Top

ನಿಮಿಷ 10, ವಾರ್ತೆ 50

ನಿಮಿಷ 10, ವಾರ್ತೆ 50
X

1.ದೇಶದಲ್ಲಿ ಮೀಟೂ ವಿವಾದಗಳು ಸದ್ದು ಮಾಡುತ್ತಿದ್ದು ಇದರ ನಡುವೆ ವೇದಿಕೆ ಮೇಲೆ ಬಹುಭಾಷಾ ನಟಿ ಕಾಜಲ್ ಅಗರ್‌ವಾಲ್‌ಗೆ ಛಾಯಾಗ್ರಾಹಕ ಛೋಟಾ ಕೆ ನಾಯ್ಡು ಬಲವಂತವಾಗಿ ಕಿಸ್ ಮಾಡಿ ವಿವಾದ ಸೃಷ್ಟಿಸಿದ್ದಾರೆ.

2.ಪಾಕಿಸ್ತಾನ ಸರ್ಕಾರದಿಂದ ಕಾಶ್ಮೀರದ ಕೇವಲ ನಾಲ್ಕೇ ನಾಲ್ಕು ಪ್ರಾಂತ್ಯಗಳನ್ನೂ ಸಂಭಾಳಿಸಲು ಸಾಧ್ಯವಿಲ್ಲ ಎಂದಿದ್ದ ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಹೇಳಿಕೆಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಬೆಂಬಲ ಸೂಚಿಸಿದ್ದಾರೆ.

3.ಕೌಟುಂಬಿಕ ಜೀವನದ ಖುಷಿ ಸವಿಯಬೇಕಾದ ಲಾಲೂ ಪ್ರಸಾದ್​ ಯಾದವ್​ ಹಿರಿಯ ಪುತ್ರ ತೇಜ್​ ಪ್ರತಾಪ್​ ಯಾದವ್​ ಪತ್ನಿಯಿಂದ ಹಾಗೂ ಕುಟುಂಬದಿಂದ ದೂರವಾಗಿ ಸನ್ಯಾಸಿಯಂತೆ ಊರೂರು ಅಲೆಯುತ್ತಿದ್ದಾರೆ.

4.ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ತೆರವು ವಿವಾದದ ಪ್ರಕರಣಗಲ್ಲಿ ಗಾಂಧಿ ಕುಟುಂಬಕ್ಕೆ ಭಾರೀ ಹಿನ್ನಡೆಯಾಗಿದೆ. ನ್ಯಾಷನಲ್ ಹೆರಾಲ್ಡ್ ಪತ್ರಿಕಾ ಕಚೇರಿಯ ಭೋಗ್ಯದ ಅವಧಿಯನ್ನು ಮುಕ್ತಾಯಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ.

5. ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿರುವ ರೆಡ್ಡಿ, ತಮ್ಮ ಪಾರಿಜಾತ ನಿವಾಸದಲ್ಲಿ ಆಪ್ತರಿಗೆ ಔತಣಕೂಟ ಏರ್ಪಡಿಸಿದರು. ಈ ವೇಳೆ ಮುಂದಿನ ಕಾನೂನು ಹೋರಾಟ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ತಮ್ಮ ಲಾಯರ್ ಜೊತೆ ಚರ್ಚೆ ನಡೆಸಿದರು.

6.ಶಬರಿಮಲೆ ಸ್ವಾಮಿಯೇ ಶರಣಂ ಅಯ್ಯಪ್ಪ ಎನ್ನುವ ಭಕ್ತಿ ತಾಣದಲ್ಲಿ ಇದೀಗ ಹಿಂಸಾಚಾರ, ಸಂಘರ್ಷ ತಲೆದೋರಿದೆ. ಇದೀಗ ನವೆಂಬರ್‌ 17 ರಿಂದ ಮತ್ತೆ ಹಿಂಸಾಚಾರ ಮರು ಕಳುಹಿಸುವ ಸಾಧ್ಯತೆ ದಟ್ಟವಾಗಿದೆ.

7.ಮುಂದಿನ ತಿಂಗಳು ನಡೆಯಲಿರುವ ತೆಲಂಗಾಣ ವಿಧಾನಸಭೆ ಚುನಾವಣೆಗೆ ಟಿಡಿಪಿ ಟಿಕೆಟ್​ಗಾಗಿ ಆಗ್ರಹಿಸಿ ದೀಪಕ್ ಜೂಬ್ಲಿ ಹಿಲ್ಸ್​ನ ಪಕ್ಷದ ಕಚೇರಿ ಮುಂದಿರುವ ವಿದ್ಯುತ್​ ಕಂಬ ಏರಿ, ಹೈಡ್ರಾಮಾ ನಡೆಸಿದ್ದಾರೆ.

8. ಮೈತ್ರಿ ಸರ್ಕಾರದ ನಾಡ ದೋರೆ ಗಡಿನಾಡು ಬೀದರ್ ಜಿಲ್ಲೆಗೆ ಇಂದು ಭೇಟಿ ನೀಡಿದರು. ಬೆಳಿಗ್ಗೆ 11 ಗಂಟೆಗೆ ಆಗಮಿಸಬೇಕಿದ್ದ ಸಿಎಂ 2 ಗಂಟೆ ತಡವಾಗಿ ಆಗಮಿಸಿದರು. ಜಿಲ್ಲಾಪಂಚಾತಯ್ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಆದರೆ ಸಭೆ ಮಾತ್ರ ಅಕ್ಷರಸಹ ರಣರಂಗವಾಗಿತ್ತು

9.ಉಕ್ಕಿನ ಮನುಷ್ಯ ಸರದಾರ್​​ ವಲ್ಲಭ ಬಾಯಿ ಪಟೇಲ್​ ಜನ್ಮದಿನದ ಅಂಗವಾಗಿ ನರ್ಮದಾ ನದಿ ತಟದಲ್ಲಿ ಪ್ರಧಾನಿ ಮೋದಿ ವಿಶ್ವದ ಅತೀ ಎತ್ತರದ ಏಕತಾ ಮೂರ್ತಿಯನ್ನ ಲೋಕಾರ್ಪಣೆ ಮಾಡಿದ್ದರು. ಏಕತಾ ಮೂರ್ತಿಯನ್ನ ಹೊಗಿಳದ್ದ ಜನರು ಒಂದೆಡೆಯಾದ್ರೆ.. ಈ ಪ್ರತಿಮೆ ಮೋದಿಯ ಚುನಾವಣಾ ಗಿಮಿಕ್​ ಅಂತಾನೂ ವ್ಯಂಗ್ಯವಾಡಿದರು.

