Top

ತೆಲಂಗಾಣ ಸಿಎಂ ಆಸ್ತಿ 20 ಕೋಟಿ... ಆದರೆ ಸ್ವಂತ ಕಾರಿಲ್ಲ!

ತೆಲಂಗಾಣ ಸಿಎಂ ಆಸ್ತಿ 20 ಕೋಟಿ... ಆದರೆ ಸ್ವಂತ ಕಾರಿಲ್ಲ!
X

ತೆಲಂಗಾಣ ಮುಖ್ಯಮಂತ್ರಿ ಹಾಗೂ ಟಿಆರ್​ಎಸ್​ ಅಧ್ಯಕ್ಷ ಕೆ.ಚಂದ್ರಶೇಖರ್ ಆಸ್ತಿ 20 ಕೋಟಿ ಆಗಿದ್ದರೂ ಸ್ವಂತ ಕಾರಿಲ್ಲ. ವೃತ್ತಿಯಲ್ಲಿ ಕೃಷಿಕ ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಆಸ್ತಿ ಘೋಷಣೆಯಲ್ಲಿ ಹೇಳಿಕೊಂಡಿದ್ದಾರೆ.

ತೆಲಂಗಾಣ ವಿಧಾನಸಭಾ ಗಾಜ್ವೆಲ್ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಚಂದ್ರಶೇಖರ್, ನಾಮಪತ್ರ ಸಲ್ಲಿಕೆ ವೇಳೆ ತಮ್ ಆಸ್ತಿಯ ವಿವರವನ್ನು ಘೋಷಿಸಿಕೊಂಡಿದ್ದಾರೆ. ವಿಶೇಷ ಅಂದರೆ 20.60 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದರೂ ತಮ್ಮ ಬಳಿ ಸ್ವಂತ ಕಾರಿಲ್ಲ. ವೃತ್ತಿಯಲ್ಲಿ ನಾನು ಸಾಮಾನ್ಯ ಕೃಷಿಕ ಎಂದು ಹೇಳಿಕೊಂಡಿದ್ದಾರೆ.

ಚಿರಾಸ್ತಿ ಮೊತ್ತ 10.40 ಕೋಟಿ ಆಗಿದ್ದರೆ ಪತ್ನಿ ಕೆ. ಶೋಭಾ ಹೆಸರಿನಲ್ಲಿ ಚಿರಾಸ್ತಿ ಮೊತ್ತ 94.5 ಲಕ್ಷ ರೂ. ಆಗಿದೆ. ಚಂದ್ರಶೇಖರ್ ಬಳಿ 6.40 ಕೋಟಿ ರೂ. ಮೌಲ್ಯದ 54 ಎಕರೆ ಕೃಷಿ ಭೂಮಿ ಸೇರಿದಂತೆ 12.20 ಕೋಟಿ ರೂ. ಸ್ಥಿರಾಸ್ತಿ ಇದೆ ಎಂದು ಹೇಳಿಕೊಂಡಿದ್ದಾರೆ.

2017-18ನೇ ಸಾಲಿನಲ್ಲಿ ಕೃಷಿಯಿಂದ 91.52 ಕೋಟಿ ರೂ. ಸೇರಿದಂತೆ 2.07 ಕೋಟಿ ರೂ. ಆದಾಯ ಹೊಂದಿರುವುದಾಗಿ ಆದಾಯ ಪ್ರಮಾಣ ಪತ್ರವನ್ನು ಚಂದ್ರಶೇಖರ್, ಆಯೋಗಕ್ಕೆ ನೀಡಿದ್ದಾರೆ.

Next Story

RELATED STORIES