Top

ಆ್ಯಂಬಿಡೆಂಟ್ ಡೀಲ್​ ಪ್ರಕರಣ: ಜನಾರ್ದನ ರೆಡ್ಡಿಗೆ ಜಾಮೀನು ತೀರ್ಪು ನಾಳೆ

ಆ್ಯಂಬಿಡೆಂಟ್ ಡೀಲ್​ ಪ್ರಕರಣ: ಜನಾರ್ದನ ರೆಡ್ಡಿಗೆ ಜಾಮೀನು ತೀರ್ಪು ನಾಳೆ
X

ಆ್ಯಂಬಿಡೆಂಟ್ ಡೀಲ್ ಪ್ರಕರಣದಲ್ಲಿ ಗಣಿ ಉದ್ಯಮಿ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ ಸಲ್ಲಿಸಿದ್ದ ಜಾಮೀನು ಅರ್ಜಿಯ ತೀರ್ಪುನ್ನು ಸೆಷನ್ಸ್ ನ್ಯಾಯಾಲಯ ಬುಧವಾರಕ್ಕೆ ಕಾಯ್ದಿರಿಸಿದೆ.

ಆ್ಯಂಬಿಡೆಂಟ್ ಸಂಸ್ಥೆಯಿಂದ 57 ಕೆಜಿ ಚಿನ್ನ ಹಸ್ತಾಂತರ ಸೇರಿದಂತೆ ಹಲವು ಪ್ರಕರಣದಲ್ಲಿ ಸಿಸಿಬಿ ಪೊಲೀಸರ ಬಂಧನದಲ್ಲಿರುವ ಜನಾರ್ದನ ರೆಡ್ಡಿಗೆ ಜಾಮೀನು ಸಿಗುವುದೇ ಎಂಬುದು ಬುಧವಾರದವರೆಗೂ ಕಾಯಬೇಕಾಗಿದೆ.

1ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್, ಎರಡೂ ಕಡೆಯ ವಾದವನ್ನು ಆಲಿಸಿದ್ದು, ತೀರ್ಪನ್ನು ಬುಧವಾರಕ್ಕೆ ಕಾಯ್ದಿರಿಸಿದರು.

ಪ್ರಕರಣದಲ್ಲಿ ತಮ್ಮ ಕಕ್ಷಿದಾರರ ವಿರುದ್ಧ ಯಾವುದೇ ಆರೋಪ ಇಲ್ಲ. ತನಿಖೆ ನಡೆಯುತ್ತಿರುವುದೇ ಬೇರೆ, ಕೇಸು ದಾಖಲಿಸಿರುವುದೇ ಬೇರೆ ಎಂದು ರೆಡ್ಡಿ ಪರ ವಕೀಲ ಸಿ.ಎಚ್​. ಹನುಮಂತರಾಯ ವಾದ ಮಂಡಿಸಿದರು.

ಪ್ರಕರಣ ನಾಲ್ವರು ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಐದನೇ ಆರೋಪಿಗೂ ಮಧ್ಯಂತರ ನಿರೀಕ್ಷಣಾ ಜಾಮೀನು ಸಿಕ್ಕಿದೆ. ಪೊಲೀಸರು ನೋಟಿಸ್ ನೀಡಿದ ಕೂಡಲೇ ವಿಚಾರಣೆಗೆ ಹಾಜರಾಗಿದ್ದಾರೆ. ಜನಾರ್ದನ ರೆಡ್ಡಿ ವಿರುದ್ದ ಯಾವುದೇ ಆರೋಪವಿರಲಿಲ್ಲ. ಇತ್ತೀಚಿನವರೆಗೂ ಯಾವುದೇ ಆರೋಪವಿರಲಿಲ್ಲ ಎಂದು ರೆಡ್ಡಿ ಪರ ಹಿರಿಯ ವಕೀಲ ಹನುಮಂತರಾಯ ವಾದ ಮಂಡಿಸಿದರು.

Next Story

RELATED STORIES