Top

ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸಂಚು: ಪ್ರಕರಣ ರದ್ದು ಕೋರಿ ಹೈಕೋರ್ಟ್​ಗೆ ರವಿ ಬೆಳಗೆರೆ ಮೊರೆ

ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸಂಚು: ಪ್ರಕರಣ ರದ್ದು ಕೋರಿ ಹೈಕೋರ್ಟ್​ಗೆ ರವಿ ಬೆಳಗೆರೆ ಮೊರೆ
X

ಅಕ್ರಮವಾಗಿ ಶಸ್ತಾಸ್ತ್ರ ಹೊಂದಿದ ಆರೋಪ ಹಾಗೂ ಸಹೋದ್ಯೋಗಿ ಪತ್ರಕರ್ತನ ಹತ್ಯೆಗೆ ಸುಪಾರಿ ನೀಡಿದ ಆರೋಪದಡಿಯಲ್ಲಿ ಅಧೀನ ನ್ಯಾಯಾಲಯದಲ್ಲಿ ನಡೆಯುತ್ತೀರುವ ಮೊಕದ್ದಮೆ ರದ್ದು ಕೋರಿ ಹಿರಿಯ ಪತ್ರಕರ್ತ ರವಿ ಬೆಳಗೆರೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ‌.

ಸ್ನೇಹಿತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಪತ್ರಕರ್ತ ರವಿ ಬೆಳಗೆರೆ ಸುಪಾರಿ ನೀಡಿದ್ದಾರು ಎನ್ನುವ ಆರೋಪದ ಮೇಲೆ ಅವರನ್ನು ಪೊಲೀಸರು ಬಂಧಿಸಿ 14 ದಿನಗಳ ಕಾಲ ಸಾಕಷ್ಟು ವಿಚಾರಣೆ ನಡೆಸಲಾಗಿತ್ತು. ನಂತರ ಅನಾರೋಗ್ಯದ ಕಾರಣ ಕೋರ್ಟ್​ ಮಧ್ಯಂತರ ಶರತ್ತು ಬದ್ದ ಜಮೀನು ಮಂಜೂರು ಮಾಡಲಾಗಿತ್ತು.

ಗುರವಾರ ಅಧೀನ ನ್ಯಾಯಾಲಯ ನನ್ನ ವಿರುದ್ಧ ನಡೆಸುತ್ತಿರುವ ವಿಚಾರಣೆ ಕಾನೂನು ಬಾಹಿರವಾಗಿದೆ. ದೂರಿನ ವಸ್ತುಸಂಗತಿಗಳು ಅಸಮಂಜಸವಾಗಿವೆ ಮತ್ತು ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿದೆ. ಆದ್ದರಿಂದ ವಿಚಾರಣೆ ರದ್ದುಗೊಳಿಸಬೇಕು ಎಂದು ರವಿ ಬೆಳಗೆರೆ ಅರ್ಜಿಯಲ್ಲಿ ಹೈಕೋರ್ಟ್​ಗೆ ಮನವಿ ಮಾಡಿದ್ದಾರೆ.

Next Story

RELATED STORIES