10.ತುಮಕೂರಿನ ಮಾಜಿ ಮೇಯರ್ ರವಿ ಅಲಿಯಾಸ್ ಗಡ್ಡ ರವಿ ಕೊಲೆ ಪ್ರಕರಣ ಇಡೀ ತುಮಕೂರು ಜನರ ನಿದ್ದೆಗೆಡಿಸಿತ್ತು. ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ರವಿನ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದರು. ಇದೀಗ ಹತ್ಯೆ ಹಿಂದೆ ಬೆಂಗಳೂರಿನ ಭೂಗತ ಪಾತಕಿ ಸೈಲೆಂಟ್ ಸುನೀಲ ಹೆಸರು ಕೇಳಿಬರುತ್ತೀದೆ.

11. ಉಡುಪಿ ಜಿಲ್ಲೆಯ ಕೋಡಿ ಬೀಚಲ್ಲಿ. ಮೀನುಗಾರರು ಅರಬ್ಬೀ ಸಮುದ್ರದ ದಡದಲ್ಲಿ ಕೈರಂಪಣಿ ಬಲೆ ಹಾಕಿದ್ರು. ದಡದ ಕಡೆ ಬಲೆ ಎಳೆಯುವಾಗ ನಿರೀಕ್ಷೆಗೂ ಮೀರಿ ಭೂತಾಯಿ ಮೀನುಗಳು ಬಲೆಗೆ ಬಿದ್ದಿದೆ. ರಾಶಿ ರಾಶಿ ಭೂತಾಯಿ ಮೀನು ದಡಕ್ಕೆ ಅಪ್ಪಳಿಸುತ್ತಿದ್ದಂತೆ ಸ್ಥಳೀಯರು ಮುಗಿಬಿದರು.

12. ದ್ವಾರಕ ನೀನಾಸಂ ಅಶ್ವತ್ಥ್ ವಿರುದ್ಧ 18 ಲಕ್ಷದ ವಂಚನೆ ಆರೋಪ ಮಾಡಿದ್ದರು. ಒಟ್ಟಿನಲ್ಲಿ ಯಾರಿಗೆ ಯಾರು ಎಷ್ಟು ಹಣ ನೀಡಿದ್ದರು. ಅದನ್ನು ಹಿಂತಿರುಗಿಸಿದ್ದು ನಿಜಾನಾ, ಇಲ್ಲ ದ್ವಾರಕ ಮಾಡುತ್ತಿರೋ ಆರೋಪವೇ ನಿಜವಾ ಅನ್ನೋದು ತನಿಖೆ ಬಳಿಕವಷ್ಟೇ ಪತ್ತೆಯಾಗಬೇಕು.

13.ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಶಿಲಾನ್ಯಾಸ, ಪುರಸಭೆಯಿಂದ ಸುತ್ತೋಲೆ, ಆಮಂತ್ರಣ ಪತ್ರಿಕೆ ಸಹ ಮುದ್ರಣ ಮಾಡಿಸಲಾಗಿತ್ತು. ಆದ್ರೆ ಶಾಸಕ ಮತ್ತು ಸಚಿವರ ನಡುವಿನ ಒಳ ಜಗಳಕ್ಕೆ, ಇಂದಿರಾ ಕ್ಯಾಂಟಿನ್ ಇನ್ನೂ ಉದ್ಘಾಟನೆ‌ಯಾಗಿಲ್ಲ ಅಂತ ಸ್ಥಳೀಯರು ಆರೋಪಿಸಿದ್ದಾರೆ. ಬಡವರಿಗೆ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್ ರಾಜಕಾರಣಿಗಳ ಜಟಾಪಟಿಗೆ ಬಲಿಯಾಗಿದೆ.

14.ಕಬ್ಬನ್​ ಪಾರ್ಕ್​ನಾದ್ಯಂತ ಪಿಂಕ್​ ಬ್ಯೂಟೀಸ್​ ಅರಳಿ ನಿಂತಿದ್ದು, ಮರಗಳೆಲ್ಲವೂ ಪಿಂಕ್​ ಕಲರ್​ ನಿಂದ ಮೈದಳೆದು ನಿಂತಿವೆ. ಪಿಂಕ್​ ಫ್ಲವರ್​ಗೆ ಕೆಂಪು ಬಿಳಿ ಬ್ಲೂ ಬಣ್ಣದ ಹೂಗಳು ಸೇರಿ ಮತ್ತಷ್ಟು ಮೆರುಗು ನೀಡ್ತಿವೆ. ಒಂದಕ್ಕಿಂತ ಒಂದು ಹೂಗಳು ಅಂದವಾಗಿದ್ದು ಆಕರ್ಷಣಿಯವಾಗಿ ಕಂಗೊಳಿಸ್ತಿವೆ. ಜೊತೆಗೆ ಹೂವಿನ ಸೌಂದರ್ಯಕ್ಕೆ ಮನಸೋತ ಪ್ರವಾಸಿಗರು ಹೂಗಳ ಮಧ್ಯ ಎಂಜಾಯ್​ ಮಾಡ್ತಿದಾರೆ.

