Top

ಮದುವೆ ಫೋಟೋ ರಿವೀಲ್ ಮಾಡಿದ 'ಬಾಜಿರಾವ್-ಮಸ್ತಾನಿ'

ಮದುವೆ ಫೋಟೋ ರಿವೀಲ್ ಮಾಡಿದ ಬಾಜಿರಾವ್-ಮಸ್ತಾನಿ
X

ಇಟಲಿಯ ಕೋಮೋ ಸರೋವರದಲ್ಲಿ ಬಾಲಿವುಡ್ ಹಾಟ್ ಕಪಲ್ ರಣ್ವೀರ್ ಸಿಂಗ್- ದೀಪಿಕಾ ಪಡುಕೋಣೆ ಕಲ್ಯಾಣೋತ್ಸವ ಜರುಗಿತು. ಮೊದಲನೆಯ ದಿನ ಕೊಂಕಣಿ ಸಂಪ್ರದಾಯದಂತೆ, ಎರಡನೇ ದಿನ ಸಿಂಧಿ ಸಂಪ್ರದಾಯದಂತೆ ವಿವಾಹ ನಡೆಯಿತು.

ನಿನ್ನೆ ತಾನೇ ದೀಪಿಕಾಳ ಸಹೋದರಿ ಸಾಮಾಜಿಕ ಜಾಲತಾಣದಲ್ಲಿ ಕೊಂಕಣಿ ಸಂಪ್ರದಾಯದ ಮದುವೆಯ ಒಂದು ಫೋಟೋವನ್ನ ರೀಲಿಸ್ ಮಾಡಿದ್ದರು. ಆದ್ರೆ ಅಭಿಮಾನಿಗಳು ಮಾತ್ರ ಇನ್ನೂ ಹೆಚ್ಚು ಫೋಟೋ ರಿಲೀಸ್ ಆಗಬಹುದೆಂದು ಕಾತುರರಾಗಿದ್ದರು. ಈ ಕಾತುರಕ್ಕೆ ಈಗ ಫುಲ್‌ಸ್ಟಾಪ್ ಬಿದ್ದಿದ್ದು, ಸಿಂಧಿ ಸಂಪ್ರದಾಯದಂತೆ ನಡೆದ ವಿವಾಹದ ಫೋಟೋ ಸದ್ಯ ವೈರಲ್ ಆಗಿದ್ದು, ಎಲ್ಲರ ಮೆಚ್ಚುಗೆ ಪಡೆದಿದೆ.

ಈ ಫೋಟೋದಲ್ಲಿ ರಣ್ವೀರ್ ಸಿಂಗ್ ಮತ್ತು ದೀಪಿಕಾ ಎರಡು ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ರಣ್ವೀರ್ ಬಿಳಿ ಶೇರ್ವಾನಿಯಲ್ಲಿ ದೀಪಿಕಾಗೆ ಉಡುಗೊರೆಯಾಗಿ ಹಾರ ನೀಡುತ್ತಿದ್ದರೆ, ದೀಪಿಕಾ ಕೆಂಪು- ಬಂಗಾರಬಣ್ಣ ಮಿಶ್ರಿತ ಸೀರೆಯಲ್ಲಿ, ಭರಪೂರ ಆಭರಣದೊಂದಿಗೆ ಮಿಂಚಿದ್ದಾರೆ.

ಇನ್ನೊಂದು ಫೋಟೋದಲ್ಲಿ ಸಿಂಧಿ ಸಂಪ್ರದಾಯದಂತೆ ರಣ್ವೀರ್ ಕೆಂಪು ಶೇರ್ವಾನಿ ತೊಟ್ಟು, ಕೆಂಪು ಪೇಟಾವನ್ನ ಸುತ್ತಿಕೊಂಡಿದ್ದು, ದೀಪಿಕಾ ಕೆಂಪು ಸೀರೆಯುಟ್ಟು ಆಭರಣ ಧರಿಸಿದ್ದಾರೆ. ಇವರಿಬ್ಬರ ಉಡುಪನ್ನ ಪ್ರಖ್ಯಾತ ಬಾಲಿವುಡ್ ವಸ್ತ್ರವಿನ್ಯಾಸಕಾರ ಸಭ್ಯಸಾಚಿ ಡಿಸೈನ್ ಮಾಡಿದ್ದಾರೆ.

ಇನ್ನು ಬಾಜಿರಾವ್-ಮಸ್ತಾನಿ ಜೋಡಿಗೆ ಬಾಲಿವುಡ್ ತಾರೆಯರಾದ ಹೃತಿಕ್ ರೋಷನ್, ಕರಣ್ ಜೋಹರ್, ಅನುಷ್ಕಾ ಶರ್ಮಾ, ಅರ್ಜುನ್ ಕಪೂರ್, ಪ್ರಿಯಾಂಕಾ ಛೋಪ್ರಾ, ಪರಿಣಿತಿ ಛೋಪ್ರಾ, ಆಲಿಯಾ ಭಟ್ ಸೇರಿ ಮುಂತಾದವರು ಶುಭಕೋರಿದ್ದಾರೆ.

Next Story

RELATED STORIES