Top

ರೆಡ್ಡಿ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ: ಡಿ.ಕೆ. ಶಿವಕುಮಾರ್ ಟಾಂಗ್

ರೆಡ್ಡಿ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ: ಡಿ.ಕೆ. ಶಿವಕುಮಾರ್ ಟಾಂಗ್
X

ಮಾಜಿ ಶಾಸಕ ಜನಾರ್ದನ ರೆಡ್ಡಿ ದೊಡ್ಡ ಜನ ದೊಡ್ಡ ಮನುಷ್ಯರು ಅವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.

ಜನಾರ್ದನ ರೆಡ್ಡಿ ದ್ವೇಷ ರಾಜಕಾರಣ ಹೇಳಿಕೆ ವಿಚಾರವಾಗಿ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಾನು ಮುಖ್ಯಮಂತ್ರಿ ಅಲ್ಲ, ಹೋಂ ಮಿನಿಸ್ಟರೂ ಅಲ್ಲ ಚುನಾವಣೆಯಲ್ಲಿ ನಾನು ಅಣ್ಣ, ಅಕ್ಕ ಎಂದು ಹೇಳುತ್ತಾ ಇದ್ದೆ, ಶ್ರೀರಾಮುಲು ಅಣ್ಣ ನಾನು ಜೈಲಿಗೆ ಹೋಗ್ತೇನೆ ಎಂದು ತೀರ್ಪು ಕೊಟ್ಟಿದ್ದರು ಅವರು ಏನೇ ಕೊಟ್ಟರೂ ನಾನು ಸ್ವೀಕರಿಸುವೆ ಎಂದರು.

ನಂತರ ಕಾವೇರಿ ಪ್ರತಿಮೆ ನಿರ್ಮಾಣದ ಕುರಿತು ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಅದು ಕೇವಲ ಪ್ರತಿಮೆ ಅಲ್ಲ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಕೂಲ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ನಿರ್ಮಾಣ ಮಾಡುತ್ತೇವೆ. ಸುಂದರ ವಾತಾವರಣ, ನದಿ, ನಿಸರ್ಗ ಇದೆ. ಗುಂಡೂರಾಯರ ಕಾಲದಲ್ಲಿ ಕೆಆರ್​ಎಸ್ ಅಭಿವೃದ್ಧಿ ಆಗಿತ್ತು ಮ್ಯೂಸಿಕ್ ಫೌಂಟೇನ್, ಉತ್ತಮ ಪಾರ್ಕ್ ಮಾಡಿದ್ದರು. ಇದೀಗ ಕಾವೇರಿ ತಾಯಿ ಪ್ರತಿಮೆ ನಿರ್ಮಿಸಲಿದ್ದೇವೆ ಎಂದರು.

ರಾಜ್ಯದ ಇತಿಹಾಸ ಸಾರುವ ಪರಿಕಲ್ಪನೆ ಇರಲಿದೆ. ಗೋಲ್ ಗುಂಬಜ್, ಹಂಪಿ ಸೇರಿ ಇತರೆ ಎಲ್ಲ ಐತಿಹಾಸಿಕ ಪರಂಪರೆ ತಿಳಿಸಲು ಅನುಕೂಲ ಆಗುತ್ತದೆ. ಪ್ರತಿಮೆ ನಿರ್ಮಾಣದಿಂದ ಜಲಾಶಯ ನೋಡಬಹುದು ಪ್ರವಾಸಿಗರನ್ನು ಆಕರ್ಷಿಸಲು ಇದು ಸಹಕಾರಿಯಾಗುತ್ತದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

Next Story

RELATED STORIES