15. ಜಿಕೆವಿಕೆಯಲ್ಲಿ ಇಂದಿನಿಂದ ಕೃಷಿ ಮೇಳ ಪ್ರಾರಂಭವಾಗಿದೆ. ನಮ್ಮ ದೇಶದ ಹೆಚ್ಚು ಮಂದಿ ಕೃಷಿಯನ್ನು ಅವಲಂಬಿಸಿದ್ದಾರೆ. ಕೃಷಿ ವಿಶ್ವವಿದ್ಯಾಯಲ ಕೂಡ ಸಾಕಷ್ಟು ಸಂಶೋಧನೆಗಳನ್ನು ಮಾಡುತ್ತಾ ಬಂದಿದೆ. ಕೃಷಿ ಮೇಳವನ್ನು ರಾಜ್ಯಪಾಲ ವಜುಭಾಯ್​ ವಾಲಾ ಉದ್ಘಾಟಿಸಿದರು.

16.ತಾಯಿಗೆ ತಕ್ಕ ಮಗ ಸ್ಯಾಂಡಲ್​ವುಡ್​ನ ಸಕ್ಸಸ್​​​ಫುಲ್ ಕಾಂಬಿನೇಷನ್ ಕೃಷ್ಣ ಅಜಯ್ ರಾವ್ ಹಾಗೂ ಶಶಾಂಕ್ ಅಭಿನಯದ ಚಿತ್ರ. ಮೂರನೇ ಬಾರಿ ಒಂದಾಗಿರೋ ಈ ಕಾಂಬಿನೇಷನ್​ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ. ಅಜಯ್ ರಾವ್ 25ನೇ ಸಿನಿಮಾ ಇದಾಗಿದ್ದು, ಕರಾಟೆ ಟ್ರೈನರ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ಸುಮಲತಾ ಅಂಬರೀಶ್ ಅಜಯ್ ರಾವ್ ತಾಯಿ ಪಾತ್ರದಲ್ಲಿ ಮತ್ತೆ ಬಣ್ಣಹಚ್ಚಿದ್ದು, ಲಾಯರ್​ ಪಾತ್ರದಲ್ಲಿ ರೆಬಲ್ ಆಗಿ ಮಿಂಚಿದ್ದಾರೆ.

17.ಥ್ರಿಲ್ಲರ್ ಸಬ್ಜೆಕ್ಟ್​ನಿಂದ ಕೂಡಿರೋ 8ಎಂಎಂ ಚಿತ್ರ. 8ಎಂಎಂ ನವರಸ ನಾಯಕ ಮೊಲದ ಬಾರಿ ಕಾಮಿಡಿ ಜಾನರ್​​ನಿಂದ ಹೊರಬಂದು ವಿಭಿನ್ನ ಗೆಟಪ್​ನಲ್ಲಿ ಅಭಿನಯಿಸಿರೋ ಚಿತ್ರ. ಥ್ರಿಲ್ಲರ್ ಸಬ್ಜೆಕ್ಟ್ ಇರೋ ಈ ಚಿತ್ರಕ್ಕೆ ಹರಿಕೃಷ್ಣ ಕಥೆ , ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

18.ಸಿಗಂದೂರು ಸೇತುವೆ ನಿರ್ಮಾಣ ಸಂಬಂಧ ಕರ್ನಾಟಕ ವಿದ್ಯುತ್ ನಿಗಮ ನಿರಾಕ್ಷೇಪಣಾ ಪತ್ರ ನೀಡುವಲ್ಲಿ ಅನುಸರಿಸಿದ ವಿಳಂಬ ನೀತಿಯನ್ನು ಖಂಡಿಸಿ ಸಾಗರ ಶಾಸಕ ಹರತಾಳು ಹಾಲಪ್ಪ ಪ್ರತಿಭಟನೆ ನಡೆಸಿದ್ರು.

ಬೆಂಗಳೂರಿನ ಕೆಪಿಸಿ ಕಚೇರಿ ಮುಂಭಾಗದಲ್ಲಿ ಪ್ರತಿಭಟಿಸಿ ಮಾತನಾಡಿದ ಅವರು, ಸೇತುವೆ ನಿರ್ಮಾಣ ಸಂಬಂಧ ಕರ್ನಾಟಕ ವಿದ್ಯುತ್ ನಿಗಮ ತಕ್ಷಣ ನಿರಾಕ್ಷೇಪಣಾ ಪತ್ರ ನೀಡದಿದ್ದರೆ ಲಿಂಗನಮಕ್ಕಿ, ಜೋಗ . ಸಾಗರ ಕೆಪಿಸಿಯನ್ನು ಬಂದ್ ಮಾಡುವ ಮೂಲಕ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ರು. ಅಲ್ಲದೇ ಕೆಪಿಸಿಯ ಬಳ್ಳಿ ಅನೇಕ ಬಾರಿ ಈ ಕುರಿತಂತೆ ಮನವಿ ಮಾಡಿದರೂ ಇದುವರೆಗೂ ನಿರಾಕ್ಷೇಪಣಾ ಪತ್ರ ನೀಡಿಲ್ಲ , ಅಧಿಕಾರಿಗಳು ನಿರ್ಲಕ್ಷ್ಯ ದೋರಣೆ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

