Top

ನಿಮಿಷ 10, ವಾರ್ತೆ 50

ನಿಮಿಷ 10, ವಾರ್ತೆ 50
X

1.ಆಂಬಿಡೆಂಟ್ ಕಂಪನಿ ಮಾಡಿಕೊಂಡಿದ್ದರು ಎನ್ನಲಾದ ಡೀಲ್​ ಪ್ರಕರಣದಲ್ಲಿ ಮಾಜಿ ಸಚಿವ ಗಾಲಿ‌ಜನಾರ್ದನ ರೆಡ್ಡಿಗೆ ಕೊನೆಗೂ ಜಾಮೀನು ಸಿಕ್ಕಿದೆ. ಆ ಮೂಲಕ ಜನಾರ್ದನ ರೆಡ್ಡಿಗೆ ಬಿಗ್​ ರಿಲೀಫ್​ ಸಿಕ್ಕಿದ್ದೂ, ಸಿಸಿಬಿ ​ ಅಧಿಕಾರಿಗಳಿಗೆ ಭಾರೀ ಮುಖಭಂಗವಾಗಿದೆ.

2.ಯಶವಂತಪುರ ಬಳಿ ಇರೋ ಸ್ಪರ್ಶ್​ ಆಸ್ಪತ್ರೆಯಲ್ಲಿ ಸ್ಪರ್ಶ ವಚನ ಎಂಬ‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಳೆದ 9 ವರ್ಷಗಳಿಂದ ಈ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷ ಸುಮಾರು 200 ಮಕ್ಕಳಿಗೆ ವಿಶೇಷ ಚೇತನರಿಗೆ ಸಹಾಯ ಮಾಡುವುದು ಇದರ ಉದ್ದೇಶ. ಇದರಲ್ಲಿ ಪ್ರಮುಖ ಸರ್ಜನ್‌ಗಳು ಮಕ್ಕಳ ಬದುಕಿಗೆ ಹೊಸ ಬೆಳಕನ್ನು ನೀಡ್ತಾ ಇದ್ದು, ನಡೆದಾಡುವ ಸಮಸ್ಯೆ ಸೇರಿದಂತೆ ನಾನಾ‌ ಅಂಗವೈಕಲ್ಯಕ್ಕೆ ಮುಕ್ತಿ ನೀಡಿ, ಅವರ ಭವಿಷ್ಯಕ್ಕೆ ದಾರಿ ದೀಪಾವಾಗಿದ್ದಾರೆ.

3.ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಪಶ್ಚಿಮ ವಾಹಿನಿಯಲ್ಲಿ ಇಂದು ಅನಂತಕುಮಾರ್‌ ಚಿತಾಭಸ್ಮ ವಿಸರ್ಜಿಸಲಾಯಿತು. ಅವರ ಕುಟುಂಬಸ್ಥರು ಹಾಗೂ ಬಿಜೆಪಿ ಮುಖಂಡರ ನೇತೃತ್ವದಲ್ಲಿ ವಿಸರ್ಜನೆ ಮಾಡಲಾಯಿತು. ವೇದಬ್ರಹ್ಮ ಭಾನು ಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಅಸ್ತಿ ವಿಸರ್ಜನೆಗೂ ಮೊದಲು ಧಾರ್ಮಿಕ ಕಾರ್ಯಗಳು ನಡೆದವು. ಬಳಿಕ ಅನಂತಕುಮಾರ್‌ ಸಹೋದರ ನಂದಕುಮಾರ್ ಅಸ್ತಿ ವಿಸರ್ಜನೆ ಮಾಡಿದರು.

4. ದೇಶದ ನೂತನ ಸಂಪರ್ಕ ಉಪಗ್ರಹ ಜಿಸ್ಯಾಟ್‌- 29 ನಭ ಸೇರಿದೆ. ಚೆನ್ನೈನಿಂದ 100 ಕಿ.ಮೀ. ದೂರದಲ್ಲಿರುವ ಸತೀಶ್‌ ಧವನ್‌ ಉಡಾವಣಾ ನೆಲೆಯಿಂದ ಸಂಜೆ 5 ಗಂಟೆ 08ಕ್ಕೆ ಯಶಸ್ವಿಯಾಗಿ ಉಡಾವಣೆಯಿತು. 3 ಸಾವಿರದ 423 ಕೆ.ಜಿ. ತೂಕದ ಜಿಸ್ಯಾಟ್‌- 29 ಉಪಗ್ರಹ ಎರಡು ಟ್ರಾನ್ಸ್‌ಪಾಂಡರ್‌ ಒಳಗೊಂಡಿದೆ. ಇದು ಜಮ್ಮುಕಾಶ್ಮೀರ ಹಾಗೂ ಈಶಾನ್ಯ ಭಾಗದ ಬಳಕೆದಾರರ ಸಂಪರ್ಕ ವ್ಯವಸ್ಥೆ ಸಹಕಾರಿಯಾಗಲಿದೆ.

5.ಸಿಂಗಾಪುರದಲ್ಲಿ ನಡೆಯುತ್ತಿರುವ ಫಿನ್‌ಟೆಕ್‌ ಫೆಸ್ಟಿವಲ್‌ ನಲ್ಲಿ ಪಾಲ್ಗೊಂಡು ಭಾಷಣ ಮಾಡಿದ ಪ್ರಧಾನಿ ಮೋದಿ, ಜಾಗತಿಕ ಮಟ್ಟದಲ್ಲಿ ಡಿಜಿಟಲ್‌ ಯುಗ ಆರಂಭವಾಗಿದ್ದು, ಭಾರತ ಕೂಡ ಇದಕ್ಕೆ ಮುಕ್ತವಾಗಿ ತೆರೆದುಕೊಂಡಿದೆ. ಕಳೆದ ಕೆಲವು ವರ್ಷಗಳಿಂದ ಡಿಜಿಟಲೀಕರಣದಿಂದ ದೇಶ ಪ್ರಗತಿಯತ್ತ ಸಾಗುತ್ತಿದೆ. ಸಿಂಗಾಪುರ ಆರ್ಥಿಕ ವಿಷಯದಲ್ಲಿ ಜಾಗತಿಕ ಮಟ್ಟದಲ್ಲಿ ಮುಖ್ಯ ಹಬ್‌ ಆಗಿದ್ದು, ಹಣಕಾಸು ವಿಷಯದಲ್ಲಿ ಡಿಜಿಟಲೀಕರಣಕ್ಕೆ ಈ ದೇಶ ಸಾಕಷ್ಟು ಒತ್ತು ನೀಡಿದೆ. ಈ ನಿಟ್ಟಿನಲ್ಲಿ ಆಯೋಜನೆ ಮಾಡುತ್ತಿರುವ ಫಿನ್‌ಟೆಕ್‌ ಫೆಸ್ಟಿವಲ್‌ ವಿಶ್ವಾಸದ ಪ್ರತೀಕವಾಗಿದೆ ಎಂದು ಹೇಳಿದರು.

6. ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದ ದಿನದಿಂದ ಕಾಶ್ಮೀರಕ್ಕಾಗಿ ಎರಡೂ ದೇಶಗಳ ನಡುವೆ ಸಮರ ನಡೆಯುತ್ತಲೇ ಇದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್​ ಅಫ್ರಿದಿ ಪಾಕ್​ ಸರ್ಕಾರ ಕೆಣಕಿದ್ದಾರೆ. ಕಾಶ್ಮೀರಕ್ಕಾಗಿ ಪಾಕಿಸ್ತಾನ ಇಟ್ಟಿರುವ ಬೇಡಿಕೆಯಿಂದ ಹಿಂದೆ ಸರಿಯಬೇಕು. ಪಾಕಿಸ್ತಾನಕ್ಕೆ ಜಮ್ಮು-ಕಾಶ್ಮೀರ ಬೇಕಿಲ್ಲ. ನಮ್ಮ ದೇಶದ ನಾಲ್ಕು ಪ್ರಾಂತ್ಯಗಳನ್ನೇ ನಿಂಯತ್ರಿಸಲು ಪಾಕ್​​ ಸರ್ಕಾರಕ್ಕೆ ಆಗುತ್ತಿಲ್ಲ. ಈ ಸಂದರ್ಭದಲ್ಲಿ ಮತ್ತೊಂದು ಪ್ರದೇಶ ತೆಗೆದುಕೊಂಡು ಹೇಗೆ ಆಡಳಿತ ನಡೆಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

7. ರಫೇಲ್ ಯುದ್ಧ ವಿಮಾನ ಖರೀದಿ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ತೀರ್ಪು ಕಾಯ್ದಿರಿಸಿದೆ. ಪ್ರಕರಣ ಸಂಬಂಧ ಅವಶ್ಯವಿರುವ ವಾಯುಪಡೆ ಅಧಿಕಾರಿಗಳು ಮಾಹಿತಿ ನೀಡಲಿ. ವಿಚಾರಣೆಯಲ್ಲಿ ಅವರು ಕಡ್ಡಾಯವಾಗಿ ಹಾಜರಿರಲಿ ಎಂದು ತಾಕೀತು ಮಾಡಿದೆ.

8.ರೈಲ್ವೆ ಸಿಬ್ಬಂದಿಯ ಸಾಹಸ ಮತ್ತು ಸಮಯ ಪ್ರಜ್ಞೆಯಿಂದಾಗಿ ಅಪಾಯಕ್ಕೆ ಸಿಲುಕಿದ್ದ ರೈಲು ಪ್ರಯಾಣಿಕನೊಬ್ಬ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ಚೆನ್ನೈನ ಎಗ್ಮೋರ್ ರೈಲು ನಿಲ್ದಾಣದಲ್ಲಿ ಕಳೆದ ಸೋಮವಾರ ಈ ಘಟನೆ ನಡೆದಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ. ಚಲಿಸುತ್ತಿದ್ದ ರೈಲು ಹತ್ತಲುಹೋದ ಪ್ರಯಾಣಿಕ ಆಯತಪ್ಪಿ ಬೀಳುವ ಹಂತಕ್ಕೆ ಬಂದಿದ್ದ. ರೈಲಿನ ಕಂಬಿ ಹಿಡಿದು ನೇತಾಡುತ್ತಿದ್ದ ವ್ಯಕ್ತಿಯನ್ನು ಗಮನಿಸಿದ ರೈಲ್ವೆ ಸುರಕ್ಷತಾ ಸಿಬ್ಬಂದಿ ಕೂಡಲೇ ಆತನನ್ನು ಹೊರಗೆ ಎಳೆದುಕೊಂಡರು. ಸಿಬ್ಬಂದಿ ಕೊಂಚ ತಡ ಮಾಡಿದ್ದರೂ ಆತ ಕೆಳಗೆ ಬಿದ್ದು ಅಪಾಯ ಸಂಭವಿಸುವ ಸಾಧ್ಯತೆ ಇತ್ತು.

9.ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ರಾಜಸ್ಥಾನದಲ್ಲಿ ಬಿಜೆಪಿಗೆ ಭಾರೀ ಹಿನ್ನೆಡೆಯಾಗಿದೆ. ಬಿಜೆಪಿ ಸಂಸದ ಹರೀಶ್‌ ಚಂದ್ರ ಮೀನಾ ಇಂದು ಕಾಂಗ್ರೆಸ್‌ ಸೇರಿದ್ದಾರೆ. ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಮತ್ತು ಅಲ್ಲಿನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸಚಿನ್‌ ಪೈಲಟ್‌ ಅವರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಈ ಮೂಲಕ ಈ ಬಾರಿ ಹಿರಿಯ ಮುಖಂಡರು ಸ್ಪರ್ಧಿಸುವುದಿಲ್ಲ ಎಂಬ ವದಂತಿಗಳಿಗೆ ತೆರೆ ಬಿದ್ದಿದೆ.

10. ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಮುಖಂಡ ಶಶಿ ತರೂರ್‌ ಮತ್ತೆ ಕಿಡಿಕಾರಿದ್ದಾರೆ. ಇಂದು ದೇಶಕ್ಕೆ ಒಬ್ಬ ಚಾಯ್ ವಾಲಾ ಪ್ರಧಾನಿಯಾಗಿದ್ದಾರೆ ಎಂದರೆ ಅದಕ್ಕೆ ಕಾರಣ ಚಾಚಾ ನೆಹರೂ ಎಂದು ಹೇಳಿದ್ದಾರೆ. ನೆಹರೂ ಜನ್ಮ ದಿನದಂದು ದೆಹಲಿಯಲ್ಲಿ ಆಯೋಜಿಸಿದ್ದ ತಮ್ಮ ‘ನೆಹರೂ, ದಿ ಇನ್ವೆಂಷನ್‌ ಆಫ್‌ ಇಂಡಿಯಾ' ಪುಸ್ತಕ ಮರುಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ತರೂರ್, ‘ಯಾವುದೇ ಭಾರತೀಯನೂ ಸಹ ಅತ್ಯುನ್ನತ ಮಟ್ಟಕ್ಕೆ ಏರಲು ಅವಕಾಶ ಇರುವ ಮಟ್ಟಿಗಿನ ಸಂಸ್ಥೆಗಳನ್ನು ಹಾಗೂ ವ್ಯವಸ್ಥೆಗಳನ್ನು ಚಾಚಾ ಜವಾಹರ್ ಲಾಲ್ ನೆಹರೂ ತಂದ ಕಾರಣ ಇಂದು ಚಾಯ್‌ವಾಲಾರಂಥವರು ಪ್ರಧಾನ ಮಂತ್ರಿಯಾಗಿದ್ದಾರೆ ಎಂದು ಹೇಳಿದ್ದಾರೆ

11.ನಟಿ ಶ್ರುತಿ ಹರಿಹರನ್ ಈ ಹಿಂದೆ ನಟ ಅರ್ಜುನ್ ಸರ್ಜಾ ವಿರುದ್ಧ ಮಾಡಿದ್ದ ಮೀಟೂ ಆರೋಪಕ್ಕೆ ಸಂಬಂಧಿಸಿದಂತೆ ಇಂದು ಮಹಿಳಾ ಆಯೋಗಕ್ಕೆ ಆಗಮಿಸಿದ್ರು. ತಾವು ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ರು. ಅಲ್ಲದೇ, ಶ್ರುತಿ ಆರೋಪಕ್ಕೆ ತಕ್ಕ ವಿಡಿಯೋ ಕೋರ್ಟ್ ಗೆ ನೀಡಿದ್ದೇನೆ ಅನ್ನೋ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ

