ಮನೆಯಲ್ಲೇ ತಯಾರಿಸಿ ಪ್ರೋಟಿನ್ ಪೌಡರ್

ಬೇಕಾಗುವ ಸಾಮಗ್ರಿ: ಓಟ್ಸ್- 100 ಗ್ರಾಂ, ಬಾದಾಮ್- 100ಗ್ರಾಂ, ಸೋಯಾಬಿನ್ 100 ಗ್ರಾಂ, ಶೇಂಗಾ 100 ಗ್ರಾಂ, ಹಾಲಿನ ಪುಡಿ, 50 ಗ್ರಾಂ.

ಮಾಡುವ ವಿಧಾನ: ಓಟ್ಸ್, ಬಾದಾಮ್, ಸೋಯಾಬಿನ್, ಶೇಂಗಾ, ಈ ನಾಲ್ಕು ಸಾಮಗ್ರಿಗಳನ್ನು ಬೇರೆ ಬೇರೆಯಾಗಿ ಹುರಿದುಕೊಳ್ಳಿ. ನಂತರ ಈ ಸಾಮಗ್ರಿ ತಣ್ಣಗಾದ ಮೇಲೆ, ಬೇರೆ ಬೇರೆಯಾಗಿ ಪುಡಿ ಮಾಡಿ. ಎಲ್ಲ ಪುಡಿಯನ್ನು ಮಿಶ್ರಣ ಮಾಡಿ, ಇದರೊಂದಿಗೆ ಹಾಲಿನ ಪುಡಿ ಸೇರಿಸಕೊಳ್ಳಿ. ಅವಶ್ಯಕತೆ ಇದ್ದಲ್ಲಿ ಕೋಕೋಪೌಡರ್ ಬಳಸಬಹುದು.

ಹಾಲು ಅಥವಾ ನೀರಿನೊಂದಿಗೆ ಇದನ್ನು ಬೆರೆಸಿ ಕುಡಿಯುವುದರಿಂದ, ದೇಹಕ್ಕೆ ಬೇಕಾದ ಪ್ರೋಟಿನ್ ದೊರೆಯುತ್ತದೆ.