19.ಬಾರ್, ರೆಸ್ಟೋರೆಂಟ್ ಗಳಲ್ಲಿ ಮಹಿಳಾ ನೌಕರರ ನೇಮಕ ಮಾಡಿದ್ದಕ್ಕೆ ಬಾರ್ ಬಂದ್ ಆರೋಪಕ್ಕೆ ಕುರಿತಂತೆ ಗೃಹ ಇಲಾಖೆಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಪೊಲೀಸರ ಕ್ರಮ ಪ್ರಶ್ನಿಸಿ 28 ಕ್ಕೂ ಹೆಚ್ಚು ಬಾರ್, ರೆಸ್ಟೋರೆಂಟ್ ಗಳು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು.ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಬಿ.ಬೀರಪ್ಪ ಅವರಿದ್ದ ಪೀಠ, ಮಹಿಳಾ ನೌಕರರನ್ನು ಏಕೆ ಟಾರ್ಗೆಟ್ ಮಾಡುತ್ತಿದ್ದೀರಿ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ ಮಾಡಿದ್ರು. ಅಲ್ದೆ ನವೆಂಬರ್.19 ಕ್ಕೆ ಸರ್ಕಾರದ ನಿಲುವು ತಿಳಿಸಲು ಸೂಚನೆ ನೀಡಿದ್ರು. ಇದಕ್ಕೂ ಅರ್ಜಿದಾರ ಪರ ವಕೀಲರು ವಾದ ಮಂಡಿಸಿ, ಪೊಲೀಸರು ಬಲವಂತದ ನೌಕರಿ ಎಂದು ಸುಳ್ಳು ಕೇಸ್ ದಾಖಲಿಸುತಿದ್ದಾರೆ. ಗೃಹ ಕಾರ್ಯದರ್ಶಿ ಗೆ ನೋಟಿಸ್ ನೀಡಿದ್ದರೂ ಉತ್ತರಿಸಿಲ್ಲ. ಮಹಿಳಾ ನೌಕರರ ಹಕ್ಕು ಕಿತ್ತುಕೊಳ್ಳುತಿದ್ದಾರೆಂದು ಆರೋಪಿಸಿದರು.

20. ಅಕ್ರಮವಾಗಿ ಶಸ್ತಾಸ್ತ್ರ ಹೊಂದಿದ ಆರೋಪ ಹಾಗೂ ಸಹೋದ್ಯೋಗಿ ಪತ್ರಕರ್ತನ ಹತ್ಯೆಗೆ ಸುಪಾರಿ ನೀಡಿದ ಆರೋಪದಡಿ ಅಧೀನ ನ್ಯಾಯಾಲಯದಲ್ಲಿ ನಡೆಯುತ್ತೀರುವ ಮೊಕದ್ದಮೆ ರದ್ದು ಕೋರಿ ಪತ್ರಕರ್ತ ರವಿ ಬೆಳಗೆರೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅಧೀನ ನ್ಯಾಯಾಲಯ ನನ್ನ ವಿರುದ್ಧ ನಡೆಸುತ್ತಿರುವ ವಿಚಾರಣೆ ಕಾನೂನು ಬಾಹಿರ. ದೂರಿನ ವಸ್ತುಸಂಗತಿಗಳು ಅಸಮಂಜಸವಾಗಿವೆ ಮತ್ತು ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿದೆ. ಆದ್ದರಿಂದ ವಿಚಾರಣೆ ರದ್ದುಗೊಳಿಸಬೇಕು ಎಂದು ರವಿ ಬೆಳಗೆರೆ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

21.ಆ್ಯಂಬಿಡೆಂಟ್ ಕೇಸ್​ನಲ್ಲಿ ಸಿಸಿಬಿ ವಿಶೇಷ ತಂಡದಿಂದ ತನಿಖೆ ಮುಂದುವರಿದಿದೆ. ಸಿಸಿಬಿಯಿಂದ ಮೂವರು ಆರೋಪಿಗಳಾದ ಫರೀದ್, ಸೈಯ್ಯದ್​ ಆಫಾಕ್ ಮತ್ತು ಇಮ್ರಾನ್​ಗೆ ಸೇರಿದ ಅಕೌಂಟ್ ಸೀಜ್‌ ಆಗಿದೆ. ಇದಲ್ಲದೇ ಒಟ್ಟು 35 ಅಕೌಂಟ್​ಗಳನ್ನ ಸೀಜ್ ಮಾಡಿ ತನಿಖೆ ಮಾಡಲಾಗ್ತಿದೆ.

22.ವಿಧಾನಸಭಾ ಉಪ ಚುನಾವಣೆಯಲ್ಲಿ ಸೋಲು ಹಾಗೂ ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ.ಎಸ್​. ಯಡಿಯೂರಪ್ಪ ಅವರನ್ನು ಬದಲಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿರುವುದು ಯಡಿಯೂರಪ್ಪ ಅವರ ಸಂಕಷ್ಟ ಹೆಚ್ಚಿಸಿದೆ.

23. ಕಾಶ್ಮೀರ ಕುರಿತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಹೇಳಿಕೆ ಸರಿಯಾಗಿಯೇ ಇದೆ. ಆದರೂ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಅವಿಭಾಜ್ಯ ಅಂಗವಾಗಿಯೇ ಇರುತ್ತದೆ. ಇದರಲ್ಲಿ ಚರ್ಚೆಯ ವಿಷಯವೇ ಇಲ್ಲ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

24.D53​, ದರ್ಶನ್ ಅಭಿನಯದ 53ನೇ ಸಿನಿಮಾ. ಹೆಬ್ಬುಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹಾಗೂ ಚೌಕ ಡೈರೆಕ್ಟರ್ ತರುಣ್ ಸುಧೀರ್ ಕಾಂಬಿನೇಷನ್​ನಲ್ಲಿ ತಯಾರಾಗಲಿರೋ ಸ್ಯಾಂಡಲ್​ವುಡ್​ನ ಮೋಸ್ಟ್ ಎಕ್ಸ್​ಪೆಕ್ಟೆಡ್ ಸಿನಿಮಾ. ವರಮಹಾಲಕ್ಷ್ಮೀ ಹಬ್ಬಕ್ಕೆ ಸ್ಕ್ರಿಪ್ಟ್ ಪೂಜೆ ಮೂಲಕ ಡಿ53ಗೆ ಚಾಲನೆ ಕೊಟ್ಟಿದ್ದ ಚಿತ್ರತಂಡ, ಇದೀಗ ಸಿನಿಮಾಗಾಗಿ ಸಕಲ ಸಿದ್ದತೆಗಳನ್ನ ಮಾಡಿಕೊಳ್ತಿದೆ.

