ಮಾದಕ ವಸ್ತು ಸಾಗಾಣೆಯ ಕಿಂಗ್ ಪಿನ್ ಬಂಧನ

ಮೂರು ಜನ ಕುಖ್ಯಾತ ಅಂತರಾಜ್ಯ ಮಾದಕವಸ್ತು ಸಾಗಾಣೆದಾರರನ್ನು ಬೆಂಗಳೂರು ಮಾದಕವಸ್ತು ನಿಗ್ರಹ ದಳ ಕಾರ್ಯಾಚರಣೆ ಮಾಡಿ ಬಂಧಿಸಲಾಗಿದೆ.
ತೆಲಂಗಾಣದಲ್ಲಿ ಚುನಾಚಣೆ ನಡೆಯುತ್ತೀರುವ ಹಿನ್ನಲೆಯಲ್ಲಿ ರೆಗ್ಯುಲರ್ ದಾರಿ ಬದಲಾವಣೆಯಲ್ಲಿ ದೇವನಹಳ್ಳಿ ಟೋಲ್ ತಪಾಸಣೆ ನಡೆಸಲಾಗುತ್ತೀದ್ದು, ಈ ವೇಳೆ ಗಂಜಾ ಕಳ್ಳರು ಸಿಕ್ಕಿಬಿದ್ದಿದ್ದಾರೆ.
ಆಂಧ್ರ, ತೆಲಂಗಾಣ, ಕರ್ನಾಟಕ. ಮಹಾರಾಷ್ಟ್ರ ಮತ್ತು ತಮಿಳುನಾಡುಗಳಿಗೆ ಇವರು ಗಾಂಜಾ ಸರಬರಾಜು ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಇನ್ನೂ ಬಂಧಿತರಿಂದ ಬೃಹತ್ ಪ್ರಮಾಣದ 223 ಕೆ.ಜಿ. ಗಾಂಜಾ ವಶಕ್ಕೆ ಪಡೆಯಲಾಗಿದ್ದು. ಮಾದಕ ವಸ್ತು ಸಾಗಾಣೆಯ ಕಿಂಗ್ ಪಿನ್ ಅನುಮುಲಪ್ರಸಾದ್, ಗುರು , ರಾಮಕೃಷ್ಣ, ರಾಜೇಶ್ ಬಂಧಿತ ಕಳ್ಳರು, 110 ಪ್ಯಾಕೇಟ್ ಗಳಲ್ಲಿ ತುಂಬಿ ಸಾಗಾಟಕ್ಕೆ ಪ್ರಯತ್ನಿಸಿದರು, ಆಂಧ್ರ ರಿಜಿಸ್ಟ್ರೇಷನ್ ನ ಸ್ವಿಫ್ಟ್ ಡಿಜೈರ್ ಕಾರ್ ಡಿಕ್ಕಿಯಲ್ಲಿ ತುಂಬಿ ಸಾಗಾಟ ಮಾಡಲಾಗುತ್ತಿತ್ತು.
ತೆಲಂಗಾಣದಲ್ಲಿ ಚುನಾಚಣೆ ಭದ್ರತೆ ಹೆಚ್ಚಳ ಹಿನ್ನಲೆ ತಪಾಸಣೆ ನಡೆಸಿದ ಪರಿಣಾಮ ಅಂತರಾಜ್ಯ ಗಾಂಜಾ ಸರಬರಾಜು ಮಾಡುವ ಬೃಹತ್ ಜಾಲ ಬೆಳಕಿಗೆ ಬಂದಿದೆ.