12. ಶ್ರೀಲಂಕಾ ರಾಜಕೀಯದಲ್ಲಿ ಮಹತ್ತರ ಬೆಳವಣಿಗೆ ನಡೆದಿದೆ. ಸಂಸತ್ತಿನಲ್ಲಿ ಇಂದು ನಡೆದ ವಿಶ್ವಾಸ ಮಂಡನೆಯಲ್ಲಿ ಶ್ರೀಲಂಕಾದ ಪ್ರಧಾನಿಯಾಗಿ ನೇಮಕಗೊಂಡಿದ್ದ ಮಹಿಂದಾ ರಾಜಪಕ್ಸೆ ವಿರುದ್ಧ ಮತ ಚಲಾವಣೆಯಾಗಿದೆ. 225 ಸದಸ್ಯ ಬಲದ ಶ್ರೀಲಂಕಾ ಸಂಸತ್ತಿನಲ್ಲಿ ಬಹುಮತಕ್ಕೆ 113 ಸ್ಥಾನ ಪಡೆಯಬೇಕು. ಆದರೆ, ಬಹುತೇಕರು ರಾಜಪಕ್ಸೆ ವಿರುದ್ಧ ಮತ ಹಾಕಿದ್ದಾರೆ. ಇದರಿಂದ ಅವರಿಗೆ ತೀವ್ರ ಹಿನ್ನಡೆಯಾಗಿದೆ. ಹಾಗಂದ ಮಾತ್ರಕ್ಕೆ ಈ ವಿಶ್ವಾಸ ಮಂಡನೆ ವಿಕ್ರಮಸಿಂಘೆ ಅವರಿಗೆ ಸಂದ ಜಯ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ವಿಶ್ವಾಸ ಮಂಡನೆ ವೇಳೆ ಸಾಕಷ್ಟು ನಾಟಕೀಯ ಬೆಳವಣಿಗೆಗೂ ಸಂಸತ್ತು ಸಾಕ್ಷಿಯಾಯ್ತು. ರಾಜಪಕ್ಸೆ ಬೆಂಬಲಿಗರು ಮತ ಚಲಾವಣೆಗೆ ಅಡ್ಡಿ ಮಾಡುವ ಪ್ರಯತ್ನಗಳನ್ನೂ ನಡೆಸಿದರು

13.ಟಿಪ್ಪು ಜಯಂತಿ ಆಚರಣೆ ಕಾರ್ಯಕ್ರಮಕ್ಕೆ ಸಿಎಂ, ಡಿಸಿಎಂ ಇಬ್ಬರೂ ಗೈರಾಗಿದ್ದು ಟೀಕೆಗೆ ಕಾರಣವಾಗಿದೆ. ಈ ಬಗ್ಗೆ ಸಿಎಂ ಕುಮಾರಸ್ವಾಮಿ ಇಂದು ಸ್ಪಷ್ಟನೆ ನೀಡಿದ್ದಾರೆ. ನಾನು ಭಾಗವಹಿಸಲು ಅನಾರೋಗ್ಯ ಅಡ್ಡಿಯಾಗಿತ್ತು. ಮುಂದಿನ ವರ್ಷದ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಖಂಡಿತವಾಗಿ ಭಾಗವಹಿಸುತ್ತೇನೆ ಎಂದು ಹೇಳಿದ್ದಾರೆ. ಆದ್ರೆ, ಡಿಸಿಎಂ ಡಾ.ಜಿ.ಪರಮೇಶ್ವರ್​ ಮಾತ್ರ ಮುಂದೆ ನೋಡೋಣ ಅಂತ ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ.

14.ಶ್ವೇತ ಭವನದಲ್ಲಿ ದೀಪಾವಳಿ ಆಚರಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಜಗತ್ತಿನಾದ್ಯಂತ ದೀಪಾವಳಿ ಆಚರಿಸುವ ಅತಿ ದೊಡ್ಡ ಸಮುದಾಯವಾದ ಹಿಂದೂಗಳನ್ನು ಪ್ರಸ್ತಾಪಿಸುವುದನ್ನೇ ಮರೆತು ಟ್ವೀಟಿಸಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಟ್ವೀಟ್‌ ಗಮನಿಸಿದ ಕೂಡಲೇ ಟ್ರಂಪ್‌ ಹಿಂದೂಗಳಿಗೆ ಶುಭಕೋರುವುದನ್ನೇ ಮರೆತಿರುವುದನ್ನು ಪ್ರಸ್ತಾಪಿಸಿದ್ದಾರೆ. ದೀಪಾವಳಿ ಹಿಂದೂಗಳಿಗೆ ಪ್ರಮುಖ ಹಬ್ಬ ಎಂದು ಸಾಕಷ್ಟು ಜನರು ಟ್ವೀಟಿಸಿದ್ದರು.

15.ಕೋಟ ಕೋಟಿ ಬಂಡವಾಳ ಹಾಕಿ ಕೈ ಸುಟ್ಟುಕೊಂಡಿರೋ ಬಿಎಂಟಿಸಿ ಮತ್ತೆ ಲಾಸ್ ಮಾಡೋಕೆ ಸಾರಿಗೆ ಮಿನಿಸ್ಟರ್ ತಯಾರಿ ನಡೆಸಿದ್ದಾರೆ. ಹೌದು ಮುಳುಗೋ ಹಡಗಾಗಿರೋ ಬಿಎಂಟಿಸಿಯನ್ನ ಮೇಲೆತ್ತೋ ಬದುಲು ಅನಗತ್ಯ ವೆಚ್ಚಕ್ಕೆ ಮುಂದಾಗಿದ್ದಾರೆ. ಕೇವಲ ಸಿಟಿ ಮಂದಿಗೆ ಸಾರಿಗೆ ಒದಗಿಸೋದನ್ನ ಬಿಟ್ಟು ಕೋಟ್ಯಾಂತರ ರೂ ವೆಚ್ಚದಲ್ಲಿ ಮತ್ತೆ ಟಿಟಿಎಂಸಿಗಳನ್ನ ಮಾಡ್ತೀವಿ ಅಂತ ಹೊರಟ್ಟಿದ್ದಾರೆ

16. ಬೆಂಗಳೂರಿನಲ್ಲಿ ಮತ್ತೆ ಗುಂಡಿನ ಸದ್ದು ಕೇಳಿದೆ . ನಟೋರಿಯಸ್ ಹಳೆ ಅಫೆಂಡರ್ ಆಗಿದ್ದ ದಿನೇಶ್ ದೋರಾ ಎಂಬಾತನ ಕಾಲಿಗೆ ಪೊಲೀಸರು ಗುಂಡು ನುಗ್ಗಿಸಿದ್ದಾರೆ . ಬಸವೇಶ್ವರನಗರ , ಹೆಣ್ಣೂರು ಸೇರಿದಂತೆ ಒಟ್ಟು ಏಳು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 14 ಕಳ್ಳತನ ಪ್ರಕರಣಗಳಿದ್ದು ನಗರದ ವಿವಿಧ ಠಾಣೆಯಲ್ಲಿ ವಾಂಟೆಡ್ ಲಿಸ್ಟ್ ಅಕ್ಯೂಸ್ ಆಗಿದ್ದ . ಇನ್ನು ಸಂಸದ ಅನಂತ್ ಕುಮಾರ್ ಅವರ ಅಂತಿಮ ಸಂಸ್ಕಾರದ ಹಿನ್ನಲೆ ಪೊಲೀಸರು ಬಂದೋಬಸ್ತ್ ನಲ್ಲಿದ್ದರು .