25.ತೆಲಂಗಾಣ ಮುಖ್ಯಮಂತ್ರಿ ಹಾಗೂ ಟಿಆರ್​ಎಸ್​ ಅಧ್ಯಕ್ಷ ಕೆ.ಚಂದ್ರಶೇಖರ್ ಆಸ್ತಿ 20 ಕೋಟಿ ಆಗಿದ್ದರೂ ಸ್ವಂತ ಕಾರಿಲ್ಲ. ವೃತ್ತಿಯಲ್ಲಿ ಕೃಷಿಕ ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಆಸ್ತಿ ಘೋಷಣೆಯಲ್ಲಿ ಹೇಳಿಕೊಂಡಿದ್ದಾರೆ.

26.ಕನ್ನಡ ಚಿತ್ರದಲ್ಲಿ ಬಣ್ಣ ಹಚ್ಚಿರುವ ಹೆಸರಾಂತ ಕಲಾವಿದ ನಿನಾಸಂ ಅಶ್ವತ್ಥ್ ಲಕ್ಷಾಂತರ ರೂಪಾಯಿ ಸಾಲಪಡೆದು, ಫೋನ್‌ಗೂ ಸಿಗುತ್ತಿಲ್ಲವೆಂದು, ಮೋಸ ಹೋದವರು ಆರೋಪಿಸಿದ್ದಾರೆ.

27.ಏರ್ ಇಂಡಿಯಾ ವಿಮಾನದಲ್ಲಿ ಐರಿಶ್ ಮಹಿಳೆಯೊಬ್ಬಳು ಮದ್ಯಪಾನಕ್ಕಾಗಿ , ವಿಮಾನ ಸಿಬ್ಬಂದಿಯೊಂದಿಗೆ ದುರ್ವರ್ತನೆ ತೋರಿದ ಘಟನೆ ನಡೆದಿದೆ.ಮುಂಬೈನಿಂದ ಲಂಡನ್‌ಗೆ ಸಂಚರಿಸುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಹೆಚ್ಚಿಗೆ ಮದ್ಯಪಾನ ನೀಡಲು ನಿರಾಕರಿಸಿದ್ದಕ್ಕೆ ಜಗಳವಾಡಿದ ಐರಿಶ್ ಮಹಿಳೆ, ವಿಮಾನ ಸಿಬ್ಬಂದಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೇ, ಸಿಬ್ಬಂದಿಗೆ ಉಗುಳಿದ್ದಾಳೆ.

28. ಮಹಾರಾಷ್ಟ್ರದ ಚಂದ್ರಪುರದ ತಡೋಬಾ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಹುಲಿಯೊಂದು ಪ್ರವಾಸಿಗರನ್ನ ಬೆನ್ನಟ್ಟಿ ಬಂದಿದ್ದು, ಅದೃಷ್ಟವಶಾತ್ ಪ್ರವಾಸಿಗರು ಅಪಾಯದಿಂದ ಪಾರಾಗಿದ್ದಾರೆ.ಪ್ರವಾಸಿಗರಿದ್ದ ವಾಹನವನ್ನ ಹುಲಿ ಅರ್ಧ ಕಿಲೋ ಮೀಟರ್ ಅಟ್ಟಿಸಿಕೊಂಡು ಬಂದಿದೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.

29.ಶ್ರೀಲಂಕಾ ರಾಜಕೀಯದಲ್ಲಿ ಮಹತ್ತರ ಬೆಳವಣಿಗೆ ನಡೆದಿದೆ. ಸಂಸತ್ತಿನಲ್ಲಿ ನಡೆದ ವಿಶ್ವಾಸ ಮಂಡನೆಯಲ್ಲಿ ಶ್ರೀಲಂಕಾದ ಪ್ರಧಾನಿಯಾಗಿ ನೇಮಕಗೊಂಡಿದ್ದ ಮಹಿಂದಾ ರಾಜಪಕ್ಸೆ ವಿರುದ್ಧ ಮತ ಚಲಾವಣೆಯಾಗಿದೆ. 225 ಸದಸ್ಯ ಬಲದ ಶ್ರೀಲಂಕಾ ಸಂಸತ್ತಿನಲ್ಲಿ ಬಹುಮತಕ್ಕೆ 113 ಸ್ಥಾನ ಪಡೆಯಬೇಕು. ಆದರೆ, ಬಹುತೇಕರು ರಾಜಪಕ್ಷಕ್ಕೆ ವಿರುದ್ಧ ಮತ ಹಾಕಿದ್ದಾರೆ.

30.ದೇಶದ ನೂತನ ಸಂಪರ್ಕ ಉಪಗ್ರಹ ಜಿಸ್ಯಾಟ್‌- 29 ನಭ ಸೇರಿದೆ. ಚೆನ್ನೈನಿಂದ 100 ಕಿ.ಮೀ. ದೂರದಲ್ಲಿರುವ ಸತೀಶ್‌ ಧವನ್‌ ಉಡಾವಣಾ ನೆಲೆಯಿಂದ ನಿನ್ನೆ ಸಂಜೆ 5 ಗಂಟೆ 08 ನಿಮಿಷಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಲಾಯ್ತು. ಜಿಸ್ಯಾಟ್‌- 29 ಉಪಗ್ರಹ ಜಮ್ಮುಕಾಶ್ಮೀರ ಹಾಗೂ ಈಶಾನ್ಯ ಭಾಗದ ಬಳಕೆದಾರರ ಸಂಪರ್ಕ ವ್ಯವಸ್ಥೆ ಸಹಕಾರಿಯಾಗಲಿದೆ. ಇಸ್ರೋ ಸಾಧನೆಗೆ ಮೋದಿ ಟ್ವಿಟರ್‌ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

31.ನವೆಂಬರ್ 19ರಂದು ನಡೆಯಲಿರುವ ಕೇಂದ್ರೀಯ ಬ್ಯಾಂಕ್‌ನ ನಿರ್ದೇಶಕ ಮಂಡಳಿ ಸಭೆಗೂ ಮುನ್ನವೇ ಕೇಂದ್ರ ಸರ್ಕಾರ ಮತ್ತು ಆರ್​ಬಿಐ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಿದಿದೆ.. ಸರ್ಕಾರಿ ಸ್ವಾಮ್ಯದ ನಷ್ಟಪೀಡಿತ 11 ಬ್ಯಾಂಕ್‌ಗಳ ವಿರುದ್ಧ ವಿಧಿಸಿರುವ ನಿರ್ಬಂಧಿತ ಕಠಿಣ ಕ್ರಮಗಳನ್ನು ಮತ್ತು ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯಕ್ಕೆ ಸಾಲ ನೀಡಿಕೆಯ ನಿಯಮಗಳನ್ನು ಸಡಿಲಗೊಳಿಸಲು ಆರ್‌ಬಿಐ ಉದ್ದೇಶಿಸಿದೆ.

