Top

ಲಕ್ಷ ಲಕ್ಷ ಸಾಲ ಪಡೆದು ಗೆಳೆಯನಿಗೇ ಮೋಸ ಮಾಡಿದ ಖ್ಯಾತ ನಟ..!

ಲಕ್ಷ ಲಕ್ಷ ಸಾಲ ಪಡೆದು ಗೆಳೆಯನಿಗೇ ಮೋಸ ಮಾಡಿದ ಖ್ಯಾತ ನಟ..!
X

ಖ್ಯಾತ ಸ್ಯಾಂಡಲ್‌ವುಡ್ ನಟನ ಮೇಲೆ ದುಡ್ಡು ನೀಡದೇ ಮೋಸ ಮಾಡಿದ ಆರೋಪ ಕೇಳಿಬಂದಿದ್ದು, ಲಕ್ಷಾಂತರ ರೂಪಾಯಿ ಪಡೆದು ಯಾಮಾರಿಸಿದ್ದಾರೆಂಬ ಆರೋಪ ಕೇಳಿಬಂದಿದೆ.

ಹಲವಾರು ಕನ್ನಡ ಚಿತ್ರದಲ್ಲಿ ಬಣ್ಣ ಹಚ್ಚಿರುವ ಹೆಸರಾಂತ ಕಲಾವಿದ ನಿನಾಸಂ ಅಶ್ವತ್ಥ್ ಲಕ್ಷಾಂತರ ರೂಪಾಯಿ ಸಾಲಪಡೆದು, ಫೋನ್‌ಗೂ ಸಿಗುತ್ತಿಲ್ಲವೆಂದು, ಮೋಸ ಹೋದವರು ಆರೋಪಿಸಿದ್ದಾರೆ.

ಗೆಳೆಯನಾದ ರಜತ್ ದ್ವಾರಕ್‌ ಬಳಿ 18 ಲಕ್ಷ ರೂಪಾಯಿ ಸಾಲ ಪಡೆದು ಯಾಮಾರಿಸಿದ್ದಾರೆಂದು ನಿನಾಸಂ ಅಶ್ವತ್ಥ್ ಮೇಲೆ ಆರೋಪಿಸಲಾಗಿದೆ. ಈ ಕಾರಣಕ್ಕೆ ರಜತ್ ಹಣ ವಾಪಸ್ ಪಡೆಯಲು Tv5 ಸಹಾಯ ಕೇಳಿದ್ದಾರೆ.

ರಜತ್‌ಗೆ ವಿಜಯ್ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಅಶ್ವತ್ಥ್ ಪರಿಚಯವಾಗಿದ್ದು, ಆಗಿನಿಂದ ಇಬ್ಬರು ಗೆಳೆಯರಾಗಿದ್ದರು. ಮಂಡ್ಯದ ಬಳಿ ಫಾರ್ಮ್ ಹೌಸ್ ಮಾಡಲು ಅಶ್ವತ್ಥ್, ರಜತ್ ಬಳಿ 18 ಲಕ್ಷ ಹಣ ಪಡೆದಿದ್ದು, ಫಾರ್ಮ್‌ ಹೌಸ್‌ ಒಡೆತನದಲ್ಲಿ ಪಾಲುದಾರಿಕೆ ಆಮಿಷ ಒಡ್ಡಿದ್ದರಂತೆ. ಆದರೆ ಈಗ ಪಾಲುದಾರಿಕೆಯೂ ನೀಡದೇ, ಹಣವೂ ನೀಡದೇ ಮೋಸ ಮಾಡಿದ್ದು, ಪೊಲೀಸ್ ಕಂಪ್ಲೆಂಟ್ ನೀಡಿದರೂ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಇನ್ನು ಅಶ್ವತ್ಥ ನೀಡಿರುವ ಚೆಕ್ ಬೌನ್ಸ್ ಆಗಿದ್ದು, ಚೆಕ್ ಬೌನ್ಸ್ ಕೇಸ್ ಬುಕ್ ಮಾಡಿದ್ರೂ ಕೂಡ ಕ್ಯಾರೆ ಎನ್ನುತ್ತಿಲ್ಲ. ಕೊಟ್ಟ 18 ಲಕ್ಷದಲ್ಲಿ 3 ಲಕ್ಷ ಮಾತ್ರ ಹಿಂದಿರುಗಿಸಿ ಯಾಮಾರಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ. ಅಲ್ಲದೇ ಕೋರ್ಟ್‌ಗೆ ಬರದೇ ಅಶ್ವತ್ಥ್, ಬೇಲ್ ಪಡೆದಿದ್ದಾರೆನ್ನಲಾಗಿದೆ.

ಈ ಕುರಿತು ರಜತ್ ದ್ವಾರಕ ಕಲಾವಿದರ ಸಂಘ ಮತ್ತು ಫಿಲ್ಮ್‌ಚೆಂಬರ್‌ ಮೆಟ್ಟಿಲೇರಿದ್ದು, ಫಿಲ್ಮ್‌ಚೇಂಬರ್‌ ನ್ಯಾಯ ದೊರಕಿಸಿಕೊಡೋ ಭರವಸೆ ನೀಡಿದೆ. ಸದ್ಯ ಅಶ್ವತ್ಥ್ ಕಲಾವಿದರ ಸಂಘ, ಫಿಲ್ಮ್‌ಚೆಂಬರ್‌ ಮಾತಿಗಾದ್ರೂ ಬೆಲೆ ಕೊಡ್ತಾರಾ ಕಾದು ನೋಡಬೇಕಿದೆ.

ಮುಂಗಾರುಮಳೆ, ಗಾಳಿಪಟ, ವಿಷ್ಣುವರ್ಧನ, ಕೋಲಾರ ಸಿನಿಮಾಗಳಲ್ಲಿ ಅಶ್ವತ್ಥ್ ನಟಿಸಿದ್ದಾರೆ. ಅಲ್ಲದೇ ರಿಲೀಸ್‌ಗೆ ರೆಡಿಯಾಗಿರುವ ಕೆಜಿಎಫ್ ಚಿತ್ರದಲ್ಲೂ ಪ್ರಮುಖ ಪಾತ್ರಧಾರಿಯಾಗಿ ಅಶ್ವತ್ಥ್ ನಟಿಸಿದ್ದಾರೆ.

Next Story

RELATED STORIES