17.ಬಸವನಗುಡಿಯ ದೊಡ್ಡ ಬಸವಣ್ಣನ ದೇವಸ್ಥಾನದಲ್ಲಿ ಪ್ರತೀ ವರ್ಷ ನಡೆಯುವ ಕಡಲೇಕಾಯಿ ಪರಿಷೆಗೆ ರಾಜ್ಯದ ವಿವಿಧೆಡೆಯಿಂದ ಹಿಡಿದು ವಿದೇಶದಿಂದಲೂ ಜನ ಬರ್ತಾರೆ. ಇನ್ನು ಡಿಸೆಂಬರ್ 3 ಮತ್ತು 4 ರಂದು ಪರಿಷೆ ನಡೆಸಲು ಸಿದ್ಧತೆಯೂ ನಡೀತಿದೆ. ಅಷ್ಟರಲ್ಲಿ ಜಟಾಪಟಿ ಶುರುವಾಗಿದೆ .

18.ಅನೇಕ ವರ್ಷಗಳಿಂದ ನಾಡ ಗೀತೆಗೆ ಸೂಕ್ತವಾದ ಸಮಯ ನಿಗಧಿಮಾಡುವ ವಿಚಾರ ಚರ್ಚೆಯಾಗುತ್ತಿದ್ದರೂ ಬಗೆಹರಿಯದೆ ಕಗ್ಗಂಟಾಗಿದೆ. ಹಲವು ಪರ ಮತ್ತು ವಿರೋಧದ ಅಭಿಪ್ರಯಾಗಳು ಸಮಯ ನಿಗಧಿ ವಿಚಾರದಲ್ಲಿ ಕೇಳಿ ಬರುತ್ತಲೆ ಇವೆ

19.ಬೆಂಗಳೂರಿನಲ್ಲಿ ಮತ್ತೆ ಗುಂಡಿನ ಸದ್ದು ಕೇಳಿದೆ . ನಟೋರಿಯಸ್ ಹಳೆ ಅಫೆಂಡರ್ ಆಗಿದ್ದ ದಿನೇಶ್ ದೋರಾ ಎಂಬಾತನ ಕಾಲಿಗೆ ಪೊಲೀಸರು ಗುಂಡು ನುಗ್ಗಿಸಿದ್ದಾರೆ

20.ಆಂಬಿಡೆಂಟ್ ವಂಚಕರ ಜಾಲದಲ್ಲಿ ಇದೀಗ ಪತ್ರಕರ್ತರ ಹೆಸರು ತಳುಕು ಹಾಕಿಕೊಂಡಿದೆ. ಜನಾರ್ದನ್ ರೆಡ್ಡಿಗೆ ೫೭ ಕೆಜಿ ಚಿನ್ನದ ಬಿಸ್ಕತ್ ಕೊಟ್ಟಿರೋ ವಿಚಾರ ವನ್ನ ಬಾಯ್ಬಿಟ್ಟಿದ್ದ ಆಂಬಿಡೆಂಟ್ ಕಂಪೆನಿಯ ಮಾಲೀಕ ಫರೀದ್ ಇದೀಗ ಮತ್ತೊಂದು ಬಾಂಬನ್ನ ಸಿಡಿಸಿದ್ದಾನೆ.

21.ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ರಣತಂತ್ರ ರೂಪಿಸಿದೆ.ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಂಡು ಚುನಾವಣೆ ಎದುರಿಸಲು ತಯಾರಿ ಆರಂಭವಾಗಿದೆ.

22. ಉಪಚುನಾವಣೆ ಗೆದ್ದ ಹುರುಪಿನಲ್ಲಿರುವ ಕಾಂಗ್ರೆಸ್ ಮುಂಬರುವ ಲೋಕಸಭೆ ಚುನಾವಣೆಗೆ ಹೊಸ ಹುಮ್ಮಸ್ಸಿನೊಂದಿಗೆ ಸಜ್ಜಾಗಿದೆ.ಮುಂಬರುವ ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಕಾಂಗ್ರೆಸ್ ಮುಖಂಡರು ಜಿಲ್ಲಾವಾರು ಪಕ್ಷ ಸಂಘಟನೆ ಬಲ ಪಡಿಸುವ ಕಡೆ ಗಮನ ಹರೆಸಿದ್ದಾರೆ.

23. ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ, ಲಾರಿ ಮೇಲೆ ಉರುಳಿ ಬಿದ್ದ ವಿದ್ಯುತ್ ಕಂಬ, ಬಾಗಲಗುಂಟೆಯ ಬಿ.ಹೆಚ್.ಇ.ಎಲ್ ಕಾಲೋನಿಯಲ್ಲಿ ಘಟನೆ ಸಂಭವಿಸಿದೆ.

24.ಮದ್ವೆಗೆ ಆಭರಣಗಳಿಂದ ಶೃಂಗಾರ ಮಾಡಿಕೊಂಡು ಬಂದಿದ್ದ ಹೆಣ್ಮಗಳ ೧೦೦ ಗ್ರಾಂ ಚಿನ್ನದ ಸರವನ್ನ ಕಳ್ಳರು ಕಸಿದು ಪರಾರಿಯಾಗಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂ ನ ೮ ನೇ ಮುಖ್ಯರಸ್ತೆಯಲ್ಲಿರೋ ರಿಜಾಯ್ಸ್ ಕಲ್ಯಾಣ ಮಂಟಪದಲ್ಲಿ ಮದುವೆ ಕಾರ್ಯಕ್ರಮವಿತ್ತು. ಈ ಮದುವೆ ಕಾರ್ಯಕ್ರಮದ ನಿಮಿತ್ತ ಆಂದ್ರದಿಂದ ನಿರ್ಮಲ ಎಂಬವರು ತಮ್ಮ ಪರಿವಾರದ ಜೊತೆ ಬಂದಿದ್ದರು. ನೂರು ಗ್ರಾಂ ತೂಕದ ಎರಡು ದೊಡ್ಡ ಗಾತ್ರದ ಚಿನ್ನದ ನೆಕ್ಲೇಸ್ ಹಾಕಿಕೊಂಡು ಕಲ್ಯಾಣ ಮಂಟಪಕ್ಕೆ ಎಂಟ್ರಿ ಕೊಡ್ತಿದ್ದಂತೆ ಮುಸುಕುಧಾರಿ ಕಳ್ಳನೊಬ್ಬ ನಿರ್ಮಲಾರ ನೂರು ಗ್ರಾಂ ತೂಕದ ಚಿನ್ನದ ಸರವನ್ನ ಎಗರಿಸಿ ಎಸ್ಕೇಪ್ ಆಗಿದ್ದ. ಹಾಗೂ ಹೀಗೂ ಮಾಡಿ ಕಳ್ಳನನ್ನ ಹಿಡಿಯೋಕೆ ಮುಂದಾದ್ರು ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ನಿರ್ಮಲಾ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಆರೋಪಿಯನ್ನ ಹುಡುಕಾಡಲು ಶುರುಮಾಡಿದ್ದಾರೆ.