32.ನೇತಾಜಿ ಸುಭಾಷ್ ಚಂದ್ರ ಬೋಸ್ ಮೊದಲ ಬಾರಿಗೆ ತ್ರಿವರ್ಣ ಧ್ವಜ ಹಾರಿಸಿ 75 ವರ್ಷಗಳು ಕಳೆದಿವೆ.. ಇದರ ಸ್ಮರಣಾರ್ಥವಾಗಿ 75 ರೂಪಾಯಿ ಮುಖಬೆಲೆಯ ನಾಣ್ಯವನ್ನು ಹೊರತರುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಪೋರ್ಟ್ ಬ್ಲೈರ್‌ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು 1943 ರ ಡಿಸೆಂಬರ್ 30 ರಂದು ಮೊದಲ ಬಾರಿಗೆ ತ್ರಿವರ್ಣ ಧ್ವಜಾರೋಹಣ ಮಾಡಿದ್ದರು. ಸೆಲ್ಯುಲರ್ ಜೈಲ್‌ನ ಮುಂಭಾಗದಲ್ಲಿ ನೇತಾಜಿ ತ್ರಿವರ್ಣ ಧ್ವಜಕ್ಕೆ ಸೆಲ್ಯೂಟ್ ಮಾಡುತ್ತಿರುವ ಚಿತ್ರ ನಾಣ್ಯದ ಮೇಲೆ ಇರಲಿದೆ.

33.ಈ ಸಾಲಿನ ಸಂಸತ್ ಚಳಿಗಾಲದ ಅಧಿವೇಶನ ಡಿಸೆಂಬರ್ 11ರಿಂದ ಜನವರಿ 8ರ ವರೆಗೆ ನಡೆಸುವಂತೆ ಕ್ಯಾಬಿನೆಟ್ ಸಮಿತಿ ಶಿಫಾರಸು ಮಾಡಿದೆ.ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನಿವಾಸದಲ್ಲಿ ನಡೆದ CCPA ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ. ಸಾಮಾನ್ಯವಾಗಿ ನವೆಂಬರ್‌ನಲ್ಲಿ ಪ್ರಾರಂಭವಾಗುತ್ತಿದ್ದ ಸಂಸತ್ ಚಳಿಗಾಲದ ಅಧಿವೇಶನ, ಪಂಚ ರಾಜ್ಯಗಳ ಚುನಾವಣೆಯ ಹಿನ್ನೆಲೆ ಡಿಸೆಂಬರ್‌ಗೆ ಮುಂದೂಡಿಕೆಯಾಗಿದೆ.

34.ಹೊತ್ತಿ ಉರಿಯುತ್ತಿದ್ದ ಟ್ರಾಕ್ಟರ್‌ರನ್ನು ಚಾಲಕ ಕೆರೆಗೆ ಇಳಿಸಿದ ಘಟನೆ ಬಾಗಲಕೋಟೆ ಜಿಲ್ಲೆ ಜಮ್ಮನಕಟ್ಟಿ ಗ್ರಾಮದಲ್ಲಿ ನಡೆದಿದೆ. ಟ್ರಾಕ್ಟರ್‌ನಲ್ಲಿ ಮೇವು ತುಂಬಿಕೊಂಡು ಹೋಗುತ್ತಿದ್ದ ವೇಳೆ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಎಚ್ಚೆತ್ತುಕೊಂಡ ಚಾಲಕ ಟ್ರಾಕ್ಟರ್‌ನನ್ನೇ ಕೆರೆಗೆ ಇಳಿಸಿ ಬೆಂಕಿ ನಂದಿಸಿದ್ದಾನೆ.

35.ಕಾಡುಕೋಣವೊಂದು ಶಾಲೆಯ ಆವರಣಕ್ಕೆ ಬಂದಿದ್ದ ಘಟನೆ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಬಸ್ರಿಕಟ್ಟೆಯಲ್ಲಿ ನಡೆದಿದೆ. ಮಕ್ಕಳ ದಿನಾಚರಣೆ ಕಾರ್ಯಕ್ರಮದ ವೇಳೆ ಕಾಡುಕೋಣ ಶಾಲೆ ಆವರಣಕ್ಕೆ ಬಂದಿದೆ. ಇದ್ರಿಂದ ಶಿಕ್ಷಕರು ಹಾಗೂ ಮಕ್ಕಳಲ್ಲಿ ಆತಂಕ ಸೃಷ್ಠಿಯಾಗಿತ್ತು. ಕಾಡುಕೋಣವನ್ನು ಎಷ್ಟು ಓಡಿಸಿದ್ರೂ ಕೂಡ ಕಾರ್ಯಕ್ರಮ ನಡೀತಿದ್ದ ಜಾಗಕ್ಕೆ ಬಂದು ನಿಲ್ಲುತ್ತಿತ್ತು.

