Top

ಡಿಬಾಸ್ ದಚ್ಚು 'ರಾಬರ್ಟ್' EXCLUSIVE ಡಿಟೇಲ್ಸ್

ಡಿಬಾಸ್ ದಚ್ಚು ರಾಬರ್ಟ್ EXCLUSIVE ಡಿಟೇಲ್ಸ್
X

D53​, ದರ್ಶನ್ ಅಭಿನಯದ 53ನೇ ಸಿನಿಮಾ. ಹೆಬ್ಬುಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹಾಗೂ ಚೌಕ ಡೈರೆಕ್ಟರ್ ತರುಣ್ ಸುಧೀರ್ ಕಾಂಬಿನೇಷನ್​ನಲ್ಲಿ ತಯಾರಾಗಲಿರೋ ಸ್ಯಾಂಡಲ್​ವುಡ್​ನ ಮೋಸ್ಟ್ ಎಕ್ಸ್​ಪೆಕ್ಟೆಡ್ ಸಿನಿಮಾ. ವರಮಹಾಲಕ್ಷ್ಮೀ ಹಬ್ಬಕ್ಕೆ ಸ್ಕ್ರಿಪ್ಟ್ ಪೂಜೆ ಮೂಲಕ ಡಿ53ಗೆ ಚಾಲನೆ ಕೊಟ್ಟಿದ್ದ ಚಿತ್ರತಂಡ, ಇದೀಗ ಸಿನಿಮಾಗಾಗಿ ಸಕಲ ಸಿದ್ದತೆಗಳನ್ನ ಮಾಡಿಕೊಳ್ತಿದೆ.

ದಚ್ಚು ‘ರಾಬರ್ಟ್’​ ರೂಪ ದರ್ಶನಕ್ಕೆ ಸಜ್ಜಾಗ್ತಿದೆ ಅಖಾಡ..!!

SSS ಸೀಕ್ರೆಟ್ ಜೊತೆ ರಾಬರ್ಟ್​​ ಎಕ್ಸ್​ಕ್ಲೂಸಿವ್ ಡಿಟೈಲ್ಸ್

ಡಿ ಬಾಸ್ ದರ್ಶನ್​ರ ಈ ಬಹುಕೋಟಿ ವೆಚ್ಚದ ಸಿನಿಮಾಗೆ ರಾಬರ್ಟ್​ ಟೈಟಲ್ ಬಹುತೇಕ ಖಚಿತ. ಯಾಕಂದ್ರೆ ದಚ್ಚು ತಂದೆ ತೂಗುದೀಪ ಶ್ರೀನಿವಾಸ್ ನಟನೆಯ ಬಹುತೇಕ ಚಿತ್ರಗಳಲ್ಲಿ ರಾಬರ್ಟ್​ ಹೆಸ್ರನ್ನ ಇಟ್ಟುಕೊಂಡಿದ್ದರು. ಇನ್ನು ಕೇಳೋಕ್ಕೂ ಸಖತ್ ಮಾಸ್ ಆಗಿರೋದ್ರಿಂದ ದರ್ಶನ್​ಗೆ ಟೈಟಲ್ ಮೇಲೆ ಪಾಸಿಟೀವ್ ಒಪೀನಿಯನ್ ಇದೆ. ಹಾಗಾಗಿ ಡಿ53 ರಾಬರ್ಟ್​ ಆಗೋದ್ರಲ್ಲಿ ಡೌಟೇ ಇಲ್ಲ.

ಅಂದಹಾಗೆ ರಾಬರ್ಟ್​ ಸಿನಿಮಾದ ಪ್ರೀ ಪ್ರೊಡಕ್ಷನ್ ವರ್ಕ್​ ತುಂಬಾ ಭರದಿಂದ ಸಾಗ್ತಿದೆ. ಈ ಸಿನಿಮಾನ ತ್ರಿಬಲ್ ಎಸ್​ಗೆ ಅರ್ಪಿಸೋ ಮೂಲಕ ಹೊಸ ಟ್ರೆಂಡ್ ಸೆಟ್ ಮಾಡಲಿದೆ ಟೀಂ ರಾಬರ್ಟ್​. ತ್ರಿಬಲ್ ಎಸ್ ಅಂದ್ರೆ ದರ್ಶನ್ ತಂದೆ ಶ್ರೀನಿವಾಸ್ ತೂಗುದೀಪ, ಉಮಾಪತಿ ತಂದೆ ಶ್ರೀನಿವಾಸ್ ಹಾಗೂ ತರುಣ್ ತಂದೆ ಸುಧೀರ್. ತಂದೆ ಮೇಲಿನ ಸೆಂಟಿಮೆಂಟ್​ನಿಂದ ಅವ್ರಿಗೆ ಅರ್ಪಿಸುತ್ತಿದ್ದು, ಸಿನಿಮಾದಲ್ಲೂ ಅವ್ರ ಛಾಯೆ ಗ್ರಾಫಿಕ್ಸ್ ರೂಪದಲ್ಲಿರಲಿದೆ.