25.ಸಿಗರೇಟ್ ಸೇದೋ ವಿಚಾರದಲ್ಲಿ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾದ ಘಟನೆ ನವೆಂಬರ್ ೪ ನೇ ತಾರೀಕು ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಎಂಕಾಂ ವಿದ್ಯಾರ್ಥಿ ವಿನಯ್, ಮಹದೇವ್ ಎಂಬವರನ್ನ ಚಾಕುವಿನಿಂದ ಇರಿದು ಹತ್ಯೆಗೈದಿದ್ದ. ಕೇವಲ ಸಿಗರೇಟ್ ವಾಸನೆ ಸಹಿಸೋಕೆ ಆಗ್ತಿಲ್ಲ ಎಂದು ವಿನಯ್ ಜೊತೆ ಮಹದೇವ್ ಗಲಾಟೆ ತೆಗೆದಿದ್ದ. ಮಹದೇವ್ ನ ಮಾತನ್ನ ಧಿಕ್ಕರಿಸಿ ಸಿಗರೇಟ್ ಸೇದ್ತಿದ್ದ ವಿನಯ್ ನ ಮೇಲೆ ಕೈಗೆ ಕೈ ಮಿಲಾಯಿಸೋದಕ್ಕೆ ಹೋಗಿದ್ದ.ಇದರಿಂದ ಸಿಟ್ಟಾದ ವಿನಯ್ ತನ್ನ ಬಳಿಯಿದ್ದ ಬಟನ್ ಚಾಕುವಿನಿಂದ ಮಹದೇವನ ಎದೆ ಹಾಗೂ ಹೊಟ್ಟೆಯ ಭಾಗಕ್ಕೆ ಇರಿದು ಪರಾರಿಯಾಗಿದ್ದ. ಈ ಸಂಬಂಧ ಸ್ಥಳೀಯರೇ ಆರೋಪಿ ವಿನಯ್ ನನ್ನ ಥಳಿಸಿ ವಿಜಯ್ ನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದರು.

26. ಆಂಬಿಡೆಂಟ್ ವಂಚಕರ ಜಾಲದಲ್ಲಿ ಇದೀಗ ಪತ್ರಕರ್ತರ ಹೆಸರು ತಳುಕು ಹಾಕಿಕೊಂಡಿದೆ. ಜನಾರ್ದನ್ ರೆಡ್ಡಿಗೆ ೫೭ ಕೆಜಿ ಚಿನ್ನದ ಬಿಸ್ಕತ್ ಕೊಟ್ಟಿರೋ ವಿಚಾರ ವನ್ನ ಬಾಯ್ಬಿಟ್ಟಿದ್ದ ಆಂಬಿಡೆಂಟ್ ಕಂಪೆನಿಯ ಮಾಲೀಕ ಫರೀದ್ ಇದೀಗ ಮತ್ತೊಂದು ಬಾಂಬನ್ನ ಸಿಡಿಸಿದ್ದಾನೆ. ಇಬ್ಬರು ಪತ್ರಕರ್ತರು ತಮ್ಮನ್ನ ಬಚಾವ್ ಮಾಡೋದಾಗಿ ಹೇಳಿ ೩೦ ಕೋಟಿಯಷ್ಟು ಹಣವನ್ನ ತೆಗೆದುಕೊಂಡಿದ್ದಾರೆ. ಆರೋಪಿ ಫರೀದ್ ನೀಡಿದ ಹೇಳಿಕೆಯನ್ನಾಧರಿಸಿ ಇದೀಗ ಸಿಸಿಬಿ ಪೊಲೀಸರು ಇಬ್ಬರು ಪತ್ರಕರ್ತರಿಗೆ ನೋಟಿಸನ್ನ ನೀಡಿದ್ದಾರೆ. ಇಂದು ಬೆಳ್ಳಂಬೆಳಿಗ್ಗೆಯೇ ಪೊಲೀಸ್ ಅಧಿಕಾರಿಗಳ ಮುಂದೆ ಹಾಜರಾಗಿರೋ ಪತ್ರಕರ್ತರು ತಾವೇನೂ ತಪ್ಪೇ ಮಾಡಿಲ್ಲ ಅಂತ ಸಮಾಜಾಯಿಸಿಯ ಉತ್ತರವನ್ನ ನೀಡ್ತಿದ್ದಾರಂತೆ.

27.ಸೀರೆ ವ್ಯಾಪಾರ ಸಂಬಂಧ ಮಾಡಿಕೊಂಡಿದ್ದ ಸಾಲ ಹಿಂದಿರುಗಿಸದ ಹಿನ್ನಲೆ ಕಾರ್ಪೋರೇಟರ್ ಪತಿ ಮತ್ತು ರೌಡಿಶೀಟರ್ ಬೆಂಬಲಿಗರು ವ್ಯಕ್ತಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ಯಲಹಂಕದಲ್ಲಿ ನಡೆದಿದೆ..ಆಂದ್ರದ ಧರ್ಮಾವರಂನ ಸಾಂಭಶಿವ ಯಲಹಂಕ ಮಲ್ಲಿಜಾರ್ಜುನ್ ಬಳಿ ಸೀರೆ ವ್ಯಾಪಾರ ಸಂಬಂಧ 2ಲಕ್ಷ 70 ಸಾವಿರ ಸಾಲ ಮಾಡಿ ಹಿಂದಿರುಗಿಸುವುದು ತಡವಾಗಿತ್ತು.ಈ ಹಿನ್ಬಕೆ ಮಲ್ಲಿಕಾರ್ಜುನ್ ಸಾಂಭಶಿವರನ್ನು ಯಲಹಂಕದ ಕಾಮಾಕ್ಷಮ್ಮಲೇಔಟ್ ಮನೆಗೆ ಇದೇ ನವಂಬರ್ 9ರಂದು ಕರೆಸಿಕೊಂಡು ಹಲ್ಲೆ ನಡೆಸಿದರು.

28. ಚಿತ್ರರಂಗದಲ್ಲಿ ಬ್ಯಾಗ್ರೌಂಡ್ಇದರೆ ಬೆಳೆಯಬಹುದು ಅನ್ನೋ ಮಾತು ಸುಳ್ಳು ಎಂದು ನಟ ದರ್ಶನ್ ಹೇಳಿದ್ದಾರೆ..ನನಗೆ ಚಿತ್ರರಂಗಕ್ಕೆ ಬರೋಕೆ ಬ್ಯಾಗ್ರೌಂಡ್ ಇತ್ತು ಆದರೆ ನಾನು ಇಲ್ಲಿವರೆಗೆ ಬಂದು ನಿಲ್ಲಲ್ಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ.ಅಪ್ಪ ಹೀಗ್ ಮಾಡಿದರು, ಇವ್ನು ಯಾಕೆ ಹೀಗೆ ಮಾಡ್ತಿದ್ದಾನೆ ಎಂದು ಆಳಿಗೊಂದು ಮಾತನಾಡೋರೆ ಜಾಸ್ತಿ. ಆದರೆ ಬ್ಯಾಗ್ರೌಂಡ್​ ಇಲ್ಲದೆ ಬಂದೋರು ಆರಾಮಾಗಿ ಬೆಳಿತಾರೆ ಎಂದು ದರ್ಶನ್​ ತಮ್ಮ ಕಷ್ಟದ ದಿನಗಳನ್ನ ನೆನೆಸಿಕೊಂಡ್ರು. ಧರ್ಮಕೀರ್ತಿ ರಾಜ್ ನಟನೆಯ ಚಾಣಾಕ್ಷ ಚಿತ್ರದ ಆಡಿಯೋ ರಿಲೀಸ್​​ಗೆ ಬಂದ ಸಂದರ್ಭದಲ್ಲಿ ನಟ ದರ್ಶನ್ ಈ ಮಾತನ್ನ ಹೇಳಿದರು.

