ಮತ್ತೆ ಒಂದಾಯ್ತು ಅಪ್ಪು-ಯೋಗಿ ಪವರ್ಫುಲ್ ಜೋಡಿ

ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಮತ್ತು ಲೂಸ್ಮಾದ ಯೋಗಿ ಕಾಂಬಿನೇಷನ್ ಸಿನಿಮಾ ಅಂದ್ರೆ ಸಿನಿಪ್ರಿಯರು ಮಸ್ತ್ ಎಂಜಾಯ್ ಮಾಡ್ತಾರೆ. ಈ ಹಿಂದಿನ ಹುಡುಗರು ಮತ್ತು ಯಾರೇ ಕೂಗಾಡಲಿ ಚಿತ್ರದಲ್ಲಿ ಅಪ್ಪು ಮತ್ತು ಯೋಗಿ ಜೋಡಿಯಾಗಿ ಪ್ರೇಕ್ಷಕರನ್ನ ಸಖತ್ ಎಂಟರ್ಟೈನ್ ಮಾಡಿದ್ರು.ಇದೀಗ ಲಾಂಗ್ ಗ್ಯಾಪ್ನ ನಂತರ ಈ ಜೋಡಿ ಮತ್ತೆ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.
ಅಪ್ಪು ಮತ್ತು ಯೋಗಿ ಒಟ್ಟಾಗಿ ಕಾಣಿಸಿಕೊಂಡಿದ್ದೇನೋ ನಿಜ. ಆದರೆ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳೋ ಮೂಲಕ ಅಲ್ಲದಿದ್ರೂ,ಯೋಗಿಯ ಹೊಸ ಚಿತ್ರ ಲಂಬೋದರನಿಗೆ ಬೆನ್ನೆಲುವಾಗಿ ನಿಂತಿದ್ದಾರೆ. ನಿನ್ನೆಯಷ್ಟೇ ಯೋಗಿಯ ಕಂಬ್ಯಾಕ್ ಚಿತ್ರ ಲಂಬೋದರ ಸಿನಿಮಾ ಕಲರ್ಫುಲ್ ಲಿರಿಕಲ್ ಹಾಡೊಂದನ್ನ ಪವರ್ ಸ್ಟಾರ್ ರಿಲೀಸ್ ಮಾಡಿದ್ದಾರೆ.
ಇನ್ನು ಲಂಬೋದರ ಚಿತ್ರದ ಮೊದಲ ಹಾಡು ನಿನ್ನೆ ರಿಲೀಸ್ ಆಗಿದ್ದು, ಲಂಬೋದರ ಲೂಸಾದ ಅಂತ ಈ ಹಾಡು ಶುರುವಾಗುತ್ತೆ.ಕಂಪ್ಲೀಟ್ ಫನ್ ಎಂಟರ್ಟೈನರ್ ಸಿನಿಮಾ ಇದಾಗಿದ್ದು, ಸಿನಿಮಾ ಬಗ್ಗೆ ನಟ ಯೋಗಿ ಕೂಡ ಸಖತ್ ಎಕ್ಸೈಟ್ ಆಗಿದ್ದಾರೆ.
ಇನ್ನು ಲಂಬೋದರ ಚಿತ್ರಕ್ಕೆ ಕಾರ್ತಿಕ್ ಮ್ಯೂಸಿಕ್ ಮಾಡಿದ್ದು, ಚಿತ್ರದ ಅಷ್ಟೂ ಹಾಡುಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದ್ಯಂತೆ. ಮುಂದಿನ ದಿನಗಳಲ್ಲಿ ಲಂಬೋದರನ ಒಂದೊಂದೇ ಎಕ್ಸ್ಕ್ಲೂಸಿವ್ ಹಾಡುಗಳು ಕೇಳೋಕ್ಕೆ ಸಿಗಲಿವೆ. ಚಿತ್ರಕ್ಕೆ ಕೃಷ್ಣರಾಜ್ ಆ್ಯಕ್ಷನ್ ಕಟ್ ಹೇಳಿದ್ದು, ಈಗಾಗ್ಲೇ ಟ್ರೇಲರ್ ಕೂಡ ಸಾಕಷ್ಟು ವೀವ್ಸ್ ಪಡೆದುಕೊಂಡಿದೆ.
ಲಂಬೋದರ, ಬಸವನ ಗುಡಿ ಬೆಂಗಳೂರು ಅನ್ನೋ ಟ್ಯಾಗ್ಲೈನ್ ಮೂಲಕ ಲೂಸ್ ಮಾದ ಯೋಗಿ ಬಹಳ ದಿನಗಳ ನಂತರ ಮತ್ತೊಮ್ಮೆ ಪ್ರೇಕ್ಷಕರನ್ನ ಎಂಟರ್ಟೈನ್ ಮಾಡೋಕ್ಕೆ ಬರ್ತಿದ್ದಾರೆ. ಚಿತ್ರದ ಟ್ರೇಲರ್ ಮತ್ತು ಸಾಂಗ್ಸ್ ನೋಡ್ತಿದ್ರೆ ಸಿನಿಮಾ ಮೇಲೆ ಕುತೂಹಲ ಮೂಡಿಸುವಂತಿದ್ದು, ಯೋಗಿಗೆ, ಲಂಬೋದರ ಕಮ್ಬ್ಯಾಕ್ ಮೂವಿ ಆಗುತ್ತೆ ಅಂತಿದೆ ಗಾಂಧಿನಗರ.
ಅರ್ಚನಾಶರ್ಮಾ,ಎಂಟರ್ಟೈನ್ಮೆಂಟ್ ಬ್ಯುರೋ, ಟಿವಿ5