Top

ದೀಪಿಕಾ-ರಣವೀರ್ ಮದುವೆ ಫೋಟೊ ಬಿಡುಗಡೆ ಮಾಡಿದ ಸೋದರಿ

ದೀಪಿಕಾ-ರಣವೀರ್ ಮದುವೆ ಫೋಟೊ ಬಿಡುಗಡೆ ಮಾಡಿದ ಸೋದರಿ
X

ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಸಿಂಗ್ ಮದುವೆ ಕಾರ್ಯಕ್ರಮಗಳು ಬುಧವಾರದಿಂದ ಆರಂಭಗೊಂಡಿದ್ದು, ಇಟಲಿಯ ವಿಲ್ಲಾದಲ್ಲಿ ಸಡಗರ- ಸಂಭ್ರಮ ಆರಂಭವಾಗಿದೆ.

ಇಟಲಿಯಲ್ಲಿ ಮದುವೆ ಆಗುತ್ತಿರುವ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಈಗಾಗಲೇ ಕುಟುಂಬ ಈಗಾಗಲೇ ತೆರಳಿದ್ದು, ಮೆಹಂದಿ ಹಾಗೂ ಸಂಗೀತ ಕಾರ್ಯಕ್ರಮಗಳು ನಡೆಯುತ್ತಿವೆ.

ಸಂಗೀತ ಕಾರ್ಯಕ್ರಮದ ವೇಳೆ ದೀಪಿಕಾ ಪಡುಕೋಣೆ ಭಾವುಕಳಾಗಿದ್ದನ್ನು ಗಮನಿಸಿದ ರಣವೀರ್ ಸಿಂಗ್ ಸಮಾಧಾನ ಪಡಿಸಿದ ನಂತರ ದೀಪಿಕಾ ಮೊಗದಲ್ಲಿ ನಗು ಕಾಣಿಸಿಕೊಂಡಿತು ಎಂದು ಸೋದರಿ ಅನಿಷಾ ಪಡುಕೋಣೆ ಇನ್​ಸ್ಟಾಗ್ರಾಮ್​ನಲ್ಲಿ ಹಾಕಿಕೊಂಡಿದ್ದಾರೆ.

ಮದುವೆಗೆ ಬರುವಾಗ ಮೊಬೈಲ್​ ತರಬಾರದು. ಉಡುಗೊರೆಗಳನ್ನು ಕೊಡಬಾರದು ಎಂದು ಆಮಂತ್ರಿತರಿಗೆ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಪ್ರೀತಿಯಿಂದ ಮನವಿ ಮಾಡಿಕೊಂಡಿದ್ದಾರೆ.

ಮದುವೆ ಕಾರ್ಯಕ್ರಮದ ಫೋಟೋಗಳನ್ನು ನಾವೇ ಬಿಡುಗಡೆ ಮಾಡುತ್ತೇವೆ. ಆದ್ದರಿಂದ ಗಣ್ಯರು ಮದುವೆ ಹಾಲ್​ಗೆ ಮೊಬೈಲ್ ತರಬೇಡಿ. ಮದುವೆ ಉಡುಗೊರೆ ಕೂಡ ಸ್ವೀಕರಿಸುವುದಿಲ್ಲ. ಒಂದು ವೇಳೆ ಉಡುಗೊರೆ ಕೊಡಲೇಬೇಕು ಎಂದು ಬಯಸಿದ್ದರೆ ದೀಪಿಕಾ ಪಡುಕೋಣೆ ಅವರ ಸ್ವಯಂ ಸೇವಾ ಸಂಘವಾದ ದಿ ಲಿವ್, ಲವ್ ಲಫ್ ಫೌಂಡೇಷನ್​ಗೆ ದೇಣಿಗೆ ನೀಡಬಹುದು ಎಂದು ದಾಂಪತ್ಯಕ್ಕೆ ಕಾಲಿಡಲಿರುವ ಜೋಡಿ ಮನವಿ ಮಾಡಿಕೊಂಡಿದೆ.

ದೀಪಿಕಾ ಪಡುಕೋಣೆ 2015ರಲ್ಲಿ ಮಾನಸಿಕವಾಗಿ ಬಳಲುತ್ತಿರುವವರಿಗಾಗಿ ಈ ಎನ್​ಜಿಒ ಸ್ಥಾಪಿಸಿದ್ದು, ಈ ಹಿಂದೆ ಕೂಡ ದೀಪಿಕಾ ಪಡುಕೋಣೆ ಕೂಡ ಸ್ವತಃ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಎನ್​ಜಿಒ ಸಹಾಯ ಪಡೆದಿದ್ದರು.

ದೀಪಿಕಾ ಪಡುಕೋಣೆ ಅವರ ಸ್ವಯಂ ಸೇವಾ ಸಂಘಟನೆಗೆ ನೆರವು ನೀಡುವ ಮೂಲಕ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವವರ ಜಾಗೃತಿ ಹಾಗೂ ಅವರ ಸೇವೆಗಾಗಿ ನೆರವಾಗಿ ಎಂದು ದೀಪಿಕಾ ಮತ್ತು ರಣವೀರ್ ಗಣ್ಯರಲ್ಲಿ ಮನವಿ ಮಾಡಿದ್ದಾರೆ.

ಇಟಲಿಯಲ್ಲಿ ನವೆಂಬರ್ 14 ಮತ್ತು 15ರಂದು ನಡೆಯುವ ಸರಳ ಸಮಾರಂಭದಲ್ಲಿ 32 ವರ್ಷದ ದೀಪಿಕಾ ಮತ್ತು 33 ವರ್ಷದ ರಣವೀರ್ ದಾಂಪತ್ಯಕ್ಕೆ ಕಾಲಿಡಲಿದ್ದಾರೆ. ಈ ಸಮಾರಂಭದಲ್ಲಿ ಕೆಲವೇ ಆತ್ಮೀಯ ಗಣ್ಯರಿಗೆ ಆಹ್ವಾನ ನೀಡಲಾಗಿದೆ ಎಂದು ಹೇಳಲಾಗಿದೆ.

Next Story

RELATED STORIES