29. ಬೆಂಗಳೂರು- ಭತ್ತದ ಬೆಲೆ ಕುಸಿತದಿಂದ ಕೆಂಗೆಟ್ಟಿರುವ ರೈತರ ಸಂಕಷ್ಟಕ್ಕೆ ಧಾವಿಸಿರುವ ರಾಜ್ಯ ಸರ್ಕಾರ, ಪ್ರತಿ ಕ್ವಿಂಟಾಲ್ ಭತ್ತಕ್ಕೆ 1600ರೂ ನಂತೆ ಖರೀದಿಸಲು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಗೃಹ ಕಚೇರಿ ಕೃಷ್ಣದಲ್ಲಿ ಈ ಸಂಬಂಧ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಉನ್ನತ ಅಧಿಕಾರಿಗಳ ಸಭೆ ನಡೆಸಿ, ತಕ್ಷಣವೇ ಮಾರುಕಟ್ಟೆ ಮೂಲಕ ಪ್ರತಿ ಕ್ವಿಂಟಾಲ್ ಭತ್ತಕ್ಕೆ 1600 ರೂ ನಂತೆ ಖರೀದಿಸಲು ಅಧಿಕಾರಿಗಳಿಗೆ ಆದೇಶ ನೀಡಿದರು.

30. ನಾಳೆಯಿಂದ ನಿಮ್ಮ ಮೇಲೆ ಆಡಳಿತ ವರ್ಗ ನೀಮ್ ಮೇಲೆ ಹದ್ದಿನ ಕಣ್ಣು ಇಡಲಿದ್ದಾರೆ. .ಯಾಕೇಂದ್ರೆ ಮೊಬೈಲ್ ಬಳಕೆಯಿಂದ ಆಗ್ತಿರೋ ಅಪಘಾತ ಗಳ ಸಂಖ್ಯೆಯನ್ನ ಕಾಪಾಡಲು ನಿಗಮ ನೌಕರರ ಮೇಲೆ ಕಠಿಣ ಅಸ್ತ್ರ ಪ್ರಯೋಗ ಮಾಡಲು ಮುಂದಾಗಿದೆ. ನಾಳೆಯಿಂದ ಬಸ್ ಚಾಲನೆ ವೇಳೆ ಮೊಬೈಲ್ ನಲ್ಲಿ ಮಾತನಾಡಿ ಸಿಕ್ಕಿ ಬಿದ್ದರೆ ಅಮಾನತು ಮಾಡಲು ಮುಂದಾಗಿದೆ.

31. ನಾಡಗೀತೆ ಹಾಡಲು ಸೂಕ್ತವಾದ ಸಮಯ ಇಲ್ಲಾ ಇದರಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಹಾಗೂ ಹಿರಿಯ ನಾಗರಿಕರಿಗೆ ಅಷ್ಟು ಹೊತ್ತು ನಿಲ್ಲಲು ಕಷ್ಟ ಆಗುತ್ತಿದ್ದು ನಾಡ ಗೀತೆ ಹಾಡುವ ಸಮಯ ಕಡಿಮೆ ಮಾಡಲು ಕಸಾಪ ಮುಂದಾಗಿದೆ.

32. ರಾಜ್ಯ ಕೃಷಿ ಇಲಾಖೆ 2017ರಲ್ಲಿಯೇ ಖಾಲಿ ಇರುವ ೬೬ ಸಹಾಯಕ ಕೃಷಿ ನಿರ್ದೇಶಕರು , ೩೭೩ ಕೃಷಿ ಅಧಿಕಾರಿ , ೧೬೯ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇರ ನೇಮಕಕ್ಕೆ ಅಧಿಸೂಚನೆ ಹೊರಡಿಸಿತ್ತು. ಅದೇ ವರ್ಷ ಜುಲೈನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ 2018ರಲ್ಲಿ ಮೆರಿಟ್ ಆಧಾರದಲ್ಲಿ ಆಯ್ಕೆ ಪಟ್ಟಿಯನ್ನು ಪ್ರಕಟಿಸಿತು.

33.ರಾಜ್ಯ ನೇಕಾರರ ಸಮಸ್ಯೆಗಳ ಕುರಿತಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ಜರುಗಿತು. ರಾಜ್ಯದಲ್ಲಿ ನೇಕಾರರ ಪರಿಸ್ಥಿತಿ ಬಹುತೇಕ ಸಂದರ್ಭದಲ್ಲಿ ರೈತರಿಗಿಂತ ದುಸ್ತರವಾಗಿದೆ. ಹಲವಾರು ಕುಟುಂಬಗಳ ಸದಸ್ಯರು ಆತ್ಮಹತ್ಯೆಯಂತಹ ಕ್ರಮಕ್ಕೂ ಮುಂದಾಗಿದ್ದಾರೆ. ನೇಕಾರರ ಬವಣೆಗಳನ್ನು ನಿವಾರಿಸಲು ಸರ್ಕಾರ ಮುಂದಾಗಿದೆ.

34.ಬಿಬಿಎಂಪಿಯಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದ ಅವಧಿಯಲ್ಲಿ ಒಟ್ಟು ಹನ್ನೊಂದು ಕಟ್ಟಡಗಳನ್ನು ಅಡಮಾನಿಡಲಾಗಿತ್ತು. ಸದ್ಯ ಪಾಳಿಕೆಯಲ್ಲಿ ಮೈತ್ರಿಯಾಗಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್​-ಜೆಡಿಎಸ್​ ಹಂತ-ಹಂತವಾಗಿ ಅಡಮಾನ ಇಟ್ಟಿರುವ ಕಟ್ಟಡಗಳನ್ನು ಮರಳಿ ವಶಕ್ಕೆ ಪಡೆಯುತ್ತಲಿವೆ.

35.ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ರಣತಂತ್ರ ರೂಪಿಸಿದೆ.ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಂಡು ಚುನಾವಣೆ ಎದುರಿಸಲು ತಯಾರಿ ಆರಂಭವಾಗಿದೆ.ಶೀಘ್ರದಲ್ಲೇ ಡಿಜಿಟಲ್ ಯುಥ್ ಫಾರ್ ಎವರಿ ಬೂತ್ ಎಂಬ ಕಾರ್ಯತಂತ್ರಕ್ಕೆ ಕಾಂಗ್ರೆಸ್ ಮುಖಂಡರು ಚಾಲನೆ ನೀಡಲಿದ್ದಾರೆ.

