Top

ಕಾಡ್ಗಿಚ್ಚಿನಿಂದ ಮನೆ ಕಳೆದುಕೊಂಡ ಹಾಲಿವುಡ್ ಸೆಲೆಬ್ರಿಟಿಗಳು

ಕಾಡ್ಗಿಚ್ಚಿನಿಂದ ಮನೆ ಕಳೆದುಕೊಂಡ ಹಾಲಿವುಡ್ ಸೆಲೆಬ್ರಿಟಿಗಳು
X

ಕ್ಯಾಲಿಫೋರ್ನಿಯಾದಲ್ಲಿ ಸಂಭವಿಸಿದ ಕಾಡ್ಗಿಚ್ಚಿನಿಂದ ಭಾರೀ ಸಾವು ನೋವು ಸಂಭವಿಸಿದ್ದು, ಸಾವಿರಾರು ಜನ ಕಾಣೆಯಾಗಿದ್ದಾರೆನ್ನಲಾಗಿದೆ. ಅಲ್ಲಿನ ಸಾವಿರಾರು ಮನೆ, ವಾಹನಗಳು ಬೆಂಕಿಗಾಹುತಿಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಹಾಲಿವುಡ್‌ನ ಸೆಲೆಬ್ರಿಟಿಗಳು ಕೂಡ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿದ್ದು, ಕಾಡ್ಗಿಚ್ಚಿನಿಂದಾಗಿ ಹಲವು ಗಣ್ಯರ ಮನೆ ಬೆಂಕಿಗಾಹುತಿಯಾಗಿದೆ.

ಹಾಲಿವುಡ್‌ನ ಪ್ರಖ್ಯಾತ ಸೆಲೆಬ್ರಿಟಿಗಳಾದ ಮಿಲೇ ಸೈರಸ್, ಗೆರಾರ್ಡ್‌ ಬಟ್ಲರ್ ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ. ಅಲ್ಲದೇ ಪ್ರಸಿದ್ಧ ನಿರ್ಮಾಪಕ ಗಿಲ್ಲೆರ್ಮೊ ಡೆಲ್ ಟೊರೊ ಮನೆ ಕೂಡ ಭಾಗಶಃ ಹಾನಿಗೊಳಗಾಗಿದೆ.

ಇನ್ನು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹೇಳಿಕೊಂಡಿರುವ ಸೈರಸ್, ನಾನು ನನ್ನವರು ಸುರಕ್ಷಿತವಾಗಿದ್ದೇವೆ. ನನ್ನ ಮನೆ ಸಂಪೂರ್ಣವಾಗಿ ಸುಟ್ಟುಹೋಗಿದೆ. ಆದರೆ ಇಲ್ಲಿನ ನೆನಪು ಎಂದೂ ಮರೆಯಲು ಸಾಧ್ಯವಿಲ್ಲ. ಅಗ್ನಿಶಾಮಕ ದಳದವರು, ಪೊಲೀಸರು ನಮ್ಮನ್ನು ಕಾಪಾಡಿದವರಿಗೆಲ್ಲ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ.

ಗೆರಾರ್ಡ್ ಬಟ್ಲರ್ ಕೂಡ ಕಾಡ್ಗಿಚ್ಚಿನಿಂದ ಮನೆ ಕಳೆದುಕೊಂಡಿದ್ದು, ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಸುಟ್ಟು ಕರಕಲಾದ ತಮ್ಮ ಮನೆಯ ಮುಂದೆ ನಿಂತು ತೆಗೆದುಕೊಂಡ ಫೋಟೋವನ್ನು ಅಪ್ಲೋಡ್ ಮಾಡಿದ್ದು, ತಮ್ಮನ್ನು ತಮ್ಮ ಕುಟುಂಬಸ್ಥರನ್ನು ಕಾಪಾಡಿದ ಅಗ್ನಿಶಾಮಕದಳದವರಿಗೆ ಧನ್ಯವಾದ ತಿಳಿಸಿದ್ದಾರೆ.

Next Story

RELATED STORIES