Top

ಜನಾರ್ನದ ರೆಡ್ಡಿ ಹೇಳಿಕೆಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ: ಹೆಚ್​ಡಿಕೆ

ಜನಾರ್ನದ ರೆಡ್ಡಿ ಹೇಳಿಕೆಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ: ಹೆಚ್​ಡಿಕೆ
X

ಮಾಜಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿಕೆಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ಬೀದರ್​ನ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಜನಾರ್ದನ ರೆಡ್ಡಿ ಹೇಳಿಕೆಗೆ ತಿರುಗೇಟು ಕೊಟ್ಟರು ನಾವು ಸೇಡಿನ ರಾಜಕಾರಣ ಎಂದೂ ಮಾಡಿಲ್ಲ, ಈಗ ಸೇಡಿನ ರಾಜಕಾರಣ ಏಕೆ ಮಾಡಲಿ ಜನಾರ್ದನ ರೆಡ್ಡಿ ಏನೇ ಹೇಳಬಹುದು ಅವರ ಮಾತಿಗೆ ನಾನು ಉತ್ತರಕೊಡಲು ಸಿದ್ದನಿಲ್ಲ, 18 ಕೋಟಿ ರೂಪಾಯಿ ಮರಳಿ ಕೊಡುತ್ತೇವೆಂದು ಕೋರ್ಟ್ ಗೆ ಅಪಿಡೇವಿಟ್ ಕೊಟ್ಟಿದ್ದಾರೆ ಅವರು ಕಳ್ಳರು ಎಂದು ಗೊತ್ತಿದೆ ಯಾರು ತಪ್ಪುಮಾಡಿದರೂ ಅವರಿಗೆ ಶಿಕ್ಷೇ ತಪ್ಪಿದ್ದಲ್ಲ ಎಂದರು.

ಕಳ್ಳ ಕಳ್ಳತನ ಮಾಡಿ ಕಳ್ಳತನ ಮಾಡಿರುವ ದುಡ್ಡು ವಾಪಸ್ ಕೊಡ್ತೀನಿ ಅಂತಾ ಹೇಳಿದವರಿಗೆ ರಕ್ಷಣೆ ಕೊಡ್ತೀನಿ ಎನ್ನೋದು ಎಷ್ಟರ ಮಟ್ಟಿಗೆ ಸರಿ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಇದೇ ವೇಳೆ ಭೀಕರ ಬರದಿಂದ ರಾಜ್ಯದಲ್ಲಿ 1600 ಕೋಟಿ ರೂಪಾಯಿ ಹಾನಿಯಾಗಿದೆ ನಾಡಿದ್ದು ಕೇಂದ್ರ ತಂಡ ರಾಜ್ಯಕ್ಕೆ ಬರುತ್ತಿದೆ. ರೈತರ ಸಾಲಮನ್ನಾ ಬಗ್ಗೆ ರೈತರಿಗೆ ಆಂತಕ ಬೇಡಾ ರೈತರ ಎಲ್ಲಾ ಸಾಲಮನ್ನಾ ಮಾಡುತ್ತೇನೆ. ಬಂದ್ ಆಗಿರುವ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತೆ ಆರಂಭಿಸಲು 20 ಕೋಟಿ ಬಿಡುಗಡೆ ಮಾಡಿದ್ದೇನೆ ಎಂದು ಹೇಳಿದರು.

ಮುಂದಿನ ತಿಂಗಳಿಂದ ಬಡವರ ಬಂಧು ಯೋಜನೆ ಜಾರಿ ತರಲಾಗುತ್ತಾದೆ. ಬಡವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಈ ಯೋಜನೆ ಜಾರಿಗೆ ತರಲಾಗಿದೆ. ಬೀದರ್ ನಲ್ಲಿ ರಸ್ತೆ ಬದಿ ವ್ಯಾಪಾರಿಗಳು ಹೆಚ್ಚಿದ್ದಾರೆ ಮತ್ತು ನೀರಾವರಿ ಸೌಲ್ಯಭ ಕೊರತೆ ಬಗ್ಗೆ ತಿಳಿಸಿದ್ದಾರೆ. ನೀರಾವರಿ ಸೌಲಭ್ಯ ತರಲು ತ್ವರಿತಗತಿಯಲ್ಲಿ ಜಾರಿಗೆ ತರುತ್ತೇನೆ. ಕಾರಂಜ ಸಂತ್ರಸ್ತರ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

Next Story

RELATED STORIES