36.ಕಾಡಾನೆಗಳ ದಾಳಿಗೆ ಅರಣ್ಯ ಇಲಾಖೆ ಸಾಕಿದ್ದ ಗಂಡಾನೆಯೊಂದು ಬಲಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ. ಸಫಾರಿಗಾಗಿ ಅರಣ್ಯ ಇಲಾಖೆ ಸಾಕಿದ್ದ 3 ಆನೆಗಳನ್ನು ಮೇಯಲು ಬಿಟ್ಟಾಗ ಕಾಡಿನಲ್ಲಿದ್ದ ಎರಡು ಗಂಡಾನೆಗಳು ದಾಳಿ ನಡೆಸಿದ್ದವು . ದಾಳಿಯಿಂದ ತೀವ್ರ ಗಾಯಗೊಂಡಿದ್ದ ರಾಜೇಶ್ ಎಂಬ ಆನೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ.

37.ಮಂಡ್ಯ ಸಂಸದ ಶಿವರಾಮೇಗೌಡ ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಾರಿ ಜೆಡಿಎಸ್- ಕಾಂಗ್ರೆಸ್ ಮುಖಂಡರು ಒಂದಾಗಿದ್ದರು. ಆದ್ರೆ ಕಾರ್ಯಕರ್ತರು ಒಂದಾಗಲಿಲ್ಲ. ಇದು ನನ್ನ ವಿರುದ್ಧದ ಮತವಾಗಿ ಬದಲಾಯ್ತು. ಜೊತೆಗೆ ನೋಟಾಗೂ 15 ಸಾವಿರ ಮತ ಹೋಗಿದೆ. ಪ್ರತಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಶಕ್ತಿ 80-85 ಸಾವಿರ ಮತಗಳು ಮಾತ್ರ. ಆದರೆ ಈ ಬಾರಿ ಎರಡೂವರೆ ಲಕ್ಷ ಆಗೋದಕ್ಕೆ ಅತೃಪ್ತರ ಮತಗಳೇ ಕಾರಣ ಅಂತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

38.ಮೈಸೂರು ರಾಜಮಾತೆ ಪ್ರಮೋದಾ ದೇವಿ, ಟಿಪ್ಪು ವಿರುದ್ಧ ಕಿಡಿಕಾರಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವ್ರು, ಸರ್ಕಾರ ಏಕೆ ಟಿಪ್ಪು ಜಯಂತಿ ಮಾಡ್ತಿದೆ ಅಂತ ಗೊತ್ತಿಲ್ಲ. ನಮ್ಮ ಕುಟುಂಬಕ್ಕೆ ಟಿಪ್ಪು ಬಹಳ ತೊಂದರೆ ನೀಡಿದ್ದಾರೆ. ಟಿಪ್ಪು ಜಯಂತಿ ಮಾಡುವುದೇ ಆದರೇ ಮೈಸೂರು ಸಂಸ್ಥಾನ ಆಳಿದ ಅನೇಕ ರಾಜರಿದ್ದಾರೆ... ಅವರ ಜಯಂತಿ ಕೂಡ ಆಚರಿಸಲಿ ಅಂತ ಸಲಹೆ ನೀಡಿದ್ದಾರೆ. ಟಿಪ್ಪು ವಿಚಾರದಲ್ಲಿ ಪರ ಅಥವಾ ವಿರೋಧಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ. ನಮಗೆ ತೊಂದರೆಯಾದವರಿಂದ ದೂರವಿರುವಂತೆ ನಮ್ಮ ಹಿರಿಯರು ಹೇಳಿದ್ದಾರೆ ಎಂದಿದ್ದಾರೆ.

39.ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಗಡಿನಾಡು ಬೀದರ್​ಗೆ ಸಿಎಂ ಭೇಟಿ ನೀಡುತಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ 65ನೇ ಅಖಿಲ ಭಾರತ ಸಹಕಾರ ಸಪ್ತಾಹ ನಡೆಯುತ್ತಿದೆ. ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಉದ್ಘಾಟಿಸಿದರು.

40. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ರಾಜ್ಯದ 2ನೇ ದೊಡ್ಡ ಮಹಾನಗರ ಪಾಲಿಕೆ ಎಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಆದ್ರೆ ಈ ಪಾಲಿಕೆಯಲ್ಲಿ ಆಟೋ ಟಿಪ್ಪರ್ ಖರೀದಿಯಲ್ಲಿ ಭಾರೀ ಹಗರಣ ಬೆಳಕಿಗೆ ಬಂದಿದೆ. ಘನತ್ಯಾಜ್ಯ ವಿಲೇವಾರಿ ವ್ಯವಸ್ಥೆಯ ಪ್ರತ್ಯೇಕ ಯೋಜನೆಯಲ್ಲಿ, ಹುಬ್ಬಳ್ಳಿ-ಧಾರವಾಡ ಹಾಗೂ ದಾವಣಗೆರೆ ಪಾಲಿಕೆ ಒಂದೇ ತೆರನಾದ ಟಿಪ್ಪರ್ ಖರೀದಿಸಿವೆ. ಆದ್ರೆ ಪ್ರತಿ ಟಿಪ್ಪರ್‌ಗೆ ದಾವಣಗೆರೆ ಪಾಲಿಕೆಗಿಂತ ಹೆಚ್ಚುವರಿಯಾಗಿ 3 ಲಕ್ಷ ರೂಪಾಯಿ ಪಾವತಿಸಿದೆ.

41. ಪವರ್​ ಸ್ಟಾರ್ ಪುನೀತ್​ ರಾಜ್​ಕುಮಾರ್​ ಮತ್ತು ಲೂಸ್​ಮಾದ ಯೋಗಿ ಕಾಂಬಿನೇಷನ್​ ಸಿನಿಮಾ ಅಂದ್ರೆ ಸಿನಿಪ್ರಿಯರು ಮಸ್ತ್ ಎಂಜಾಯ್​ ಮಾಡ್ತಾರೆ..ಈ ಹಿಂದಿನ ಹುಡುಗರು ಮತ್ತು ಯಾರೇ ಕೂಗಾಡಲಿ ಚಿತ್ರದಲ್ಲಿ ಅಪ್ಪು ಮತ್ತು ಯೋಗಿ ಜೋಡಿಯಾಗಿ ಪ್ರೇಕ್ಷಕರನ್ನ ಸಖತ್​ ಎಂಟರ್​ಟೈನ್​ ಮಾಡಿದ್ರು..ಇದೀಗ ಲಾಂಗ್​ ಗ್ಯಾಪ್​ನ ನಂತ್ರ ಈ ಜೋಡಿ ಮತ್ತೆ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.