ಪ್ರತಿ ಬೂತ್ ಗೆ ಒಬ್ಬ ಯುವ ಕಾಂಗ್ರೆಸ್ ಕಾರ್ಯಕರ್ತನ ನಿಯೋಜನೆ ಮಾಡಲಾಗುತ್ತದೆ.

36.ನಿಷೇಧಿತ ವಿಷಕಾರಿ ಆಹಾರ ಕ್ಯಾಟ್ ಫಿಶ್ ಸಾಕಾಣಿಕೆ ಅಡ್ಡೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಮುದ್ದುರಾಮನಾಯಕನ ಪಾಳ್ಯದಲ್ಲಿ ಲಕ್ಕೂರಿನ ಖಲೀಲ್ ಎಂಬುವರಿಗೆ ಸೇರಿದ ಸಾಕಾಣಿಕೆ ಅಡ್ಡೆ ಮೇಲೆ ದಾಳಿ ನಡೆಸಿದ್ದು, ನೆಲಮಂಗಲ ತಹಶಿಲ್ದಾರ್ ಎನ್.ರಾಜಶೇಖರ್ ಹಾಗೂ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇನ್ನೂ ಅಗಳಕುಪ್ಪೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಜಯಲಕ್ಷ್ಮೀ ತಾಯಿಗೆ ಸೇರಿದ ಜಮೀನಿನಲ್ಲಿ ಬಾಡಿಗೆ ಪಡೆದು ಖಲೀಲ್ ಕ್ಯಾಟ್ ಫಿಶ್ ನಡೆಸುತ್ತಿದ್ದರು.

37.ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮವಾಗಿ ಲಾರಿ ಮೇಲೆ ವಿದ್ಯುತ್ ಕಂಬ ಉರುಳಿ ಬಿದ್ದ ಘಟನೆ ಸಂಭವಿಸಿದೆ. ಬೆಂಗಳೂರು ಹೊರವಲಯ ಬಾಗಲಗುಂಟೆ ಬಿ.ಹೆಚ್.ಇ.ಎಲ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಕೂದಲೇಳೆ ಅಂತರದಲ್ಲಿ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

38.ಒಂದು ದಿನದ ಮಗುವನ್ನು ತಾಯಿಯೇ ಆಸ್ಪತ್ರೆಯಲ್ಲಿ ಬಿಟ್ಟು ಹೋದ ಘಟನೆ ಯಾದಗಿರಿ ಜಿಲ್ಲೆಯ ಗುರುಮೀಠಕಲ್ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

39.ನಿಖಿಲ್ ಕುಮಾರಸ್ವಾಮಿ ಜೊತೆ ಸ್ವಾತಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಿಶ್ಚಿತಾರ್ಥ ಮೂರಿದು ಬಿದಿದ್ದು, ಇದೀಗ ಮಾಜಿ ಸಚಿವ ಶ್ರೀಕಂಠಯ್ಯ ಮೊಮ್ಮಗ , ರವಿ ಶ್ರೀಕಂಠಯ್ಯ ಮಗ ನೇಹಾನೀಶ್​​ ಜೊತೆ ಬುಧವಾರ ಸ್ವಾತಿ ನಿಶ್ಚಿತಾರ್ಥ ನೆರವೇರಿದೆ.

40.ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಸಿಂಗ್ ಮದುವೆ ಕಾರ್ಯಕ್ರಮಗಳು ಬುಧವಾರದಿಂದ ಆರಂಭಗೊಂಡಿದ್ದು, ಇಟಲಿಯ ವಿಲ್ಲಾದಲ್ಲಿ ಸಡಗರ- ಸಂಭ್ರಮ ಆರಂಭವಾಗಿದೆ.ಇಟಲಿಯಲ್ಲಿ ಮದುವೆ ಆಗುತ್ತಿರುವ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಈಗಾಗಲೇ ಕುಟುಂಬ ಈಗಾಗಲೇ ತೆರಳಿದ್ದು, ಮೆಹಂದಿ ಹಾಗೂ ಸಂಗೀತ ಕಾರ್ಯಕ್ರಮಗಳು ನಡೆಯುತ್ತಿವೆ.

41.ಬುಧವಾರ ಮಹಿಳಾ ಆಯೋಗದ ಮುಂದೆ ಹಾಜರಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶೃತಿ ಹರಿಹರನ್ ಅವರು, ನಾನು ಪ್ರೆಷರ್ ಕುಕ್ಕರ್ ಇದ್ದಂತೆ. ಪ್ರೆಷರ್ ಕುಕ್ಕರ್ ಬಿಸಿ ಆದ ನಂತರ ವಿಶಿಲ್ ಬೀಳುತ್ತೆ. ಇನ್ನಷ್ಟು ಬಿಸಿ ಆದಾಗ ಬ್ಲಾಸ್ಟ್​ ಆಗುತ್ತೆ. ಅದೇ ರೀತಿ ಈಗಷ್ಟೇ ಒಂದು ಹೆಸರು ಹೊರಬಂದಿದೆ. ಇನ್ನಷ್ಟು ಹೆಸರುಗಳು ಹೊರ ಬರಲಿವೆ ಎಂದರು.

42.ಆಂಬಿಡೆಂಟ್ ಡೀಲ್ ಪ್ರಕರಣದಲ್ಲಿ ಗಣಿ ಉದ್ಯಮಿ ಜನಾರ್ದನ ರೆಡ್ಡಿಗೆ 1ನೇ ಎಸಿಎಂಎಂ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.ನ್ಯಾಯಾಧೀಶ ಜಗದೀಶ್ ಎರಡೂ ಕಡೆಯ ವಾದವನ್ನು ಆಲಿಸಿದ ನಂತರ ಇಂದಿಗೆ ತೀರ್ಪು ಕಾಯ್ದಿರಿಸಿದ್ದರು. ಇಬ್ಬರು ಭದ್ರತೆ ಹಾಗೂ 1 ಲಕ್ಷ ರೂ. ಠೇವಣಿ ಆಧಾರದ ಮೇಲೆ ಜನಾರ್ದನ ರೆಡ್ಡಿಗೆ ಜಾಮೀನು ಮಂಜೂರು ಮಾಡಿದ್ದರು.

43. ತುಮಕೂರು ಯಲ್ಲಾಪುರ ಬಳಿಯ ಕೇಂದ್ರಿಯ ವಿದ್ಯಾಲಯ ಈಗ ಪೋಷಕರ ಪಾಲಿಗೆ ಸಂಕಟವನ್ನುಂಟು ಮಾಡಿದೆ. ಸದ್ಯ ಕನ್ನಡ ಭಾಷಾ ಶಿಕ್ಷಕರಿಂದಲೇ ಇಂಗ್ಲೀಷ್ ಪಾಠ ಪ್ರವಚನ ನಡೆಯುತ್ತಿದೆ. ಇದ್ರಿಂದ ಶಾಲೆಗೆ ಹೋಗುವ ಮಕ್ಕಳು ಯಾವುದೇ ರೀತಿ ಶೈಕ್ಷಣಿಕವಾಗಿ ಮುಂದುವರೆಯುದಿಲ್ಲ ಅಂತಾ ಪೋಷಕರು ಆರೋಪ ಮಾಡಿದ್ದಾರೆ.

