Top

2 ನಿಮಿಷ 20 ಸೆಕೆಂಡ್​ಗೆ ನಾಡಗೀತೆ ಸೀಮಿತ: ಸಮಿತಿ ಶಿಫಾರಸು

2 ನಿಮಿಷ 20 ಸೆಕೆಂಡ್​ಗೆ ನಾಡಗೀತೆ ಸೀಮಿತ: ಸಮಿತಿ ಶಿಫಾರಸು
X

ನಾಡಗೀತೆಯನ್ನು ಹಾಡಲೂ 2 ನಿಮಿಷ 20 ಸೆಕೆಂಡ್ ನಲ್ಲಿ ಹಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತೇವೆ, ಎಂದು ಕಸಾಪ ಅಧ್ಯಕ್ಷ ಮನು ಬಳಿಗಾರ್ ಹೇಳಿದರು.

ಬೆಂಗಳೂರಿನಲ್ಲಿ ಬುಧವಾರ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು ಸಾಹಿತ್ಯವನ್ನು ತಗೆದು ಹಾಕದೆ ನಾಡಗೀತೆ ಹಾಡುವುದು ಯಾವುದೇ ಸಾಹಿತ್ಯ ಹಾಗೂ ಅರ್ಥ ಬದಲಾವಣೆ ಇಲ್ಲಾ ಸರ್ಕಾರಕ್ಕೆ ಕಸಾಪಯಿಂದ ನಾವು ಶಿಫಾರಸು ಮಾಡುತ್ತೇವೆ ನಾಡಗೀತೆ ಹಾಡಲು 2 : 20 ರಿಂದ 2 : 30 ಸಮಯ ನಿಗಧಿ ಮಾಡಬೇಕು ಎಂದರು.

ಇತಿಚ್ಚಿನ ದಿನಗಳಲ್ಲಿ ನಾಡಗೀತೆಯನ್ನು ಮನಸಿಗೆ ಬಂದ ಹಾಗೆ ಹಾಡಲಾಗುತ್ತಿದೆ. ನಾಡಗೀತೆ ಹಾಡಲು ಕಡಿವಾಣ ಹಾಕಲು ಅನೇಕ ಸಾಹಿತಿಗಳು, ಕನ್ನಡಪರ ಚಿಂತಕರು, ಹೋರಾಟಗಾರರು ಮತ್ತು ಹಾಡುಗಾರರು ಸರ್ಕಾರಕ್ಕೆ ಶಿಫಾರಸ್ಸು ಮಾಡಿದರು.

ಇನ್ನೂ ನಾಡಗೀತೆ ಹಾಡುವ ಅವಧಿ ಬಗ್ಗೆ ಈಗಾಗಲೇ ಕಸಾಪನಲ್ಲಿ ಚರ್ಚೆಯಾಗಿದೆ. ಸಭೆ ಸಮಾರಂಭಗಳಲ್ಲಿ ನಾಡಗೀತೆಯನ್ನು 8ರಿಂದ 9 ನಿಮಿಷ ಹಾಡುತ್ತಾರೆ. ಅನೇಕ ಜನರ ಸಲಹೆ ಮೇರೆಗೆ ಈ ಪ್ರಸ್ತಾವನೆಯನ್ನು ಸರ್ಕಾರದ ಮುಂದೆ ಈಡಲು ತೀರ್ಮಾನ ಮಾಡಲಾಗುತ್ತಾದೆ ಎಂದರು.

ಹೋರಾಟಗಾರರು ಸಾಹಿತಿಗಳ ಸಮ್ಮುಖದಲ್ಲಿ ತೀರ್ಮಾನ ಮಾಡಲಾಗಿದೆ. ಕಂಬಾರ್, ಸಿದ್ದಲಿಂಗಯ್ಯ, ಕಮಲಾ ಹಂಪನಾ ಸೇರಿದಂತೆ ಅನೇಕ ಗಾಯಕರು ಈ ಚರ್ಚೆಯಲ್ಲಿ ಭಾಗವಹಿಸಿದ್ದರು ಎಂದರು.

Next Story

RELATED STORIES