ಡಿಸೆಂಬರ್​ನಲ್ಲಿ ರಾಬರ್ಟ್​ ಎಕ್ಸ್​ಕ್ಲೂಸಿವ್ ಫೋಟೋಶೂಟ್..!

ಸಂಕ್ರಾಂತಿಗೆ ಮುಹೂರ್ತ ಜೊತೆ ಫಸ್ಟ್ ಲುಕ್ ಟೈಟಲ್ ಲಾಂಚ್

ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂದಿನ ವಾರ ಖತಾರ್​ಗೆ ತೆರಳಲಿದ್ದಾರೆ. ಯಜಮಾನ ಚಿತ್ರದ ಸಾಂಗ್ ಶೂಟಿಂಗ್ ನಿಮಿತ್ತ ಟೀಂ ಯಜಮಾನ ಖತಾರ್​ ಟೂರ್​ ಮುಗಿಸಲಿದೆ. ಎರಡು ಹಾಡುಗಳ ಚಿತ್ರೀಕರಣದ ನಂತ್ರ ಬೆಂಗಳೂರಿಗೆ ವಾಪಸ್ಸಾಗಲಿದೆ. ಅದಾದ ಬಳಿಕ ದಚ್ಚು ರಾಬರ್ಟ್​ ಫೋಟೋಶೂಟ್​ನಲ್ಲಿ ಭಾಗಿಯಾಗಲಿದ್ದಾರೆ.

ಮೂಲಗಳ ಪ್ರಕಾರ ಡಿಸೆಂಬರ್​ನಲ್ಲಿ ರಾಬರ್ಟ್​ ಮಾಸ್ ಫೋಟೋಶೂಟ್ ನಡೆಯಲಿದ್ದು, ಸಂಕ್ರಾಂತಿಗೆ ಸಿನಿಮಾ ಸಿಂಪಲ್ ಆಗಿ ಸೆಟ್ಟೇರಲಿದೆ. ಸಿನಿಮಾ ಮುಹೂರ್ತ ಕಾಣೋ ದಿನವೇ ರಾಬರ್ಟ್​ ಟೈಟಲ್ ಜೊತೆ ಫಸ್ಟ್ ಲುಕ್ ಕೂಡ ಲಾಂಚ್ ಮಾಡಲಿದೆ ಚಿತ್ರತಂಡ.

ಡಿ ಬಾಸ್ ದಚ್ಚು ಹೇಳಿದಂತೆ ಸಿನಿಮಾದ ಲಾಂಚ್ ಕಾರ್ಯಕ್ರಮ ತುಂಬಾ ಸಿಂಪಲ್ ಆಗಿರಲಿದೆ. ಮುಹೂರ್ತಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ವ್ಯರ್ಥ ಮಾಡೋ ಬದಲು, ಅದನ್ನೇ ಸಿನಿಮಾಗೆ ಹಾಕಿ ಮತ್ತಷ್ಟು ಕ್ವಾಲಿಟಿ ಸಿನಿಮಾನ ಕೊಡೋದು ಬೆಸ್ಟ್ ಅನ್ನೋ ಕಿವಿಮಾತನ್ನ ನಿರ್ಮಾಪಕರಿಗೆ ಹೇಳಿದ್ದಾರೆ ಡಿ ಬಾಸ್.

ಸ್ಯಾಂಡಲ್​ವುಡ್ ಭಾಯಿಜಾನ್ ಆಗಲಿರೋ ಡಿ ಬಾಸ್..!!

ಬಾಲಕಾರ್ಮಿಕ ಪದ್ದತಿ ವಿರುದ್ಧ ಚಾಲೆಂಜಿಂಗ್ ಸ್ಟಾರ್ ಸಮರ

ರೀಸೆಂಟ್ ಆಗಿ ರಿವೀಲ್ ಆದ ರಾಬರ್ಟ್​ ಸಿನಿಮಾದ ಸ್ಟೋರಿಲೈನ್ ಹೇಳೋ ಥೀಮ್​ ಪೋಸ್ಟರ್​ನಿಂದ ದಚ್ಚು ಸ್ಯಾಂಡಲ್​ವುಡ್ ಭಾಯಿಜಾನ್ ಆಗೋ ಸೂಚನೆ ಸಿಕ್ಕಿದೆ. ಮಗುವಿನ ಕೈಹಿಡಿಸಿರೋ ದಚ್ಚು, ‘ಈ ಕೈಗೆ ಶಬರಿ ಮುಂದೆ ಸೋಲೋದು ಗೊತ್ತು, ರಾವಣನ ಮುಂದೆ ಗೆಲ್ಲೋದು ಗೊತ್ತು’ ಅನ್ನೋ ಮಾಸ್ ಲೈನ್ಸ್ ಅಕ್ಷರಶಃ ಸಿನಿರಸಿಕರನ್ನ ಥ್ರಿಲ್ ಆಗಿಸಿದೆ.