42.ಸಾಲಬಾಧೆ ತಾಳಲಾರದೇ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಕೆಂಭಾವಿಯಲ್ಲಿ ನಡೆದಿದೆ.ಬಸವರಾಜ ಯಾಳಗಿ (38) ಆತ್ಮಹತ್ಯೆ ಮಾಡಿಕೊಂಡ ರೈತ .

43.ಎರಡು ಸಮುದಾಯದವರ ನಡುವೆ ಗುಂಪು ಘರ್ಷಣೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಲಕ್ಕಿಹಳ್ಳಿ ಗ್ರಾಮದಲ್ಲಿ ನಡೆದಿದೆ.ಮುದ್ದಲಿಂಗೇಶ್ವರ ದೇಗುಲದ ಆಚರಣೆ ವಿಚಾರದಲ್ಲಿ ಘರ್ಷಣೆ ನಡೆದಿದ್ದು.10 ಕ್ಕೂ ಹೆಚ್ಚು ಜನರಿಗೆ ಗಾಯ, ಹೊಸದುರ್ಗ ತಾಲ್ಲೂಕು ಆಸ್ಪತ್ರೆಗೆ ದಾಖಲು

44.ಬಾಗಲಕೋಟೆ ಜಿಲ್ಲೆಯ ಕಬ್ಬು ಬೆಳೆಗಾರರ ಹೋರಾಟದಲ್ಲಿ ಮೂಡಿದ ಒಡಕು.ಪ್ಯಾಕ್ಟರಿ ಬಂದ್ ಗೆ ರೈತಸಂಘ ಬೆಂಬಲ ಬೆನ್ನಲ್ಲೆ ವಿರೋಧ ವ್ಯಕ್ತಪಡಿಸುತ್ತಿರೋ ಮತ್ತೊಂದು ರೈತ ಗುಂಪು.ಬಾಗಲಕೋಟೆ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆಗೆ ಮುಂದಾದ ರೈತರು.ಜಿಲ್ಲೆಯಲ್ಲಿನ ಪ್ಯಾಕ್ಟರಿ ಆರಂಭಿಸುವಂತೆ ಆಗ್ರಹಿಸಿ ರೈತರ ಪ್ರತಿಭಟನೆ.

45.ಬಾವಿಗೆ ಹಾರಿ ತಾಯಿ ಮಗಳು ಆತ್ಮಹತ್ಯೆ,ತಾಯಿ ಐಶ್ವರ್ಯ (24) ಮಗಳು ರಕ್ಷಿತ (3) ಮೃತ ದುರ್ದೈವಿಗಳು,ಚಿಕ್ಕಬಳ್ಳಾಪುರ ತಾಲ್ಲೂಕು ಆವುಲನಾಗೇನಹಳ್ಳಿ‌ ಗ್ರಾಮದಲ್ಲಿ ಘಟನೆ, ಘಟನೆಗೆ ನಿಖರ ಕಾರಣ‌ ತಿಳಿದು ಬಂದಿಲ್ಲ,ಸ್ಥಳಕ್ಕೆ ಗುಡಿಬಂಡೆ ಪೊಲೀಸರ ಭೇಟಿ ಪರಿಶೀಲನೆ.

46.ಚಿರತೆ ದಾಳಿಗೆ ಎರಡು ಆಡು ಬಲಿಯಾಗಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕದಲೂರು ಗ್ರಾಮದಲ್ಲಿ ನಡೆದಿದೆ.ಕಳೆದ ಮೂರುದಿನಗಳಿಂದ ಗ್ರಾಮದಲ್ಲಿ ಬೀಡುಬಿಟ್ಟಿರುವ ಚಿರತೆ ಆತಂಕದಲ್ಲಿ ಕದಲೂರು ಗ್ರಾಮಸ್ಥರು

47.ಬೈಕ್ ಹಾಗೂ ಖಾಸಗಿ ಬಸ್ ಮುಖಾಮುಖಿ ಡಿಕ್ಕಿ. ಸ್ಥಳದಲ್ಲೇ ಬೈಕ್ ಸವಾರ ಮೃತಪಟ್ಟ ಘಟನೆ ನರಸೀಪುರ-ಕಿರುಗಾವಲು ಮುಖ್ಯ ರಸ್ತೆಯಲ್ಲಿ ಘಟನೆ ಸಂಭವಿಸಿದೆ.

48. ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಾಯಾದೇವಿ ಗಲಗಲಿ, 25 ಸಾವಿರ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಕೊಡಗು ಜಿಲ್ಲೆ ಮಡಿಕೇರಿ ನಗರದ ಕಛೇರಿಯಲ್ಲಿ ನಡೆದಿದೆ.

49. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಬೆಳೆ ಹಾನಿಯಾಗಿದ್ದು, ಬೆಳೆ ಹಣ ರೈತರ ಖಾತೆಗೆ ಮಂಜೂರ ಮಾಡಬೇಕೆಂದು ಆಗ್ರಹಿಸಿ ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರೈತ ಪ್ರಾಂತ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

50.ಮೊಬೈಲ್ ಕಳೆದುಹೋದ ಹಿನ್ನಲೆ ವಿದ್ಯಾರ್ಥಿನಿ ನಿಖಿತಾ 17 ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಗಿರುವ ಘಟನೆ ಮೈಸೂರಿನ ಗಾಂಧಿನಗರದಲ್ಲಿ ಸಂಭವಿಸಿದೆ.

Next Story

RELATED STORIES