44. ಸಿಎಂ ಕುಮಾರಸ್ವಾಮಿ ಸ್ವಕ್ಷೇತ್ರ ಚನ್ನಪಟ್ಟಣ ಕ್ಷೇತ್ರದಲ್ಲಿನ ಕೆರೆಗಳ ವಾಸ್ತವದ ಸ್ಥಿತಿ ಮಳೆಬಾರದಿದ್ದರು ಇಲ್ಲಿ ಕೆರೆಗಳು ತುಂಬಿ ತುಳುಕುತ್ತಿವೆ. ದಶಕಗಳಿಂದ ಬಿರುಕು ಬಿಟ್ಟಿದ್ದ ಕೆರೆಗಳ ಮೈದಾನ ಈಗ ನೀರಿನಿಂದ ಮೈದುಂಬಿ ಹರಿಯುತ್ತಿದೆ. 30 ವರ್ಷಗಳಿಂದ ತುಂಬಿರದ ಕೆರೆಗಳು ತುಂಬಿರುವುದಕ್ಕೆ ರೈತರು ಹರ್ಷರಾಗಿದ್ದಾರೆ.

45.ಬಿಸಿಲ ನಾಡು ರಾಯಚೂರು ಜಿಲ್ಲೆಯ ದೇವದುರ್ಗ, ಮಾನ್ವಿ ತಾಲೂಕುಗಳಲ್ಲಿ ಎಗ್ಗಿಲದೇ ಅಕ್ರಮ ಮರಳುಗಾರಿಕೆ ನಡಿತೀದೆ. ಹಗಲು ರಾತ್ರಿ ಎನ್ನದೇ ನದಿಯ ಒಡಲಿಗೆ ಕನ್ನ ಹಾಕುತ್ತಿದ್ದ ದೃಶ್ಯಗಳು TV5 ರಿಯಾಲಿಟಿ ಚೆಕ್​ನಲ್ಲಿ ಬೆಳಕಿಗೆ ಬಂದಿದೆ. ನದಿಗಳಲ್ಲಿ ನೀರು ಖಾಲಿ ಆಗುತ್ತಿದ್ದಂತೆ ಪ್ರತಿ ನಿತ್ಯ ಸಾವಿರಾರು ಟ್ರ್ಯಾಕ್ಟರ್​​ಗಳು ನದಿಗೆ ಇಳಿಯುತ್ತದೆ. ಬಳಿಕ ಮರಳು ತಂದು ನಿರ್ಜನ ಪ್ರದೇಶದಲ್ಲಿ ಸಂಗ್ರಸಿ ಬಳಿಕ ಹೊರ ರಾಜ್ಯಗಳಿಗೆ ಸಾಗಟ ಮಾಡುತ್ತಿದ್ದಾರೆ.

46.ಮಂಡ್ಯ ಜಿಲ್ಲಾ ಕಾಂಗ್ರೆಸ್​​ನ ಗುದ್ದಾಟ ಇದೀಗ ಮತ್ತೊಮ್ಮೆ ಬೀದಿಗೆ ಬಿದ್ದಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಂಡ್ಯ ಜಿಲ್ಲೆಯಲ್ಲಿ ಮಾಜಿ ಸಚಿವ ಅಂಬರೀಷ್ ಬೆಂಬಲಿಗರನ್ನು ಟಾರ್ಗೆಟ್ ಮಾಡಿದ್ದಾರೆ. ಈ ಮೂಲಕ ಜಿಲ್ಲಾ ಕಾಂಗ್ರೆಸ್​ನ ವಿವಿಧ ಹುದ್ದೆಯಲ್ಲಿರುವ ಅಂಬಿ ಬೆಂಬಲಿಗರಿಗೆ ಕೊಕ್ ನೀಡಲಾಗಿದೆ.

47.ಪ್ರವಾದಿ ಮತ್ತು ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪದಡಿ ಪರ್ತಕರ್ತ ಸಂತೋಷ್ ತಮ್ಮಯ್ಯನನ್ನು ಬಂಧಿಸಲಾಗಿತ್ತು. ಇದನ್ನು ಖಂಡಿಸಿ ಇಂದು ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ನೂರಾರು ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು. ಪೊಲೀಸ್ ಇಲಾಖೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

48.ನಾಳೆ ಗಡಿನಾಡು ಬೀದರ್ ಜಿಲ್ಲೆಯಲ್ಲಿ ಮೊದಲ ಬಾರಿ 65 ನೇ ಅಖಿಲ ಭಾರತ ಸಹಕಾರ ಸಪ್ತಾಹ ನಡೆಯುತ್ತಿದೆ. ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮ ಉದ್ಘಾಟಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಆಗಮಿಸುತ್ತಿದ್ದಾರೆ. ಹೀಗಾಗಿ ಕಾರ್ಯಕ್ರಮದ ಸಿದ್ದತೆ ಜೋರಾಗಿ ನಡೆಯುತ್ತಿದೆ.

49.2011ರಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಈಜುಕೊಳ ಆರಂಭ ಮಾಡಲಾಗಿತ್ತು.. ತಾಂತ್ರಿಕ ಕಾರಣ, ಲೀಕೇಜ್ ಅಂತ ನೆಪಹೇಳಿ ಈಜುಕೊಳವನ್ನ ಬಂದ್ ಮಾಡಲಾಗಿತ್ತು. ಆದ್ರೀಗ ಆರೇಳು ಲಕ್ಷ ರೂಪಾಯಿ ವೆಚ್ಚದಲ್ಲಿ ಈಜುಕೊಳವನ್ನು ಸರಿಪಡಿಸಲಾಗಿದೆ. ಇದ್ರಿಂದ ಬಿಸಿಲಿನ ಝಳಕ್ಕೆ ತತ್ತರಿಸಿ ಹೋಗಿದ್ದ ಯುವಕರು ಫುಲ್ ಖುಷಿಯಾಗಿ ಎಂಜಾಯ್ ಮಾಡ್ತಿದ್ದಾರೆ.

50.ಕೊಪ್ಪಳದ ತೋಟಗಾರಿಕಾ ಇಲಾಖೆಯಲ್ಲಿ ಆಯೋಜಿಸಲಾದ ಮಧು ಮೇಳದಲ್ಲಿ. ಮೂರು ದಿನಗಳ ಕಾಲ ನಡೆದ ಮಧು ಮೇಳದಲ್ಲಿ ಜೇನು ಸಾಕಾಣಿಕೆ ಸಾಮಗ್ರಿಗಳು, ಜೇನುತುಪ್ಪದಿಂದ ತಯಾರಾದ ಪದಾರ್ಥಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಲಾಗಿತ್ತು. ಮೇಳಕ್ಕೆ ಆಗಮಿಸಿದ ಸಾರ್ವಜನಿಕರು ಜೇನು ಖಾದ್ಯಗಳನ್ನ ಸವಿದದ್ದು ಮಾತ್ರವಲ್ಲದೇ. ಜೇನು ಕೃಷಿ ಬಗ್ಗೆಯೂ ಮಾಹಿತಿ ಪಡೆದರು.

Next Story

RELATED STORIES