ಇನ್ನು ಇದು ಸಲ್ಲು ಭಜರಂಗಿ ಭಾಯಿಜಾನ್ ರೀತಿಯ ಮಗುವಿನ ಜೊತೆಗಿನ ಭಾವುಕ ಕಥೆಯಾ ಅನ್ನೋ ಕುತೂಹಲ ಮತ್ತಷ್ಟು ಹೆಚ್ಚಿದೆ. ಅದಕ್ಕೆ ಪುಷ್ಠಿ ನೀಡುವಂತೆ, ದರ್ಶನ್ ಟ್ವೀಟ್ ಮಾಡೋ ಮೂಲಕ ಬಾಲಕಾರ್ಮಿಕ ಪದ್ದತಿ ನಿರ್ಮೂಲನೆಗೆ ಸಾಥ್ ಕೊಟ್ಟಿದ್ದಾರೆ. ಮಕ್ಕಳ ದಿನಾಚರಣೆ ಹಿನ್ನೆಲೆ ಟ್ವೀಟ್ ಮಾಡಿರೋ ದಚ್ಚು, ರಾಬರ್ಟ್​ ಮಕ್ಕಳ ಜೊತೆಗಿನ ಸಿನಿಮಾ ಆಗಿರಲಿದೆ ಅನ್ನೋ ಹಿಂಟ್ ಬಿಟ್ಟುಕೊಟ್ಟಿದ್ದಾರೆ.

ಇನ್ನು ಚಿತ್ರತಂಡ 5ರಿಂದ 7ವರ್ಷದ ಬಾಲನಟನಿಗಾಗಿ ತಲಾಷ್​ನಲ್ಲಿದೆ. ಆ ಪಾತ್ರ ಕನ್ನಡ ಚಿತ್ರರಂಗದ ಖ್ಯಾತ ಖಳನಟನ ಮಗ ಆಗಿರ್ತಾರಾ ಅನ್ನೋ ಮತ್ತೊಂದು ಸುದ್ದಿ ಜೋರಾಗಿ ಹರಿದಾಡ್ತಿದೆ. ಅಂದಹಾಗೆ ಖಳನಟರು ಮತ್ತವರ ಮಕ್ಕಳ ಕುರಿತು ದರ್ಶನ್​ರಿಗೆ ಬೇರೆಯದ್ದೇ ರೀತಿಯ ಗೌರವ- ಅಭಿಮಾನವಿದೆ. ಹಾಗಾಗಿ ರಾಬರ್ಟ್​ ಚಿತ್ರದ ವಿಲನ್ ಪಾತ್ರಧಾರಿಗೆ ಅವಾರ್ಡ್​ ಸಿಗಲೇಬೇಕು ಅನ್ನೋ ರೇಂಜ್​ಗೆ ಈ ಸಿನಿಮಾದ ಪಾತ್ರಗಳು ತಯಾರಾಗ್ತಿವೆ ಎನ್ನಲಾಗ್ತಿದೆ.

ಡಿ ಬಾಸ್ ಫ್ಯಾನ್ಸ್​ಗಷ್ಟೇ ಅಲ್ಲದೆ, ಇಡೀ ಸೌತ್ ಸಿನಿದುನಿಯಾ ಮೆಚ್ಚೋ ಅಂತಹ ಸ್ಟೋರಿ ಮಾಡ್ತಿರೋ ತರುಣ್ ಸುಧೀರ್ ಕನಸನ್ನ ಉಮಾಪತಿ ನನಸು ಮಾಡೋ ಧಾವಂತದಲ್ಲಿದ್ದಾರೆ. ಇನ್ನು ದರ್ಶನ್ ಕರಿಯರ್​ನ ಮಹೋನ್ನತ ಬೆಂಚ್​ ಮಾರ್ಕ್​ ಸಿನಿಮಾ ಇದಾಗಲಿದ್ದು, ಗಾಂಧಿನಗರದ ಚಿತ್ತ ರಾಬರ್ಟ್​ ಮೇಲೆ ನೆಟ್ಟಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್, ಟಿವಿ5

Next Story

RELATED STORIES