ಏರ್ ಇಂಡಿಯಾ ವಿಮಾನ ಸಿಬ್ಬಂದಿಗೆ 'ಉಗುಳಿದ' ಐರಿಶ್ ಮಹಿಳೆ..!

ಏರ್ ಇಂಡಿಯಾ ವಿಮಾನದಲ್ಲಿ ಐರಿಶ್ ಮಹಿಳೆಯೊಬ್ಬಳು ಮದ್ಯಪಾನಕ್ಕಾಗಿ , ವಿಮಾನ ಸಿಬ್ಬಂದಿಯೊಂದಿಗೆ ದುರ್ವರ್ತನೆ ತೋರಿದ ಘಟನೆ ನಡೆದಿದೆ.
ಮುಂಬೈನಿಂದ ಲಂಡನ್ಗೆ ಸಂಚರಿಸುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಹೆಚ್ಚಿಗೆ ಮದ್ಯಪಾನ ನೀಡಲು ನಿರಾಕರಿಸಿದ್ದಕ್ಕೆ ಜಗಳವಾಡಿದ ಐರಿಶ್ ಮಹಿಳೆ, ವಿಮಾನ ಸಿಬ್ಬಂದಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೇ, ಸಿಬ್ಬಂದಿಗೆ ಉಗುಳಿದ್ದಾಳೆ.
ವಿಮಾನದಲ್ಲಿ ಕಂಠಪೂರ್ತಿ ಕುಡಿದ ಈಕೆ, ಮತ್ತೆ ತನಗೆ ವೈನ್ ಬೇಕೆಂದು ಬೇಡಿಕೆ ಇಟ್ಟಿದ್ದಾಳೆ. ವಿಮಾನ ಸಿಬ್ಬಂದಿ ಈ ಬಗ್ಗೆ ಪೈಲೆಟ್ಗೆ ದೂರು ನೀಡಿದ್ದಲ್ಲದೇ, ಆಕೆಗೆ ಮದ್ಯ ನೀಡಬಾರದೆಂದು ಆಗ್ರಹಿಸಿದ್ದಾರೆ. ಇದಕ್ಕೆ ಆಕ್ರೋಶಗೊಂಡ ಮಹಿಳೆ ಜಗಳವಾಡಿದ್ದಾಳೆ.
ಅಲ್ಲದೇ ತಾನು ಬ್ಯುಸಿನೆಸ್ ಕ್ಲಾಸ್ನಲ್ಲಿ ಸಂಚರಿಸುತ್ತಿದ್ದು, ಬ್ಯುಸಿನೆಸ್ ಕ್ಲಾಸ್ ಪ್ರಯಾಣಿಕರನ್ನ ನೀವು ಈ ರೀತಿ ಸತ್ಕರಿಸುತ್ತೀರಾ..? ನಾನು ಅಂತರಾಷ್ಟ್ರೀಯ ಮಟ್ಟದ ಕ್ರಿಮಿನಲ್ ಲಾಯರ್, ನಾನು ಹೆದರಿದ್ದೇನೆಂದು ನೀವು ಭಾವಸಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾಳೆ.
ಇವಳ ದುರ್ವರ್ತನೆಯನ್ನ ವಿಮಾನದಲ್ಲಿ ಇನ್ನೊಬ್ಬ ಸಿಬ್ಬಂದಿ ಮೊಬೈಲ್ನಲ್ಲಿ ವೀಡಿಯೋ ಮಾಡಿದ್ದು, ಎಲ್ಲೆಡೆ ಈ ವೀಡಿಯೋ ವೈರಲ್ ಆಗಿದೆ. ಹಿಥ್ರೂನಲ್ಲಿ ವಿಮಾನ ಲ್ಯಾಂಡ್ ಆದಾಗ, ಪೊಲೀಸರು ಈಕೆಯನ್ನು ಬಂಧಿಸಿದ್ದಾರೆನ್ನಲಾಗಿದೆ.
Courtesy: WION NEWS