಾಗಠಾಣ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಅವರ ಜನಸ್ಪಂದನಾ ಕಾರ್ಯಕ್ರಮದಲ್ಲಿ ನಡೆದ ಮನ ಕಲಕುವ ಘಟನೆ ನಡೆದಿದೆ.ವೃದ್ಥನೊಬ್ಬ ಕಣ್ಣೀರಿಟ್ಟಿದ್ದಾನೆ ಈ ವೃದ್ಥನಿಗೆ ಮಾತು ಬಾರದ ಮೂಕ ವೃದ್ಧನ ರೋಧನೆಗೆ ಸ್ಪಂದಿಸಿದ ಶಾಸಕ ದೇವಾನಂದ ಚವ್ಹಾಣ ಪ್ಯಾಕೆಟ್ ನಿಂದ 500 ರೂಪಾಯಿ ತೆಗೆದುಕೊಟ್ಟು ವೃದ್ಧನನ್ನು ತನ್ನ ಎದೆಗೆ ತಬ್ಬಿಕೊಂಡಿದ್ದಾರೆ.

Next Story

RELATED STORIES